ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶಿವನ ಕುರಿತಾದ ವಿಶೇಷ ಮಾಹಿತಿಗಳು

ಶಿವನಿಗೆ ಪ್ರಿಯವಾದ ವಸ್ತುಗಳ ಕುರಿತು ಪುಟ್ಟ ಮಾಹಿತಿ..!!💫💫

🌹ಶಿವನ ಕುರಿತಾದ ವಿಶೇಷ ಮಾಹಿತಿಗಳು 🌹

🌷ಪಾರ್ವತಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡ ದಿನ, ಅಮೃತಕ್ಕಾಗಿ ದೇವ – ದಾನವರು ಸಮುದ್ರಮಥನ ಮಾಡಿದಾಗ ಬಂದಂಥ ಹಾಲಾಹಲ ದಿಂದ ಜಗತ್ತಿಗೆ ತೊಂದರೆ ಆಗಬಾರದೆಂದು ಶಿವನು ಆ ವಿಷವನ್ನು ಕುಡಿದನು. ದೇವತೆಗಳು ನಿರಾಳವಾದರು. ಗಾಬರಿಯಾದ ಪಾರ್ವತಿ ವಿಷ ಶಿವನ ಕಂಠದಿಂದ ದೇಹಕ್ಕೆ ಇಳಿಯದಂತೆ ಶಿವನ ಕುತ್ತಿಗೆಯನ್ನು ಇಡೀ ರಾತ್ರಿ ಹಿಡಿದು ಕುಳಿತಿದ್ದ ದಿನ. ಶಿವನಿಗೆ ಪ್ರಿಯವಾದ ಶಿವ ತಾಂಡವ ನೃತ್ಯವನ್ನು ಮಾಡಿ ಅದರ ಲಹರಿ ಭೂಮಂಡಲದ ತುಂಬಾ ಹರಿದಾಡುತ್ತದೆ ಆದಕಾರಣವೇ ಇಂದು ರಾತ್ರಿ ಯಾಮ ಪೂಜೆ ಮಾಡಿ 11 ಬಾರಿ ಶಿವನಿಗೆ ಅಭಿಷೇಕ ಮಾಡುತ್ತಾರೆ.

🌷ಶಿವನಿಗೆ ಪ್ರಿಯವಾದದ್ದು, ಶಿರದಲ್ಲಿ ಚಂದ್ರ, ಭಸ್ಮದಾರಿ, ಕೊರಳಲ್ಲಿ ಹಾವು, ‘ತ್ರಿದಳಂ ತ್ರಿಗುಣಾಕಾರಂ’ ಎನ್ನುವಂತೆ ಬಿಲ್ವಪತ್ರೆ, ಅಭಿಷೇಕ ತ್ರಿಶೂಲಧಾರಿ, ತುಂಬೆ ಹೂವು, ಜಟೆಯಲ್ಲಿ ಗಂಗೆ, ನಂದಿ ಕಿವಿಯಲ್ಲಿ ಹೇಳುವ ಗುಟ್ಟು, ಇವುಗಳೆಲ್ಲ ಶಿವನಿಗೆ ಏಕೆ ಪ್ರಿಯವಾದವು ಎಂಬುದಕ್ಕೆ ಪುಟ್ಟ ಪುಟ್ಟ ಮಾಹಿತಿ.

🌷ಶಿವನಿಗೆ ಹಾಲು-ನೀರಿನ ಅಭಿಷೇಕ;
ಶಿವನು ಹಾಲಾಹಲ ಕುಡಿದಾಗ ಬಹಳ ಉರಿಯಾಗುತ್ತದೆ. ಉರಿ ಕಡಿಮೆಯಾಗಲು ಹಾಲು ನೀರಿಗೆ ಉರಿ ತಾಪ ಮಾಡುವ ಗುಣವಿದೆ ಇದರಿಂದ ಅಭಿಷೇಕ ಮಾಡುತ್ತಾರೆ. ಇಂದಿಗೂ ಕೆಲವು ಕಡೆ ಆಸರೆಗಾಗಿ ಬಿಸಿಲಲ್ಲಿ ಬಂದವರಿಗೆ ಹಾಲು ಬಿಸಿ ನೀರಿಗೆ ಚೂರು ಬೆಲ್ಲ ಹಾಕಿ ಕೊಡುತ್ತಾರೆ.

