ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಇಡಗುಂಜಿ ಶ್ರೀಮಹಾಗಣಪತಿ ಕ್ಷೇತ್ರ

🔯 ಆಧ್ಯಾತ್ಮಿಕ ವಿಚಾರ.📖🔯

“ಸರ್ವಸಿದ್ಧಿಯ ಕ್ಷೇತ್ರ ಇಡಗುಂಜಿ ಶ್ರೀಮಹಾಗಣಪತಿ ಸನ್ನಿಧಿ”

ಕಲಿಯುಗದ ಕಲ್ಪತರು, ಇಷ್ಟಾರ್ಥ ಸಿದ್ಧಿಗಳ ವರಪ್ರದಾಯಕನ ನೆಲವೀಡು ಎಂದು ಖ್ಯಾತವಾದ ಇಡಗುಂಜಿ ಶ್ರೀಮಹಾಗಣಪತಿ ಸನ್ನಿಧಾನ ತಲೆ ತಲೆಮಾರುಗಳಿಂದ ಯಾತ್ರಾಕ್ಷೇತ್ರವಾಗಿದೆ.
ಪ್ರತಿ ವರ್ಷ ಗಣೇಶ ಚತುರ್ಥಿಯಂದು ೩-೪ ಕೀ.ಮೀ.ದೂರದವರಗೆ ಸರತಿಯ ಸಾಲಿನಲ್ಲಿ ನಿಂತು ಮಹಾಗಣಪತಿಯ ದರ್ಶನ ಪಡೆದು ಜನ ಧನ್ಯರಾಗುತ್ತಾರೆ. ಗರಿಕೆ ಹುಲ್ಲು, ಕೆಂಪು ದಾಸವಾಳ, ಚಂದನ, ತೆಂಗಿನ ಕಾಯಿ, ಬಾಳೆಹಣ್ಣು ಮೋದಕಗಳನ್ನು ನೈವೇದ್ಯವಾಗಿ ಅರ್ಪಿಸುವ ಭಕ್ತರು ತಮ್ಮ ಬದುಕಿನ ಸಂಕಷ್ಟಗಳಂದು ಈ ವಸ್ತುಗಳ ಹರಕೆ ಹೊತ್ತಿರುತ್ತಾರೆ. ೧೧, ೨೧, ೧೦೧ ಪ್ರದಕ್ಷಿಣೆ ನಮಸ್ಕಾರ ಹಾಕುತ್ತಾ, ಪ್ರಥಮಮಂ ವಕ್ರತುಂಡಂಚ ಏಕದಂತಂ ದ್ವಿತೀಯಕಂ ಎಂಬ ದ್ವಾದಶ ನಾಮದ ಮಂತ್ರ ನಾದಕ್ಕೆ ತಮ್ಮ ಸ್ವರ ಸೇರಿಸಿ ಭಕ್ತರು ದೇವರ ದರ್ಶನ ಪಡೆಯುವ ಪರಿ ವಿಶೇಷ.

ಒಂದು ಕೈಯಲ್ಲಿ ಮೋದಕ ಇನ್ನೊಂದು ಕೈಯಲ್ಲಿ ಪದ್ಮಗಳನ್ನು ಹಿಡಿದು ನಿಂತ ಭಂಗಿಯಲ್ಲಿರುವ ಈ ಮಹಾಗಣಪತಿ ಸದಾ ವರಪ್ರದಾಯಕ. ಉಳಿದ ಎಲ್ಲೆಡೆ ಗಣಪತಿ ನಾಲ್ಕು ಕೈಗಳ ಚತುರ್ಭುಜನಾದರೆ ಈ ಗಣಪತಿ ಎರಡು ಕೈಹೊಂದಿರುವುದು ಗಮನಾರ್ಹ. ಈತನ ವಾಹನವಾದ ಇಲಿ ಸಹ ಇಲ್ಲಿ ರಜತ ಮೂರ್ತಿ. ಇಲಿಗೂ ಸಹ ಭಕ್ತಿ ಭಾವ ಸಮರ್ಪಣೆ ಸಲ್ಲುತ್ತದೆ.ಪ್ರತಿ ಸಂಕಷ್ಟ ಚತುರ್ಥಿಯಂದು ವಿಶೇಷ ಪೂಜೆ ಮತ್ತು ಜನದಟ್ಟಣೆ. ಪ್ರತಿ ವರ್ಷ ರಥಸಪ್ತಮಿಯಂದು ನಡೆಯುವ ಮಹಾರಥೋತ್ಸವದಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವರ್ಷಕ್ಕೆ ಸರಾಸರಿ ಒಂದು ಮಿಲಿಯನ್ ಭಕ್ತರು ಆಗಮಿಸಿ ದರ್ಶನ ಪಡೆಯುವ ಈ ಕ್ಷೇತ್ರ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

  ದತ್ತ ಗಿರಿನಾರ್ ಕ್ಷೇತ್ರ

ನಾರದ ಮುನಿ ಪೂಜಿತ ಭವ್ಯ ಇತಿಹಾಸ……..

