ಅಂತರಾಷ್ಟ್ರೀಯ ಪ್ರಖ್ಯಾತ ವಿಜ್ಞಾನಿಗಳು, ಕೃಷಿಕರು, ವೈದ್ಯರು ಆದ ಡಾ|| ಖಾದರ್ ಮೈಸೂರು ಅವರಿಂದ ಆರೋಗ್ಯ ಮಾಹಿತಿ:
ಈ ಕಷಾಯಗಳನ್ನು ಒಂದು ತಿಂಗಳು ಕುಡಿದರೆ 12 ತಿಂಗಳು ನಿಮಗೆ ಯಾವ ಕಾಯಿಲೆಯು ಬರುವುದಿಲ್ಲ..!!!!
ಇದು ಸತ್ಯ…
ಬನ್ನಿ, ಹಾಗಾದರೆ ಅದು ಯಾವುದರ ಕಷಾಯ ಎನ್ನುವುದನ್ನು ತಿಳಿಯೋಣ:
- “ಗರಿಕೆ ಹುಲ್ಲು” ಕಷಾಯ.
- “ತುಳಸಿ ಎಲೆ” ಕಷಾಯ.
- “ಅಮೃತ ಬಳ್ಳಿ” ಕಷಾಯ.
- “ಬಿಲ್ವ ಪತ್ರೆ” ಕಷಾಯ.
- “ಹೊಂಗೆ ಎಲೆ” ಕಷಾಯ.
- “ಬೇವಿನ ಎಲೆ” ಕಷಾಯ.
- “ಅರಳಿ ಎಲೆ” ಕಷಾಯ.
ಈ ಏಳು ಕಷಾಯಗಳನ್ನು ಮಾಡಲು, ಅರ್ಧ ಹಿಡಿ ಯಾವುದೇ ಎಲೆಗಳನ್ನು ತೆಗೆದುಕೊಳ್ಳಿ, ಚೆನ್ನಾಗಿ ತೊಳೆಯಿರಿ. ನಂತರ ಒಂದು ಲೋಟ (ಕಾಲು ಲೀಟರ್) ನೀರನ್ನು, ತೊಳೆದ ಎಲೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ (4 ನಿಮಿಷ) ನಂತರ ಉರಿ ನಿಲ್ಲಿಸಿ. ಆ ಪಾತ್ರೆಗೆ ಮುಚ್ಚಳ ಮುಚ್ಚಿ ಹಾಗೆ ಇಡಿ ಮತ್ತೆ 5 ನಿಮಿಷ ಬಿಟ್ಟು ಅದನ್ನು ಸೋಸಿಕೊಂಡು, ಬಿಸಿ ಇರುವಾಗ ಸ್ವಲ್ಪ ಸ್ವಲ್ಪ ವಾಗಿ ಕುಡಿಯಿರಿ.
ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಕುಡಿದರೆ ಉತ್ತಮ.
ಚಹಾ, ಕಾಫಿ, ಹಾಲು ಕುಡಿಯುವುದನ್ನು ಬಿಟ್ಟುಬಿಡಲು ಪ್ರಯತ್ನಪಡಿ.
ಒಂದೊಂದು ಕಷಾಯವನ್ನು ನಾಲ್ಕು ದಿನದಂತೆ ಒಂದು ತಿಂಗಳು ಕುಡಿಯಿರಿ.
(ಪ್ರತಿದಿನ ಕುಡಿದರೆ ಒಳ್ಳೆಯದು)
ಇದರ ಜೊತೆಗೆ ಸಿರಿಧಾನ್ಯಗಳನ್ನು ತಿನ್ನಿರಿ. ಅವುಗಳೆಂದರೆ,
“ಸಾಮೆ / ಸಾವೆ, ನವಣೆ, ಕೊರಲೆ, ಹಾರಕ / ಆರ್ಕ, ಉದಲು, ರಾಗಿ, ಜೋಳ, ಕಮ್ಮು / ಸಜ್ಜೆ” – ಈ ಸಿರಿಧಾನ್ಯಗಳಲ್ಲಿ ನೀವು ಅಕ್ಕಿಯಲ್ಲಿ ಏನೆಲ್ಲ ತಿಂಡಿ ಮಾಡುತ್ತಿರೋ ಅವೆಲ್ಲ ತಿಂಡಿಗಳನ್ನು ಮಾಡಬಹುದು. ಇಂತಹ ಆರೋಗ್ಯಕರವಾದ ತಿಂಡಿಗಳನ್ನು ನಿಮ್ಮ ಮನೆಯವರಿಗೆ ಮಾಡಿ ಕೊಡಿ. ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿ.
ಇದಕ್ಕಿಂತ ಮುಖ್ಯವಾಗಿ ನೀವು ಬಿಡಬೇಕಾಗಿರುವುದು:
1. ಮೊಟ್ಟೆ ಮತ್ತು ದಾಲ್ಡ ತುಪ್ಪ
2. ಗೋದಿ / ಮೈದಾ ಹಿಟ್ಟು
3. ಹಾಲು
4. ಸಕ್ಕರೆ
5. ರಿಫೈನ್ಡ್ ಎಣ್ಣೆ
6. ಪಾಲಿಷ್ ಅಕ್ಕಿ
7. ಬ್ಲೀಚ್ ಮಾಡಿದ ಉಪ್ಪು
ಗಾಣದಿಂದ ತೆಗೆದ ಎಣ್ಣೆಯನ್ನು ಬಳಸಿ. (ಕಡಲೆಕಾಯಿ, ಕುಸುಬೆ, ಎಳ್ಳು, ಹುಚ್ಚೆಳ್ಳು ಮುಂತಾದ ಸ್ಥಳೀಯವಾಗಿ ದೊರೆಯುವ ಕಾಳುಗಳಿಂದ ಎಣ್ಣೆ ಮಾಡಿಸಿಕೊಳ್ಳಿ).
