ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೃಷ್ಣರಾಜಪೇಟೆಯಲ್ಲಿದೆ ಹೊಯ್ಸಳರ ಕಾಲದ ತ್ರಿಮೂರ್ತಿ ಕ್ಷೇತ್ರಧಾಮ

ಕೃಷ್ಣರಾಜಪೇಟೆಯಲ್ಲಿದೆ ಹೊಯ್ಸಳರ ಕಾಲದ ತ್ರಿಮೂರ್ತಿ ಕ್ಷೇತ್ರಧಾಮ…!

ಕೆ.ಆರ್‌.ಪೇಟೆಯ ಅಗ್ರಹಾರ ಬಾಚಹಳ್ಳಿಯಲ್ಲಿ ಗರುಡ ಸ್ತಂಭಗಳಿವೆ. ಅತ್ಯಾಕರ್ಷಕ ವಿನ್ಯಾಸಗಳಿಂದ ಪ್ರಾಚೀನ ಪರಂಪರೆಯ ಕುರುಹಿನ ಸಂಕೇತವಾಗಿದೆ. ಕೆ.ಆರ್‌.ಪೇಟೆಯ ತ್ರಿಮೂರ್ತಿ ದರ್ಶನ (ಬ್ರಹ್ಮ, ವಿಷ್ಣು, ಮಹೇಶ್ವರ) ಹೊಯ್ಸಳರ ಶಿಲ್ಪದೇಗುಲ ಕಿಕ್ಕೇರಿಯಿಂದ ಪ್ರಾರಂಭವಾಗಿ ಹೊಸಹೊಳಲುವಿನತ್ತ ಸಾಗಿ ಗೋವಿಂದನಹಳ್ಳಿಯಲ್ಲಿ ನೆಲೆನಿಲ್ಲುತ್ತದೆ.

ಅನೇಕರಿಗೆ ಮೈಸೂರಿನ ಸುತ್ತಮುತ್ತಲ ಪ್ರಾಚೀನ ಪ್ರವಾಸಿ ತಾಣಗಳ ಪರಿಚಯ ಅಷ್ಟಾಗಿ ಇರುವುದಿಲ್ಲ. ಅದರಲ್ಲೂ ಮೈಸೂರು ಸಮೀಪದ ಕೃಷ್ಣರಾಜಪೇಟೆಯ ತ್ರಿಮೂರ್ತಿ ಧಾಮದ ಪರಿಚಯವಂತೂ ವಿರಳ. ಶಿಲ್ಪಕಲಾ ಐಸಿರಿಯ ಈ ಕ್ಷೇತ್ರಗಳಲ್ಲಿ ಗರುಡ ಪದ್ಧತಿಯ ಕುರುಹಿರುವುದು ಸೋಜಿಗ.

