ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜನ್ಮಾಂತರದ ಕರ್ಮಫಲ ಕಥೆ

ಜನ್ಮಾಂತರದ ಕರ್ಮಫಲದ ಸಂಬಂಧಗಳು :-

ಬಹಳ ಹಿಂದೆ ಧರ್ಮಪಾಲ ಎಂಬ ರಾಜನಿದ್ದನು. ಹೆಸರಿಗೆ ತಕ್ಕಂತೆ ಧರ್ಮಪಾಲನೆಯನ್ನು ಮಾಡುತ್ತಿದ್ದ . ‘ಯಥಾ ರಾಜ ತಥಾ ಪ್ರಜಾ’ ರಾಜನಂತೆ ರಾಜ್ಯವು ಸುಭೀಕ್ಷ ವಾಗಿತ್ತು. ರಾಜನು ಆಸ್ತಿಕನಾಗಿದ್ದನು. ಅರಮನೆಗೆ ಹತ್ತಿರದ ಗುಡ್ಡದಮೇಲೆ ದೇವಸ್ಥಾನವನ್ನು ಕಟ್ಟಿಸುತ್ತಾನೆ. ದೇವರ ಪೂಜೆಗೆಂದು ಒಬ್ಬ ವಿಪ್ರ ನನ್ನು ನೇಮಿಸುತ್ತಾನೆ. ಆ ವಿಪ್ರನು ಒಳ್ಳೆಯವನೂ ಧರ್ಮಾತ್ಮನು ಆಗಿದ್ದನು. ರಾಜನಿಗೆ ಹಾರವನ ಗುಣ ನಡೆಗಳು, ರಾಜನ ಪ್ರಸನ್ನತೆ, ನ್ಯಾಯ ಮಾರ್ಗಗಳ ಕುರಿತು ಬ್ರಾಹ್ಮಣನಿಗೂ ಗೌರವವಿತ್ತು. ಬ್ರಾಹ್ಮಣ ಪೂಜೆಗೆ ಬಂದು ಇಪ್ಪತ್ತು ವರ್ಷ ಕಳೆದು ಹೋಗಿದೆ. ರಾಜನು, ಇದುವರೆಗೂ ಒಂದೇ ಒಂದು ಆದೇಶದ ಮಾತನ್ನು ಅರ್ಚಕನಿಗೆ ಹೇಳುವ ಸಂದರ್ಭ ಬರಲಿಲ್ಲ .

ರಾಜನಿಗೆ ಕೆಲವು ಕಾಲದ ನಂತರ ಪುತ್ರ ಸಂತಾನವಾಗಿ ತುಂಬಾ ಸಂತೋಷ ವಾಯಿತು. ಮಗನಿಗೆ ಗುರುಕುಲದಲ್ಲಿ ಒಳ್ಳೆಯ ಶಿಕ್ಷಣ ಕೊಡಿಸಿದನು. ವಯಸ್ಸಿಗೆ ಬಂದಮೇಲೆ ಸುಂದರ ರಾಜಕುಮಾರಿ ಜೊತೆ ಮದುವೆ ಮಾಡಿದನು. ಮದುವೆ ದಿನ ರಾತ್ರಿ ರಾಜಕುಮಾರಿಗೆ ನಿದ್ದೆ ಬರಲಿಲ್ಲ. ಹೀಗಾಗಿ ರೂಮಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಳು. ಹೀಗೆ ಓಡಾಡುವಾಗ ರಾಜಕುಮಾರ ಮಲಗಿದ ಮಂಚದ ಹತ್ತಿರ ವಜ್ರಖಚಿತವಾದ ಅಪರೂಪದ ಕತ್ತಿಯನ್ನು ನೋಡಿದಳು. ಕೈಯಲ್ಲಿ ತೆಗೆದುಕೊಂಡಳು. ಕಣ್ಣು ಕೋರೈಸುವಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಭಯದಿಂದ ಅವಳ ಕೈ ಜಾರಿ ಬಿದ್ದ ಕತ್ತಿ ರಾಜಕುಮಾರನ ಕುತ್ತಿಗೆ ಕತ್ತರಿಸಿತು. ಪ್ರಾಣ ಹೋಯಿತು. ರಾಜಕುಮಾರಿಗೆ ಬಹಳ ಹೆದರಿಕೆ ಆಯ್ತು. ರಾಜಕುಮಾರನನ್ನು ತಾನು ಕೊಂದಿದ್ದೇನೆ ಎಂದರೆ ತನಗೆ ಕಠಿಣ ಶಿಕ್ಷೆ ಆಗುತ್ತದೆ ಎಂದುಕೊಂಡು ನಡುಗಿದಳು.