ಹಾಲಿನ ಬದಲಿಗೆ ಅದರ ಉತ್ಪನ್ನಗಳನ್ನು ಬಳಸಿ. ಅಂದರೆ, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಬಳಸಿ.
ಸಕ್ಕರೆ ಬದಲು ಸಾವಯವ ಬೆಲ್ಲ / ತಾಟಿ ಬೆಲ್ಲ ಬಳಸಿ.
ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಬೇಡವೇ ಬೇಡ.
ಸಾಧ್ಯವಾದರೆ, ಅಡುಗೆ ಮಾಡೋದಕ್ಕೆ ಮಣ್ಣಿನ ಮಡಿಕೆ ಬಳಸಿ. ಇಲ್ಲ, ಸ್ಟೀಲ್ ಪಾತ್ರೆ ಬಳಸಿ. ಅಲ್ಯೂಮಿನಿಯಂ ಪಾತ್ರೆ ಬಳಕೆ ಬೇಡವೇ ಬೇಡ. ಅಲ್ಯೂಮಿನಿಯಂ ಬಳಸುವುದರಿಂದ ತುಂಬಾ ಕಾಯಿಲೆಗಳು ಬರುತ್ತವೆ.
ಸ್ಟಿಲ್ ಪಾತ್ರೆಯಲ್ಲಿಯೇ ನೀರನ್ನು ತುಂಬಿ ಇಟ್ಟುಕೊಂಡು ಕುಡಿಯಿರಿ. ಅದರಲ್ಲಿ, ಒಂದು ತಾಮ್ರದ ರೇಖನ್ನು / ಪಟ್ಟಿಯನ್ನು ಹಾಕಿ.
ಪಾತ್ರೆ ತೊಳೆಯುವ ಸಾಬೂನು / ಪೌಡರ್ ಬಳಸಬೇಡಿ. ಬದಲಿಗೆ ಹುಣಸೆಹಣ್ಣು / ನಿಂಬೆಹಣ್ಣು ಬಳಸಿ.
ಹಲ್ಲು ಉಜ್ಜಲು ಪೇಸ್ಟ್, ಪ್ಲಾಸ್ಟಿಕ್ ಬ್ರಷ್ ಬಳಕೆ ಬೇಡ. ಬದಲಿಗೆ ನಮ್ಮ ಹಿಂದಿನವರ ವಿಧಾನ ಅನುಸರಿಸಿ. ಅಂದರೆ, ಇದ್ದಿಲು, ಉಪ್ಪು, ಬೇವಿನ ಕಡ್ಡಿ ಬಳಸಿ.
ಇವೆಲ್ಲದರ ಜೊತೆಗೆ ಬೆಳಿಗ್ಗೆ ಒಂದು ಗಂಟೆ & ಸಂಜೆ ಒಂದು ಗಂಟೆ ನಡೆಗೆ / ವಾಕಿಂಗ್ ಮಾಡಿ. (ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಬಿಸಿಲಿಗೆ ಮೈಯೊಡ್ಡಿ)
ಸಿರಿಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಬಳಸಿ, ಜೊತೆಗೆ ಕಷಾಯವನ್ನು ಕುಡಿಯಲು ಮರಿಬೇಡಿ. ಹೀಗೆ ಮಾಡುವುದರಿಂದ ಖಂಡಿತ ನಿಮಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ. ಬಂದರು ಅದನ್ನು ತಡೆದುಕೊಳ್ಳುವ ಶಕ್ತಿ ನಿಮ್ಮ ದೇಹಕ್ಕೆ ಇರುತ್ತದೆ. ಇದನ್ನು 25 ವರ್ಷದಿಂದ ಸಂಶೋಧನೆ ಮಾಡಿರುವ, ಕೃಷಿಕರು, ವಿಜ್ಞಾನಿಗಳು ಮತ್ತು ಸ್ವಯಂ ಹೋಮಿಯೋಪತಿ ವೈದ್ಯರು ಆದ ಶ್ರೀ ಖಾದರ್ ರವರು ಹೇಳುತ್ತಲೇ ಬಂದಿದ್ದಾರೆ.
ಆದರೆ, ನಮ್ಮ ಜನರಿಗೆ “ಹಿತ್ತಲ ಗಿಡ ಮದ್ದಲ್ಲ” ಅಂತಾರಲ್ಲ, ಹಾಗಾಗಿದೆ. ಯಾರೂ ಅವರ ಮಾತನ್ನು ಕೇಳುತ್ತಿಲ್ಲ ಈವಾಗಿನಿಂದಲಾದರೂ ಒಳ್ಳೆಯ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಳ್ಳಿ.. ಖಂಡಿತವಾಗಿಯೂ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇರುತ್ತದೆ..
ಹಾಗೇ, ಅದನ್ನು ಕಾಪಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ..