ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಮ ತುಳಸಿ ಮತ್ತು ಕೃಷ್ಣ ತುಳಸಿ

ರಾಮ ತುಳಸಿ ಮತ್ತು ಕೃಷ್ಣ ತುಳಸಿ..!

ತುಳಸಿ ಗಿಡವನ್ನು ಪೂಜಿಸಿ ನಾವು ಫಲವನ್ನೂ ಪಡೆಯಬಹುದು ಹಾಗೆ ತುಳಸಿ ಗಿಡದಿಂದ ಸಂಪೂರ್ಣ ಆರೋಗ್ಯವನ್ನೂ ಸಹ ಪಡೆಯಬಹುದು. ಪವಿತ್ರವಾದ ತುಳಸೀ ಗಿಡಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತುಳಸೀ ಗಿಡಕ್ಕೆ ಮನೆಯ ಅಂಗಳದಲ್ಲಿ ಹಾಗೂ ಮನದಂಗಳದಲ್ಲಿ ಸಹ ವಿಶೇಷ ಸ್ಥಾನವನ್ನು ನೀಡಲಾಗಿದೆ.

ತುಳಸೀ ಗಿಡವನ್ನು ನಾವು ಹೇಗೆ ನೆಡೋದು? ತುಳಸೀ ಗಿಡ ಸಮೃದ್ಧವಾಗಿ ಬೆಳೆಯೋಕೆ ಏನು ಮಾಡಬೇಕು? ತುಳಸೀ ಗಿಡವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ರಾಮ ತುಳಸಿ ಮತ್ತು ಕೃಷ್ಣ ತುಳಸಿ ಗಿಡ ಹೇಗೆ ಇರತ್ತೆ? ಇವೆರಡರ ನಡುವೆ ಇರುವ ವ್ಯತ್ಯಾಸ ಏನು ಅನ್ನೋದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತುಳಸಿ ಗಿಡದಲ್ಲಿ ಸಾಕಷ್ಟು ವಿಧಗಳಿವೆ. ಆದರೆ ನಮಗೆ ತಿಳಿದಿರುವುದೂ ಕೇವಲ ಕೆಲವೇ ಕೆಲವು ವಿಧದ ತುಳಸೀ ಗಿಡಗಳು. ಇವುಗಳಲ್ಲಿ ಮುಖ್ಯವಾಗಿ ಹೆಚ್ಚು ಪ್ರಚಲಿತ ಇರುವುದು ಕೃಷ್ಣ ತುಳಸಿ ಮತ್ತು ರಾಮ ತುಳಸಿ ಗಿಡಗಳು.
ಕೃಷ್ಣ ತುಳಸೀ ಗಿಡದ ಎಲೆಗಳು ಹಾಗೂ ಅದರ ದಂಟು ಸಹ ಕಪ್ಪು ಬಣ್ಣದಲ್ಲಿ ಇರುತ್ತದೆ. ರಾಮ ತುಳಸೀ ಗಿಡ ಇದೂ ಸಹ ಎಲೆಗಳು ಹಾಗೂ ಇದರ ದಂಟು ಹಸಿರು ಬಣ್ಣದಲ್ಲಿ ಇರುತ್ತದೆ. ಇದರಿಂದಾಗಿ ಯಾವುದು ಕೃಷ್ಣ ತುಳಸಿ ಹಾಗೂ ಯಾವುದು ರಾಮ ತುಳಸಿ ಗಿಡ ಎಂದು ಕಂಡುಹಿಡಿಯಬಹುದು. ಕೃಷ್ಣ ತುಳಸಿ ಗಿಡದ ಎಲೆಗಳ ಪರಿಮಳ ಬಹಳ ಚೆನ್ನಾಗಿ ಇರತ್ತೆ. ಆದರೆ ರಾಮ ತುಳಸಿ ಗಿಡದ ಎಲೆಗಳ ಪರಿಮಳ ಕೃಷ್ಣ ತುಳಸಿ ಗಿಡಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ ಇರುತ್ತದೆ. ಕೃಷ್ಣ ತುಳಸಿ ಎಲೆಗಳನ್ನ ತಿಂದಾಗ ತಕ್ಷಣ ನಾಲಿಗೆಗೆ ಸ್ವಲ್ಪ ಖಾರ ಆದಂತಾಗಿ ನಾಲಿಗೆಗೆ ಚುರುಕು ಮುಟ್ಟಿಸತ್ತೆ. ಆದರೆ ರಾಮ ತುಳಸೀ ಗಿಡದ ಎಲೆಗಳಲ್ಲಿ ಅಷ್ಟೊಂದು ಖಾರ ಹಾಗೂ ಒಗರು ಇರುವುದಿಲ್ಲ.

