ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಲಿಂಗ ಪುರಾಣ ಮತ್ತು ವರಾಹ ಪುರಾಣ ವಿವರ

18 ಪುರಾಣಗಳು : ಲಿಂಗ ಪುರಾಣ ಮತ್ತು ವರಾಹ ಪುರಾಣ ಏನು ಹೇಳುತ್ತದೆ…?

ಲಿಂಗ ಮಹಾಪುರಾಣ
ಶಿವನ ವಿವಿಧ ರೂಪಗಳ-ಹೆಚ್ಚಾಗಿ ಲಿಂಗರೂಪದ – ಪೂಜೆಯನ್ನು ಮುಖ್ಯವಾಗಿ ವಿವರಿಸುತ್ತದೆ. ದೇವದಾರುವನಕ್ಕೊಮ್ಮೆ ಶಿವ ಹೋದಾಗ ಅವನನ್ನು ಕಂಡು ಅಲ್ಲಿದ್ದ ಋಷಿಪತ್ನಿಯರು ಮರುಳಾದರು. ಆಗ ಲಿಂಗವಾಗೆಂದು ಶಿವನಿಗೆ ಋಷಿಗಳು ಶಾಪಕೊಟ್ಟರು. ಶಿವನಿಗಿಲ್ಲಿ 28 ಅವತಾರಗಳನ್ನು ಹೇಳಲಾಗಿದೆ. ತಂತ್ರಗಳ ಪ್ರಭಾವ ಈ ಪುರಾಣದ ಮೇಲೆ ಬಿದ್ದಿರುವುದನ್ನು ಕೆಲವೆಡೆ ಕಾಣಬಹುದು.

ಒಟ್ಟಿನಲ್ಲಿ ಇದು ಅಷ್ಟೇನೂ ಪ್ರಾಚೀನ ಪುರಾಣವಲ್ಲ. ಪ್ರ.ಶ. 8ನೆಯ ಶತಮಾನಕ್ಕೂ ಈಚಿನದು. ಶ್ಲೋಕಸಂಖ್ಯೆ 11000. ಬಲ್ಲಾಳಸೇನನ ಪ್ರಕಾರ ಮತ್ಸ್ಯಪುರಾಣದಲ್ಲಿರುವ ಗಾತ್ರವನ್ನು ಹೆಚ್ಚಿಸಲಾಯಿತು. ಇದರಲ್ಲಿ ಕಥನವಸ್ತುಗಳಿಲ್ಲ, ಕರ್ಮಕಾಂಡದ ಅಂಶಗಳು ತುಂಬಿಕೊಂಡಿವೆ.

  ಯಾರು ವ್ಯಾಸರಾಯರು ..?

ವರಾಹ ಮಹಾಪುರಾಣ
ವಿಷ್ಣು ವರಾಹಾವತಾರವನ್ನು ತಾಳಿ ಭೂದೇವಿಯನ್ನು ಉದ್ಧರಿಸುವ ಅಂಶವನ್ನು ಹೇಳುತ್ತದೆ. ಇದರಲ್ಲಿ ಸೃಷ್ಟಿಕ್ರಮ, ವಂಶ ವೃಕ್ಷಗಳ ವಿಷಯಗಳು ಬಂದಿದ್ದರೂ ಒಟ್ಟಿನಲ್ಲಿ ಇದು ವಿಷ್ಣುವಿನ ಸ್ತೋತ್ರ, ಪ್ರಾರ್ಥನೆ, ಪೂಜೆ ಪುರಸ್ಕಾರಗಳ ಬಗೆಯನ್ನು ಹೇಳಲು ಮೀಸಲಾದ ಪುರಾಣ. ಹೀಗಿದ್ದರೂ ಇದರಲ್ಲಿ ಶಿವ, ದುರ್ಗೆಯರ ಕಥೆಗಳಿವೆ. ಮಾತೃದೇವತೆಗಳ ಹಾಗೂ ಇತರ ಸ್ತ್ರೀದೇವತೆಗಳ ವಿಸ್ತಾರವನ್ನು ಅನೇಕ ಅಧ್ಯಾಯಗಳಲ್ಲಿ ವಿಶದಪಡಿಸಲಾಗಿದೆ. ಗಣೇಶೋತ್ಪತ್ತಿ, ಗಣೇಶಸ್ತೋತ್ರಗಳೂ ಇಲ್ಲಿವೆ.
ಇಷ್ಟೇ ಅಲ್ಲ, ಶ್ರಾದ್ಧ, ಪ್ರಾಯಶ್ಚಿತ್ತ, ದೇವತಾಮೂರ್ತಿ ಪ್ರತಿಷ್ಠೆ, ಮಥುರಾಮಾಹಾತ್ಮ್ಯಗಳೂ, ನಚಿಕೇತ ವೃತ್ತಾಂತ. ಸ್ವರ್ಗ, ನರಕವರ್ಣನೆ ಮುಂತಾದವೂ ಪುರಾಣಕಕ್ಷೆಯಲ್ಲಿ ಬಂದಿವೆ. ಶ್ಲೋಕಸಂಖ್ಯೆ 24000ವೆಂದು ಪ್ರಸಿದ್ಧಿಯಿದ್ದರೂ ವಾಸ್ತವಿಕವಾಗಿ ಇದರಲ್ಲಿ 10000ಕ್ಕಿಂತ ಬಹಳ ಹೆಚ್ಚಾಗಿಲ್ಲ. ಕ್ರಿ.ಶ. 8ನೆಯ ಶತಮಾನದಲ್ಲಿದ್ದ ಇದರ ಮೂಲ ಸ್ವರೂಪ ಅನುಪಲಬ್ಧ. ಸದ್ಯದ ಸ್ವರೂಪದ ಕಾಲ ಪ್ರ.ಶ. 12ನೆಯ ಶತಮಾನದ ಆದಿಭಾಗವೆನ್ನಬಹುದು. ಇದು ಮೂಲದ ಕೆಲ ಅಧ್ಯಾಯಗಳನ್ನೊಳಗೊಂಡಿದೆ.

Leave a Reply

Your email address will not be published. Required fields are marked *

Translate »