ಗರುಡ ಎಂದಾಕ್ಷಣ ನೆನಪಾಗುವುದೇ ವಿಷ್ಣುವಿನ ವಾಹನ. ಗರುಡ ವಿಷ್ಣುವಿನ ನಿಷ್ಠಾವಂತ ಸೇವಕ. ಸ್ವಾಮಿನಿಷ್ಠೆಯಲ್ಲಿ ಹನುಮನಂತೆಯೇ ಆತನೂ ಆದರ್ಶ ಪುರುಷ. ಅಂತಹ ಸ್ವಾಮಿನಿಷ್ಠೆಗೆ ಪೂರಕ ಸೇನಾಪತಿಗಳ ತಂಡವೇ ಗರುಡರು. ತಮ್ಮ ಮಹಾರಾಜರಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳಲು ಹೇಸದ ವೀರಯೋಧರಿವರು. ಗರುಡರ ಅಥವಾ ಗರುಡ ಪದ್ಧತಿಯ ಉಲ್ಲೇಖ ಹೊಯ್ಸಳ ಅರಸರ ಕಾಲಮಾನದಲ್ಲಿ ಬರುತ್ತದೆ. ಅದಕ್ಕೆ ನಿದರ್ಶನವೆನ್ನುವಂತೆ ಇಂದಿಗೂ ಕೆ.ಆರ್‌.ಪೇಟೆಯ ಅಗ್ರಹಾರ ಬಾಚಹಳ್ಳಿಯಲ್ಲಿ ಗರುಡ ಸ್ತಂಭಗಳಿವೆ. ಅತ್ಯಾಕರ್ಷಕ ವಿನ್ಯಾಸಗಳಿಂದ ಪ್ರಾಚೀನ ಪರಂಪರೆಯ ಕುರುಹಿನ ಸಂಕೇತವಾಗಿದೆ. ಕೆ.ಆರ್‌.ಪೇಟೆಯ ತ್ರಿಮೂರ್ತಿ ದರ್ಶನ (ಬ್ರಹ್ಮ, ವಿಷ್ಣು, ಮಹೇಶ್ವರ) ಹೊಯ್ಸಳರ ಶಿಲ್ಪದೇಗುಲ ಕಿಕ್ಕೇರಿಯಿಂದ ಪ್ರಾರಂಭವಾಗಿ ಹೊಸಹೊಳಲುವಿನತ್ತ ಸಾಗಿ ಗೋವಿಂದನಹಳ್ಳಿಯಲ್ಲಿ ನೆಲೆನಿಲ್ಲುತ್ತದೆ. ಅಂತಿಮವಾಗಿ ಅಗ್ರಹಾರ ಬಾಚಹಳ್ಳಿಯಲ್ಲಿ ಗರುಡ ಸ್ತಂಭಗಳನ್ನು ನೋಡುವುದರೊಂದಿಗೆ ತ್ರಿಮೂರ್ತಿ ಕ್ಷೇತ್ರದರ್ಶನ ಸಂಪನ್ನವಾಗುತ್ತದೆ.

ಕಿಕ್ಕೇರಿ
ಕೃಷ್ಣರಾಜಪೇಟೆ-ಚನ್ನರಾಯಪಟ್ಟಣ ರಸ್ತೆಯಲ್ಲಿ ಕೃಷ್ಣರಾಜಪೇಟೆಯಿಂದ ಹದಿನೈದು ಕಿ.ಮೀ. ದೂರದಲ್ಲಿರುವ ಕಿಕ್ಕೇರಿಯಲ್ಲಿ ಹೊಯ್ಸಳರು ನಿರ್ಮಿಸಿರುವ ಬ್ರಹ್ಮೇಶ್ವರ ದೇವಾಲಯವಿದೆ. ಈ ದೇವಾಲಯವನ್ನು ಹೊಯ್ಸಳರ ದೊರೆ ಒಂದನೆಯ ನರಸಿಂಹನ ಕಾಲದಲ್ಲಿಸಾಮಂತ – ಬಿಮ್ಮೆಯ ನಾಯಕನ ಪತ್ನಿಯಿಂದ ಬಮ್ಮೆವ್ವ ನಾಗತಿಯು ಕ್ರಿ.ಶ. 1171ರಲ್ಲಿಸ್ಥಾಪಿಸಿದ್ದಾಳೆ. ಏಕಕೂಟ ದೇಗುಲವಿದಾಗಿದ್ದು ಗರ್ಭಗೃಹ, ಅಂತರಾಳ, ನವರಂಗ ಹಾಗೂ ನಂದಿಮಂಟಪವನ್ನು ಹೊಂದಿದೆ. ನಂದಿಮಂಟಪದಲ್ಲಿ ಚಿತ್ತಾಕರ್ಷಕ ನಂದಿ ಶಿಲ್ಪವನ್ನು ನೋಡಬಹುದು. ಅದರ ಹಿಂಬದಿಯಲ್ಲಿ ದೇವಕೋಷ್ಟದಲ್ಲಿರುವ ಸೂರ್ಯನ ಶಿಲ್ಪ ಗಮನಾರ್ಹ.
ದೇವಾಲಯದ ಪ್ರಧಾನ ಗರ್ಭಗುಡಿಯಲ್ಲಿ ಬ್ರಹ್ಮೇಶ್ವರ ಲಿಂಗವಿದ್ದು ದಿವ್ಯ ತೇಜಸ್ಸಿನಿಂದ ಕೂಡಿದೆ. ನವರಂಗದ ಭಂಗಿಯಲ್ಲಿ ವಾದ್ಯಗಳನ್ನು ನುಡಿಸುತ್ತಿರುವ ಶಿಲಾಬಾಲಕಿಯರ ಸುಂದರ ಮೂರ್ತಿಗಳನ್ನು ನೋಡಬಹುದು. ತ್ರಿತಳ ಮಾದರಿಯ ಶಿಖರ ಗಮನ ಸೆಳೆಯುತ್ತದೆ. ದೇಗುಲದ ಹೊರಬಿತ್ತಿಯಲ್ಲಿ ದೇವಾನುದೇವತೆಗಳ ಶಿಲ್ಪಗಳು ತತ್‌ ಸಂಬಂಧಿತ ದೇಗುಲಗಳ ಮಾದರಿಯನ್ನು ಹೊಂದಿವೆ. ಕಿಕ್ಕೇರಿಯಲ್ಲಿ ಯೋಗಾನರಸಿಂಹ ಮತ್ತು ಲಕ್ಷಿತ್ರ್ಮೕನರಸಿಂಹ ಸನ್ನಿಧಾನವಿದೆ. ಕಿಕ್ಕೇರಿಯ ಲಕ್ಷಿತ್ರ್ಮೕನರಸಿಂಹ ದೇಗುಲ ಬೃಹತ್ತಾಗಿದ್ದು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದೆ.

