ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅನಂತಪದ್ಮನಾಭ ಸ್ವಾಮಿಯ ಕೆಲವು ದೇವಸ್ಥಾನಗಳು

ಅನಂತಪದ್ಮನಾಭ ಸ್ವಾಮಿಯ ಕೆಲವು ದೇವಸ್ಥಾನಗಳು

೧. ಅನಂತಶಯನ – ತಿರುವನಂತಪುರ – ಇದನ್ನು ಕಲಿಯುಗದ ಮೊದಲ ದಿನ ಸ್ಥಾಪನೆ ಎಂದು ಸ್ಥಳ ಪುರಾಣ.
೨. ಉಡುಪಿಯ ಅನಂತೇಶ್ವರ – ಈ ವಿಗ್ರಹವು ಶಿವಲಿಂಗದಂತೆ ಕಂಡರೂ, ಪರಶುರಾಮದೇವರು ಅನಂತಾಸನ ಕ್ಷೇತ್ರದಲ್ಲಿ ರಾಮಭೋಜ ರಾಜನಿಗೆ ವರವಿತ್ತಂತೆ ಪದ್ಮನಾಭ ನಾರಾಯಣ ಸ್ವರೂಪದಲ್ಲಿ ಉದ್ಭವಿಸಿದ್ದಾರೆ ಎಂದು ಪ್ರತೀತಿಯಿದೆ. ಮಧ್ಯಗೇಹ ಭಟ್ಟ ದಂಪತಿಗಳು ಪುತ್ರಪ್ರಾಪ್ತಿಗಾಗಿ ೧೨ ವರ್ಷ ಕಠಿಣ ವ್ರತವನ್ನು ಮಾಡಿ ಆಚಾರ್ಯ ಮಧ್ವರನ್ನು ಪಡೆದರೆಂದು ನಂಬಿಕೆ.
೩. ಅನಂತಪದ್ಮನಾಭ , ಪಾಜಕ – ಮಧ್ಯಗೇಹಭಟ್ಟ ದಂಪತಿಗಳು ಅನಂತೇಶ್ವರನನ್ನು ಪೂಜಿಸಿ ದಾಗ, ಆ ದಂಪತಿಗಳಿಗೆ ಸ್ವಪ್ನಲಬ್ಧವಾದ ಮೂರ್ತಿ.
೪. ಶ್ರೀ ಅನಂತಪದ್ಮನಾಭ, ಪಣಿಯಾಡಿ – ಒಬ್ಬ ಭಕ್ತರಿಗೆ ಸ್ವಪ್ನದಲ್ಲಿ ಶ್ರೀಹರಿಯು ದರ್ಶನವಿತ್ತು, ಇಲ್ಲೇ ಸಮೀಪದಲ್ಲಿ ನನ್ನ ವಿಗ್ರಹವಿರುವುದಾಗಿಯೂ ಅದನ್ನು ಹೊರತೆಗೆದು, ಪ್ರತಿಷ್ಟಾಪಿಸಲು ಸೂಚಿಸಿದಂತೆ ಪ್ರತಿಷ್ಟಿತ ಮೂರ್ತಿ (ಉಡುಪಿಯ ಸಮೀಪ)
೫. ಅನಂತಗಿರಿ, ತೆಲಂಗಾಣ – ಇಂದಿನ ತೆಲಂಗಾಣ ರಾಜ್ಯದ ಆಲಂಪಲ್ಲಿ ಎಂಬಲ್ಲಿ ಮಾರ್ಕಂಡೇಯ ಋಷಿಗಳು ತಪಸ್ಸನ್ನಾಚರಿಸಿದ ಧರ್ಮಭೂಮಿಯಲ್ಲಿ, ಮುಚುಕುಂದಾ ನದಿಯ ದಂಡೆಯಲ್ಲಿ ಇರುವ ಕ್ಷೇತ್ರ
೬. ಶ್ರೀಪೆರ್ಡೂರು ಅನಂತಪದ್ಮನಾಭ – ಉಡುಪಿಯಿಂದ ಆಗುಂಬೆ ಮಾಗದಲ್ಲಿ – ಒಮ್ಮೆ ಹೆಬ್ರಿಯಲ್ಲಿ ಕಾಣದಾಗಿದ್ದ ಹಸುವನ್ನು ಹುಡುಕುತ್ತ ಬಂದ ಯುವಕ, ಆ ಹಸು ಹುತ್ತಕ್ಕೆ ಹಾಲು ಸುರಿಸುತ್ತಾ ನಿಂತಿತ್ತು. ಅದನ್ನು ಕಂಡು ಸಂತಸದಿಂದ ಪೇರ್ ಉಂಡು ಪೇರ್ ಉಂಡು (ಹಾಲು ಇದೆ) ಎಂದು ಕೂಗಿದ. ಆ ಜಾಗದಲ್ಲಿ ಹುತ್ತವಿತ್ತು. ಅಲ್ಲೇ ಅನಂತಪದ್ಮನಾಭನನ್ನು ಪ್ರತಿಷ್ಟಾಪಿಸಲಾಯಿತೆಂದು ಪ್ರತೀತಿ.
೭. ಉಡುಪಿ ಅನಂತಪದ್ಮನಾಭ – ಶ್ರೀವಾದಿರಾಜತೀರ್ಥರ ಪರಂಪರೆಯ ಶ್ರೀ ವೇದನಿಧಿತೀರ್ಥರು ಒಮ್ಮೆ ಕೃಷ್ಣನ ಪಾದ ಮೂಲದಲ್ಲಿ ವಾಸುಕಿಯನ್ನು ಕಂಡು ಹರ್ಷಿತರಾಗಿ, ಅಲ್ಲಿಯ ಸಮೀಪದ ಲಕ್ಷ್ಮೀಕೊಪ್ಪಲು ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿ ಶಾಸ್ತ್ರೋಕ್ತ ರೀತಿಯಿಂದ ಪೂಜೆ ನಡೆಸಿದರು.🙏

Leave a Reply

Your email address will not be published. Required fields are marked *

Translate »