🌹ವ್ಯಾಸ ಕೂಟ ದಾಸಕೂಟದ ಹರಿಕಾರ
ಶ್ರೀ ವ್ಯಾಸರಾಯರು
“ಕಿಂತೋತ್ತಮ ಶ್ಲೋಕ ಶಿಖಾಮಣಿನಾಮ್
ಮನೋ ವಿಶುದ್ಧಾ ಚರಿತಾನುವಾದ”
ನಾರಾಯಣ ಪಂಡಿತರ ಉಕ್ತಿ.
ಫಾಲ್ಗುಣ ಮಾಸದಲ್ಲಿ ಪಂಚ ಯತಿಗಳ ಆರಾಧನಾ ಮಹೋತ್ಸವ. ಹೊಸರಿತ್ತಿಯ ಶ್ರೀ ಧೀರೇಂದ್ರತೀರ್ಥ ಶ್ರೀಗಳ ಆರಾಧನೆ ಯಿಂದ ಪ್ರಾರಂಭವಾಗಿ, ರಾತ್ರಿ ಸೂರ್ಯನನ್ನು ತೋರಿಸಿದ ಸವಣೂರಿನ ಶ್ರೀ ಸತ್ಯಬೋಧರು, ನವವೃಂದಾವನ ನಿವಾಸಿ ಹಗಲು ೧೨ ಘo.ಸೂರ್ಯನನ್ನು ಮರೆಮಾಚಿದವರು
ಶ್ರೀ ಸುಧೀಂದ್ರ ತೀರ್ಥರು, ಸೋಂದಾ ಕ್ಷೇತ್ರ ನಿವಾಸಿ ೧೨೦ ವರ್ಷ ಬಾಳಿ ಸಶರೀರ ವೃಂದಾವನ ಪ್ರವೇಶಿಸಿದ ಶ್ರೀ ವಾದಿರಾಜರು ಮತ್ತು
ನವವೃಂದಾವನ ಗಡ್ಡೆ ಯಲ್ಲಿ ವೃಂದಾವನಸ್ಥರಾದ ಮಧ್ವಮತದ ಯತಿತ್ರಯರಲ್ಲಿ
ಒಬ್ಬರಾದ ಚಿಂತಾ ಮಣಿಗಳು ಎಂದೇ ಪ್ರಸಿದ್ಧರಾದ
ಶ್ರೀ ವ್ಯಾಸರಾಜ ತೀರ್ಥ ಶ್ರೀಗಳ ಆರಾಧನೆ.
ಇಂದು ಫಾಲ್ಗುಣ ವದ್ಯ ಚತುರ್ಥಿ ವ್ಯಾಸರಾಜರ ಪರಮ ಪವಿತ್ರವಾದ ಪುಣ್ಯ ದಿವಸ.
ವ್ಯಾಸರಾಜ ಮಠದ ಶ್ರೀ ವಿದ್ಯಾರತ್ನಾಕರ ತೀರ್ಥರು ವ್ಯಾಸರಾಯರ ಪ್ರಮುಖ ಘಟ್ಟಗಳ ದಾಖಲೆಯ ಪ್ರಕಾರ,
ಕ್ರೀ.ಶ. ೧೪೬೦ ರಲ್ಲಿ ಬನ್ನುರಿನಲ್ಲಿ ರಾಮಾಾಚಾರ್ಯ ದಂಪತಿಗಳಲ್ಲಿ ಜನನ.
ಭೂಸ್ಪರ್ಶವಿಲ್ಲದೆ ಚಿನ್ನದ.ಹರಿವಾಣದಲ್ಲಿ ಜನನ. ಮಗುವಿಗೆ ತಾಯಿಯ ಸ್ತನ್ಯ ಪಾನವಿಲ್ಲ. ಹುಟ್ಟಿದ ಮಗುವಿಗೆ ದೇವರ ಅಭಿಷೇಕದ ಹಾಲನ್ನು ಕುಡಿಸಿ ಬೆಳೆಸಿದರು. ಶ್ರೀ
ಬ್ರಹ್ಮಣ್ಯತೀರ್ಥರಿಂದ ಮಗುವಿನ ಪೋಷಣೆ.
೫ ನೆಯ ವಯಸ್ಸಿನಲ್ಲಿ ಉಪನಯನ. ೭ ನೆಯ ವಯಸ್ಸಿನಲ್ಲಿ ಸನ್ಯಾಸ ಆಶ್ರಮ ನೀಡಿ
ವ್ಯಾಸರಾಜ ತೀರ್ಥರು ಎಂದು ನಾಮಕರಣ.
