ಲಲಿತಾ ಜಯಂತಿ: ಶುಭ ಮುಹೂರ್ತ, ಮಂತ್ರ, ಪ್ರಯೋಜನ ಮತ್ತು ಕಥೆ..!
ಪ್ರತಿ ವರ್ಷ ಮಾಘ ಮಾಸದ ಹುಣ್ಣಿಮೆಯಂದು ಲಲಿತಾ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಲಲಿತಾ ದೇವಿಯ ಪೂಜೆಯ ಜೊತೆಗೆ ಗಣಪತಿ ಆರಾಧನೆಗೂ ವಿಶೇಷ ಮಹತ್ವವಿದೆ. ಮಾಘ ಪೂರ್ಣಿಮೆಯಂದು ರಾತ್ರಿ ಚಂದ್ರನನ್ನು ಮತ್ತು ಕುಬೇರನನ್ನು ಪೂಜಿಸುವುದರಿಂದ ಚಂದ್ರದೋಷ ನಿವಾರಣೆಯಾಗುತ್ತದೆ. ಈ ದಿನ ರಾತ್ರಿ ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಈ ಬಾರಿಯ ಲಲಿತಾ ಜಯಂತಿಯಂದು ಸೂರ್ಯೋದಯ ದಿಂದ ಮಧ್ಯಾಹ್ನದವರೆಗೆ ಆಯುಷ್ಮಾನ್ ಯೋಗವು ತದನಂತರ ಸೌಭಾಗ್ಯ ಯೋಗವು ನಡೆಯುವುದರಿಂದ ಈ ಯೋಗಗಳಲ್ಲಿ ಮಾಡುವ ಪೂಜೆಯು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗುವುದು.
ಲಲಿತಾ ದೇವಿ ಪೂಜೆಯ ಪ್ರಯೋಜನ:
ನಂಬಿಕೆಯ ಪ್ರಕಾರ, ಲಲಿತಾ ಜಯಂತಿ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಂಟಾಗುತ್ತದೆ. ಈ ದಿನದಂದು, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ಮತ್ತು ಸರಿಯಾಗಿ ಪೂಜಿಸಿದ ನಂತರ ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಬೇಕು. ಮಾಘ ಪೂರ್ಣಿಮೆಯಂದು ಲಲಿತಾ ದೇವಿಯನ್ನು ಪೂಜಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಆರಾಧನೆಯಿಂದ ಜನನ ಮರಣ ಚಕ್ರದಿಂದ ಮುಕ್ತಿ ಸಿಗುತ್ತದೆ. ಲಲಿತಾ ದೇವಿಯನ್ನು ಪೂಜಿಸುವವನು ಬದುಕಿರುವಾಗಲೇ ಎಲ್ಲಾ ರೀತಿಯ ಸಿದ್ಧಿಗಳನ್ನು ಪಡೆಯುತ್ತಾನೆ.
ಲಲಿತಾ ದೇವಿ ಪೂಜೆ ವಿಧಾನ:
- ಲಲಿತಾ ದೇವಿಯನ್ನು ಪೂಜಿಸಲು ಬಯಸಿದರೆ, ಸೂರ್ಯೋದಯದ ಮೊದಲು ಎದ್ದು ನಿತ್ಯ ಕರ್ಮಗಳ ನಂತರ ಬಿಳಿ ಬಟ್ಟೆಗಳನ್ನು ಧರಿಸಿ.
- ಇದರ ನಂತರ ಒಂದು ಮಣೆವನ್ನು ತೆಗೆದುಕೊಂಡು ಅದರ ಮೇಲೆ ಗಂಗಾಜಲವನ್ನು ಸಿಂಪಡಿಸಿ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ನಂತರ ಮಣೆಯ ಮೇಲೆ ಬಿಳಿ ಬಟ್ಟೆಯನ್ನು ಹರಡಿ.
- ಪೀಠದ ಮೇಲೆ ಬಟ್ಟೆಯನ್ನು ಹಾಕಿದ ನಂತರ, ಲಲಿತಾ ದೇವಿಯ ಚಿತ್ರವನ್ನು ಸ್ಥಾಪಿಸಿ. ನಿಮ್ಮ ಬಳಿ ಲಲಿತಾ ದೇವಿಯ ಚಿತ್ರ ಅಥವಾ ವಿಗ್ರಹ ಇಲ್ಲದಿದ್ದರೆ ನೀವು ಶ್ರೀ ಯಂತ್ರವನ್ನು ಸಹ ಸ್ಥಾಪಿಸಬಹುದು.
- ಇದರ ನಂತರ, ಲಲಿತಾ ದೇವಿಗೆ ಕುಂಕುಮವನ್ನು ಹಚ್ಚಿ ಮತ್ತು ಅಕ್ಷತೆ, ಹಣ್ಣುಗಳು, ಹೂವುಗಳು, ಹಾಲುಗಳಿಂದ ಮಾಡಿದ ಪ್ರಸಾದ ಅಥವಾ ಪಾಯಸವನ್ನು ಅರ್ಪಿಸಿ.
