ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದಾನ ಮಾಡುವವನು ದೊಡ್ಡವರೋ? ಇಲ್ಲಾ ದಾನ ಬೇಡುವವರು ದೊಡ್ಡವರೋ? – ದಶರಥ – ಜನಕ ರಾಜರ ಕಥೆ

ದಶರಥ ಮಹಾರಾಜರು ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ – ಸಪರಿವಾರ ಸಮೇತ,ಅದ್ದೂರಿಯ ಮದುವೆಯ ದಿಬ್ಬಣದದೊಂದಿಗೆ ಜನಕ ಮಹಾರಾಜರ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾರೆ.
ಆಗ ಜನಕ ಮಹಾರಾಜರು ತನ್ನ ಪರಿವಾರದ ಜೊತೆ ಎದುರಿಗೆ ಬಂದು ರಘುರಾಮನ ಮದುವೆ ಮೆರವಣಿಗೆಗೆ ಸ್ವಾಗತಕೋರುತ್ತಾರೆ
.
ದಶರಥ ಮಹಾರಾಜ ತುಂಬಾ ವಿನಮ್ರದಿಂದ ಜನಕ ಮಹಾರಾಜರ ಹತ್ತಿರ ಹೋಗಿ ಅವರ ಪಾದಗಳಿಗೆ ನಮಸ್ಕಾರ ಮಾಡುತ್ತಾರೆ.
ಗಲಿಬಿಲಿಗೊಂಡ ಜನಕನು ದಶರಥ ಮಹಾರಾಜರನ್ನು ಎಬ್ಬಿಸಿ ಅಪ್ಪಿಕೊಂಡು ಆಶ್ಚರ್ಯದಿಂದ “ಮಹಾರಾಜ ನೀವು ದೊಡ್ಡವರು,ಮೇಲಾಗಿ ವರನ ಕಡೆಯವರು,ಹೀಗೆ ನನಗೆ ಪಾದಾಭಿವಂದನೆ ಮಾಡುವದು ಸರಿಯಲ್ಲ.
ಗಂಗೆಯು ಹಿಂದಕ್ಕೆ ಹರಿಯುತ್ತಿರುವವಳೇ? ಎಂಬ ಸಂಶಯ ಮೂಡುತ್ತಿದೆ!”ಎಂದರು.

ಅದಕ್ಕೆ ಮಹಾರಾಜ ದಶರಥ ಮಹಾರಾಜರು ಅದ್ಭುತವಾದ ಉತ್ತರವನ್ನು ಕೊಡುತ್ತಾರೆ.
*”ಜನಕ ರಾಜರೇ ನೀವು ದಾನ ನೀಡುವವವರು.ಇನ್ನೂ ಸ್ವಲ್ಪ ಹೊತ್ತಿಗೆ ಕನ್ಯಾದಾನ ಮಾಡುತ್ತಿರುವವರು.
ನಾನು ಯಾಚಕ.
ನಿಮ್ಮಿಂದ ಮಗನಿಗಾಗಿ ಕನ್ಯೆಯನ್ನು ಬೇಡಲು ಬಂದಿರುವವನು.
ಈಗ ನೀವೇ ಹೇಳಿರಿ, ದಾನ ಮಾಡುವವನು ದೊಡ್ಡವರೋ?
ಇಲ್ಲಾ ದಾನ ಬೇಡುವವರು ದೊಡ್ಡವರೋ!
ನಮ್ಮಿಬ್ಬರಲ್ಲಿ ಶ್ರೇಷ್ಠನಾರೆಂದು ನಿಮಗೆ ಗೊತ್ತು”ಎಂದರು.

  ಕನ್ನಡ ಸಾವಿರ ಗಾದೆಗಳು - Kannada 1000 Proverbs

ದಶರಥ ಮಹಾರಾಜರ ಮಾತು ಕೇಳಿದ ಜನಕನಿಗೆ ಕಣ್ಣೀರು & ಆನಂದಭಾಷ್ಪಗಳು ಒಮ್ಮೆಲೆ ಉಂಟಾದವು.
ಉದ್ವೇಗದಿಂದ ತನ್ನಲ್ಲಿಯೇ ಅಂದುಕೊಳ್ಳುತ್ತಾನೆ
“ಹೌದು ಯಾರ ಮನೆಯಲ್ಲಿ ಮಗಳಿರುತ್ತಾಳೋ ಅವರೇ ಭಾಗ್ಯವಂತರು!”

ಪ್ರತಿ ಮಗಳ ಭಾಗ್ಯದಲ್ಲಿ ಅಥವಾ ಅದೃಷ್ಟದಲ್ಲಿ ತಂದೆ ಇದ್ದೇ ಇರುತ್ತಾನೆ!
ಆದರೆ
ಪ್ರತಿ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!!

