ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

​ಯೋಗಿನಿ ಏಕಾದಶಿ ವ್ರತ ಕಥೆ​

ಯೋಗಿನಿ ಏಕಾದಶಿ – ಶುಭ ಸಮಯ, ಪೂಜೆ ವಿಧಾನ, ಮಹತ್ವ, ಪ್ರಯೋಜನ..!

ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಯೋಗಿನಿ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ. ಈ ಏಕಾದಶಿ ವ್ರತವನ್ನು ಅತ್ಯಂತ ಮುಖ್ಯವಾದ ಏಕಾದಶಿ ವ್ರತವೆಂದು ಪರಿಗಣಿಸಲಾಗಿದೆ. ಈ ಏಕಾದಶಿ ವ್ರತವನ್ನು ನಿಯಮಾನುಸಾರ ಆಚರಿಸುವ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಮತ್ತು ಈ ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ಪಾಪಗಳು ಕೊನೆಗೊಳ್ಳುತ್ತವೆ. ಈ ವ್ರತವನ್ನು ಆಚರಿಸುವುದರಿಂದ ಯಾರೇ ನಿಮಗೆ ಶಾಪ ನೀಡಿದ್ದರೂ ಅದರಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.

​ಯೋಗಿನಿ ಏಕಾದಶಿ ಪೂಜೆ ವಿಧಾನ​

  • ಈ ಉಪವಾಸದ ನಿಯಮಗಳು ಒಂದು ದಿನ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಒಬ್ಬ ವ್ಯಕ್ತಿಯು ದಶಮಿಯ ರಾತ್ರಿ ಬಾರ್ಲಿ, ಗೋಧಿ ಮತ್ತು ಬೆಂಡೆಕಾಯಿಯಿಂದ ಮಾಡಿದ ಆಹಾರವನ್ನು ಸೇವಿಸಬಾರದು.
  • ಉಪವಾಸದ ದಿನದಂದು ಉಪ್ಪಿನಂಶವಿರುವ ಆಹಾರವನ್ನು ಸೇವಿಸಬಾರದು. ಈ ಕಾರಣಕ್ಕಾಗಿ ದಶಮಿಯ ರಾತ್ರಿ ಉಪ್ಪನ್ನು ಸೇವಿಸಬಾರದು.
  • ಏಕಾದಶಿಯ ದಿನದಂದು ಬೆಳಿಗ್ಗೆ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಉಪವಾಸದ ವ್ರತ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುತ್ತದೆ.
  • ಇದಾದ ನಂತರ ಕಲಶವನ್ನು ಸ್ಥಾಪಿಸಿ, ಕಲಶದ ಮೇಲೆ ವಿಷ್ಣುವಿನ ವಿಗ್ರಹವನ್ನು ಇರಿಸಿ ಪೂಜಿಸಲಾಗುತ್ತದೆ. ಉಪವಾಸದ ರಾತ್ರಿ ಜಾಗರಣೆಯನ್ನು ಮಾಡಬೇಕು.
  • ಈ ವ್ರತವು ದಶಮಿ ತಿಥಿಯ ರಾತ್ರಿಯಿಂದ ಪ್ರಾರಂಭವಾಗಿ ದ್ವಾದಶಿ ತಿಥಿಯ ಬೆಳಿಗ್ಗೆ ದಾನ ಕಾರ್ಯಗಳ ನಂತರ ಮುಕ್ತಾಯವಾಗುತ್ತದೆ.
  ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ

​ಯೋಗಿನಿ ಏಕಾದಶಿ ಉಪವಾಸದ ಮಹತ್ವ​

ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದು ವಿಷ್ಣುವನ್ನು ಮೆಚ್ಚಿಸಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನಂಬಿಕೆಯ ಪ್ರಕಾರ, ಈ ಉಪವಾಸವನ್ನು ಆಚರಿಸುವುದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಈ ವ್ರತವನ್ನು ಆಚರಿಸುವುದರಿಂದ 88 ಸಾವಿರ ಬ್ರಾಹ್ಮಣರಿಗೆ ಅನ್ನದಾನ ಮಾಡಿದ ಪುಣ್ಯಕ್ಕೆ ಸಮನಾದ ಫಲ ಸಿಗುತ್ತದೆ. ಈ ವ್ರತವನ್ನು ಆಚರಿಸುವವನಿಗೆ ಮೋಕ್ಷದ ಹಾದಿ ಸುಲಭವಾಗಿ ಪ್ರಾಪ್ತವಾಗುತ್ತದೆ. ಈ ವ್ರತವನ್ನು ಆಚರಿಸುವ ವ್ಯಕ್ತಿಯು ಭೂಮಿಯ ಮೇಲೆ ಎಲ್ಲಾ ರೀತಿಯ ಸಂತೋಷವನ್ನು ಅನುಭವಿಸುತ್ತಾನೆ. ಅಷ್ಟು ಮಾತ್ರವಲ್ಲ, ಪರಲೋಕದಲ್ಲೂ ಅವನ ಸ್ಥಾನವೂ ಉತ್ತಮವಾಗಿರುತ್ತದೆ.

