ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಾಲ ತೀರಿಸಲು ಪಠಿಸಿ ಋಣ ವಿಮೋಚನಾ ನರಸಿಂಹ ಸ್ತೋತ್ರ

‌ ‌ ‌ ‌ ‌ ‌ ‌ ‌
ಋಣ ವಿಮೋಚನಾ ನರಸಿಂಹ ಸ್ತೋತ್ರ

‌ ‌ ‌ ‌‌
‌ ‌ ‌ ‌ ‌ಋಣ ಎಂದಾಕ್ಷಣ ನಮಗೆ ಹೊಳೆಯುವದು ಸಾಲ ಎಂಬರ್ಥ! ಹೌದು! ಋಣ, ಒಂದು ಬಗೆಯ ಸಾಲವೇ ಸರಿ ! ಪ್ರತಿ ಜನ್ಮದಲ್ಲೂ ನಾವು ಅನೇಕ ಬಗೆಯ ಋಣಕ್ಕೆ ಒಳಗಾಗುತ್ತೇವೆ. ಪ್ರತಿಜನ್ಮದಲ್ಲೂ, ಜನನದೊಟ್ಟಿಗೆ ಆರಂಭವಾಗುವ ನಮ್ಮ ಋಣಚಕ್ರ, ಆ ಜನ್ಮದ ಮರಣದೊಂದಿಗೆ ಮುಕ್ತಾಯವಾದರೂ, ಮತ್ತೆ ಮುಂದಿನ ಜನ್ಮದೊಂದಿಗೆ ಆರಂಭವಾಗುತ್ತದೆ. ನಾವು ಒಳಗಾಗುವ ಅನೇಕ ಋಣಗಳಲ್ಲಿ ಕೆಲವೊಂದು ಮುಖ್ಯವಾದ ಋಣಗಳು ಯಾವುವೆಂದರೆ ಭೂಮಿಯ ಋಣ, ಜಲ ಋಣ, ಆಕಾಶ ಋಣ, ವಾಯು ಋಣ, ಅಗ್ನಿ ಋಣ, ತಾಯಿ ತಂದೆಯರ ಋಣ, ಜನ್ಮಸ್ಥಳದ ಋಣ, ಗುರು ಋಣ, ದೇವತಾ ಋಣ, ಬಂಧುಬಾಂಧವರ ಋಣ, ಸ್ನೇಹಿತರ ಋಣ, ಖಾಯಿಲೆಯ ಋಣ, ಸಾಲದ ಋಣ, ಪತಿ/ಪತ್ನಿಯ ಋಣ, ಮಕ್ಕಳ ಋಣ, ಮನೆಯ ಋಣ, ಇತ್ಯಾದಿ, ಇತ್ಯಾದಿ. ಈ ಎಲ್ಲಾ ಋಣಗಳಿಂದ ಬಿಡುಗಡೆಯಾದರೆ ಮಾತ್ರ ಮೋಕ್ಷ ಎನ್ನುವುದು ಜ್ಞಾನಿಗಳ ಅಭಿಪ್ರಾಯ! ಪ್ರತಿಜನ್ಮದಲ್ಲೂ ಸಂಗ್ರಹಗೊಂಡು ಪರ್ವತದಷ್ಟಾಗಿರುವ ಈ ಋಣಗಳಿಂದ ಬಿಡುಗಡೆಯ ಮಾರ್ಗವನ್ನು ತೋರಿಸಿ, ಮುಂದೆ ಮೋಕ್ಷದ ಮಾರ್ಗದಲ್ಲಿ ಮುನ್ನಡೆಸುವವನೇ ಸದ್ಗುರು !

ಕೆಲವು ಮಹನೀಯರ ಪ್ರಕಾರ ಗುರು ಎನ್ನುವ ಶಬ್ದದ ಒಂದು ವ್ಯಾಖ್ಯಾನ……ಗು ಎಂದರೆ ಗುಪ್ತವಾಗಿರುವ, ರು ಎಂದರೆ ಋಣ, ಅಂದರೆ ಗುಪ್ತವಾಗಿರುವ ಋಣಗಳನ್ನು ಎತ್ತಿ ತೋರಿಸಿ, ಅವನ್ನು ಪರಿಹರಿಸಿಕೊಳ್ಳಲು ಮಾರ್ಗ ತೋರಿಸುವವನೇ ಗುರು! ಆದ್ದರಿಂದ, ಶ್ರೀ ಗುರುಗಳಿಗೆ ಶರಣಾಗಿ, ಅವರನ್ನು ಪ್ರಾರ್ಥಿಸಿ, ಸಮಸ್ತ ಬಗೆಯ ಋಣಗಳಿಂದ ಬಿಡುಗಡೆಗೊಳಿಸುವ ಅವರ ಅನುಗ್ರಹವನ್ನು ಸಂಪಾದಿಸುವುದಕ್ಕೋಸ್ಕರ, ಅವರನ್ನು ಸ್ತುತಿಗೈಯ್ಯುವ ಸ್ತೋತ್ರವೊಂದನ್ನು, ಶ್ರೀ ಗುರುರಾಯರ ಅಂತರಂಗ ಭಕ್ತರಾದ ಶ್ರೀ ಕೃಷ್ಣಾವಧೂತರು ನಮ್ಮೆಲ್ಲರ ಉಪಯೋಗಕ್ಕಾಗಿ ರಚಿಸಿಕೊಟ್ಟಿದ್ದಾರೆ, ಅದುವೇ ಈ “ ಋಣಮೋಚನ ಸ್ತೋತ್ರ “!