ಇದು ಭಾರತೀಯರ ಮನಸ್ಸಿನಲ್ಲಿ ಮಗಳಿಗಿರುವ ಮಹತ್ವ!!! 🙏🏻

ಸನಾತನ ಹಿಂದೂ ಧರ್ಮದಲ್ಲಿ ಹೆಣ್ಣಿನ‌ ಸ್ಥಾನಮಾನ;

ರಾಮನಿಗೆ. ಸೀತೆ
ಕೃಷ್ಣನಿಗೆ➖ರುಕ್ಮಿಣಿ
ಶಿವನಿಗೆ➖ಪಾರ್ವತಿ
ನಾರಾಯಣನಿಗೆ➖ಲಕ್ಷ್ಮೀ

ಮಂತ್ರ ಪಠಣದಲ್ಲಿ➖ಗಾಯತ್ರೀ

ಗ್ರಂಥ ಪಠಣದಲ್ಲಿ➖ಗೀತಾ

ದೇವರೆದುರಿಗೆ. ವಂದನಾ, ಅರ್ಚನಾ, ಪೂಜಾ, ಆರತಿ, ಆರಾಧನಾ..

🔹 ನಮ್ಮ ದಿನಚರಿಯಲ್ಲಿ
ಉದಯಕ್ಕೆ➖ಉಷಾ..
ಸಂಜೆಗೆ ➖ ಸಂಧ್ಯಾ
ರಾತ್ರಿಗೆ➖ನಿಶಾ,
ಬೆಳಕಿಗೆ➖ಜ್ಯೋತಿ, ದೀಪಾ,
ಬೆಳದಿಂಗಳಿಗೆ. ರಜನೀ,
ಸೂರ್ಯಕಿರಣಕ್ಕೆ➖ರಶ್ಮಿ,
ಚಂದಿರನಿಗೆ➖ಶಶಿ, ಶಶಿಕಲಾ,
ಹೆಸರಾಗುವುದಕ್ಕೆ➖ಕೀರ್ತಿ
ಕನಸಿಗೆ➖ಸ್ವಪ್ನಾ
ನೋಟಕ್ಕೆ➖ನಯನಾ,
ಕೇಳುವುದಕ್ಕೆ➖ಶ್ರಾವ್ಯ,
ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣೀ,
ಭೂಮಿಗೆ➖ವಸುಧಾ, ವಸುಂಧರಾ, ಭುವಿ, ಭುವನೇಶ್ವರೀ,
ಹಸು, ಆಕಳಿಗೆ➖ನಂದಿನೀ,
ಜಗತ್ತಿಗೆ➖ಜಗದೀಶ್ವರೀ, ಜಗದಂಬಾ,
ದೇಶಕ್ಕೆ➖ಭಾರತೀ,
ಕನ್ನಡ ನಾಡಿಗೆ➖ಭುವನೇಶ್ವರೀ,
ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ,
ಸಮರ್ಪಣೆಗೆ➖ಅರ್ಪಣಾ
ಆಹಾರಕ್ಕೆ➖ಅನ್ನಪೂರ್ಣಾ,
ನಡೆಯುವುದಕ್ಕೆ➖ಹಂಸಗಮನಾ,
ನಗುವಿಗೆ➖ಸುಹಾಸಿನೀ.
ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ,
ಸುವಾಸನೆಗೆ➖ಚಂದನ, ಪರಿಮಳಾ,
ಒಳ್ಳೆಯ ನುಡಿಗೆ➖ಸುಭಾಷಿಣೀ,
ತೇಜಸ್ಸಿಗೆ➖ತೇಜಸ್ವಿನೀ,
ಚುಕ್ಕಿಗೆ➖ಬಿಂದು, ನಕ್ಷತ್ರ,
ಗೆರೆಗೆ➖ರೇಖಾ, ಶಶಿರೇಖಾ,
ಮುತ್ತಿಗೆ➖ಸ್ವಾತಿ,
ಹರಳಿಗೆ➖ರತ್ನ,
ಮಾದರಿಗೆ➖ಸ್ಫೂರ್ತಿ, ಪ್ರೇರಣಾ,
ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ,
ಕೆಲಸಕ್ಕೆ➖ಕೃತಿ, ಕೃತಿಕಾ,
ಇಷ್ಟಕ್ಕೆ➖ಪ್ರೀತಿ,
ನೀರಿಗೆ➖ಗಂಗಾ,
ಬಂಗಾರಕ್ಕೆ➖ಸುವರ್ಣ, ಕನಕ, ಹೇಮಾ,
ಬೆಳ್ಳಿಗೆ➖ರಜತ, ರಂಜಿತ,
ಚಿತ್ತಾರಕ್ಕೆ➖ಚಿತ್ರ,
ಊಹೆಗೆ➖ಕಲ್ಪನಾ,
ನಿಜ ಸಂಗತಿಗೆ➖ಸತ್ಯವತೀ,
ಶುದ್ಧತೆಗೆ➖ನಿರ್ಮಲಾ, ಪವಿತ್ರಾ,
ಆಲೋಚನೆಗೆ➖ಭಾವನಾ,
ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