ಹೆಚ್ಚಿನ ವಿದ್ಯಾಭ್ಯಾಸ ಕ್ಕಾಗಿ ಶ್ರೀಪಾದರಾಜರ ಹತ್ತಿರ ೧೨ ವರ್ಷ ವೇದ, ಶಾಸ್ತ್ರ, ನಿಗಮ ದ ಪಾಠ.
ವ್ಯಾಸರಾಯರು ಗುರುಕುಲವಾಸ ಮಾಡುತ್ತಿದ್ದಾಗ ಒಂದು ದಿವಸ ಸರ್ಪ ಅವರ ಕುತ್ತಿಗೆಗೆ ಸುತ್ತಿಕೊಂಡಿತು. ಜ್ಞಾನಿಗಳಾದ ಶ್ರೀಪಾದರಾಜರು ಅದನ್ನು ನೋಡಿ ಸರ್ಪದ ಭಾಷೆಯಲ್ಲಿ ಮಾತನಾಡಿ ಬಿಡಿಸಿದರು. ಶೇಷಾಂಶ ರಾದ ಶ್ರೀ ಪದ್ಮನಾಭ ತೀರ್ಥರೆ ಸರ್ಪದ ರೂಪದಲ್ಲಿ ಬಂದು ಅನುಗ್ರಹಿಸಿದರು. ಶ್ರೀಪಾದರಾಜರು ಶಿಷ್ಯನಾದ ವ್ಯಾಸರಾಜ
ರ ಬಗ್ಗೆ ಮತ್ತಷ್ಟು ಹೆಮ್ಮೆ ಆಯಿತು. ಮಹಾದೈವ ಭಕ್ತ ಎಂದು ಅಭಿಮಾನ ಪಟ್ಟರು. ಅಂದಿನಿಂದ ಶ್ರೀಪಾದರಾಜರ ಪೂಜಾ ಕಾರ್ಯದಲ್ಲಿ ವ್ಯಾಸರಾಜರು ಎಡ ಬಲದ ಸೇವೆ ಮಾಡುತ್ತಿದ್ದರು.
ಶ್ರೀಪಾದರಾಜರು ಇಲ್ಲಿಯ ವರೆಗೆ ತೆಗೆಯದೆ ಇದ್ದ ಸಂಪುಟವನ್ನು ಒಂದು ದಿವಸ ವ್ಯಾಸರಾಯರು ತೆಗೆದು ಸುಂದರವಾದ ಗೋಪಾಲಕೃಷ್ಣನ ವಿಗ್ರಹವನ್ನು ನೋಡಿ ಭಾವಾವೇಶ ದಿoದ ಮೈ ಮರೆತು ಸಾಲಿಗ್ರಾಮ ಗಳನ್ನೇ ತಾಳದಂತೆ ಕುಟ್ಟುತ್ತಾ ನರ್ತನ ಮಾಡುತ್ತಿದ್ದರು. ಅವರ ತಾಳಕ್ಕೆ ತಕ್ಕಂತೆ ಗೋಪಾಲ ಕೃಷ್ಣನೂ ನೃತ್ಯ ಮಾಡುತ್ತಿದ್ದನು.
ಶ್ರೀಪಾದರಾಜರು ಇದನ್ನು ನೋಡಿ ಆಶ್ಚರ್ಯಗೊಂಡರು.
ಶ್ರೀಪಾದರಾಜರನ್ನು ನೋಡಿ ಶ್ರೀ ಕೃಷ್ಣನು ಮತ್ತೆ ಪ್ರತಿಮೆಯಾಗಿ ನಿಂತನು.
ಅವರಿಗೆ ಒಲಿದ ಗೋಪಾಲಕೃಷ್ಣನನ್ನು ವ್ಯಾಸರಾಯರಿಗೆ ಉಡುಗೊರೆಯಾಗಿ ನೀಡಿದರು.
ಬ್ರಹ್ಮಣ್ಯತೀರ್ಥರು ಶ್ರೀ ವ್ಯಾಸರಾಜರನ್ನು ಕ್ರೀ.ಶ ೧೪೭೮ ರಲ್ಲಿ ವಿಧ್ಯುಕ್ತವಾಗಿ ಸರ್ವಜ್ಞ ಪೀಠಕ್ಕೇರಿಸಿದರು. ವ್ಯಾಸರಾಜ ಮಠದ ಅಧಿಪತಿಗಳಾದರು.
ವಿಜಯನಗರದ ೬ ಆಡಳಿತ ದೊರೆಗಳಿಗೆ ರಾಜಗುರುವಾಗಿದ್ದರು.