ಬೆಳಗಾಯಿತು ಸೇವಕರಿಂದ ವಿಷಯ ತಿಳಿದ ರಾಜನು ಕೊಣೆಗೆ ಬಂದನು.ವಿಚಾರಿಸಿದಾಗ, ಅಪರಿಚಿತರು ರಾಜಕುಮಾರನನ್ನು ಕೊಲೆ ಮಾಡಿ ಗುಡ್ಡದ ಸಮೀಪ ದೇವಸ್ಥಾನದ ಒಳಗೆ ಹೋದಂತೆ ನೋಡಿದೆ ಹೀಗೆ ರಾಜಕುಮಾರಿ ಹೇಳಿದಳು. ರಾಜನ ಆದೇಶದಂತೆ ಸೇವಕರು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಬ್ರಾಹ್ಮಣನು ಒಳಗೆ ದೇವರ ಪೂಜೆ ಮಾಡುತ್ತಿದ್ದನು. ಅವನನ್ನೇ ಹಿಡಿದು ಹೊರಗೆ ತಂದರು. ರಾಜನು ಆ ಬ್ರಾಹ್ಮಣನನ್ನು ವಿಚಾರಿಸಿದಾಗ, ನನಗೇನೂ ತಿಳಿಯದು. ಇಷ್ಟಕ್ಕೂ ನಿಮ್ಮ ಮಗನನ್ನು ಏಕೆ ಕೊಲ್ಲಲಿ? ಎಷ್ಟೋ ವರ್ಷಗಳಿಂದ ನೋಡಿದ್ದೇನೆ ಬ್ರಾಹ್ಮಣ ಕೊಲೆ ಮಾಡಿರುವುದು ಸುಳ್ಳು ಎಂದು ರಾಜನು ಸುಮ್ಮನಾದನು. ಆದರೆ ಪರಿವಾರದವರೆಲ್ಲ ಇಲ್ಲ ಇವನೇ ಕೊಲೆ ಮಾಡಿರುವುದು ಎಂದು ಹೇಳಿದಾಗ, ರಾಜನು ಪರಿಸ್ಥಿತಿಗಳ ಕಾರಣ, ಹೇಳಿದ್ದನ್ನು ನಂಬಿದನು. ಬ್ರಾಹ್ಮಣನ ಮೇಲಿನ ಕರುಣೆಯಿಂದ ಪ್ರಾಣ ತೆಗೆಯದೆ, ಅವನ ಮಗನ ಕುತ್ತಿಗೆಯನ್ನು ಕತ್ತರಿಸಿದ ಬ್ರಾಹ್ಮಣನ ಕೈಯ್ಯನ್ನೆ ಕತ್ತರಿಸುವಂತೆ, ಆದೇಶ ಕೊಟ್ಟನು. ರಾಜನ ಸೇವಕರು, ಬ್ರಾಹ್ಮಣನ ಬಲಗೈ ಹಸ್ತ ಕತ್ತರಿಸಿದರು. ನೋವನ್ನು ತಾಳಲಾರದೆ ಬ್ರಾಹ್ಮಣ ಒದ್ದಾಡಿದನು. ದೇವರೇ ಇಷ್ಟು ವರ್ಷಗಳು ಒಂದೂ ತಪ್ಪು ಮಾಡದೆ ಶ್ರದ್ಧಾ ಭಕ್ತಿಯಿಂದ ನಿನ್ನ ಸೇವೆ ಮಾಡುತ್ತಾ ಬಂದಿದ್ದೇನೆ, ನನಗೇಕೆ ಇಂಥ ಶಿಕ್ಷೆ ಯೋಚಿಸಿ, ಜ್ಯೋತಿಷ್ಯರನ್ನ ಕೇಳಿ ತಿಳಿಯಬೇಕು ಎಂದು ಕೊಂಡನು. ಅಧರ್ಮ ಮಾಡಿದ ರಾಜನ ಕೃತ್ಯದಿಂದ ಬೇಸತ್ತು ಊರನ್ನೇ ಬಿಟ್ಟು ಹೊರಟನು.

