ಸಂಪ್ರದಾಯಕವಾಗಿ ಮಹಾ ಶಿವರಾತ್ರಿ ಹಬ್ಬದ ಪೂಜೆಯನ್ನು ಮಾಡುವ ವಿಧಾನ/ಪೂಜೆಗೆ ಬಳಸುವ 10 ಎಲೆಗಳ ಮಹತ್ವ/ಪುಷ್ಪರ್ಚನೆ
ಮಹಾ ಶಿವರಾತ್ರಿಯನ್ನು ಸಂಪ್ರದಾಯಕವಾಗಿ ಪೂಜೆಯನ್ನು ಮಾಡಬೇಕು. ನಿಮ್ಮ ಮನೆಯಲ್ಲಿ ಶಿವ ಪಾರ್ವತಿ ಫೋಟೋ ಇಟ್ಟು ಪ್ರತಿಷ್ಟಪನೆ ಮಾಡಿ ಪೀಠವನ್ನು ರೆಡಿ ಮಾಡಿಕೊಳ್ಳಬೇಕು.ನಂತರ ಮಣೆ ಮೇಲೆ ಒಂದು ತಾಮ್ರ ಅಥವಾ ಹಿತ್ತಾಳೆ ತಟ್ಟೆಯನ್ನು ಇಡಬೇಕು.ಅದರ ಮೇಲೆ ಸ್ವಸ್ತಿಕ್ ಚಿತ್ರ ಬರೆದು ತಟ್ಟೆಯ ಸುತ್ತ ಅಶ್ವತ್ಥ ಮರದ ಎಲೆಯನ್ನು ಇಡಬೇಕು. ಸಂತಾನ ಭಾಗ್ಯ ಬೇಕು ಎನ್ನುವವರು ಶಿವರಾತ್ರಿ ದಿನ ಶಿವ ಲಿಂಗಕ್ಕೆ ಅಶ್ವತ್ಥ ಮರದ ಎಲೆಯನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ ಆಸೆಗಳು ಬೇಗಾ ಈಡೇರುತ್ತದೆ.
ತಟ್ಟೆಯ ಸುತ್ತ ಅಶ್ವತ್ಥ ಮರದ ಎಲೆ, ಹಾಲದ ಮರದ ಎಲೆ, ಹತ್ತಿ ಮರದ ಎಲೆ, ಮಾವಿನ ಮರದ ಎಲೆ, ಬನ್ನಿ ಮರದ ಎಲೆಯನ್ನು, ಗರಿಕೆಯನ್ನು ಇಡಬೇಕು.ಈ ರೀತಿ ಎಲೆ ಬಳಸಿ ಪೂಜೆ ಮಾಡುವುದರಿಂದ ಜೀವನದಲ್ಲಿ ಖುಷಿ ನೆಮ್ಮದಿ ಶಾಂತಿ ಕಾಣಬಹುದು. ಯಾವುದೇ ರೀತಿ ನೋವು ಸಂಕಟ ಯೋಚನೆ ಇದ್ದಾರೆ ಅದು ಕೂಡ ಕಡಿಮೆ ಆಗುತ್ತದೆ.ನಂತರ ಎಲೆಯ ಮಧ್ಯ ಒಂದು ಪ್ಲೇಟ್ ಇಟ್ಟು ಅರಿಶಿಣ ಕುಂಕುಮ ಹಚ್ಚಬೇಕು. ನಂತರ ಅಕ್ಷತೆ ಹಾಕಿ. ನಂತರ ಶಿವನಿಗೆ ಇಬ್ಬರು ಮಕ್ಕಳು ಸುಬ್ರಮಣ್ಯ ಮತ್ತು ಗಣೇಶ ಮತ್ತು ಮಧ್ಯ ದಲ್ಲಿ ಶಿವ ಲಿಂಗವನ್ನು ಪ್ರತಿಷ್ಟಪನೆ ಮಾಡಬೇಕು.3 ದಳ ಇರುವ ಬಿಲ್ವ ಪತ್ರೆ ಮೇಲೆ ಶಿವ ಲಿಂಗವನ್ನು ಪ್ರತಿಷ್ಟಪನೆ ಮಾಡಬೇಕಾಗುತ್ತದೆ.ಆದಷ್ಟು ಪೂಜೆಗೆ ಬಿಳಿ ಅಕ್ಷತೆ ಬಳಸಿದರೆ ಒಳ್ಳೆಯದು.
ನಂತರ ಅಂಗನೂಲನ್ನು ಸುಬ್ರಮಣ್ಯ ಗಣೇಶ ಮತ್ತು ಶಿವನಿಗೂ ಹಾಕಬೇಕು ಮತ್ತು ಗೆಜ್ಜೆ ವಸ್ತ್ರದಿಂದ ಅಲಂಕಾರ ಮಾಡಬೇಕು.ನಂತರ ಬಸವಣ್ಣನನ್ನು ಲಿಂಗದ ಮುಂದೆ ಪ್ರತಿಷ್ಟಪಾನೇ ಮಾಡಬೇಕು.ನಂತರ ಶಿವನಿಗೆ ಎಕ್ಕದ ಹೂವಿನಿಂದ ಹಾರ ಮಾಡಿ ಹಾಕಬೇಕು.ಶಿವನಿಗೆ ಬಿಳಿ ಹೂವಿನಿಂದ ಅಲಂಕಾರ ಮಾಡಿದರೆ ತುಂಬಾ ಒಳ್ಳೆಯದು.ಶಿವನಿಗೆ ರುದ್ರಾಕ್ಷಿ ಹಾಗೂ ಬಿಲ್ವ ಪತ್ರೆಯಿಂದ ಅರ್ಚನೆಯನ್ನು ಕೂಡ ಮಾಡಬಹುದು.ವಿಭೂತಿಯಿಂದ ಕೂಡ ಅರ್ಚನೆ ಮಾಡಬಹುದು.
ನಂತರ ಹಣ್ಣು ಹಂಪಲು ಮತ್ತು ಪೂಜೆ ಮುಗಿದ ನಂತರ ಅಖಂಡ ದೀಪರಾಧನೆಯನ್ನು ಕೂಡ ಮಾಡಬೇಕು. ಎಳನೀರು, ಕಬ್ಬಿಣ ಹಾಲು ಹೀಗೆ ಎಲ್ಲವನು ತಯಾರಿ ಮಾಡಿ ಇಟ್ಟುಕೊಳ್ಳಬೇಕು.ಊದುಬತ್ತಿಯಿಂದ ಅಖಂಡ ದೀಪರಾಧನೆ ಮಾಡಬೇಕು.ನಂತರ ದೂಪವನ್ನು ಹಚ್ಚಬೇಕು. ಶಿವನಿಗೆ ದೂಪಾ ಎಂದರೇ ತುಂಬಾನೇ ಪ್ರೀತಿ.ನಂತರ ಬಿಳಿ ಹೂವಿನಿಂದ ಶಿವ ನಾಮಸ್ಮರಣೆ ಮಾಡುತ್ತ ಅರ್ಚನೆಯನ್ನು ಮಾಡಬೇಕು.ಮಂಗಳಾರತಿ ಮಾಡಿದ ಮೇಲೆ ಉತ್ತರಣಿ ಕಡ್ಡಿಯಿಂದ ಆರತಿ ಮಾಡಬೇಕು.ಈ ರೀತಿ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತಾದೇ.ಆದಷ್ಟು 10 ಗಂಟೆ ಒಳಗೆ ಈ ಪೂಜೆಯನ್ನು ಮಾಡಿದರೆ ಒಳ್ಳೆಯದು.