ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತ್ರಿಪುರಾದ ರಾಜಧಾನಿಯಾದ ಅಗರ್ತಲ ಬಳಿ ಇರುವ ಉನಕೋಟಿ

ಉನಕೋಟಿ…!

ಉನಕೋಟಿ ಎಂದರೆ ಬಂಗಾಲಿ ಬಾಷೆಯಲ್ಲಿ
ಒಂದು ಕೋಟಿಗಿಂತ ಒಂದು ಕಡಿಮೆ ಎಂದು ಅರ್ಥ…!!ಅಂದರೆ 9999999….!!


ಭಾರತದ ಈಶಾನ್ಯ ರಾಜ್ಯ ತ್ರಿಪುರಾದ ರಾಜಧಾನಿಯಾದ ಅಗರ್ತಲದಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ದಟ್ಟವಾದ ಕಾಡಿನ ಮಧ್ಯೆ ಬೃಹದಾಕಾರವಾದ ಬಂಡೆಗಳ ಮೇಲೆ
ದೇವಾನುದೇವತೆಗಳ ಸುಂದರವಾದ ಮತ್ತು
ಅದ್ಭುತವಾದ ಶಿಲ್ಪಗಳನ್ನು ಬೃಹದಾಕಾರವಾಗಿ ಕೆತ್ತಿದ್ದಾರೆ….!!
ಇಂತಹ ಬೃಹದಾಕಾರವಾದ ಶಿಲ್ಪಗಳನ್ನು ನೋಡಿದರೆ ಇವು ಬಹಳ ಪುರಾತನವಾದ ಶಿಲ್ಪಗಳು ಎಂದು ಅನಿಸುತ್ತದೆ ಆದರೆ ಎಷ್ಟು ಪುರಾತನ ಹಾಗೂ ಯಾವ ಕಾರಣಕ್ಕಾಗಿ ಈ ಶಿಲ್ಪಗಳನ್ನು ಕೆತ್ತಿದ್ದಾರೆ ಎಂದು ನಿಖರವಾದ ಸಮಯ ಮತ್ತು ಕಾರಣಗಳು ತಿಳಿದು ಬಂದಿಲ್ಲ….!!
ಅಲ್ಲಿಯ ಸ್ಥಳೀಯರು ಹೇಳುವಂತೆ ಈ ಶಿಲ್ಪಗಳನ್ನು ಸಾವಿರಾರು ವರ್ಷಗಳ ಹಿಂದೆ ಅಲ್ಲಿನ ಮೂಲನಿವಾಸಿಗಳು ನಿರ್ಮಿಸಿದ್ದಾರೆ ಎನ್ನುವುದು ಒಂದು ಕಥೆಯಾದರೆ ಮತ್ತೊಂದು ದಂತಕಥೆ ಬಹಳ ಕುತೂಹಲಕಾರಿಯಾಗಿದೆ…!!