  ಸುಂದರಕಾಂಡದಲ್ಲಿ ಹನುಮಂತ ದೇವರ ಒಂದು ಸುಂದರ ಪ್ರಸಂಗ

ಅಪರಾಧ ಮಾಡದಿದ್ದರೂ, ಇಂತಹ ದೊಡ್ಡ ಶಿಕ್ಷೆಯಾಗಲು ಕಾರಣವೇನು ತಿಳಿಯಲು ಒಬ್ಬ ಮಹಾನ್ ಪಂಡಿತನನ್ನು ಹುಡುಕುತ್ತಾ ಹೊರಟನು. ಎಲ್ಲಿಯೂ ಸಿಗದೆ, ಕಾಶಿ ರಾಜ್ಯಕ್ಕೆ ಬಂದನು. ಅಲ್ಲೂಬ್ಬ ಜ್ಯೋತಿಷ್ಯ ಪ್ರಕಾಂಡ ಪಂಡಿತರು ಸಿಕ್ಕಿದರು. ಅವರೊಡನೆ ಮಾತನಾಡಿ ಅವರ ಮನೆಗೆ ಬಂದನು. ಆದರೆ ಪಂಡಿತನು ಮನೆಗೆ ಬರುತ್ತಿದ್ದಂತೆ ಒಳಗಿನಿಂದ ಅವನ ಹೆಂಡತಿ ಬಂದು ಪಂಡಿತನನ್ನು ಬಾಯಿಗೆ ಬಂದಹಾಗೆ ಬೈಯ್ಯುತ್ತಾ ಜಗಳ ಮಾಡುತ್ತಾ ಗಂಡನನ್ನು ತಿರಸ್ಕಾರದಿಂದ ಕಾಣುತ್ತಿದ್ದಳು. ಆದರೂ ಪಂಡಿತನು ಅವಳಿಗೆ ಏನೂ ಹೇಳದೆ ಸುಮ್ಮನಿರುವುದನ್ನು ನೋಡಿ ಬ್ರಾಹ್ಮಣನಿಗೆ ಅರ್ಥವಾಗಲಿಲ್ಲ.