ಯಾವುದೇ ಸ್ತೋತ್ರವನ್ನು ಪಠಿಸುವಾಗಲೂ, ಪ್ರತೀಶ್ಲೋಕದ ಅರ್ಥವನ್ನು ವಿಸ್ತಾರವಾಗಿ ತಿಳಿದು, ಭಾವವನ್ನು ಮನಸ್ಸಿಗೆ ತಂದುಕೊಂಡು ಪಠಿಸಿದರೆ ನಿಶ್ಚಿತ ಫಲ ಎಂದು ಜ್ಞಾನಿಗಳು ಸಾರಿದ್ದಾರೆ.‌ ‌ ‌ ‌‌

‌ ‌ ‌ ‌ ಋಣ ವಿಮೋಚನ ನರಸಿಂಹರ ಸ್ತೋತ್ರವನ್ನು ಪಠಿಸಿ, ತೀವ್ರ ಆರ್ಥಿಕ ತೊಂದರೆಗಳು ಮತ್ತು ಸಾಲಗಳನ್ನು ತೊಡೆದುಹಾಕಲು.

ಋಣ ವಿಮೋಚನ ನೃಸಿಂಹ ಸ್ತೋತ್ರಂ
ಧ್ಯಾನಂ
ವಾಗೀಸಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ |
ಯಸ್ಯಾಸ್ತೇ ಹೃದಯೇ ಸಂವಿತ್ ತಂ ನೃಸಿಂಹಮಹಂ ಭಜೇ ||

  ಕಾಶಿಯಲ್ಲಿನ ಕೆಲವು ವಿಚಿತ್ರಗಳು ವಿಶೇಷಗಳು

ಸ್ತೋತ್ರಂ
ದೇವತಾ ಕಾರ್ಯಸಿದ್ಧ್ಯರ್ಥಂ ಸಭಾಸ್ತಂಭ ಸಮುದ್ಭವಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೧ ||

ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೨ ||

ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧ ಧಾರಿಣಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೩ ||

ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೪ ||

  ಕಾಶಿಗೆ ಹೋದರೇ ತರಕಾರಿ ಅಥವಾ ಹಣ್ಣನ್ನು ತ್ಯಾಗ ಮಾಡಬೇಕೆ?

ಸಿಂಹನಾದೇನ ಮಹತಾ ದಿಗ್ದಂತಿ ಭಯನಾಶನಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೫ ||

ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಿಣಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೬ ||

ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೭ ||

ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೮ ||

ಯ ಇದಂ ಪಠತೇ ನಿತ್ಯಂ ಋಣಮೋಚನ ಸಂಜ್ಞಿತಮ್ |
ಅನೃಣೇ ಜಾಯತೇ ಸತ್ಯೋ ಧನಂ ಶೀಘ್ರಮವಾಪ್ನುಯಾತ್ || ೯ ||

  ಮದುವೆಯಾದ ಕೂಡಲೇ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತವನ್ನು ಮಾಡಲು ಏಕೆ ಹೇಳುತ್ತಾರೆ …?

ಇತಿ ಋಣ ವಿಮೋಚನ ನೃಸಿಂಹ ಸ್ತೋತ್ರಂ ಸಂಪೂರ್ಣಂ | ‌ ‌ ‌ ‌ ‌ ‌ ‌‌ ಸೂಚನೆ :- ಪ್ರತಿ ಮಂಗಳವಾರ ಪಾರಾಯಣ ಮಾಡಿದ ನಂತರ ಕಲ್ಲುಪ್ಪು ಮತ್ತು ಅರಿಶಿನ ವನ್ನು ದಕ್ಷಿಣೆ ಸಮೇತವಾಗಿ ನರಸಿಂಹ ದೇವರ ದೇವಾಲಯದಲ್ಲಿ ದಾನ ಮಾಡಿ.

Leave a Reply

Your email address will not be published. Required fields are marked *

Translate »