“ಸಂದ್ಯಾವಂದನೆ ಹಿಂದಿರುವ ವೈಜ್ಞಾನಿಕ ಸತ್ಯಗಳು”
ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ “ಸಂಧ್ಯಾವಂದನೆ”.
ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ, ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ “ಪ್ರಾಣಾಯಾಮ”. ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.
“ಮಾಡುವ ಕ್ರಮ”
ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು. ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು.
ಸಂಧ್ಯಾವಂದನೆಯ ಬೋಧಾಯನ ಪದ್ಧತಿಯ ಹದಿನಾಲ್ಕು ಕ್ರಿಯೆಗಳು :-
೧. ಆಚಮನ
೨. ಮಂತ್ರ ಸ್ನಾನ
೩. ಭಸ್ಮಧಾರಣ
೪. ಸಂಕಲ್ಪ
೫. ಮಾರ್ಜನ
೬. ಜಲ ಪ್ರಾಶನ ( ದುರಿತ ನಿವಾರಣ)
೭. ಪುನಃ ಮಾರ್ಜನ
೮. ಅರ್ಘ್ಯ ಪ್ರದಾನ
೯. ಗಾಯತ್ರೀ ಜಪ
೧೦. ಸೂರ್ಯ ಉಪಸ್ಥಾನ
(ಸೂರ್ಯನ ಬೀಳ್ಕೊಡಿಗೆ ವಂದನೆ)
೧೧. ಅಭಿವಾದನ
೧೨. ಅಷ್ಟಾಕ್ಷರೀ ಜಪ
೧೩. ಪಂಚಾಕ್ಷರೀ ಜಪ
೧೪. ಭಗವದರ್ಪಣ