🌷ತುಂಬೆ ಹೂವು:
ಒಬ್ಬ ರಾಕ್ಷಸ ಶಿವನನ್ನು ಕುರಿತು ಘೋರ ತಪಸ್ಸ ಮಾಡುತ್ತಾನೆ ಶಿವನು ಪ್ರತ್ಯಕ್ಷನಾಗಿ ಏನು ವರ ಕೊಡಲಿ ಎಂದು ಕೇಳಿದಾಗ ಶಿವನನ್ನು ನೋಡಿಯೇ ಆತನ ಸಂತೋಷ ಹೆಚ್ಚಾಗಿ ಏನೋ ಕೇಳುವ ಬದಲು ಬೇರೆ ಕೇಳಿದ, ಪ್ರಭು, ನನ್ನ ಪಾದವು ನಿಮ್ಮ ತಲೆಯ ಮೇಲಿರಲಿ ಎಂದು ವರ ಬೇಡಿದ, ಶಿವನು ತಥಾಸ್ತು ಎಂದ ರಾಕ್ಷಸ ಕೇಳ ಹೊರಟಿದ್ದು “ಭಗವಂತ ನಿಮ್ಮ ಪಾದವು ನನ್ನ ತಲೆಯ ಮೇಲಿರಲಿ” ಎಂದು, ತಕ್ಷಣ ಕ್ಷಮೆಯಾಚಿಸಿ ಮತ್ತೆ ಕೇಳಬೇಕಾದ್ದನ್ನೇ ಕೇಳಿದ. ಶಿವನು ಹೇಳಿದ, ಕೊಟ್ಟ ವರವನ್ನು ಹಿಂಪಡೆಯಲು ಸಾಧ್ಯವಿಲ್ಲ. ಎಂದು ರಾಕ್ಷಸನನ್ನು ಸಮಾಧಾನ ಮಾಡಿದ ಶಿವನು ನೀನು ಪಾದದ ಆಕಾರದ ಹೂವಾಗಿ ಹುಟ್ಟು ಅದು ಯಾವಾಗಲೂ ನನ್ನ ಶಿರವನ್ನು ಸೇರುತ್ತದೆ. ರಾಕ್ಷಸನು ‘ತುಂಬೆ’ ಹೂವಾಗಿ ಹುಟ್ಟಿದನು. ಇದನ್ನು ರುದ್ರ ಪುಷ್ಪ ಎಂದೂ ಕರೆಯುತ್ತಾರೆ. ಎಲ್ಲಾ ದೇವರಿಗೂ ಈ ಹೂವು ಸಲ್ಲುತ್ತದೆ. ಶಿವನಿಗೆ ಅತ್ಯಂತ ಪ್ರಿಯವಾದ ಹೂವು. ಪುರಾಣ ಕಾಲದಿಂದಲೂ ಔಷಧಿಗಾಗಿ ಬಳಸುತ್ತಾರೆ. ಶಿವನು ಹಾಲಾಹಲವನ್ನು ಕುಡಿದಾಗ ಗಂಟಲಲ್ಲಿ ಉರಿಯಾಗುತ್ತದೆ. ಆಗ ಈ ತುಂಬೆ ಹೂವಿನ ರಸವನ್ನು ಕುಡಿಸಿದಾಗ ಉರಿ ಶಮನವಾಯಿತು ಎಂಬ ಉಲ್ಲೇಖವಿದೆ.

  ವಿಶಿಷ್ಟ ದೇವತೆಗಳಿಗೆ ವಿಶಿಷ್ಟ ವಾಹನಗಳಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ ..