  ಮಧ್ಯಪ್ರದೇಶದ ಅಗರ್ ಬೈಜನಾಥ್ ಮಹಾದೇವ ಮಂದಿರದ ವಿಸ್ಮಯ

ಕೃಷ್ಣ ತುಳಸಿ ಮತ್ತು ರಾಮ ತುಳಸಿ ಗಿಡಗಳ ಔಷಧೀಯ ಗುಣಗಳು ಏನು ಅಂತ ನೋಡುವುದಾದರೆ ,, , ಈ ಎರಡೂ ಗಿಡಗಳಲ್ಲಿಯೂ ಬಹಳಷ್ಟು ಔಷಧೀಯ ಗುಣಗಳು ಇರುತ್ತವೆ. ಆದರೆ ನಾವು ಈ ಎರಡೂ ಸಸ್ಯಗಳಲ್ಲಿ ಒಂದೇ ರೀತಿಯ ಗುಣಗಳು ಇವೆ ಅಂತ ಅಂದುಕೊಂಡಿರುತ್ತೇವೆ ಆದರೆ ಇವೆರಡರಲ್ಲೂ ಬೇರೆ ಬೇರೆ ಗುಣಗಳು ಇರುತ್ತವೇ. ಕೃಷ್ಣ ತುಳಸಿ ಎಲೆಗಳಿಗಿಂತ ರಾಮ ತುಳಸೀ ಗಿಡದ ಎಲೆಗಳು ಬಹಳಷ್ಟು ತಂಪನ್ನು ಹೊಂದಿದೆ. ಹಾಗಾಗಿ ನಾವು ಬೇಸಿಗೆಯಲ್ಲಿ ಏನಾದರೂ ತುಳಸಿ ಎಲೆಗಳನ್ನ ಜ್ಯುಸ್ ಮಾಡಲು ಏನಾದರೂ ಬಳಸಬೇಕಿದ್ದರೆ ರಾಮ ತುಳಸಿ ಎಲೆಗಳನ್ನು ಬಳಸುವುದು ಉತ್ತಮ. ಕೃಷ್ಣ ತುಳಸಿ ಗಿಡ ಸ್ವಲ್ಪ ಮಟ್ಟಿಗೆ ಉಷ್ಣ ಗುಣವನ್ನು ಹೊಂದಿದೆ. ಕೃಷ್ಣ ತುಳಸಿ ಗಿಡವನ್ನ ನಾವು ಮಳೆಗಾಲದಲ್ಲಿ ಜ್ವರ , ಶೀತ , ಕಫ ಆದಾಗ ಔಷಧಿಗಾಗಿ ಬಳಸಬಹುದು. ತುಳಸೀ ಗಿಡಗಳಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚಾಗಿ ಇರುತ್ತವೆ ಹಾಗಾಗಿ ಇದು ನಮ್ಮ ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯ ಮಾಡುತ್ತವೆ.

  ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರ ವಕ್ಕಲೇರಿಯ ಮಾರ್ಕಂಡೇಶ್ವರಸ್ವಾಮಿ