  ಸಿಗಂದೂರು ಶ್ರೀಚೌಡೇಶ್ವರಿ ದೇವಾಲಯ

ಹೊಸಹೊಳಲು
ಮಂಡ್ಯ ಜಿಲ್ಲೆಕೃಷ್ಣರಾಜಪೇಟೆ ತಾಲೂಕು ಕೇಂದ್ರದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ. ಹೊಸಹೊಳಲಿನ ಊರ ನಡುವಿನ ಲಕ್ಷಿತ್ರ್ಮೕನಾರಾಯಣ ದೇಗುಲ ವಿಶಿಷ್ಠವಾದ ಕೆತ್ತನೆಗಳಿಂದ ಕೂಡಿದೆ. ತ್ರಿಕೂಟಾಚಲವಾದ ಪ್ರಧಾನ ಗರ್ಭಗುಡಿಯಲ್ಲಿ ನಾರಾಯಣನ ಮೂರ್ತಿಯನ್ನು, ದಕ್ಷಿಣದಲ್ಲಿ ವೇಣುಗೋಪಾಲ ಸ್ವಾಮಿಯನ್ನು, ಉತ್ತರದಲ್ಲಿ ನರಸಿಂಹ ಸ್ವಾಮಿಯನ್ನು ನೋಡಬಹುದು. ಹೊಸಹೊಳಲುವಿನ ಲಕ್ಷಿತ್ರ್ಮೕನರಸಿಂಹ ಸ್ವಾಮಿಯ ಬಲಬದಿಯಲ್ಲಿ ಪ್ರಣಾಮ ಮುದ್ರೆಯಲ್ಲಿರುವ ಪ್ರಹ್ಲಾದನ ವಿಗ್ರಹ ಗಮನ ಸೆಳೆಯುತ್ತದೆ.
ನವರಂಗ ಮಂಟಪದಲ್ಲಿರುವ ನಾಲ್ಕು ಕಂಬಗಳಲ್ಲಿಸೂಕ್ಷ್ಮ ಕೆತ್ತನೆಗಳಿರುವ ಭುವನೇಶ್ವರಿ ದೇವಿಯ ದರ್ಶನ ಮಾಡಬಹುದು. ಪ್ರದಕ್ಷಿಣ ಪಥವನ್ನು ಹೊಂದಿರುವ ದೇಗುಲದಲ್ಲಿ ಭಿತ್ತಿಶಿಲ್ಪಗಳೇ ವಿಶೇಷ ಆಕರ್ಷಣೆ. ಅಧಿಷ್ಠಾನದ ಪಟ್ಟಿಯಲ್ಲಿ ರಾಮಾಯಣ, ಭಾಗವತ ಕಥಾನಕಗಳನ್ನು ಗಮನಿಸಿದರೆ, ಭಿತ್ತಿಯಲ್ಲಿರುವ ಉಗ್ರನರಸಿಂಹ, ಲಕ್ಷಿತ್ರ್ಮೕನರಸಿಂಹ, ಯೋಗಾನರಸಿಂಹ, ಬಲೀಂದ್ರ-ವಾಮನ, ವೇಣುಗೋಪಾಲ, ಗಣಪತಿ, ವರಾಹಮೂರ್ತಿ, ಯೋಗನಾರಾಯಣ ಮುಂತಾದ ದೇವತೆಗಳ ಶಿಲ್ಪಿಗಳು ನೋಡುಗರನ್ನು ಆಕರ್ಷಿಸುತ್ತವೆ.