  ಅಮಲಕಿ ಏಕಾದಶಿ ಪೂಜೆ ವಿಧಾನ, ಮಂತ್ರ ಮತ್ತು ವ್ರತಕಥೆ

​ಯೋಗಿನಿ ಏಕಾದಶಿ ವ್ರತ ಕಥೆ​
ಪ್ರಾಚೀನ ಕಾಲದಲ್ಲಿ, ಹೇಮ ಎಂಬ ತೋಟಗಾರನು ಅಲಕಾಪುರಿ ನಗರದಲ್ಲಿ ರಾಜ ಕುಬೇರನ ರಾಜ್ಯದಲ್ಲಿ ವಾಸಿಸುತ್ತಿದ್ದನು. ಭಗವಾನ್ ಶಂಕರನ ಪೂಜೆಗಾಗಿ ಪ್ರತಿದಿನ ಮಾನಸ ಸರೋವರದಿಂದ ಹೂವುಗಳನ್ನು ತರುವುದು ಹೇಮನ ಕೆಲಸವಾಗಿತ್ತು. ಒಂದು ದಿನ ಅವನು ತನ್ನ ಹೆಂಡತಿಯೊಂದಿಗೆ ಒಂದಿಷ್ಟು ಸಮಯ ಕಳೆಯುವುದರಲ್ಲಿ ಹೂವುಗಳನ್ನು ತರಲು ತುಂಬಾ ತಡವಾಯಿತು. ಈ ಕಾರಣದಿಂದ ಅರಮನೆಯನ್ನು ತಲುಪಲು ತಡವಾಯಿತು. ಇದರಿಂದ ಕುಪಿತನಾದ ಕುಬೇರನು ಅವನನ್ನು ಕುಷ್ಠರೋಗಿಯಾಗುವಂತೆ ಶಪಿಸಿದನು. ಶಾಪದ ಪ್ರಭಾವದಿಂದ ಹೇಮನು ಅಲ್ಲಿ ಇಲ್ಲಿ ಅಲೆದಾಡುತ್ತಾ ಒಂದು ದಿನ ಮಾರ್ಕಂಡೇಯ ಋಷಿಯ ಆಶ್ರಮವನ್ನು ತಲುಪಿದನು. ಋಷಿಯು ತನ್ನ ಯೋಗಬಲದಿಂದ ಅವನ ದುಃಖಕ್ಕೆ ಕಾರಣವನ್ನು ತಿಳಿದುಕೊಂಡನು. ನಂತರ ಋಷಿಯು ಹೇಮನಿಗೆ ಯೋಗಿನಿ ಏಕಾದಶಿ ದಿನದಂದು ಉಪವಾಸ ಮಾಡಲು ಹೇಳಿದನು. ಉಪವಾಸದ ಪರಿಣಾಮದಿಂದಾಗಿ ಹೇಮನ ಕುಷ್ಠರೋಗವು ಕೊನೆಗೊಂಡು ಮೋಕ್ಷ ಪ್ರಾಪ್ತಿಯಾಯಿತು.

  ಧನಸ್ಸು ಸಂಕ್ರಮಣ

​ಯೋಗಿನಿ ಏಕಾದಶಿ ಪ್ರಯೋಜನ​
ಯೋಗಿನಿ ಏಕಾದಶಿಯನ್ನು ಆಚರಿಸುವುದರಿಂದ ಎಲ್ಲಾ ಪಾಪಗಳು ನಿರ್ಮೂಲನೆಯಾಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಯೋಗಿನಿ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಸ್ವರ್ಗವು ಪ್ರಾಪ್ತಿಯಾಗುತ್ತದೆ. ಯೋಗಿನಿ ಏಕಾದಶಿಯು ಕೇವಲ ಒಂದು ಲೋಕದಲ್ಲಿ ಮಾತ್ರವಲ್ಲ, ತ್ರಿಲೋಕದಲ್ಲೂ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ಏಕಾದಶಿ ಉಪವಾಸವನ್ನು ಆಚರಿಸಿದರೆ 88 ಸಾವಿರ ಬ್ರಾಹ್ಮಣರಿಗೆ ಆಹಾರವನ್ನು ನೀಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ.
🙏

Leave a Reply

Your email address will not be published. Required fields are marked *

Translate »