ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀಕ್ಷೇತ್ರ ಉಜ್ಜೈನ್ – ಉಜ್ಜಯಿನಿ

ಶ್ರೀಕ್ಷೇತ್ರ ಉಜ್ಜೈನ..!

ಉಜ್ಜೈನ್
ಉತ್ ಜೈನೀ ಅಂದರೆ ವಿಜಯಕ್ಕಾಗಿ ನಿರ್ಮಿಸಿದ ಊರು.

ಶ್ರೀ ಮಂಗಲಗ್ರಹ ದೇವತೆ
ಶ್ರೀಮಂಗಲನಾಥ ದೇವತೆಯ ದೇವಸ್ಥಾನದಲ್ಲಿ ಶ್ರೀಮಂಗಲಗ್ರಹದೇವತೆಯು ಮೂರ್ತಿರೂಪದಲ್ಲಿ (ದೇವತೆಯ ಮೂರ್ತಿಯು ಲಿಂಗರೂಪದಲ್ಲಿ) ವಾಸವಾಗಿದೆ. ಪೌರಾಣಿಕ ಮನ್ನಣೆಗನುಸಾರ ಇದು ಮಂಗಲನಾಥನ ಜನ್ಮ ಭೂಮಿಯಾಗಿದೆ. ಈ ದೇವತೆಯ ದೇವಸ್ಥಾನವು ಭಾರತದಲ್ಲಿ ಕೇವಲ ಎರಡೇ ಸ್ಥಳಗಳಲ್ಲಿವೆ.

ಶ್ರೀ ಕಾಲಭೈರವ
ಈ ದೇವತೆಯು ಭಾರತದ ಕ್ಷೇತ್ರಪಾಲ ದೇವತೆಯಾಗಿದೆ. ಈ ದೇವತೆಯ ದರ್ಶನ ಪಡೆಯುವಾಗ ಪ್ರಸಾದವೆಂದು ದೇವತೆಗೆ ಶರಾಬು ಕುಡಿಸಲಾಗುತ್ತದೆ. ಶರಾಬಿನ ಪಾತ್ರೆಯನ್ನು ದೇವತೆಯ ಬಾಯಿಯ ಹತ್ತಿರ ಹಿಡಿಯುತ್ತಲೇ ದೇವತೆಯ ಪ್ರತಿಮೆಯು ಶರಾಬು ಸೇವನೆ ಮಾಡುತ್ತದೆ. ದೇವಸ್ಥಾನದ ಸಭಾಗೃಹದ ಉತ್ತರಕ್ಕೆ ಪಾತಾಲಭೈರವಿಯೆಂಬ ಚಿಕ್ಕ ಗುಹೆಯಿದೆ. ಸ್ಕಂದಪುರಾಣದಲ್ಲಿಯೂ ಈ ದೇವಸ್ಥಾನದ ಉಲ್ಲೇಖವಿದೆ. ಅಲ್ಲಿ ಈ ದೇವತೆಗೆ ಪ್ರಸಾದ ರೂಪದಲ್ಲಿ ಶರಾಬು ಕುಡಿಸಲಾಗುತ್ತದೆ. ಆ ಶರಾಬು ದೇವತೆಯ ಬಾಯಿಯಿಂದ ಎಲ್ಲಿ ಅದೃಶ್ಯವಾಗುವುದು ಎಂಬುದನ್ನು ಯಾರಿಗೂ ಕಂಡು ಹಿಡಿಯಲು ಸಾಧ್ಯವಾಗಲಿಲ್ಲವೆಂಬುದು ತಿಳಿದುಬಂದಿದೆ. ಇಲ್ಲಿ ಅಷ್ಟಮಿಗೆ ಬಹಳ ಮಹತ್ವವಿದೆ. ಈ ಮೂರ್ತಿಯ ವೈಶಿಷ್ಟ್ಯವೆಂದರೆ ಈ ಮೂರ್ತಿಯ ಮುಖವಾಡವು ಪ್ರತಿ ೧೨ ವರ್ಷಗಳಿಗೊಮ್ಮೆ ತನ್ನಷ್ಟಕ್ಕೆ ಕಳಚಿ ಬೀಳುತ್ತದೆ. (ಇದರಿಂದ ಪ್ರತ್ಯಕ್ಷ ಮೂರ್ತಿಯ ಮೂಲ ಸ್ವರೂಪ ನೋಡಬಹುದು.)