ಕೃಷ್ಣದೇವರಾಯನಿಗೆ ಬಂದ ಕುಹಯೋಗ ವನ್ನ ರಾಜ್ಯಕ್ಕೆ ಬಂದ ಅಪಾಯವನ್ನು ತಾವು
ಸಿಂಹಾಸನ ಅಲಂಕರಿಸಿ ನಿವಾರಿಸಿದರು.
ವಿಜಯೇಂದ್ರ ತೀರ್ಥರು, ವಾದಿರಾಜರು, ಶ್ರೀನಿವಾಸ ತೀರ್ಥರು ಒಳಗೊಂಡಂತೆ ೨೪ ಅತಿರಥ ಮಹಾರಥಿ ಯತಿಗಳಿಗೆ ವ್ಯಾಸರಾಜರು ವಿದ್ಯಾ ಗುರುಗಳಾಗಿದ್ದರು.
ಅವರು ಸಾಕಷ್ಟು ಗ್ರಂಥಗಳನ್ನು ಸಂಸ್ಕೃತದಲ್ಲಿ ರಚಿಸಿರುವರು.
ಅವುಗಳಲ್ಲಿ ವ್ಯಾಸತ್ರ ಯ ಎಂಬ ಗ್ರಂಥಗಳು
ತಾತ್ಪರ್ಯ ಚಂದ್ರಿಕಾ, ತರ್ಕತಾಂಡವ ಮತ್ತು ನ್ಯಾಯಮೃತ ಎಂಬ ಮೇರುಕೃತಿ ಗಳನ್ನು ನಿರ್ಮಿಸಿದರು. ಚಂದ್ರಿಕಾಚಾರ್ಯರು ಎಂದು ಪ್ರಸಿದ್ಧರಾದರು. ಈ ಮೂರು ಗ್ರಂಥಗಳು ಮಧ್ವಮತದ ಕೋಟೆಗೋಡೆಯನ್ನು ಮತ್ತಷ್ಟು ಸುಭದ್ರಗೊಳಿಸಿದವು.
ತಿರುಪತಿಯ ಶ್ರೀನಿವಾಸನ ಬೆಟ್ಟ ಶಾಲಿಗ್ರಾಮದಂತೆ ಕಂಡರು. ಪಾದ ಊರಲು ಮನಸ್ಸು ಮಾಡಲಿಲ್ಲ. ಮಂಡಿ ಊರಿ ಬೆಟ್ಟ ಏರಿ ಶ್ರೀನಿವಾಸನನ್ನು ಕಂಡರು. ೧೨ ವರ್ಷ ಶ್ರೀನಿವಾಸನನ್ನು ಪೂಜಿಸಿದರು.
ಅವರು ದೇಶಾದ್ಯಂತ ೭೩೨ ಪ್ರಾಣ ದೇವರ ವಿಗ್ರಹ ಪ್ರತಿಷ್ಠಾಪಿಸಿ ಪ್ರಸಿದ್ಧರಾದರು. ಯಂತ್ರೋದ್ಧಾರ ಪ್ರಾಣದೇವರನ್ನು ಪ್ರತಿಷ್ಟಾಪಿಸಿ
“ನಮಾಮಿ ದೂತಮ್
ರಾಮo….. .. ಎಂಬ
ಪ್ರಾಣದೇವರ ಸ್ತೋತ್ರ ರಚಿಸಿದರು.
ಪ್ರಲ್ಹಾದ ರಾಜರೇ ವ್ಯಾಸರಾಜರು ಅವರೇ ಮುಂದೆ ರಾಘವೇಂದ್ರರು. ದಾಸ ರತ್ನರಾದ
ಪುರಂದರದಾಸರು ಕನಕದಾಸರರಿಗೆ ದಾಸ ದೀಕ್ಷೆ ನೀಡಿದ ಗುರುಗಳು.
ಪುರಂದರ ದಾಸರ ಪದ್ಯಗಳನ್ನು ಪುರಂದರ ಉಪನಿಷತ್ತು ಎಂದು ವ್ಯಾಸಪೀಠದಲ್ಲಿ ಇಟ್ಟು ಪೂಜಿಸುತ್ತಿದ್ದರು.
” ಏಸು ಮುನಿಗಳಿದ್ದರೇನು ಮಾಡಿದರಯ್ಯ
ವ್ಯಾಸಮುನಿ ಮಧ್ವಮತವನು ಉದ್ಧರಿಸಿದ”
ಅವರು ಮಾಡಿದ ಮಹತ್ಕಾರ್ಯವನ್ನು ಪುರಂದರ ದಾಸರು ವರ್ಣಿಸಿರುವರು.