  ವಿಜಾಪುರ ಶ್ರೀ ಸಿದ್ದೇಶ್ವರ / ಸಿದ್ಧರಾಮೇಶ್ವರ

ಗೋವಿಂದನಹಳ್ಳಿ
ಕಿಕ್ಕೇರಿಗೆ ಕೇವಲ ಐದು ಕಿ.ಮೀ. ದೂರದಲ್ಲಿರುವ ಗೋವಿಂದನ ಹಳ್ಳಿಯಲ್ಲಿಹೊಯ್ಸಳರು ನಿರ್ಮಿಸಿರುವ ಸುಸ್ಥಿತಿಯಲ್ಲಿರುವ ಏಕೈಕ ಪಂಚಲಿಂಗೇಶ್ವರ ದೇವಾಲಯವಿದೆ. ಐದು ಗರ್ಭಗುಡಿಗಳನ್ನು ಸಾಲಾಗಿ ಹೊಂದಿದ್ದು ಪ್ರತಿ ಗರ್ಭಗೃಹಕ್ಕೆ ಅಂದವಾದ ಶಿಖರವಿದೆ. ಈ ದೇವಾಲಯದ ಸೌಂದರ್ಯವನ್ನು ದೇವಾಲಯದ ಹಿಂಬದಿಯಲ್ಲಿ ನಿಂತು ನೋಡಿಯೇ ಆನಂದಿಸಬೇಕು. ಒಂದರ ಬದಿಯಲ್ಲಿಒಂದರಂತೆ ಸಾಲಾಗಿ ಕಾಣುವ ಶಿಖರಗಳು ಮನಸೂರೆಗೊಳ್ಳುತ್ತವೆ.
ಈ ದೇವಾಲಯದ ಐದು ಗರ್ಭಗೃಹಗಳು ಬೃಹತ್‌ ನವರಂಗಕ್ಕೆ ತೆರೆದುಕೊಳ್ಳುತ್ತವೆ. ನವರಂಗದಲ್ಲಿರುವ ಕಂಭಗಳ ಸಾಲು ಬಹಳ ಕಲಾತ್ಮಕವಾಗಿ ಕಾಣುತ್ತದೆ. ಈ ದೇವಾಲಯದ ದ್ವಾರಪಾಲಕನ ಶಿಲ್ಪವನ್ನು ನಿರ್ಮಿಸಿರುವರು. ಹೊಯ್ಸಳರ ಕಾಲದ ಪ್ರಖ್ಯಾತಿ ಶಿಲ್ಪಿ ಸೋಮನಾಥಪುರದ ಕೇಶವ ದೇವಾಲಯದ ನಿರ್ಮಾತೃ ಮಲ್ಲಿತಿಮ್ಮನಾಗಿರುವುದರಿಂದ ದೇವಾಲಯವು ಹದಿಮೂರನೆಯ ಶತಮಾನದ್ದೆಂದು ಹೇಳಬಹುದು.

