ಒಬ್ಬ ವಯಸ್ಸಾದ ಮುದುಕ ಸಂಜೆಯ ವಾಯುವಿಹಾರಕ್ಕಾಗಿ ಕಡಲತೀರಕ್ಕೆ ತೆರಳುತ್ತಾನೆ ಮತ್ತು ಆಶ್ಚರ್ಯವೆಂಬಂತೆ ಅಂದು ಕಡಲ ತೀರದ ತುಂಬ ಕಣ್ಣಿನ ನೋಟಕ್ಕೆ ಸಾವಿರಾರು ಮೀನುಗಳು ದಡಕ್ಕೆ ಬಂದು ಬಿದ್ದಿರುತ್ತವೆ ಮತ್ತು ಉಸಿರಾಡಲಾಗದೆ ಒದ್ದಾಡುತಿರುತ್ತವೆ. ಕಡಲತೀರದ ಒಂದು ಬದಿಯಲ್ಲಿ ಅವರು ಆ ಮೀನಿನ ಜೊತೆ ಆತ ವಾಡುತ್ತಿರುವ ಯುವ ಹುಡುಗಿಯನ್ನು ನೋಡುತ್ತಾರೆ, ಆ ಹುಡುಗಿಯ ಹತ್ತಿರ ತೆರಳಿದಾಗ ಗೊತ್ತಾಗುತ್ತದೆ ಆಕೆ ಒಂದೊಂದಾಗಿ ಮೀನುಗಳನ್ನು ಸಮುದ್ರದಲ್ಲಿ ಮರಳಿ ಎಸೆಯುತಿರುತ್ತಾಳೆ.
ಇದನ್ನು ನೋಡಿ ನಕ್ಕ ಆ ಮುದುಕ , ಆಕೆಯೊಂದಿಗೆ ಪ್ರಶ್ನೆ ಮಾಡುತ್ತಾರೆ . “ಚಿಕ್ಕ ಹುಡುಗಿ , ನೀನು ಏನು ಮಾಡುತ್ತಿದ್ದೀಯಾ ಎಂದು ನಿನಗೆ ತಿಳಿದಿದೆಯೇ ? “
“ನಾನು ಈ ಮೀನಿನ ಜೀವನವನ್ನು ಉಳಿಸುತ್ತಿದ್ದೇನೆ” ಎಂದು ಹುಡುಗಿ ಚಿಕ್ಕದಾಗಿ ಚೊಕ್ಕವಾಗಿ ಉತ್ತರಿಸುತ್ತಾಳೆ. “ನಾನು ಮೀನನ್ನು ಮತ್ತೆ ನೀರಿನಲ್ಲಿ ಎಸೆಯದೆ ಹೋದರೆ ಅವುಗಳು ಉಸಿರಾಡಲಾಗದೆ ಸಾಯುತ್ತವೆ. ಅವುಗಳಿಗೆ ಬದುಕಲು ನೀರಿನ ಅಗತ್ಯವಿದೆ. “
ಆ ವಯಸ್ಸಾದ ಮುದುಕ ಇನ್ನು ಜೋರಾಗಿ ನಗುತ್ತಾ , ಹುಚ್ಚು ಹುಡುಗಿ ಎಂದು ಯೋಚಿಸುತ್ತಾ ಕೇಳುತ್ತಾನೆ . “ಆದರೆ ನೀನು ಕೇವಲ ಒಬ್ಬಳೆ ಇದ್ದೀಯ, ಈ ಕಡಲ ತೀರದಲ್ಲಿ ಸಾವಿರಾರು ಮೀನುಗಳಿವೆ. ನಿನ್ನ ಒಂದು ಸಣ್ಣ ಕಾರ್ಯ ಏನು ಬದಲಾವಣೆ ತರಲು ಸಾಧ್ಯ, ಎಷ್ಟೊಂದು ಮೀನುಗಳು ಸಾಯುವುದಿಲ್ಲವೇ , ಅದರಲ್ಲಿ ಇದು ಒಂದು ಎಂದು ಬಿಟ್ಟಹಾಕಿಬಿಡು , ಏನು ಬದಲಾವಣೆಯಾಗುವುದಿಲ್ಲ ಈ ಪ್ರಪಂಚಕ್ಕೆ ? “
ಹುಡುಗಿ ಕೆಳಗೆ ಬಾಗಿ ಒಂದು ಮೀನನ್ನು ಎತ್ತಿಕೊಂಡು, ಅದನ್ನು ಆ ಮುದುಕನಿಗೆ ತೋರಿಸುತ್ತ ಸಮುದ್ರಕ್ಕೆ ಎಸೆಯುತ್ತಾಳೆ , ನಂತರ ಹೇಳುತ್ತಾಳೆ , “ನಾನು ಈ ಒಂದು ಮೀನಿನ ಜೀವನದಲ್ಲಿ ಬದಲಾವಣೆ ಮಾಡಿದೆ, ನನಗಷ್ಟೇ ಸಾಕು.” ಇಂಥ ಅರ್ಥಗರ್ಭಿತ ಮಾತು ಕೇಳಿದ ಮುದುಕ ಮರುಮಾತನಾಡದೇ ತಾನು ಒಂದೊಂದು ಮೀನನ್ನು ತೆಗದು ಸಮುದ್ರಕ್ಕೆ ಎಸೆಯಲು ಶುರು ಮಾಡಿದ.