ಅದ್ವೈತ ಪಂಡಿತ ಪಕ್ಷಧರ ಮಿಶ್ರ ವ್ಯಾಸರಾಜ ರೊಡನೆ ವಾಕ್ಯಾರ್ಥ್ ಮಾಡಿ ಮೂಕವಿಸ್ಮಿತರಾದರು.
ವ್ಯಾಸರಾಜರನ್ನು ಸ್ಪದ್ಧಪಡಿಸಿದ ಗುರು ಶ್ರೀಪಾದರಾಜರನ್ನು ಭೇಟಿ ಮಾಡಿ ಶಿಷ್ಯನ ವರ್ಣನೆ ಮಾಡಿ ನವೀನ ವ್ಯಾಸ ರೆಂದೂ ಕೆಳಗಿನಂತೆ ವರ್ಣಿಸಿದರು.
“ಯದಧೀತo ತದದೀತo ಯದಾನಧೀತo ತಪಧ್ಯಧೀತo
ಪಕ್ಷಧರ ಮಿಶ್ರೋ ನೈವಾಕ್ಷಿ ವಿನಾ ನವೀನ ವ್ಯಾಸೇನ.” ಎಂದು
ಅವರ ಬಗ್ಗೆ ಶ್ರೀಪಾದರಾಜರನ್ನು ಕಂಡು ವರ್ಣಿಸುತ್ತಾರೆ.
“ನಮಃ ಶ್ರೀಪಾದರಾಜಾಯ
ನಮಸ್ತೆ ವ್ಯಾಸಯೋಗಿನೆ
ನಮಃ ಪುರಂದರಾಯ
ವಿಜಯರಾಜಾಯನ ಮಃ.”
ಕಥಾ ನಾಯಕರಾದ ಶ್ರೀ ವ್ಯಾಸರಾಜರು ಶ್ರೀ ಮಧ್ವ ಮತದ ಸಾರವನ್ನು ಬಹಳ ಸುಂದರವಾಗಿ ನಿರೂಪಿಸಿದ್ದಾರೆ. “ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ ತತ್ವತೋ ಭಿನ್ನಾ ಜೀವಗಣಾ ಹರೇರನುಚರಾ ನೀಚ ಉಚ್ಚ ಭಾವಂಗತಃ ಮುಕ್ತಿರ್ನೈಜ ಸುಖಾನುಭೂತಿಃ ಅಮಲಾ ಭಕ್ತಿಶ್ಚ ತತ್ಸಾಧನಮ್
ವೃಕ್ಷಾದಿ ತೃತೀಯo
ಪ್ರಮಾಣಮಖೀಲo
ಆಮ್ನೇಕ ವೇದ್ಯೋ ಹರಿಃ “
೪೮೦ ವರ್ಷಗಳ ಹಿಂದೆ ಹಂಪಿಯ ನವವೃಂದಾವನ ಗಡ್ಡೆ ಯಲ್ಲಿ ಕ್ರೀ.ಶ.೧೫೪೮ ರಲ್ಲಿ ವೃಂದಾವನಸ್ಥರಾದ ರು.
ಮಹಾಮಹಿಮರು, ಅಪರೋಕ್ಷ ಜ್ಞಾನಿಗಳಾದ ಗುರುಗಳು ನಮ್ಮೆಲ್ಲರನ್ನೂ ಅನುಗ್ರಹಿಸಲಿ.
ಅವರ ಚರಿತಾಮೃತ ಎಂಬ
ಯಥಾಮತಿ ಯಥಾ ಜ್ಞಪ್ತಿ ಒಂದೆರಡು ವಾಕ್ಯಗಳು ಅವರ ಪಾದಾರವಿಂದದಲ್ಲಿ ಸಮರ್ಪಿತ.ನಮ್ಮ ನಮ್ಮ ಯೋಗ್ಯತಾನುಸಾರ ಜ್ಞಾನ ಭಕ್ತಿ ವೈರಾಗ್ಯ ಕರುಣಿಸಲಿ ಎಂದು ಪ್ರಾರ್ಥನೆ. ಯಂತ್ರೋದ್ಧಾರ
ಪ್ರಾಣದೇವರ ಅಂತರ್ಯಾಮಿ ಸೀತಾಪತಿ ಶ್ರೀ ರಾಮದೇವರಲ್ಲಿ ಸಮರ್ಪಿತ.
🙏🙏🌹
ಸುಧೀರ (ನಾರಾಯಣ)
ದೇಸಾಯಿ.