ಇನ್ನು ಮನೆಯ ಅಂಗಳದಲ್ಲಿ ನಾವು ತುಳಸೀ ಗಿಡಗಳನ್ನು ಇಟ್ಟುಕೊಳ್ಳುವುದರಿಂದ ಸೊಳ್ಳೆಗಳಿಂದ ಮುಕ್ತಿ ಹೊಂದಬಹುದು. ಇದರಿಂದ ಸೊಳ್ಳೆಗಳು ಮನೆಯ ಸುತ್ತ ಬರುವುದಿಲ್ಲ. ತುಳಸಿ ಎಲೆಗಳಿಂದ ಬರುವಂತಹ ಅದರ ಸುವಾಸನೆಗೆ ಕ್ರಿಮಿ ಕೀಟಗಳು ಮನೆಯ ಸುತ್ತ ಬರುವುದಿಲ್ಲ. ತುಳಸಿ ಗಿಡವನ್ನ ಮನೆಯ ಅಂಗಳದಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟುಕೊಂಡರೆ ನಮಗೆ ಒಳ್ಳೆಯ ಲಾಭಗಳು ದೊರೆಯುತ್ತವೆ. ತುಳಸೀ ಗಿಡದ ಬಗ್ಗೆ ಹೇಳುತ್ತಾ ಹೋದರೆ ಒಂದು ದಿನ ಪೂರ್ತಿ ಸಾಲಲ್ಲ ಅಷ್ಟು ವಿಷಯಗಳು ಇದರಲ್ಲಿ ಅಡಕವಾಗಿದೆ. ಸುಲಭವಾಗಿ ತುಳಸೀ ಗಿಡವನ್ನು ಹೇಗೆ ಬೆಳೆಸೋದು ಅಂತ ನೋಡೋಣ. ಒಂದು ಪಾಟ್ ಗೆ ಮಣ್ಣು ಮತ್ತು ಗೊಬ್ಬರ ತುಂಬಿಸಿ ಅದಕ್ಕೆ ತುಳಸೀ ಬೀಜಗಳನ್ನ ಸ್ವಲ್ಪ ಕೈಯಲ್ಲಿ ಉಜ್ಜಿ ಮಣ್ಣಿನಲ್ಲಿ ಹಾಕಬೇಕು. ನಂತರ ಅವು ಮೊಳಕೆ ಒಡೆದು ಒಂದೆರಡು ವಾರದಲ್ಲಿ ಗಿಡಗಳು ದೊಡ್ಡದಾಗುತ್ತವೆ. ಆಗ ಇನ್ನೊಂದು ಪಾಟ್ ತೆಗೆದುಕೊಂಡು ಅದಕ್ಕೆ ಐದಾರು ಸಣ್ಣ ಸಣ್ಣ ಕಲ್ಲುಗಳನ್ನ ಹಾಕಿ ಮಣ್ಣು ಮೃದುವಾಗಿ ಇರಲು ಕಲ್ಲಿನ ಮೇಲಿಂದ ಸ್ವಲ್ಪ ತೆಂಗಿನ ನಾರನ್ನು ಚಿಕ್ಕದಾಗಿ ಕಟ್ ಮಾಡಿ ಹಾಕಬೇಕು. ಅದರ ಮೇಲೆ ಯಾವುದೇ ಗಿಡಗಳ ಒಣಗಿದ ಎಲೆಗಳನ್ನು ಸಹ ಕಟ್ ಮಾಡಿ ಹಾಕಿ ಅದರ ಮೇಲಿಂದ ಮುಕ್ಕಾಲು ಭಾಗ ಮಣ್ಣನ್ನು ಸರಿಯಾಗಿ ಹಾಕಿ ಮಣ್ಣು ನೆನೆಯಲು ಅವಶ್ಯ ಇರುವಷ್ಟು ನೀರನ್ನು ಹಾಕಿ ಸ್ವಲ್ಪ ಸಮಯ ಬಿಡಬೇಕು. ನಂತರ ಮೊಳಕೆ ಒಡೆದು ದೊಡ್ಡದಾಗಿರುವ ತುಳಸಿ ಗಿಡವನ್ನ ನೆಡಬೇಕು. ತನ್ನಷ್ಟಕ್ಕೇ ತಾನೇ ದೊಡ್ಡದಾಗಿ ಬೆಳೆಯುತ್ತದೆ.

  ದೇವಸ್ಥಾನ ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ

ಈಗಂತೂ ವಿಧ ವಿಧವಾದ ತುಳಸಿ ಕಟ್ಟೆಗಳು ನಮಗೆ ಮಾರುಕಟ್ಟೆಯಲ್ಲಿ ಹಾಗೂ ಆನ್ಲೈನ್ ನಲ್ಲಿ ಕೂಡ ಲಭ್ಯ ಇರುತ್ತವೆ. ನಾವು ಕೆಲವೊಮ್ಮೆ ಮನೆಯಲ್ಲಿ ಒಂದು ತುಳಸಿ ಗಿಡವನ್ನು ಬೆಳೆಸೋಕೆ ಕಷ್ಟ ಪಡುತ್ತೇವೆ ಆದರೆ ರೈತರು ಸಾಕಷ್ಟು ತುಳಸಿ ಗಿಡಗಳನ್ನು ಸಹ ಬೆಳೆಸುತ್ತಾರೆ. ತುಳಸಿಯಿಂದ ಈಗ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ತುಳಸಿ ಗಿಡವನ್ನು ನಾವು ಮನೆಯ ಈಶಾನ್ಯ ಭಾಗದಲ್ಲಿ ಅಂದರೆ ಸೂರ್ಯನ ಅಭಿಮುಖವಾಗಿ ಇಡಬೇಕಾಗುತ್ತದೆ. ಸೂರ್ಯನ ಕಿರಣಗಳು ತುಳಸಿ ಗಿಡದ ಮೇಲೆ ನೇರವಾಗಿ ಬೀಳಬೇಕು ಅಂದಾಗ ಮಾತ್ರ ತುಳಸೀ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಕೃಷ್ಣ ತುಳಸಿ ಹಾಗೂ ರಾಮ ತುಳಸಿ ಎರಡೂ ಗಿಡಗಳಿಂದಲೂ ಸಹ ನಮಗೆ ಸಾಕಷ್ಟು ಉಪಯೋಗ ಇರುವುದರಿಂದ ಎರಡೂ ಗಿಡಗಳನ್ನು ಸಹ ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *

Translate »