- ಈ ಎಲ್ಲಾ ವಸ್ತುಗಳನ್ನು ಅರ್ಪಿಸಿದ ನಂತರ, ಲಲಿತಾ ದೇವಿಯನ್ನು ಪೂಜಿಸಿ ಮತ್ತು ಓಂ ಹ್ರೀಂ ಶ್ರೀಂ ತ್ರಿಪುರ ಸುಂದರಿಯೇ ನಮಃ ಎಂದು ಮಂತ್ರವನ್ನು ಪಠಿಸಿ.
- ಇದರ ನಂತರ ಲಲಿತಾ ದೇವಿಯ ಕಥೆಯನ್ನು ಕೇಳಿ ಅಥವಾ ಓದಿ.
- ಲಲಿತಾ ದೇವಿಯ ಕಥೆಯನ್ನು ಓದಿದ ನಂತರ, ಲಲಿತಾ ದೇವಿಗೆ ಧೂಪ ಮತ್ತು ದೀಪದಿಂದ ಆರತಿಯನ್ನು ಮಾಡಿ.
- ಇದರ ನಂತರ, ತಾಯಿ ಲಲಿತಾಗೆ ಬಿಳಿ ಬಣ್ಣದ ಸಿಹಿತಿಂಡಿಗಳನ್ನು ಅಥವಾ ಪಾಯಸವನ್ನು ಅರ್ಪಿಸಿ ಮತ್ತು ಪೂಜೆಯಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆಯನ್ನು ಕೇಳಿ.
- ಪೂಜೆಯ ನಂತರ, ಒಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕನ್ಯೆಯರಿಗೆ ಪ್ರಸಾದವನ್ನು ವಿತರಿಸಿ.
- ನಿಮಗೆ ಒಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕನ್ಯೆಯರು ಸಿಗದಿದ್ದರೆ, ನೀವು ಹಸುವಿಗೆ ಈ ಪ್ರಸಾದವನ್ನು ತಿನ್ನಲು ನೀಡಬೇಕು.
ಲಲಿತಾ ಜಯಂತಿಯ ಕಥೆ:
ದಂತಕಥೆಯ ಪ್ರಕಾರ, ದೇವಿ ಲಲಿತಾ ಆದಿ ಶಕ್ತಿಯ ವಿವರಣೆಯನ್ನು ದೇವಿ ಪುರಾಣದಿಂದ ಪಡೆಯಲಾಗಿದೆ. ಒಮ್ಮೆ ನೈಮಿಶಾರಣ್ಯದಲ್ಲಿ ಯಜ್ಞ ನಡೆಯುತ್ತಿದ್ದಾಗ ಅಲ್ಲಿಗೆ ದಕ್ಷ ಪ್ರಜಾಪತಿ ಆಗಮಿಸಿದಾಗ ದೇವತೆಗಳೆಲ್ಲರೂ ಅವನನ್ನು ಸ್ವಾಗತಿಸಲು ಎದ್ದರು. ಆದರೆ ಭಗವಾನ್ ಶಂಕರನು ಅಲ್ಲಿದ್ದ ಎದ್ದೇಳಲಿಲ್ಲ, ಈ ಅವಮಾನದ ಸೇಡು ತೀರಿಸಿಕೊಳ್ಳಲು, ದಕ್ಷನು ತನ್ನ ಯಾಗಕ್ಕೆ ಶಿವನನ್ನು ಆಹ್ವಾನಿಸಲಿಲ್ಲ. ತಾಯಿ ಸತಿ ಈ ವಿಷಯ ತಿಳಿದು ಶಂಕರನ ಅನುಮತಿಯನ್ನು ಪಡೆಯದೆ ತನ್ನ ತಂದೆ ರಾಜ ದಕ್ಷನ ಮನೆಗೆ ತಲುಪಿದಳು.
ಆ ಯಾಗದಲ್ಲಿ ತಂದೆಯು ಶಂಕರನಿಗೆ ಮಾಡಿದ ಖಂಡನೆಯನ್ನು ಕೇಳಿ ತನ್ನನ್ನು ಅವಮಾನಿಸುವುದನ್ನು ಕಂಡು ಅದೇ ಅಗ್ನಿಕುಂಡಕ್ಕೆ ಹಾರಿ ಪ್ರಾಣ ಬಿಟ್ಟಳು. ಇದನ್ನು ತಿಳಿದ ಶಿವನು ತಾಯಿ ಸತಿ ಪ್ರೀತಿಯಲ್ಲಿ ವಿಚಲಿತನಾದನು. ತಾಯಿ ಸತಿಯ ಮೃತ ದೇಹವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಉದ್ರಿಕ್ತ ಭಾವನೆಯಿಂದ ಅಲ್ಲಿ ಇಲ್ಲಿ ತಿರುಗಾಡಲು ಪ್ರಾರಂಭಿಸಿದನು.