ಅಗ್ರಹಾರ ಬಾಚಹಳ್ಳಿ
ಅಗ್ರಹಾರ ಬಾಚಹಳ್ಳಿಯು ಮಂಡ್ಯಜಿಲ್ಲೆ, ಕೃಷ್ಣರಾಜಪೇಟೆ ತಾಲೂಕಿನ ಒಂದು ಗ್ರಾಮ. ತಾಲೂಕು ಕೇಂದ್ರದಿಂದ ಐದು ಕಿ.ಮೀ. ದೂರದಲ್ಲಿದೆ. ಗ್ರಾಮದ ಹುಣಸೇಶ್ವರ ದೇವಾಲಯವು ಹೊಯ್ಸಳರ ಏಕಕೂಟ ಶಿವಾಲಯವಾಗಿದ್ದು ಗರ್ಭಗೃಹ, ಅಂತರಾಳ, ನವರಂಗ ಹಾಗೂ ಸಣ್ಣ ಮುಖಮಂಟಪಗಳಿಂದ ಕೂಡಿದೆ. ದ್ರಾವಿಡಶೈಲಿಯ ಶಿಖರವನ್ನು ಹೊಂದಿದೆ. ಶಿಖರದಲ್ಲಿ ಬ್ರಹ್ಮ, ಸೂರ್ಯ, ನಟರಾಜ, ನಾರಾಯಣರ ಸನ್ನಿಧಾನಗಳಿವೆ.
ಗರ್ಭಗೃಹದಲ್ಲಿ ಮೂರು ಅಡಿ ಎತ್ತರದ ಶಿವಲಿಂಗವಿದೆ. ಅತಿ ವಿರಳವಾದ ಶಾಸನ ಸಹಿತವಾದ ಮೂರು ಗರುಡ ಸ್ಥಂಭಗಳ ಮೂಲಕ ಅಗ್ರಹಾರ ಬಾಚಹಳ್ಳಿ ಇಡೀ ಕರುನಾಡಿನ ಗಮನವನ್ನು ಸೆಳೆದಿದೆ. ಹೊಯ್ಸಳರ ಕಾಲದಲ್ಲಿ ಜಾರಿಯಲ್ಲಿದ್ದ ರಾಜನಿಗೆ ನಿಷ್ಟರಾಗಿರುತ್ತಿದ್ದ ಆತ್ಮಾರ್ಪಣಾ ತಂಡದ ಪರಿಚಯ ಮಾಡಿಕೊಡುತ್ತಿದೆ. ಒಂದೇ ಕುಟುಂಬಕ್ಕೆ ಸೇರಿದ ಈ ವೀರರನ್ನು ಲೆಂಕರರು ಎಂದು ಸ್ತ್ರೀಯರನ್ನು ಲೆಂಕತಿಯರೆಂದು ಗುರುತಿಸಲಾಗುತಿತ್ತು. ಸುಮಾರು ಹದಿನೈದು ಅಡಿ ಎತ್ತರದ ಮೇಲಿರುವ ಗರುಡ ಸ್ಥಂಭದ ಮೇಲೆ ಮಟ್ಟಸವಾದ ಪೀಠವನ್ನು ನೋಡಬಹುದು. ಈ ಪೀಠಗಳ ಮೇಲೆ ಆನೆಯ ಮೇಲೆ ಕುಳಿತ ವೀರರು ಮತ್ತು ಅವರ ಪತ್ನಿಯರ ಶಿಲ್ಪವನ್ನು ಗಮನಿಸಬಹುದು. ಗರುಡ ಪದ್ಧತಿಗೆ ಪೂರಕವಾದ ವಿವರಗಳನ್ನು ಶಾಸನಗಳಲ್ಲಿ ನೋಡಬಹುದು.
ಇಂತಹ ಅದ್ಭುತವಾದ ಹಾಗೂ ವಿಶೇಷವಾದ ಆತ್ಮಬಲಿದಾನದ ಕಂಬಗಳನ್ನು ಹಾಗೂ ದೇವಾಲಯವನ್ನು ಪ್ರಥಮವಾಗಿ ಉಳಿಸಿದ ಕೀರ್ತಿ ಸ್ಥಳೀಯರದ್ದು. ಸ್ಥಳೀಯರ ನೆರವಿನೊಡನೆ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದೆ. ಇವರೊಂದಿಗೆ ಸಂರಕ್ಷಣಾ ಕಾರ್ಯದಲ್ಲಿ ರಾಜ್ಯ ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆಯೂ ಕೈಜೋಡಿಸಿದೆ.

Leave a Reply

Your email address will not be published. Required fields are marked *

Translate »