🌷ಕುತ್ತಿಗೆಯನ್ನು ಅಲಂಕರಿಸಿರುವ ವಾಸುಕಿ ಹಾವು;
ಇಲ್ಲೂ ಸಹ ಶಿವನು ಹಾಲಾ ಹಲವನ್ನು ಕುಡಿದಾಗ, ಉಳಿದ ಸರ್ಪಗಳು ಕುಡಿಯುತ್ತವೆ. ಇದರಿಂದ ಶಿವನಿಗೆ ಸರ್ಪಗಳು ಎಂದರೆ ಬಹಳ ಪ್ರಿಯ. ವಿಷ ಕುಡಿದ ಶಿವನಿಗೆ ಗಂಟಲಲ್ಲಿ ಉರಿ -ಉಷ್ಣ ಜಾಸ್ತಿ ಆಗುತ್ತದೆ ಆಗ ವಾಸುಕಿ ಹೇಳುತ್ತಾನೆ. ನಾನು ನಿಮ್ಮ ಗಂಟಲನ್ನು ಸುತ್ತುತ್ತೇನೆ ಉಷ್ಣ ಕಡಿಮೆಯಾಗಿ ತಂಪಾಗುತ್ತದೆ ಎಂದು ಕುತ್ತಿಗೆ ಅಲಂಕರಿಸಿದ.

🌷ಗಂಗೆ;
ಜೀವ ರಕ್ಷಕ ಜಲವಾದ ಗಂಗೆ ಶಿವನ ಜಟೆಯನ್ನು ಅಲಂಕರಿಸಿದ್ದಾಳೆ.
ಭಗೀರಥ, ತನ್ನ ತಾತ ಮುತ್ತಾತರ ಮುಕ್ತಿಗಾಗಿ ತಪಸ್ಸು ಮಾಡಿ ದೇವ ಗಂಗೆಯನ್ನು ಭೂಮಿಗೆ ಕಳಿಸಲು ಹೇಳುತ್ತಾನೆ. ಮಹಾವಿಷ್ಣುವಿನ ಪಾದಕಮಲಗಳಲ್ಲಿ ಹುಟ್ಟಿದ ಗಂಗೆ ಇಳಿದಾಗ ಭೂಮಿಯೇ ಕೊಚ್ಚಿಕೊಂಡು ಹೋಗುವಷ್ಟು ರಭಸವಿರುತ್ತದೆ. ಆಗ ಶಿವನು ತನ್ನ ಜಟೆಯಲ್ಲಿ ಗಂಗೆಯನ್ನು ಬಂಧಿಸುತ್ತಾನೆ. ಭಗೀರಥ ಶಿವನ ತಪಸ್ಸು ಮಾಡಿ ಭೂಮಿಗೆ ಕರೆಸಿಕೊಳ್ಳುತ್ತಾನೆ. ಶಿವನ ಜಟೆಯಿಂದ ದೇವಗಂಗೆ ನಿಧಾನವಾಗಿ ಇಳಿದುಬಂದು ಭೂಮಿಯನ್ನು ತಂಪು ಮಾಡಿ ಪವಿತ್ರ ಮಾಡುತ್ತಾಳೆ.