ಪಂಡಿತರು, ಬ್ರಾಹ್ಮಣ ನನ್ನು ಕರೆದು ಕೂರಿಸಿ, ಬ್ರಾಹ್ಮಣ ಶ್ರೇಷ್ಠರೇ ನೀವು ನನ್ನಲ್ಲಿಗೆ ಬಂದ ಕಾರಣವೇನು ಹೇಳಿ ಎಂದರು. ಬ್ರಾಹ್ಮಣನು ನಮಸ್ಕಾರ ಪಂಡಿತರೆ, ನನ್ನ ಸಮಸ್ಯೆಯನ್ನು ನಿಮ್ಮಲ್ಲಿ ಕೇಳಲು ಬಂದಿದ್ದೇನೆ ಆದರೆ ಅದಕ್ಕೂ ಮುನ್ನ ಸಾತ್ವಿಕ ರಾದ ನಿಮ್ಮನ್ನು ನಿಮ್ಮ ಪತ್ನಿ ಹುಡುಕಿ ಹುಡುಕಿ ಬಯ್ಯುತ್ತಾ ಹೀಯಾಳಿಸುತ್ತಾರೆ? ನೀವು ಪ್ರತಿಯಾಗಿ ಏನು ಹೇಳುವುದಿಲ್ಲ ಏಕೆ? ಎಂದಾಗ ಪಂಡಿತರು ಹೇಳಿದರು. ಆಕೆ ಸ್ತ್ರೀ ಯಲ್ಲ, ನನ್ನ ಕರ್ಮ. ನಾವು ಹುಟ್ಟುವಾಗ, ಪತಿ, ಪತ್ನಿ, ಪುತ್ರ, ಪುತ್ರಿ, ಒಡಹುಟ್ಟಿದವರಾಗಿ ನಮ್ಮ ಜೊತೆ ಜೊತೆಯಲ್ಲಿ ರಕ್ತ ಸಂಬಂಧಿಗಳಾಗಿ, ಹುಟ್ಟುತ್ತಾರೆ ಒಳ್ಳೆಯದಕ್ಕೂ ಅವರು ನಮ್ಮ ಜೊತೆ ಹುಟ್ಟಿರಬಹುದು. ಅಥವಾ ಕರ್ಮ ಕಳೆದುಕೊಳ್ಳಲು ಬಂದಿರಬಹುದು. ಇದನ್ನು ಅನುಭವಿಸಬೇಕು. ಇದೇ ನನ್ನ ಭಾಗ್ಯದಲ್ಲಿ ಬರೆದಿತ್ತು ಎಂದರು. ಅದು ಏನು ಎಂದು ಕೇಳಿದಾಗ? ಹಿಂದಿನ ಜನ್ಮದಲ್ಲಿ ನಾನು ಒಂದು ಕಾಗೆ ಆಗಿದ್ದೆ. ನನ್ನ ಪತ್ನಿ ಕತ್ತೆ ಯಾಗಿದ್ದಳು. ಕತ್ತೆಯ ಬೆನ್ನ ಮೇಲೆ ಒಂದು ಗಾಯವಾಗಿ ಅದು ಹುಣ್ಣಾಗಿ ಕತ್ತೆಗೆ ನೋವಾಗುತ್ತಿತ್ತು. ಕಾಗೆ ಯಾಗಿದ್ದ ನಾನು ಆ ಗಾಯದ ಮೇಲೆ ಕುಕ್ಕಿ-ಕುಕ್ಕಿ ಇನ್ನಷ್ಟು ಹಿಂಸೆ ಮಾಡುತ್ತಿದ್ದೆ. ಅದು ನನ್ನನ್ನು ಓಡಿಸಲಾಗದೆ ಮತ್ತಷ್ಟು ಒದ್ದಾಡಿ ಕೂಗುತ್ತಿತ್ತು. ಇದೇ ರೀತಿ ಪ್ರತಿದಿನ ಗಾಯದ ಮೇಲೆ ಕುಕ್ಕಿಕುಕ್ಕಿ ಮತ್ತಷ್ಟು ಗಾಯ ಜಾಸ್ತಿ ಮಾಡಿದೆ. ಒಂದು ದಿನ ಹೀಗೆ ಕುಕ್ಕಿ ನೋವು ಮಾಡುತ್ತಿದ್ದಾಗ ಸಹಿಸದೆ ಗಂಗಾನದಿಗೆ ಇಳಿಯಿತು ನಾನು ಅದರ ಬೆನ್ನ ಮೇಲೆ ಕುಳಿತಿದ್ದೆ. ಆಳಕ್ಕೆ ಹೋಗಿ ಅದರ ಜೊತೆ ನಾನು ಮುಳುಗಿದೆ. ಗಂಗಾ ನದಿಯ ಪುಣ್ಯ ಫಲದಿಂದಾಗಿ, ನಾನು ವೇದ-ಪಾರಂಗತ ಪಂಡಿತನಾದೆ, ಆಕೆ ಬ್ರಾಹ್ಮಣ್ಯ ಜನ್ಮತಾಳಿ ನನ್ನ ಪತ್ನಿಯಾದಳು. ಹಿಂದಿನ ಕರ್ಮಫಲ ಈ ಜನ್ಮದಲ್ಲಿ ಭಾದಿಸುತ್ತಿದೆ. ಇನ್ನು ಕೆಲವೇ ದಿನದಲ್ಲಿ ಕರ್ಮಫಲ ಮುಗಿಯುತ್ತದೆ ಏಕೆಂದರೆ ಇದರಲ್ಲಿ ಯಾರದೂ ತಪ್ಪಿಲ್ಲ. ಕಾಗೆ ಕುಕ್ಕುವುದು ಅದರ ಸ್ವಭಾವ. ಕತ್ತೆಗೆ ಗಾಯವಾಗಿದ್ದು ಸಹಜ. ಇನ್ನು ಕೆಲವು ದಿನ ಸಹಿಸಿಕೊಂಡರೆ ಕರ್ಮಫಲ ಮುಗಿಯುತ್ತದೆ ಎಂದು ಶಾಂತಚಿತ್ತರಾದರು.