ಸಿದ್ಧವಟ
ಭೈರವಗಡದ ವಸತಿಯ ಹತ್ತಿರ ಈ ಪ್ರಾಚೀನ ವಟವೃಕ್ಷವಿದೆ. ಇದನ್ನು ಪ್ರಯಾಗದಲ್ಲಿನ ಅಕ್ಷಯವಟವೃಕ್ಷದಂತೆ ಮತ್ತು ವೃಂದಾವನದಲ್ಲಿನ ವಂಶಿವಟವೃಕ್ಷದಂತೆ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸ್ಥಾನದಲ್ಲಿ ಕಾರ್ತಿಕೇಯ ಸ್ವಾಮಿಯು ತಾರಕಾಸುರನನ್ನು ವಧಿಸಿದ ನಂತರ ತನ್ನ ಶಕ್ತಿಯನ್ನು ಅಂದರೆ ಬರ್ಚಿಯನ್ನು ಎಸೆದನು ಮತ್ತು ಅದು ಪಾತಾಳಕ್ಕೆ ಹೋಯಿತು. ಆದುದರಿಂದ ಇದನ್ನು ಶಕ್ತಿಭೇದ ತೀರ್ಥವೆಂದು ಹೇಳುತ್ತಾರೆ.

  ಅಷ್ಟವಿನಾಯಕ ಮಂದಿರಗಳು

ಮೊಗಲರು ಇಲ್ಲಿನ ವಟವೃಕ್ಷವನ್ನು ಕಡಿದು ಅದರ ಮೇಲೆ ಭಾರವಾದ ಒಂದು ಕಬ್ಬಿಣದ ಹಂಚನ್ನು ಇಟ್ಟಿದ್ದರು, ಆದರೆ ಅದನ್ನು ಒಡೆದು ಈ ವಟವೃಕ್ಷವು ಪುನಃ ಚಿಗುರಿತು. ಈ ವೃಕ್ಷದ ಕೆಳಗೆ ಸೀತೆಯು ತಪಶ್ಚರ್ಯ ಮಾಡಿರುವುದು ತಿಳಿದು ಬಂದಿದೆ. ಈ ತಪಸ್ಸಿನ ಸಾಮರ್ಥ್ಯದಿಂದ ಇಲ್ಲಿ ನಾರಾಯಣ ನಾಗಬಲಿಯಂತಹ ವಿಧಿಗಳನ್ನು ಮಾಡಲು ಶಾಸ್ತ್ರವು ಮನ್ನಣೆ ನೀಡಿದೆ. ಇಲ್ಲಿ ಹಾಲು ಅರ್ಪಣೆ ಮಾಡುವುದರಿಂದ ನಮ್ಮ ಪೂರ್ವಜರಿಗೆ ಮುಕ್ತಿ ದೊರೆಯುವುದೆಂಬ ನಂಬಿಕೆಯಿದೆ.

ಮಚ್ಛೀಂದ್ರನಾಥರ ಸಮಾಧಿ
ಭೃತಹರಿಯ ಗುಹೆಯ ಹತ್ತಿರ ಮಚ್ಛೀಂದ್ರರನಾಥರ ಸ್ಥಾನವಿದೆ. ಮುಸಲ್ಮಾನರ ನಂಬಿಕೆಯಂತೆ ಅವರು ಇದನ್ನು ಪೀರಮಚ್ಛೀಂದ್ರರ ದರ್ಗಾವೆಂದು ತಿಳಿಯುತ್ತಾರೆ.

ಋಣಮುಕ್ತೇಶ್ವರ ದೇವಸ್ಥಾನ
ಇಲ್ಲಿ ಶಿವನ ಲಿಂಗವಿದ್ದು ರಾಜಾ ಸತ್ಯಹರಿಶ್ಚಂದ್ರನು ತನ್ನನ್ನು ಋಣಮುಕ್ತಗೊಳಿಸುವ ಸಲುವಾಗಿ ಶಿವನಲ್ಲಿ ಪ್ರಾರ್ಥನೆ ಮಾಡಿದ್ದನು. ಇಲ್ಲಿ ಋಣಮುಕ್ತವಾಗುವುದಕ್ಕಾಗಿ ಕಡಲೆ ಬೇಳೆಯನ್ನು ಅರ್ಪಿಸಲಾಗುತ್ತದೆ.