ಇಡಗುಂಜಿಯಲ್ಲಿ ನೆಲೆನಿಂತ ಈ ಮಹಾಗಣಪತಿಗೆ ಭವ್ಯ ಇತಿಹಾಸವಿದೆ. ವೇದ ಪುರಾಣಗಳಲ್ಲಿ ಉಲ್ಲೇಖ ಮತ್ತು ಶ್ಲಾಘನೆಯಿದೆ. ಈ ದೇವಾಲಯಕ್ಕೆ ಸುಮಾರು ೧೫೦೦ ವರ್ಷಗಳ ಇತಿಹಾಸವಿದೆ. ಸೂತಪುರಾಣ ಮತ್ತು ನಾರದ ಪುರಾಣಗಳಲ್ಲಿ ಈ ಕ್ಷೇತ್ರದ ಮಹಿಮೆ ಕೊಂಡಾಡಲ್ಪಟ್ಟಿದೆ. ದ್ವಾಪರ ಯುಗದ ಅಂತ್ಯದಲ್ಲಿ ಶ್ರೀಕೃಷ್ಣನು ಮುಂಬರುವ ಕಲಿಯುಗದ ಅನಿಷ್ಟಗಳನ್ನು ಪ್ರಸ್ತಾಪಿಸುತ್ತಾನೆ. ಕಲಿಯುಗದಲ್ಲಿ ದೋಷ ನಿವಾರಣೆ ಹೊಂದಿ ಪುಣ್ಯಪ್ರಾಪ್ತಿ ಮತ್ತು ಸಿದ್ಧಿ ಸಾಧನೆಗೆ ಧಾರ್ಮಿಕ ಆಚರಣೆ ಅಗತ್ಯ.

ಕುಂಜವನದ ಪುಣ್ಯ ಭೂಮಿಯಲ್ಲಿ ಭಕ್ತಿ ಮತ್ತು ತಪಸ್ಸಾಚರಣೆ ನಡೆಯಬೇಕು ಎನ್ನುತ್ತಾನೆ. ಬದರಿಕಾಶ್ರಮದಲ್ಲಿ ಶ್ರೀಕೃಷ್ಣನ ಸೇವೆಯಲ್ಲಿ ತೊಡಗಿದ್ದ ವಾಲಕಲ್ಯ ಮಹರ್ಷಿಗಳಲ್ಲಿ ಸೂತ ಪುರಾಣಿಕರು ಕುಂಜವನದ ಲಕ್ಷಣಗಳನ್ನು ಕೇಳುತ್ತಾರೆ. ಕ್ಲಿಷ್ಟಕರವಾದ ಭಕ್ತಿ ಮಾರ್ಗದಲ್ಲಿ ಹಲವು ವಿಘ್ನಗಳು ಬರುವುದರಿಂದ ನಿವಾರಣೆಗೆ ಮಹಾಗಣಪತಿಯ ಸಾನಿಧ್ಯ ಅಗತ್ಯವೆಂದು ವಾಲಕಲ್ಯ ಮಹರ್ಷಿ ತಿಳಿಸುತ್ತಾನೆ. ಅದೇ ಸಮಯದಲ್ಲಿ ನಾರದ ಮಹರ್ಷಿಗಳು ಸಹ ಬಳಿಸಾರಿ ಹಲವು ಋಷಿಗಳನ್ನು ಕೂಡಿಕೊಂಡು ಕುಂಜವನವನ್ನರಸುತ್ತಾ ದಕ್ಷಿಣ ಭಾರತದತ್ತ ಬರುತ್ತಾರೆ. ಹಾಗೆ ಬರ ಬರುತ್ತಾ ಸಮುದ್ರದ ಸನಿಹವಿರುವ ಶರಾವತಿ ನದಿಯ ತಟದಲ್ಲಿ ಎಡಗಡೆ ಕುಂಜವನದ ಲಕ್ಷಣ ಗೋಚರಿಸುತ್ತಿರುವುದನ್ನು ಸೂಚಿಸುತ್ತಾರೆ. ಈ ಸ್ಥಳದಲ್ಲಿ ಹಿಂದೆ ಬ್ರಹ್ಮ, ವಿಷ್ಣು, ಮಹೇಶ್ವರರು ಆಗಮಿಸಿದ್ದು ಅಸುರರ ನಿಗ್ರಹಕ್ಕಾಗಿ ಚಕ್ರತೀರ್ಥ ಮತ್ತು ಬ್ರಹ್ಮತೀರ್ಥಗಳನ್ನು ಸ್ಥಾಪಿಸಿದ ಸ್ಥಳವನ್ನು ಗುರುತಿಸುತ್ತಾರೆ.