  ಯಜ್ಞೋಪವೀತ - ಜನಿವಾರದ ನಿಯಮಗಳು

ನಂತರ ಬ್ರಾಹ್ಮಣ ಶ್ರೇಷ್ಠರೇ, ಈಗ ನಿಮ್ಮ ಸಮಸ್ಯೆ ಹೇಳಿ ಎಂದರು. ಬ್ರಾಹ್ಮಣ ಇದುವರೆಗೂ ನಡೆದ ಸಮಾಚಾರವನ್ನೆಲ್ಲಾ ಹೇಳಿ, ಪಾಪಿಯಾದ ರಾಜನು ಅನ್ಯಾಯವಾಗಿ ನನ್ನ ಕೈಯನ್ನು ಕತ್ತರಿಸಿದ್ದಾರೆ. ಎಂದಾಗ ಬ್ರಾಹ್ಮಣೊತ್ತಮರೆ ನಿಮ್ಮ ಕೈಯನ್ನು ರಾಜ ಕತ್ತರಿಸಿದ್ದು ಅಲ್ಲ ಅದು ನಿಮ್ಮ ಕರ್ಮ ಫಲ ಎಂದು ಪಂಡಿತರು ಹೇಳಿದ್ದನ್ನು ಕೇಳಿದ ಬ್ರಾಹ್ಮಣ, ಇದು ಹೇಗೆ ಎಂದು ಕೇಳಿದನು. ಜ್ಯೋತಿಷಿ ಪಂಡಿತನು, ಬ್ರಾಹ್ಮಣೋತ್ತಮ ನೀವು ಪೂರ್ವಜನ್ಮದಲ್ಲಿ ಒಬ್ಬ ಮಹಾನ್ ತಪಸ್ವಿ ಆಗಿದ್ದೀರಿ. ರಾಜಕುಮಾರಿ ಹಸು ಆಗಿದ್ದಳು. ರಾಜಕುಮಾರ ಕಟುಕ ಆಗಿದ್ದ. ಒಂದು ದಿನ ಹಸುವನ್ನು ಕೊಲ್ಲಲು ಕಟುಕ ಕತ್ತಿಹಿಡಿದು ಬರುತ್ತಿದ್ದ. ಹಸು ತಪ್ಪಿಸಿಕೊಂಡು ನಿಮ್ಮ ಮುಂದೆಯೇ ಹಾದು ಕಾಡಿನೊಳಗೆ ಹೋಯಿತು. ಆಗ ಕಟುಕ ನಿಮ್ಮ ಮುಂದೆ ಬಂದು ಹಸು ಎಲ್ಲಿ ಹೋಯಿತು ಎಂದು ಕೇಳಿದಾಗ ನೀವು ಬಲಗೈ ಎತ್ತಿ ಹಸು ಹೋದ ಜಾಗವನ್ನು ತೋರಿಸಿದಿರಿ ಕಟುಕ ಹಿಂದೆಯೇ ಹೋಗಿ ಹಸವಿನ ಕುತ್ತಿಗೆಯನ್ನು ಕತ್ತರಿಸಿದನು. ಆ ಸಮಯಕ್ಕೆ ಕಾಡಿನ ದೊಡ್ಡ ಸಿಂಹ ಬಂದು ಕಟುಕ ಮತ್ತು ಹಸುವನ್ನು ಕೊಂದು ಹಾಕಿ ತಿಂದಿತು. ಈ ಜನ್ಮದಲ್ಲಿ ಕಟುಕ ರಾಜಕುಮಾರನಾಗಿದ್ದ. ಹಸು ರಾಜಕುಮಾರಿಯಾಗಿದ್ದಳು. ಅವರಿಬ್ಬರು ಕರ್ಮಫಲದಿಂದ ಒಂದು ರಾತ್ರಿಯ ಮಟ್ಟಿಗೆ ಈ ಜನ್ಮದಲ್ಲಿ ಒಂದುಗೂಡಿದ್ದರು. ಹಿಂದಿನ ಕರ್ಮಫಲ ದಂತೆ ರಾಜಕುಮಾರಿಯ ಕೈಜಾರಿ ಖಡ್ಗ ಬಿದ್ದು ರಾಜಕುಮಾರ ಮರಣಹೊಂದಿದ. ನೀವು ಬಲಗೈ ತೋರಿಸಿದ್ದರಿಂದ, ನಿಮ್ಮ ಬಲಗೈ ಕಳೆದುಕೊಂಡಿದ್ದೀರಿ. ಕರ್ಮಫಲಗಳು ಅದರ ಕರ್ತವ್ಯವನ್ನು ಮುಗಿಸಿದೆ. ಇದರಲ್ಲಿ ಯಾರ ತಪ್ಪು ಇಲ್ಲ. ಇನ್ನೂ ಬಾಕಿ ಇರುವ ಅವರವರ ಕರ್ಮಫಲಗಳನ್ನು ಸಕಾರಾತ್ಮಕ ಚಿಂತನೆಯೊಂದಿಗೆ, ಸಂತೋಷದಿಂದ ಕಳೆಯಬೇಕು.ಬೇರೆ ಮಾರ್ಗವಿಲ್ಲ ಎಂದರು.

  ಝೆನ್ ಕಥೆ - ಪ್ರವಾಸಿ ಗೃಹ

ಚಿಂತನೀಯ ಹಿ ವಿಪದಾಂ , ಆದಾವೇವ ಪ್ರತಿಕ್ರಿಯಾ !
ನ ಕೋಪಖನನಮ್ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ!

ವಿಪತ್ತುಗಳಿಗೆ ಪೂರ್ವಭಾವಿಯಾಗಿಯೇ ಸಿದ್ಧತೆಗಳನ್ನು ಚಿಂತಿಸಿ ರಬೇಕು.
ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ಯುಕ್ತವಲ್ಲ.

Leave a Reply

Your email address will not be published. Required fields are marked *

Translate »