ಭಗವಾನ್ ಶಂಕರನ ಈ ಪರಿಸ್ಥಿತಿಯಿಂದಾಗಿ, ಇಡೀ ಪ್ರಪಂಚದ ವ್ಯವಸ್ಥೆಯು ಅಲ್ಲೋಲ ಕಲ್ಲೋಲವಾಯಿತು. ಅಂತಹ ಪರಿಸ್ಥಿತಿಯಲ್ಲಿ, ತಾಯಿ ಸತಿಯ ದೇಹವನ್ನು ತನ್ನ ಸುದರ್ಶನ ಚಕ್ರದಿಂದ ತುಂಡು ಮಾಡಲು ವಿಷ್ಣುವಿಗೆ ಇತರೆ ದೇವರುಗಳು ಒತ್ತಾಯಿಸಿದರು. ನಂತರ ತಾಯಿ ಸತಿಯ ದೇಹದ ಭಾಗಗಳನ್ನು ಕತ್ತರಿಸಲಾಯಿತು ಮತ್ತು ಆ ಭಾಗಗಳು ಬಿದ್ದಿರುವ ಸ್ಥಳವನ್ನು ಶಕ್ತಿಪೀಠ ಎಂದು ಕರೆಯಲಾಯಿತು. ಆ ಸ್ಥಳಗಳಲ್ಲಿ ಮಹಾದೇವನು ಭೈರವನ ವಿವಿಧ ರೂಪಗಳಲ್ಲಿ ನೆಲೆಸಿದ್ದಾನೆ. ನೈಮಿಷಾರಣ್ಯದಲ್ಲಿ ತಾಯಿ ಸತಿಯ ಹೃದಯ ಬಿದ್ದಿತ್ತು. ನೈಮಿಷವು ಲಿಂಗಧಾರಿಣಿ ಶಕ್ತಿಪೀಠದ ತಾಣವಾಗಿದೆ. ಇಲ್ಲಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ಇದು ತಾಯಿ ಲಲಿತಾ ದೇವಿಯ ದೇವಸ್ಥಾನವೂ ಆಗಿದೆ. ಸತಿ ನೈಮಿಷದಲ್ಲಿ ಲಿಂಗಧಾರಿಣಿ ಎಂಬ ಹೆಸರಿನಿಂದ ಪ್ರಸಿದ್ಧಳಾದಳು, ಅವಳನ್ನೇ ಲಲಿತಾ ದೇವಿ ಎಂದು ಕರೆಯಲಾಯಿತು.
ಇನ್ನೊಂದು ಕಥೆಯ ಪ್ರಕಾರ, ಬ್ರಹ್ಮನು ಬಿಟ್ಟುಹೋದ ಚಕ್ರದಿಂದ ಪಾತಾಳಲೋಕವು ಅಂತ್ಯಗೊಳ್ಳಲು ಪ್ರಾರಂಭಿಸಿತು. ಈ ಪರಿಸ್ಥಿತಿಯಿಂದ ವಿಚಲಿತರಾದ ಋಷಿಗಳು ಸಹ ಭಯಭೀತರಾಗುತ್ತಾರೆ ಮತ್ತು ಇಡೀ ಭೂಮಿಯು ನಿಧಾನವಾಗಿ ಮುಳುಗಲು ಪ್ರಾರಂಭಿಸುತ್ತದೆ. ಆಗ ಋಷಿಗಳೆಲ್ಲರೂ ಮಾತೆ ಲಲಿತಾ ದೇವಿಯನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಪ್ರಾರ್ಥನೆಯಿಂದ ಸಂತೋಷಗೊಂಡ ದೇವಿಯು ಕಾಣಿಸಿಕೊಂಡು ಈ ವಿನಾಶಕಾರಿ ಚಕ್ರವನ್ನು ನಿಲ್ಲಿಸುತ್ತಾಳೆ. ಜಗತ್ತು ಮತ್ತೆ ಹೊಸ ಜೀವನವನ್ನು ಕಂಡುಕೊಳ್ಳುತ್ತದೆ.
ಮಾಘ ಪೂರ್ಣಿಮೆಯಂದು ಲಲಿತಾ ದೇವಿಯನ್ನು ಪೂಜಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಆರಾಧನೆಯಿಂದ ಜನನ ಮರಣ ಚಕ್ರದಿಂದ ಮುಕ್ತಿ ಸಿಗುತ್ತದೆ. ಲಲಿತಾ ದೇವಿಯನ್ನು ಪೂಜಿಸುವವನು ಬದುಕಿರುವಾಗಲೇ ಎಲ್ಲಾ ರೀತಿಯ ಸಿದ್ಧಿಗಳನ್ನು ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ.
ಈ ಪರ್ವ ದಿನದಲ್ಲಿ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ ಅತ್ಯಂತ ಪುಣ್ಯಪ್ರದವಾದದ್ದು.