🌷ಬಿಲ್ವಪತ್ರೆ:
ಇದಂತೂ ಶಿವನಿಗೆ ಅತ್ಯಂತ ಪ್ರಿಯವಾದದ್ದು. ಮೂರು ಎಲೆಗಳುಳ್ಳ ಒಂದು ದಳ. ಶುದ್ಧವಾದ, ಹಚ್ಚಹಸುರಾಗಿರುವ ಎಳೆಯದಾದ, ಒಂದು ದಳ ಬಿಲ್ವ ಪತ್ರೆಯನ್ನು ಭಕ್ತಿಯಿಂದ ಶಿವನ ಶಿರದ ಮೇಲೆ ಇಟ್ಟರೆ, “ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯಧಂ, ತ್ರಿಜನ್ಮ ಪಾಪ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪ ಣಂ” ಎಂಬಂತೆ, ತ್ರಿಜನ್ಮಗಳ ಪಾಪ ವಿಮೋಚನೆಯಾಗುತ್ತದೆ ‘ಕೋಟಿ ಕನ್ಯಾಸ್ಮರೇ ನಿತ್ಯಂ’ ಕೋಟಿ ಕನ್ಯಾದಾನ ಮಾಡಿದ ಪುಣ್ಯ ಬರುತ್ತದೆ. ಚಿನ್ನ ದಾನ ಮಾಡಿದ ಫಲ, ಸೋಮವಾರ ಶಿವ ಪೂಜೆ, ಉಪವಾಸ ಮಾಡಿದ ಪುಣ್ಯ, ತೀರ್ಥಕ್ಷೇತ್ರ ಸ್ನಾನ ಮತ್ತು ಕಾಲಭೈರವ ದರ್ಶನ, ಪ್ರಯಾಗದಲ್ಲಿರುವ ಮಾಧವನ ದರ್ಶನ ಮಾಡಿದ ಭಾಗ್ಯ, ಶಿವ ಸಹಸ್ರನಾಮ ಮಾಡಿದ ಪುಣ್ಯ ಮತ್ತು ರಾಮಲಿಂಗ ಪ್ರತಿ ಷ್ಠಾಪನೆ ಪುಣ್ಯ ಲಭಿಸುತ್ತದೆ. ವೈಜ್ಞಾನಿಕವಾಗಿ ಬಿಲ್ವಪತ್ರೆಗೆ ವಿಷಕಾರಕ ಅಂಶಗಳನ್ನು ನಾಶಪಡಿಸುವ ಗುಣ ಹಾಗೂ ಸುತ್ತಮುತ್ತ ಪರಿಸರವನ್ನು ಶುದ್ಧವಾಗಿಸುವ ಚೈತನ್ಯ ಶಕ್ತಿ ಹೊಂದಿದೆ.

  ಸವದತ್ತಿಯ ಎಲ್ಲಮ್ಮ ಸ್ಥಳ ಪುರಾಣ ಹಾಗು ಕ್ಷೇತ್ರ ಮಹಾತ್ಮೆ

🌷ನಂದಿ ಕಿವಿಯಲ್ಲಿ ಹೇಳುವ ಗುಟ್ಟು:
ಶಿವನು ನಂದಿ ಪ್ರಿಯನಾದರೆ, ನಂದಿ ಶಿವನ ಪರಮ ಭಕ್ತ, ನಂದಿ ಶಿವನ ವರದಿಂದಲೇ ಹುಟ್ಟಿ, ಶಿವನನ್ನೆ ನೋಡುತ್ತಾ ಶಿವನ ಎದುರಿಗೆ ನೆಲೆಸಿದ್ದಾನೆ. ಶಿವನು ಸದಾ ಧ್ಯಾನದಲ್ಲಿ ಇರುತ್ತಾನೆ ಆದುದರಿಂದ ನಾವು ಏನೇ ಪ್ರಾರ್ಥನೆ ಮಾಡಿದರು ನಂದಿಯ ಕಿವಿಯಲ್ಲಿ ಹೇಳಿದರೆ ಅದನ್ನು ಶಿವನಿಗೆ ನಂದಿ ಹೇಳುವ ಮೂಲಕ ಶಿವನಿಗೆ ತಲುಪುತ್ತದೆ.

