ಕಾಮಿಕ ಏಕಾದಶಿ : ಈ ಏಕಾದಶಿಯ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಮಂತ್ರ..!
ಕಾಮಿಕ ಏಕಾದಶಿ ವ್ರತವು ಆಷಾಢ ಮಾಸದ ಕೊನೆಯ ಏಕಾದಶಿ ವ್ರತವಾಗಿರುತ್ತದೆ. ಯಾಕೆಂದರೆ ಈ ಏಕಾದಶಿ ವ್ರತದ ನಂತರ ಆಷಾಢ ಮಾಸ ಮುಕ್ತಾಯಗೊಂಡು ಶ್ರಾವಣ ಮಾಸ ಆರಂಭವಾಗುತ್ತದೆ. ಕಾಮಿಕ ಏಕಾದಶಿ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಈ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ.
ಕಾಮಿಕ ಏಕಾದಶಿಯ ಮಹತ್ವ:
ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ಅರ್ಧಕ್ಕೆ ಸ್ಥಗಿತಗೊಂಡ ಕೆಲಸಗಳು ಅಥವಾ ಅಪೂರ್ಣಗೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಶ್ರೀ ಹರಿವಿಷ್ಣುವಿನ ಉಪವಾಸ ಮಾಡುವವನ ಪೂರ್ವಜರ ಸಂಕಷ್ಟಗಳನ್ನೂ ದೂರ ಮಾಡುತ್ತಾನೆ. ತೀರ್ಥಸ್ನಾನದ ಫಲ ಹಾಗೂ ಅಶ್ವಮೇಧ ಯಾಗದ ಫಲವು ಈ ಏಕಾದಶಿ ಆಚರಣೆಯಿಂದ ದೊರೆಯುತ್ತದೆ. ಶ್ರೀಹರಿಯನ್ನು ತುಳಸಿಯಿಂದ ಪೂಜಿಸಿ ಕಥೆಯನ್ನು ಕೇಳಿದರೆ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ.
.
ಕಾಮಿಕಾ ಏಕಾದಶಿಯ ಮಂತ್ರ:
- ಓಂ ನಮೋ ಭಗವತೇ ವಾಸುದೇವಾಯ
- ಓಂ ವಿಷ್ಣವೇ ನಮಃ
- ಓಂ ನಮೋ ನಾರಾಯಣ
ಶ್ರೀ ಮನ್ನಾರಾಯಣ ನಾರಾಯಣ ಹರಿ ಹರಿ
- ಓಂ ವಾಸುದೇವಾಯ ನಮಃ
- ಓಂ ಸಂಕರ್ಷಣಾಯ ನಮಃ
- ಓಂ ಪ್ರದ್ಯುಮ್ನಾಯ ನಮಃ
- ಓಂ ಅಃ ಅನಿರುದ್ಧಾಯ ನಮಃ
- ಓಂ ನಾರಾಯಣಾಯ ನಮಃ
- ಓಂ ಹ್ರೀಂ ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ರವಾನ್|
ಯಸ್ಯ ಸ್ಮರಣ ಮಾತ್ರೇಣ ಹ್ರತಂ ನಷ್ಟಂ ಚ ಲಭ್ಯತೇ|
ಕಾಮಿಕ ಏಕಾದಶಿ ವ್ರತದ ದಿನಂದು ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ, ಉಪವಾಸ ವ್ರತವನ್ನು ಆಚರಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಕಾಮಿಕ ಏಕಾದಶಿ ವ್ರತವು ಆಷಾಢ ಮಾಸದ ಮುಕ್ತಾಯವನ್ನು ಸೂಚಿಸುತ್ತದೆ.