  ಮದುವೆಗಳಲ್ಲಿ ಅಕ್ಕಿ ಕಾಳುಗಳನ್ನು ಅಕ್ಷತೆಯಾಗಿ ಯಾಕೆ ಉಪಯೋಗಿಸುತ್ತಾರೆ?

ಅಲ್ಲಿಗೆ ಆಗಮಿಸಿದ ನಾರದರು ಉಳಿದ ಋಷಿಮುನಿಗಳ ನೆರವಿನಿಂದ ದೇವತೀರ್ಥವನ್ನು ಸಹ ನಿರ್ಮಿಸುತ್ತಾರೆ.ವಿಶೇಷ ಸಿದ್ಧಿಗಾಗಿ ಈ ಸ್ಥಳಕ್ಕೆ ಬ್ರಹ್ಮ,ವಿಷ್ಣು ಮಹೇಶ್ವರರನ್ನು ಆಹ್ವಾನಿಸಿ ಪೂಜಿಸುತ್ತಾರೆ.ಪಾರ್ವತಿಯನ್ನು ಧ್ಯಾನಿಸಿ ಅವಳ ಪುತ್ರನಾದ ಗಣಪತಿಯನ್ನು ಕಳುಹಿಸಿಕೊಡುವಂತೆ ಪ್ರಾರ್ಥಿಸುತ್ತಾರೆ. ಆಗ ಪಾರ್ವತಿ ಲೋಕ ಕಲ್ಯಾಣಕ್ಕಾಗಿ ಗಣಪತಿಯನ್ನು ಕಳುಹಿಸುತ್ತಾಳೆ ಎಂದು ಪುರಾಣಗಳಿಂದ ತಿಳಿದು ಬರುತ್ತದೆ. ನೃಪವರ ಚಂದ ಶತಾಬ್ಧ, ೮೧೩ ನೇ ವಿಭವ ಸಂವತ್ಸರದ ಉತ್ತರಾಯಣ, ಶಿಶಿರ ಋತು,ಮಾಘ ಮಾಸ ಶುಕ್ಲ ಪಕ್ಷ ,ದ್ವಿತೀಯ ತಿಥಿಯ ಬುಧವಾರ ಪುನರ್ವಸು ನಕ್ಷತ್ರದ ವಿಶ್ವ ಮುಹೂರ್ತ(ಬ್ರಹ್ಮ ಮುಹೂರ್ತ)ದಲ್ಲಿ ನಾರದರು ಗಣಪತಿಯನ್ನು ಆಮಂತ್ರಿಸಿದರು ಎಂದು ತಿಳಿದು ಬರುತ್ತದೆ.
ಈ ಸ್ಥಳದ ಶಕ್ತಿ ವರ್ಧನೆಗೆ ಗಣೇಶ ತೀರ್ಥವನ್ನು ಸಹ ನಾರದರು ನಿರ್ಮಿಸಿದ್ದು ದೇಗುಲದ ಮುಂಭಾಗದಲ್ಲಿದೆ .ಮೋದಕ ಮತ್ತು ಪಂಚಕಜ್ಜಾಯ ಇಲ್ಲಿನ ಮುಖ್ಯ ನೈವೇದ್ಯವಾಗಿದ್ದು ನಿತ್ಯ ಸಾವಿರಾರು ಜನ ಹರಕೆ ಸಲ್ಲಿಸುತ್ತಾರೆ.ಮೋದಕ ಹಾಗೂ ಪಂಚ ಕಜ್ಜಾಯ ದೊರೆಯದ ದಿನ ಈ ಸ್ಥಳ ಖಾಲಿ ಮಾಡಿ ಕೈಲಾಸಕ್ಕೆ ತೆರಳ ಬಹುದೆಂದು ನಾರದರು ಒಪ್ಪಿಗೆ ನೀಡಿದ್ದರೆಂದು ಪ್ರತೀತಿಯಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಈಗ ಇಡಗುಂಜಿಯೆಂದು ಕರೆಯಲ್ಪಡುವ ಸ್ಥಳವೇ ಹಿಂದೆ ಕುಂಜಾರಣ್ಯ ವಾಗಿತ್ತೆಂದು ಹೇಳಲಾಗುತ್ತಿದೆ. ಸುಮಾರು ೫ ಅಡಿ ಎತ್ತರದ ಶಿಲಾ ಮೂರ್ತಿಯಾಗಿರುವ ಈ ಮಹಾಗಣಪತಿ ಪೂರ್ವಾಭಮುಖವಾಗಿ ನಿಂತ ಭಂಗಿಯಲ್ಲಿದ್ದು ದರ್ಶನದಿಂದಲೇ ಆಸ್ತಿಕರ ಮನೋಗತ ನೆರವೇರುತ್ತದೆ ಎಂಬ ನಂಬಿಕೆಯಿದೆ.

  ತಾಯಿ ಶಾರದೆಯ ನೆಲೆವೀಡು ಶೃಂಗೇರಿ

Leave a Reply

Your email address will not be published. Required fields are marked *

Translate »