  ಶ್ರೀಕ್ಷೇತ್ರ ಉಜ್ಜೈನ್ - ಉಜ್ಜಯಿನಿ

ಒಮ್ಮೆ ಶಿವನು ಇತರ ದೇವಾನುದೇವತೆಗಳೊಂದಿಗೆ
ಕೈಲಾಸ ಪರ್ವತದಿಂದ ವಾರಣಾಸಿಗೆ ಪ್ರಯಾಣಿಸುವಾಗ ದಾರಿ ಮಧ್ಯೆ ಕತ್ತಲು ಆವರಿಸುತ್ತದೆ…!
ಕತ್ತಲು ಕವಿದಿದ್ದರಿಂದ ಪ್ರಯಾಣವನ್ನು ಮುಂದೂಡಿದ ಪರಶಿವನು ಆ ಸುಂದರ ಪರಿಸರದಲ್ಲಿ ಎಲ್ಲಾ ದೇವಾನುದೇವತೆಗಳಿಗೆ ವಿಶ್ರಮಿಸಿಕೊಳ್ಳಲು ಸೂಚಿಸಿ ಸೂರ್ಯೋದಯದ ವೇಳೆಗೆ ಎಲ್ಲರೂ ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿರಬೇಕೆಂದು ಆದೇಶಿಸಿ ತಾನು ಸಹ ವಿಶ್ರಾಂತಿಗೆ ತೆರಳಿದನು…!!
ಮರುದಿನ ಸೂರ್ಯೋದಯದ ಸಮಯದಲ್ಲಿ ಪರಶಿವನು ಎದ್ದು ಪ್ರಯಾಣಕ್ಕೆ ಸಿದ್ದನಾಗಿ ತನ್ನೊಂದಿಗಿದ್ದ ಎಲ್ಲಾ ದೇವಾನುದೇವತೆಗಳ ಸಿದ್ಧತೆಗಳನ್ನು ಪರಿಶೀಲಿಸಿದಾಗ, ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಎಲ್ಲಾ ದೇವಾನುದೇವತೆಗಳು ಇನ್ನೂ ವಿಶ್ರಾಂತಿ ಪಡೆಯುತ್ತಿದ್ದರು, ಆದ್ದರಿಂದ ಕೋಪಗೊಂಡ ಶಿವನು ಅವರೆಲ್ಲರನ್ನೂ ಅಲ್ಲಿಯೇ ಶಿಲೆಗಳಾಗಿ ಎಂದು
ಶಾಪ ಕೊಟ್ಟನು ಇವನು ಕೊಟ್ಟ ಶಾಪದ ಪರಿಣಾಮದಿಂದ ತಕ್ಷಣವೇ ಅಲ್ಲಿದ್ದ ಎಲ್ಲಾ ದೇವಾನುದೇವತೆಗಳು ಅಲ್ಲಿಯೇ ಶಿಲೆಗಳಾಗಿ ನಿಂತರು.
ಹಾಗೆ ಶಿಲೆಗಳಾಗಿ ನಿಂತ ದೇವಾನುದೇವತೆಗಳ ಸಂಖ್ಯೆ 9999999… !! ಅದಕ್ಕೆ ಆ ಸ್ಥಳ ಉನಕೋಟಿ ಎಂದು ಪ್ರಸಿದ್ಧವಾಗಿದೆ.

  ಉಲ್ಟಾ ಹನುಮಾನ್ ಮಂದಿರ ಉಜ್ಜಯಿನಿ

ತಮಾಷೆಯೆಂದರೆ ಅಲ್ಲಿರುವ ಮೊದಲ ಎರಡು ಬೃಹತ್ ಶಿಲಾ ಮೂರ್ತಿಗಳು ಶಿವ ಮತ್ತು ಪಾರ್ವತಿಯರದ್ದು ..!! ಅಂದರೆ ಶಾಪ ಕೊಟ್ಟ ಶಿವನು ಸಹ ಅಲ್ಲಿ ಶಿಲೆಯಾಗಿ ಉಳಿದಿದ್ದಾನೆ
ಅಲ್ಲಿ ನಮ್ಮ ಗಮನ ಸೆಳೆಯುವ ಇನ್ನೊಂದು ವಿಗ್ರಹ ಗಣೇಶನದು..!!
ಮತ್ತೊಂದು ಕುತೂಹಲಕಾರಿಯಾದ ವಿಷಯವೆಂದರೆ ಯಾವ ಕಡೆಯಿಂದ ಎಣಿಸಿದರೂ ಅಲ್ಲಿರುವ ವಿಗ್ರಹಗಳ ಸಂಖ್ಯೆ ನೂರಿನ್ನೂರನ್ನು ಮೀರುವುದಿಲ್ಲ..!!
ಒಂದೇ ಉನಕೋಟಿ ಎನ್ನುವ ಸಂಖ್ಯೆ ಉತ್ಪ್ರೇಕ್ಷೆ ಯಾಗಿರಬೇಕು ಅಥವಾ ಇಂತಹ ಲಕ್ಷಾಂತರ ಕೆತ್ತನೆಗಳು ಈ ದಟ್ಟಾರಣ್ಯದಲ್ಲಿ ನಮ್ಮ ಕಣ್ಣುಗಳಿಂದ ಮರೆಯಾಗಿರಬೇಕು….!!

  ಪ್ರಜೆಯ ಮೂಲ ಅವಶ್ಯಕತೆ

Leave a Reply

Your email address will not be published. Required fields are marked *

Translate »