ಮಹಾಕಾಳೇಶ್ವರ ದೇವಸ್ಥಾನ
ಶಿವ ಪುರಾಣಕ್ಕನುಸಾರವಾಗಿ ಈ ದೇವಸ್ಥಾನವನ್ನು ದ್ವಾಪಾರಯುಗದಲ್ಲಿ ನಂದರಾಜನ (ಭಗವಾನ ಶ್ರೀಕೃಷ್ಣನ ತಂದೆ) ಹಿಂದಿನ ೮ ನೆಯ ಪೀಳಿಗೆಯು ನಿರ್ಮಿಸಿದೆ. ಈ ದೇವಸ್ಥಾನವನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ಎಲ್ಲದಕ್ಕೂ ಮೇಲಿನ ಭಾಗದಲ್ಲಿ ನಾಗಚಂದ್ರೇಶ್ವರನ ದೇವಸ್ಥಾನವಿದೆ. ಅದರ ಕೆಳಗೆ ಓಂಕಾರೇಶ್ವರನ ದೇವಸ್ಥಾನವಿದೆ ಮತ್ತು ಅದರ ಕೆಳಗೆ ಮಹಾಕಾಳೇಶ್ವರನ (ಮುಖ್ಯ ಜ್ಯೋತಿರ್ಲಿಂಗ) ದೇವಸ್ಥಾನವಿದೆ. ನಾಗಚಂದ್ರೇಶ್ವರನ ದೇವಸ್ಥಾನವನ್ನು ವರ್ಷಕ್ಕೊಮ್ಮೆ ನಾಗಪಂಚಮಿಯ ದಿನ ಮಾತ್ರ ತೆರೆಯ ಲಾಗುವುದು. ಇಲ್ಲಿ ದೇವತೆಗಳಿಗೆ ಪ್ರತಿ ದಿನ ತಾಜಾ ಚಿತೆಯ ಭಸ್ಮವನ್ನು ಹಚ್ಚಲಾಗುತ್ತದೆ.

  ಕನಕಗಿರಿ ಮಾಲೆಕಲ್‌ ವೆಂಕಟರಮಣ - ಅರಸೀಕೆರೆ ಚಿಕ್ಕ ತಿರುಪತಿ ದೇವಸ್ಥಾನ

ಸಾಂದಿಪನೀ ಋಷಿಗಳ ಆಶ್ರಮ
ಇಲ್ಲಿ ಭಗವಾನ ಶ್ರೀಕೃಷ್ಣ ಮತ್ತು ಬಲರಾಮ ಹಾಗೂ ಸುದಾಮಾ ಇವರು ವಿದ್ಯಾಭ್ಯಾಸ ಮಾಡಿದ್ದರು. ಇಲ್ಲಿ ಶ್ರೀಕೃಷ್ಣನ ಪಾದದ ಅಚ್ಚು (ಅಂಕ) ಇರುವುದರಿಂದ ಈ ಸ್ಥಳಕ್ಕೆ ಅಂಕಪಾದವೆಂದು ಹೇಳುತ್ತಾರೆ. ಇಲ್ಲಿ ಇವರು ವಿದ್ಯೆ ಗ್ರಹಣ ಮಾಡುತ್ತಿದ್ದ ದೃಶ್ಯವು ಮೂರ್ತಿರೂಪದಲ್ಲಿದೆ. ಇಲ್ಲಿ ಶ್ರೀವಲ್ಲಭಾಚಾರ್ಯರು ನೆಟ್ಟಿರುವ ಒಂದು ಅಶ್ವತ್ಥದ ಮರವೂ ಇದೆ.

ರಾಜಾ ವಿಕ್ರಮಾದಿತ್ಯನ ಕುಲದೇವತೆ
ರಾಜಾ ವಿಕ್ರಮಾದಿತ್ಯನ ಕುಲದೇವತೆ ಅವನ ಬಗ್ಗೆ ಪ್ರಸನ್ನಳಾಗಿದ್ದಳು. ಈ ದೇವಿಯ ಆಶೀರ್ವಾದದಿಂದ ವಿಕ್ರಮಾದಿತ್ಯನ ಸೇವೆಗೆ ೬೪ ಯೋಗಿನಿಗಳಿದ್ದರು. ಅವಳ ದೇವಸ್ಥಾನ ಮಹಾಕಾಳೇಶ್ವರ ದೇವಸ್ಥಾನದ ಹತ್ತಿರವೇ ಇದೆ. (ದೇವಿಯ ಹೆಸರು ಹೆಚ್ಚಿನಾಂಶ ಸಿದ್ಧಕಲೆ ಎಂದಿತ್ತು.)

