ಇದೇ ನಮ್ಮ ಶಾಸ್ತ್ರೀಜಿ ಗುಣ….!!!
🚩🚩🚩
ಶೀರ್ಷಿಕೆ :- ಲಾಲ್ ಬಹದ್ದೂರ್ ಶಾಸ್ತ್ರೀಜಿ. 🙏🌹
ಒಂದು ದಿನ ಶಾಸ್ತ್ರೀಜಿ ಕುಳಿತುಕೊಂಡು ಕಾಫೀ ಕೋಡಿಯುತ್ತಿರುವಾಗ ಒಬ್ಬರು ಅವರ ಮನೆಗೆ ಬರುತ್ತಾರೆ.
ಅವರು ಅವರ ಮನೆಯಲ್ಲಿ ತನ್ನ ಪತ್ನಿಗೆ ಅರೋಗ್ಯ ತೊಂದರೆ ಆಗಿದೆ ಆದ್ದರಿಂದ ನನಗೆ 40 ರೂಪಾಯಿ ಬೇಕಾಗಿದೆ ಆದ್ದರಿಂದ ನೀವು ನನಗೆ ಸಾಲದ ರೂಪದಲ್ಲಿ 40 ರೂಪಾಯಿ ಕೊಡಬೇಕೆಂದು ಕೇಳುತ್ತಾರೆ.
ಆಗ ಅವರು ನನ್ನ ಬಳಿ 40 ರೂಪಾಯಿ ಇಲ್ಲವೆಂದು ತಿಳಿಸುತ್ತಾರೆ.
ಅದರಿಂದ ತುಂಬಾ ಬೇಜಾರಲ್ಲಿ ಅವನು ಕುಳಿತಿರುವಾಗ.
ಶಾಸ್ತ್ರೀಜಿ ಅವರ ಪತ್ನಿ ಬಂದು ಅವರಿಗೂ ಕಾಫೀ ಕೊಟ್ಟು ಸ್ವಲ್ಪ ತಡೆಯಿರಿ ಎಂದು ಹೇಳಿ ಹೋಗುತ್ತಾಳೆ.
ನಂತರ ಅವಳು 40 ರೂಪಾಯಿ ತಂದು ಕೊಡುತ್ತಾಳೆ ಅವರು ಸಂತೋಷ ದಿಂದ ಅಲ್ಲಿಂದಹೊಗುತ್ತಾನೆ.
ಅವನು ಹೋದಮೇಲೆ ಶಾಸ್ತ್ರೀಜಿ ಕೇಳುತ್ತಾರೆ ನಿನ್ನ ಬಳಿ 40 ರೂಪಾಯಿ ಹೇಗೆ ಬಂತು ಎಂದು?
ಆಗ ಅವರ ಪತ್ನಿ ಉತ್ತರಿಸುತ್ತಾಳೆ ನಮಗೆ ತಿಂಗತಿಗೆ ಸರ್ಕಾರದಿಂದ 40 ರೂಪಾಯಿ ಮನೆಯ ಖರ್ಚಿಗೆ ಬರುತ್ತದೆ ಅದರಲ್ಲಿ ನಮಗೆ 30 ರೂಪಾಯಿ ಸಾಕಾಗುತ್ತದೆ ಉಳಿದ 10 ರೂಪಾಯಿ ತೆಗೆದು ಇಟ್ಟಿದೆ ಅದೇ ಈ ಹಣ ಎಂದು ತಿಳಿಸುತ್ತಾರೆ.
ಕೂಡಲೇ ಶಾಸ್ತ್ರೀಜಿ ಸರ್ಕಾರಕ್ಕೆ ಕಾಗದ ಬರೆಯುತ್ತಾರೆ ನೀವು ನಮಗೆ ತಿಂಗಳಿಗೆ 40 ರೂಪಾಯಿ ಮನೆ ಖರ್ಚಿಗೆ ಕೊಡುತ್ತಿದ್ದೀರಾ ಆದರೆ ನಮಗೆ ಕೇವಲ 30 ರೂಪಾಯಿ ಮಾತ್ರ ಸಾಕಾಗುತ್ತದೆ ಆದ್ದರಿಂದ ಇನ್ನು ಮುಂದೆ ನಮಗೆ ನೀವು 40 ರೂಪಾಯಿ ಬದಲಿಗೆ 30 ರೂಪಾಯಿ ಕೊಡಬೇಕಾಗಿ ವಿನಂತಿ ಎಂದು ಪತ್ರ ಬರೆಯುತ್ತಾರೆ.
ಇದೇ ನಮ್ಮ ಶಾಸ್ತ್ರೀಜಿ ಗುಣ.
ಬಿ. ಜಿ. ಚಂದ್ರಯ್ಯ.
⛳ ” ಧೈರ್ಯದಿಂದ ಮುಂದೆ ಸಾಗು ನಾಡಸೇವೆಗೆ…. ಸ್ಥೈರ್ಯದಿಂದ ಮುಂದೆ ಸಾಗು ಕಾರ್ಯಕ್ಷೇತ್ರಕ್ಕೆ“ ⛳
ಸುಪರ್ ಆಗಿದೆ