ಶಿಕ್ಷಣಕ್ಕೆ➖ವಿದ್ಯಾ,
ಬುದ್ಧಿಗೆ, ಚತುರತೆಗೆ➖ಪ್ರತಿಭಾ,
ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ,
ಕೋಪಕ್ಕೆ➖ಭೈರವಿ, ಕಾಳಿ,
ಧೈರ್ಯಕ್ಕೆ➖ದುರ್ಗೆ,
ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ,
ಹೆಸರಾಗುವುದಕ್ಕೆ➖ಕೀರ್ತಿ,
ಹಾಡಿಗೆ➖ಸಂಗೀತ,
ಗಾಯನಕ್ಕೆ➖ಶೃತಿ, ಪಲ್ಲವಿ, ಕೋಕಿಲ,
ನಾಟ್ಯ➖ಮಯೂರಿ,
ಸಾಹಿತ್ಯ➖ಕವಿತಾ, ಕಾವ್ಯ, ಕವನ, ಪಲ್ಲವಿ.
ನಿಸರ್ಗಕ್ಕೆ➖ಪ್ರಕೃತಿ,
ರಕ್ಷಣೆಗೆ➖ರಕ್ಷಾ, ಸುರಕ್ಷಾ,
ವಿದ್ಯಾಭ್ಯಾಸಕ್ಕೆ➖ವಿದ್ಯಾ,
ಸಂಪಾದನೆಗೆ➖ಲಕ್ಷ್ಮೀ,
ಸ್ಫೂರ್ತಿಗೆ➖ಪ್ರೇರಣಾ,
ಮೌನಕ್ಕೆ➖ಶಾಂತಿ,
ಮಧುರತೆಗೆ➖ಮಾಧುರಿ, ಮಂಜುಳ,
ಕನಿಕರಕ್ಕೆ➖ಕರುಣಾ,
ಆಕ್ರೋಶಕ್ಕೆ➖ಕಾಳಿ ,
ವಾತ್ಸಲ್ಯಕ್ಕೆ➖ಮಮತಾ,
ಆಯುಷ್ಯಕ್ಕೆ➖ಜೀವಿತಾ,
ಮೋಡಗಳಿಗೆ➖ಮೇಘ, ಮೇಘನಾ,
ಚಿಮುಕಿಸುವಿಕೆಗೆ➖ಸಿಂಚನಾ,
ಬಿಳುಪಿಗೆ➖ಶ್ವೇತಾ, ಗೌರೀ,
ಕಪ್ಪಿಗೆ➖ಕೃಷ್ಣೆ,
ವಾಸನೆಗೆ➖ಪರಿಮಳಾ,
ಹೂವಿಗೆ➖ಪುಷ್ಪ, ಸುಮ,, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..
ಬಳ್ಳಿಗೆ➖ಲತಾ,
ಹಾರಕ್ಕೆ➖ಮಾಲಾ, ಮಾಲಿನಿ,
ಶುಭಕರ➖ಮಂಗಳ, ಸುಮಂಗಳ, ಶುಭಾಂಗಿ
ಒಳ್ಳೆಯ ಮನಸ್ಸಿಗೆ➖ಸುಮನ
ಶ್ರೀಮಂತಿಕೆಗೆ➖ಐಶ್ವರ್ಯ, ಸಿರಿ,
ವಿಸ್ತಾರಕ್ಕೆ➖ವಿಶಾಲ, ವೈಶಾಲಿ,
ಜೇನಿಗೆ➖ಮಧು,
ಬಯಕೆಗೆ➖ಆಶಾ, ಅಪೇಕ್ಷಾ,
ತೀರ್ಮಾನಕ್ಕೆ➖ನಿಶ್ಚಿತ,
ಬರಹಕ್ಕೆ➖ಲಿಖಿತ,
ನೆರಳಿಗೆ➖ಛಾಯಾ,
ನಿಧಾನಕ್ಕೆ➖ಮಂದಾಕಿನಿ,
ಹೂ ಗೊಂಚಲಿಗೆ➖ಮಂಜರಿ,
ಕಲೆಗೆ➖ಕಲಾ,
ಗೌರವಕ್ಕೆ➖ಮಾನ್ಯ, ಮಾನ್ಯತಾ,

  ವಿಶ್ವಕರ್ಮ ಯಾರು ? ಅವನ ಸಾಧನೆ ಮತ್ತು ಹಿನ್ನಲೆ

ನದಿಗಳಿಗೆ➖ಗಂಗಾ, ಯಮುನಾ, ಸರಸ್ವತೀ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ,

ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು
ತಾಯಿಯಾಗಿ
ಪ್ರೇಯಸಿಯಾಗಿ
ಮಗಳಾಗಿ
ಸೊಸೆಯಾಗಿ🙏🙏🚩🚩🙏

Leave a Reply

Your email address will not be published. Required fields are marked *

Translate »