ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಯಾರು ವ್ಯಾಸರಾಯರು ..?

ಯಾರು ವ್ಯಾಸರಾಯರು..?

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರು ವಿದ್ಯಾರಣ್ಯ ರಾದರೆ ಅದರ ಸಂಪೂರ್ಣ ಅಭಿವೃದ್ಧಿ ಗೆ ಬೆಂಗಾವಲಾಗಿ ನಿಂತವರು ವ್ಯಾಸರಾಜರು.  ಹಿಂದೊಮ್ಮೆ ಕೃಷ್ಣದೇವರಾಯನಿಗೆ ಕುಹಯೋಗ ಬಂದಿತ್ತು. ಜೀವಹಾನಿಯನ್ನೇ ಮಾಡಬಲ್ಲ ಒಂದು ಕಂಟಕ ಕರ್ನಾಟಕ ರತ್ನಸಿಂಹಾಸನಕ್ಕೆ ಬಂದಿತ್ತು. ಆಗ ಕೇವಲ ತಮ್ಮ ತಪಃಶಕ್ತಿಯಿಂದ ತಾವೇ ಸಿಂಹಾಸನ ಅಲಂಕರಿಸಿ ಅದನ್ನು ಕೇವಲ ದೇವರ ಅನುಗ್ರಹದಿಂದ ನಿವಾರಿಸಿದರು. ಇದಾದ ನಂತರ ಕೃಷ್ಣದೇವರಾಯ ತಾವೇ ಸಿಂಹಾಸನದಲ್ಲಿ ಮುಂದುವರೆಯಿರಿ ಎಂದಾಗ ಅದು ನನ್ನ ಕೆಲಸ ಅಲ್ಲ ನೀನು ರಾಜ್ಯವಾಳಬೇಕೆಂದು ಅನುಗ್ರಹಿಸಿದ ನಿಸ್ವಾರ್ಥ ಶಿರೋಮಣಿಗಳು ವ್ಯಾಸರಾಜರು.
ಕರ್ನಾಟಕದ ಹೆಮ್ಮೆ ಸಂಗೀತ ಪಿತಾಮಹ ಪುರಂದರ ದಾಸರು, ಭಕ್ತಾಗ್ರೇಸರ ಕನಕ ದಾಸರಂತಹ ಮಹಾನುಭಾವರಿಗೆ ದೀಕ್ಷೆ ಕೊಟ್ಟು ದಾಸ ವ್ಯಾಸ ಸಾಹಿತ್ಯದ ಸಮಾನ ಅಭಿವೃದ್ಧಿಗೆ ನೀರೆರೆದವರು ವ್ಯಾಸರಾಜರು.
ತಿರುಪತಿಯ ಅರ್ಚಕರ ಸಂತತಿ ಪೂರ್ಣ ನಾಶವಾದಾಗ ೧೨ ವರ್ಷ ವೆಂಕಟರಮಣನನ್ನು ಅರ್ಚಿಸಿ ಅಲ್ಲಿನ ಹುಡುಗನೊಬ್ಬನ ಉಪನಯನವಾದೊಡನೇ ಅವನಿಗೆ ಪೂಜಾಧಿಕಾರವನ್ನು ಮರಳಿ ಒಪ್ಪಿಸಿ ಮತ್ತೊಮ್ಮೆ ನಿಸ್ವಾರ್ಥತೆಯ ಸಾಕಾರರೆನಿಸಿದ ಮಹಾನುಭಾವರು. ಇವತ್ತು ಹಿಂದೂಗಳ ಪವಿತ್ರ ಕ್ಷೇತ್ರ ತಿರುಪತಿಯ ದರ್ಶನ ನಾವು ಮಾಡ್ತಿದ್ದೀವಿ ಅಂದರೆ ಅದರ ಶ್ರೇಯ ವ್ಯಾಸರಾಜರದ್ದು.
ಇಡೀ ದೇಶ ಮೊಘಲರ ಆಕ್ರಮಣದಲ್ಲಿದ್ದಾಗ ಇಡೀ ದೇಶದಲ್ಲಿ ೭೦೦ ಕ್ಕೂ ಹೆಚ್ಚು ಮಾರುತಿ ಮೂರ್ತಿ ಪ್ರತಿಷ್ಟಾಪಿಸಿ ಹಿಂದೂ ಜಾಗೃತಿ ಮಾಡಿದ ಕ್ರಾಂತಿಕಾರಿ ಸನ್ಯಾಸಿ ವ್ಯಾಸರಾಜರು.