🌷ತ್ರಿಶೂಲಧಾರಿ:
ಮಹಾ ಶಕ್ತಿಶಾಲಿಯಾದ ತ್ರಿಶೂಲ ಶಿವನ ಕೈಯಲ್ಲಿ ಸದಾ ಇರುತ್ತದೆ.ಶಿವನ ಕೈಯಲ್ಲಿ ತ್ರಿಶೂಲ ಬರಲು ಒಂದು ಕಥೆ :- ವಿಶ್ವಕರ್ಮನ ಮಗಳು ಸಂಙ್ಗಾ,ಇವಳು ಸೂರ್ಯನ ಪತ್ನಿ, ಇವಳಿಗೆ ಸೂರ್ಯನ ತಾಪ ತಡೆಯಲು ಆಗಲಿಲ್ಲ. ಕೆಲವು ವರ್ಷ ಸೂರ್ಯನ ಜೊತೆಗಿದ್ದು, ಮಕ್ಕಳಾದ ಮೇಲೆ ತನ್ನ ನೆರಳಿನ ಪ್ರತಿರೂಪ ಮಾಡಿ ‘ಛಾಯಾ’ ಎಂದು ಹೆಸರಿಟ್ಟು ಅವಳಿಗೆ ಸೂರ್ಯ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಹೇಳಿ ತವರು ಮನೆಗೆ ಬಂದಳು. ಕೆಲವು ವರ್ಷ ಕಳೆದ ಮೇಲೆ ಛಾಯಾಗೆ ಮಕ್ಕಳು ಹುಟ್ಟಿ, ಸಂಙ್ಗಾ ಮಕ್ಕಳಿಗೆ ಮಲ ತಾಯಿ ಧೋರಣೆ ಮಾಡುವುದು ಸೂರ್ಯನಿಗೆ ತಿಳಿದು ಆಕೆಯನ್ನು ಹೆದರಿಸಿ ನಿಜ ಸಂಗತಿ ಅರಿತಾಗ, ಅವನಿಗೆ ನೋವಾಯಿತು, ಪುನಃ ತನ್ನ ಪತ್ನಿ ಸಂಙ್ಗಾಳನ್ನು ಕರೆದೊಯ್ಯಲು ಬರುತ್ತಾನೆ. ಆದರೆ ಸಂಙ್ಗಾ ತಂದೆ ವಿಶ್ವಕರ್ಮನಿಗೆ ಸೂರ್ಯನ ಶಾಖ ಕಡಿಮೆ ಮಾಡುವಂತೆ ಬೇಡುತ್ತಾಳೆ. ವಿಶ್ವಕರ್ಮನು ಸೂರ್ಯನ ಸ್ವಲ್ಪ ಶಾಖ ತೆಗೆದು ಅದರಿಂದ ಶಿವನಿಗೆ ತ್ರಿಶೂಲ,ವಿಷ್ಣುವಿಗೆ ಸುದರ್ಶನ ಚಕ್ರ, ಸಂಪತ್ತಿನ ಅಧಿಪತಿ ಕುಬೇರನಿಗೆ ಪುಷ್ಪಕ ವಿಮಾನ ಮಾಡಿಕೊಡುತ್ತಾನೆ. ಈ ತ್ರಿಶೂಲದಲ್ಲಿ ಅದ್ಭುತವಾದ ಶಕ್ತಿ ಅಡಗಿದೆ. ಇದರಲ್ಲಿ ಯೋಗವಿದ್ಯೆ , ಇಡಾ, ಪಿಂಗಳ, ಸುಷುಮ್ನಾ ನಾಡಿಗಳು ಶಿವನ ತ್ರಿಶೂಲವನ್ನು ಪ್ರತಿನಿಧಿಸುತ್ತದೆ. ಭೂತ, ವರ್ತ,ಭವಿಷ್ಯ ತ್ರಿಕಾಲ ಜ್ಞಾನ, ನಿಯಂತ್ರಣ ಮಾಡುವ ಶಕ್ತಿ ಇದೆ. ಸತ್ವ,ತಮಸ್ಸು, ರಜಸ್ಸುಗಳ ಒಡೆತನ ತ್ರಿಗುಣ, ತ್ರಿಶಕ್ತಿ, ಪ್ರತಿನಿಧಿಸುತ್ತದೆ.