ರಾಜಾವಿಕ್ರಮಾದಿತ್ಯ
ರಾಜಾ ವಿಕ್ರಮಾದಿತ್ಯನ ಅವಂತಿಕಾ ರಾಜನಗರಿಯಲ್ಲಿ ಕೆಟ್ಟ ಶಕ್ತಿಗಳಿಂದ ತೀವ್ರ ತೊಂದರೆಯಿದ್ದ ಕಾರಣ ಅಲ್ಲಿ ಸತತವಾಗಿ ಯಾರಾದರೂ ಸಾಯುತ್ತಿದ್ದರು. ಅದಕ್ಕೆ ಉಪಾಯವೆಂದು ಅವನು ಬೇತಾಳನನ್ನು ಪ್ರಸನ್ನಗೊಳಿಸಿಕೊಂಡಿದ್ದನು. ಆ ಮೇಲೆ ರಾಜನ ಹೆಗಲ ಮೇಲೆ ಕುಳಿತುಕೊಂಡು ಬೇತಾಳನು ಅವನಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದನು. ಕಾಲಾಂತರದಿಂದ ವಿಕ್ರಮಾದಿತ್ಯನ ಈ ಜಾದುವಿನ ನಗರವು ನಾಶವಾಯಿತು. (ಇವನ ದೇವಸ್ಥಾನವಿದೆಯೋ ಅಥವಾ ಇಲ್ಲವೋ ಎಂಬುದು ಸರಿಯಾಗಿ ತಿಳಿಯಲಿಲ್ಲ.)

  ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಳಾಯಿ

ಉಜ್ಜೈನಿಯ ಕೆಲವು ವೈಶಿಷ್ಟ್ಯಗಳು

ಉಜೈನ್ ನಗರವು ಬೇತಾಳನದ್ದಾಗಿದ್ದ ಕಾರಣ ಈ ನದಿಯ ದಡದಲ್ಲಿ ಅಘೋರೀವಿದ್ಯೆಯ ಪ್ರಾಪ್ತಿಗಾಗಿ ಅನೇಕ ತಾಂತ್ರಿಕರು-ಮಾಂತ್ರಿಕರು ಸಾಧನೆ ಮಾಡುತ್ತಿರುತ್ತಾರೆ.
ಉಜ್ಜೈನಿಯಲ್ಲಿರುವ ಒಂದೇ ಕ್ಷಿಪ್ರಾನದಿಯು ಎಲ್ಲ ತೀರ್ಥಕ್ಷೇತ್ರಗಳೊಂದಿಗೆ ಸಂಪರ್ಕ ಹೊಂದಿದೆ. ಅಂದರೆ ಕ್ಷಿಪ್ರಾನದಿಯ ದಂಡೆಯು ಪ್ರತಿಯೊಂದು ದೇವಸ್ಥಾನದ ಮೂಲಕ ಹಾದು ಹೋಗುತ್ತದೆ.
ಸ್ಥಳೀಯರ ನಂಬಿಕೆಯಂತೆ ಯಾವ ದಿನ ಶಾಹೀಸ್ನಾನವಿರುತ್ತದೆಯೋ, ಆ ದಿನ ಅಲ್ಲಿ ಪ್ರತ್ಯಕ್ಷ ಶ್ರೀರಾಮ ಹಾಗೂ ಸೀತಾಮಾತೆಯು ಪ್ರಥಮ ಸ್ನಾನ ಮಾಡುತ್ತಾರೆ. ಅನಂತರ ನದಿಯದಡದ ಒಂದು ಬದಿಗೆ ಶೈವರು ಮತ್ತು ಇನ್ನೊಂದು ಬದಿಗೆ ವೈಷ್ಣವರು ಸ್ನಾನ ಮಾಡುತ್ತಾರೆ. ಅನಂತರ ಸಾಮಾನ್ಯ ಜನರಿಗೆ ಸ್ನಾನ ಮಾಡುವ ಅವಕಾಶ ಪ್ರಾಪ್ತಿಯಾಗುತ್ತದೆ.
ದೇವಾಸ
ಇಲ್ಲಿ ಚಾಮುಂಡಾದೇವಿಯ ಪ್ರಸಿದ್ಧ ದೇವಸ್ಥಾನವಿದೆ ಆ ದೇವಿಯ ವೈಶಿಷ್ಟ್ಯವೆಂದರೆ ಬೆಳಿಗ್ಗೆ ದರ್ಶನ ತೆಗೆದುಕೊಳ್ಳುವಾಗ ಆ ದೇವಿ ಕುಮಾರಿಕೆಯಾಗಿ ಕಾಣುತ್ತಾಳೆ. ಮಧ್ಯಾಹ್ನ ಅವಳು ಸುಂದರ ಯುವತಿಯಂತೆ ಕಾಣುತ್ತಾಳೆ ಮತ್ತು ಸಾಯಂಕಾಲ ದರ್ಶನ ಪಡೆಯುವಾಗ ಅವಳು ವೃದ್ಧೆಯಂತೆ ಕಾಣುತ್ತಾಳೆ.

Leave a Reply

Your email address will not be published. Required fields are marked *

Translate »