ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಝೆನ್ ಕಥೆ – ಪ್ರವಾಸಿ ಗೃಹಒಮ್ಮೆ ಪೂಜ್ಯ ಝೆನ್ ಗುರುಗಳು ಒಂದು ರಾಜನ ಅರಮನೆಯನ್ನು ತಡರಾತ್ರಿಯಲ್ಲಿ ಸಮೀಪಿಸುತ್ತಾನೆ. ರಾಜ ತನ್ನ ಸಿಂಹಾಸನದ ಮೇಲೆ ಕುಳಿತಿರುವ ಸ್ಥಳಕ್ಕೆ ಹೋಗಲು ಪ್ರಯತ್ತಿನಿಸದಾಗ ದ್ವಾರಪಾಲಕರು ಗುರುಗಳನ್ನು ಗೌರವದಿಂದ ತಡೆದರು. ಅರಸನು ಝೆನ್ ಗುರುಗಳನ್ನು ಗುರುತಿಸಿದನು ಹಾಗು ದ್ವಾರಪಾಲಕರಿಗೆ ಅವರನ್ನು ತನ್ನ ಬಳಿ ಬಿಡಲು ಹೇಳಿದನು.

“ಸ್ವಾಗತ, ಗುರುಗಳೇ . ನಿಮಗೆ ಏನು ಬೇಕು? “ಎಂದು ಅರಸನು ಕೇಳಿದನು.

“ನಾನು ಇಂದು ರಾತ್ರಿ ನಿಮ್ಮ ಸಿಂಹಾಸನದ ಮೇಲೆ ನಿದ್ರೆ ಮಾಡಲು ಬಯಸುತ್ತೇನೆ” ಎಂದು ಎಂದು ವಿಚಿತ್ರ ಬೇಡಿಕೆ ಇಟ್ಟರು ಝೆನ್ ಗುರುಗಳು. ಈ ಬೇಡಿಕೆಯಿಂದ ಒಂದು ಕ್ಷಣ ಗಲಿಬಿಲಿಗೊಂಡ ರಾಜ, ವ್ಯಂಗ್ಯವಾಗಿ ಹೇಳಿದ “ಇದು ಯಾವುದೇ ಪ್ರವಾಸಿ ಗೃಹವಲ್ಲ! ಇದು ನನ್ನ ಅರಮನೆ! “
ಈ ಮಾತನ್ನು ಕೇಳಿದ ಝೆನ್ ಗುರುಗಳು ಮೃದುವಾಗಿ ಕೇಳಿದರು , “ಇದು ನಿನ್ನ ಅರಮನೆಯೇ? , ಈ ಅರಮನೆಯನ್ನು ನಿನ್ನಗಿಂತ ಮುಂಚೆ ಯಾರು ಹೊಂದಿದ್ದರು ಈ ಅರಮನೆಯನ್ನು?”

  ದೇವಸ್ಥಾನದಲ್ಲಿ ರಾಕ್ಷಸ ಕೀರ್ತಿಮುಖನ ಹಿಂದಿದೆ ಅದ್ಭುತ ಜೀವನ ರಹಸ್ಯ

ಗಲಿಬಿಲಗೊಂಡ ರಾಜ “ಏಕೆ ಈ ಪ್ರಶ್ನೆ ? , ನನಗಿಂತ ಮುಂಚೆ ನನ್ನ ತಂದೆಯವರದಾಗಿತ್ತು , ಆದರೆ ಈಗ ಅವರು ಇಲ್ಲ, ಇದು ಸಂಪೂರ್ಣ ನನ್ನದಾಗಿದೆ. “

ಪುನಃ ಝೆನ್ ಗುರುಗಳು ಮರು ಪ್ರಶ್ನೆ ಎಸೆದರು “ಹಾಗಾದರೆ ನಿಮ್ಮ ತಂದೆಗಿಂತ ಮೊದಲು ಯಾರು ಇಲ್ಲಿ ವಾಸಿಸುತ್ತಿದ್ದರು?” “
ಆ ಪ್ರಶ್ನೆಗೂ ರಾಜ “ನನ್ನ ಅಜ್ಜ, ವಾಸ್ತವವಾಗಿ ಈಗ ಅವರು ಇಲ್ಲ. “ಎಂದು ಉತ್ತರಿಸಿದ.
ಆಗ ಝೆನ್ ಗುರುಗಳು ನಗು ನಗುತ್ತ ಹೇಳಿದರು
“ಜನರು ಕೆಲವೇ ಕೆಲವು ಸಮಯ ವಾಸಿಸುವ ಮತ್ತು ತಮ್ಮ ಕಾಲ ನಂತರ ಬಿಟ್ಟು ಹೋಗುವ ಈ ಕಟ್ಟಡ, ಇದು ಒಂದು ಪ್ರವಾಸಿಗೃಹವಲ್ಲದೆ ಮತ್ತೇನಾಗಬಲ್ಲದು ” ಎಂದು ಹೇಳುತ್ತಾ ಝೆನ್ ಗುರುಗಳು ಪುನಃ ತಮ್ಮ ದಾರಿ ಹಿಡಿದು ಹೊರಟರು.

  ಸ್ವರ್ಗದ ಬಾಗಿಲು - ಕನ್ನಡ ಝೆನ್ ಕಥೆ - Kannada Zen Story

ಈ ಕಥೆಯ ನೀತಿ ಏನೆಂದರೆ – ಈ ಜಗತ್ತಿನಲ್ಲಿರುವುದೆಲ್ಲ ನಶ್ವರ ಮತ್ತು ಅಲ್ಲಿರುವುದು ನಮ್ಮನೆ ಹಾಗು ಇಲ್ಲಿರುವು ಸುಮ್ಮನೆ ಎಂಬ ಗೂಡಾರ್ಥವನ್ನು ತಿಳಿಸುತ್ತದೆ.

Leave a Reply

Your email address will not be published.

Translate »

You cannot copy content of this page