  ಜನಪ್ರಿಯ ಕನ್ನಡ ಗಾದೆಗಳ ಸಂಗ್ರಹ - ಭಾಗ ೧೨

🌷ಭಸ್ಮಧಾರಿ ಶಿವ;
ಗೋವಿನ ಹಸುವನ್ನು ಬೆರಣಿ ಮಾಡಿ ತಟ್ಟಿ ಸುಟ್ಟು ಮಾಡಿದ ಭಸ್ಮ ಶಕ್ತಿಶಾಲಿಯಾದದು. ಇದಕ್ಕೊಂದು ಕಥೆ:- ಎಲ್ಲಾ ದೇವತೆಯರು ಬಂಗಾರದ ಒಡವೆ ಹಾಕುವುದನ್ನು ನೋಡಿ, ಪಾರ್ವತಿ ಈಶ್ವರನಲ್ಲಿ ತನಗೂ ಬೇಕೆಂದು ಕೇಳುತ್ತಾಳೆ.ಇದರ ತೂಕಕ್ಕೆ ಸಮನಾದ ಬಂಗಾರವನ್ನು ಕುಬೇರ ಕೊಡುತ್ತಾನೆ ತೆಗೆದುಕೊಂಡು ಬಾ ಎಂದನು, ಪಾರ್ವತಿ ಅಲಕಾಪುರಕ್ಕೆ ಬಂದು ಕುಬೇರನಿಗೆ ಚಿಟಿಕೆ ಭಸ್ಮ ಕೊಟ್ಟು ಇದರ ತೂಕದ ಬಂಗಾರ ಕೊಡು ಎಂದಾಗ ಆತ ತಕ್ಕಡಿಯ ಒಂದು ತಟ್ಟೆಗೆ ಚಿಟಿಕೆ ಭಸ್ಮ , ಇನ್ನೊಂದಕ್ಕೆ ಬಂಗಾರ ಹಾಕಿದರೆ, ಬಂಗಾರ ಎಷ್ಟೇ ಹಾಕಿದರು ಭಸ್ಮದ ತೂಕಕ್ಕೆ ಸಮ ನಾಗಲಿಲ್ಲ. ಕುಬೇರನಿಗೆ ಬಸ್ವದ ಶಕ್ತಿ ಅರಿವಾಯಿತು ಅದನ್ನು ಹಾಗೆ ಪಾರ್ವತಿಗೆ ಕೊಡುತ್ತಾ ತಾಯಿ ಇದರ ತೂಕಕ್ಕೆ ಸಮನಾದ ಬಂಗಾರ ಯಾವ ಲೋಕದಲ್ಲೂ ಇಲ್ಲ ಎಂದು ಕೈ ಮುಗಿದನು. ಅದರ ಬೆಲೆ ಅರಿತ ಪಾರ್ವತಿ ಪರಮೇಶ್ವರನಂಥ ಪತಿಯನ್ನು ಪಡೆದ ತನ್ನಷ್ಟು ಭಾಗ್ಯಶಾಲಿ ಯಾರು ಇಲ್ಲ ಎಂದು ಶಿವನಿಗೆ ಮನದಲ್ಲಿ ವಂದಿಸಿದಳು ಭಸ್ಮವನ್ನು ಬಂಗಾರವೆಂದು ಧರಿಸಿದಳು.

ಭಸ್ಮಕ್ಕೆ, ಕೆಟ್ಟದ್ದನ್ನು ದಹಿಸುವ, ದುಷ್ಟ ಶಕ್ತಿ ಯನ್ನು ಓಡಿಸುವ, ಮತ್ತು ಘೋರ ಪಾಪಗಳು ವಿಮೋಚನೆ, ಕಾಮ ಕ್ರೋಧ ಲೋಭ- ಮೋಹಗಳ ನಿಗ್ರಹ ಮಾಡುವ ಶಕ್ತಿ, ಭಸ್ಮಾ ಧರಿಸಿದವರ ಮನದಲ್ಲಿ ಅಹಿಂಸೆ, ಹಾಕು ಶಾಂತಿಯುತ ಸದ್ಭಾವನೆ ಹುಟ್ಟುತ್ತದೆ ಅವರ ಮುಖ ದರ್ಶನದಿಂದ ಶುಭವಾಗುತ್ತದೆ. ಸಂಜೀವಿನಿ ಅಂತ ಔಷದ ಗುಣವಿದ್ದು, ಭೂತ ಪ್ರೇತ ಭಾದೆಗಳನ್ನು ಓಡಿಸುವ, ಹಾಗೂ ಧನಾತ್ಮಕ ಶಕ್ತಿ, ದೇಹದ ಉಷ್ಣತೆ ಉಳಿಸಿ, ಹೊರಗಿನ ಶೀತವನ್ನು ತಡೆಯುವ ಗುಣ ಇಂಥ ಹಲವಾರು ಗುಣಾತ್ಮಕ ಶಕ್ತಿ ಭಸ್ಮಕ್ಕೆ ಇದೆ.

Leave a Reply

Your email address will not be published. Required fields are marked *

Translate »