  ಗರುಡ ಯಾರು? ತಿರುಪತಿ ಬೆಟ್ಟಕ್ಕೆ ಗರುಡಾಚಲ ಹೆಸರು ಏಕೆ?

ಇದನ್ನೆಲ್ಲಾ ಯಾಕೆ ಹೇಳಬೇಕಾಯಿತು ಗೊತ್ತೇ ಇವತ್ತು ನವವೃಂದಾಬನದ ಅವರ ವೃಂದಾವನವನ್ನು ಸಂಪೂರ್ಣ ನಾಶಮಾಡಲಾಗಿದೆ. ಇಡೀ ಹಿಂದೂ ಸಮಾಜದ ಉನ್ನತಿಗೆ ಶ್ರಮಿಸಿದ ಯತಿಯೊಬ್ಬರ ಸಮಾಧಿ ಇವತ್ತು ಉಳಿದಿಲ್ಲ.

ವ್ಯಾಸರಾಜರು ಬರೀ ಮಾಧ್ವರ ಆಸ್ತಿಯಲ್ಲ. ಬ್ರಾಹ್ಮಣರ ಸೊತ್ತಲ್ಲ. ಸಮಗ್ರ ಹಿಂದೂ ಸಮಾಜದ ಯತಿ.

ನೀವು ಇಂದು ವಿಜಯನಗರದ ಬಗ್ಗೆ ಹೆಮ್ಮೆ ಪಡುವ ಭಾರತೀಯರಾಗಿದ್ದರೆ ಅದನ್ನು ಉಳಿಸಿದ ರಾಜಗುರು ವ್ಯಾಸರಾಜರ ಋಣ ನಿಮ್ಮ ಮೇಲಿದೆ.

ನೀವು ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡುತ್ತೀರಾ ಅಥವಾ ಸಂಗೀತದ ಪ್ರೇಮಿಗಳೇ..? ಅದರ ಪಿತಾಮಹರಾಗಿದ್ದ ಪುರಂದರ ದಾಸರ ಗುರುಗಳಾದ ವ್ಯಾಸರಾಜರ ಋಣ ನಿಮ್ಮ ಮೇಲಿದೆ.

  ಉತ್ಥಾನದ್ವಾದಶಿ - ತುಳಸಿ ಹಬ್ಬ ದ ಹಿನ್ನಲೆ ಕಥೆ

ದಿಕ್ಕು ದಿಕ್ಕಿನಲ್ಲಿ ರಾಜರು ಸ್ಥಾಪಿಸಿದ ಮಾರುತಿಯ ಭಕ್ತರೇ ವ್ಯಾಸರಾಜರ ಋಣ ನಿಮ್ಮ ಮೇಲಿದೆ.

ಕನಕ ಜಯಂತಿ ಮಾಡಿ ಜಾತಿರಾಜಕಾರಣ ಮಾಡುವ ಮಹಾನುಭಾವರೇ ಕನಕದಾಸರ ಗುರುಗಳ ಋಣ ನಿಮ್ಮ ಮೇಲಿದೆ.

ತಿರುಪತಿ ವಂಕಟೇಷನನ್ನು ಭಕ್ತಿಯಿಂದ ನೆನೆಯುವ ಕೋಟ್ಯಾಂತರ ಭಕ್ತರೇ ವ್ಯಾಸರಾಜರ ಋಣ ನಿಮ್ಮ ಮೇಲಿದೆ.

ಶ್ರೀ ವ್ಯಾಸರಾಜ ತೀರ್ಥರು ಪ್ರತಿಷ್ಠಾಪಿಸಿರುವ ೭೩೨ ಕ್ಕೂ ಹೆಚ್ಚು ಮುಖ್ಯ ಪ್ರಾಣ ದೇವರು ಆಂಜನೇಯನ ಮೂರ್ತಿಗಳ ಬಗ್ಗೆ ತಿಳಿಯಬೇಕೆಂದರೆ ಈ ಕೆಳಗೆ ನೀಡಿರುವ ಆಂಡ್ರಾಯ್ಡ್ ಅಪ್ ಡೌನ್ಲೋಡ್ ಮಾಡಿಕೊಳ್ಳಿ

  ಗಣೇಶ ಚತುರ್ಥಿ ದಿನ ಚಂದ್ರನ ನೋಡಬೇಕಾ? ನೋಡಬಾರದ?

https://play.google.com/store/apps/details?id=com.kannada.anjaneya

android app playstore vyasaraja

Leave a Reply

Your email address will not be published. Required fields are marked *

Translate »