ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಣಪತಿ ಭಾಲಚಂದ್ರ ಸಂಕಷ್ಟ ಚತುರ್ಥಿ ಪುರಾಣ ಕಥೆ – ಪೂಜಾ ವಿಧಾನ

ಭಾಲಚಂದ್ರ ಸಂಕಷ್ಟ ಚತುರ್ಥಿ ಬಗ್ಗೆ ಮಾಹಿತಿ..!

ಭಾಲ- ಎಂದರೆ ಹಣೆ.
ಹಣೆಯಲ್ಲಿ ಅಥವಾ ತಲೆಯಲ್ಲಿ ಯಾರು ಚಂದ್ರನನ್ನು ಹೊಂದಿದ್ದಾರೋ ಅವರನ್ನು ಭಾಲಚಂದ್ರ ಎಂದು ಕರೆಯುತ್ತಾರೆ.

ತಲೆಯಲ್ಲಿ ಚಂದ್ರನನ್ನು ಧರಿಸಿದವನು ಶಿವ.
ಗಣಪತಿಗೆ ಶಿವನು ಚಂದ್ರನನ್ನೇ ಭೂಷಣವನ್ನಾಗಿ ಮಾಡಿದನೆಂದೂ ಆ ಕಾರಣಕ್ಕೇ ಗಣಪತಿಗೆ ಭಾಲಚಂದ್ರ ಎಂಬ ಹೆಸರು ಬಂದಿತೆಂದೂ ಪ್ರಸಿದ್ಧವಾಗಿದೆ.

ಅಲ್ಲದೇ ಆತ್ಮಾ ವೈ ಪುತ್ರನಾಮಾಸಿ ಎಂಬಂತೆ ತಂದೆಯೇ ಮಗನ ರೂಪದಲ್ಲಿ ಪುನಃ ಜನಿಸುತ್ತಾನೆ ಎಂಬ ವಾಕ್ಯದಂತೆಯೂ ಗಣೇಶನು ಶಿವಸ್ವರೂಪವೇ ಆಗಿದ್ದಾನೆ. ಹಾಗಾಗಿ ಚಂದ್ರಚೂಡನೆಂದೂ ಅವನನ್ನು ಕರೆಯಬಹುದು. ಹೀಗೆ ಭಾಲಚಂದ್ರನೆಂಬ ಹೆಸರು ಪ್ರಸಿದ್ಧವಾಗಿದೆ.

ಭಾಲಚಂದ್ರ ಸಂಕಷ್ಟ ಚತುರ್ಥಿಯ ವಿಷಯ.

ಒಂದು ಕಾಲದಲ್ಲಿ ಒಬ್ಬ ಲೇವಾದೇವಿಗಾರನು ತನ್ನ ಹೆಂಡತಿಯೊಂದಿಗೆ ನಗರದಲ್ಲಿ ವಾಸಿಸುತ್ತಿದ್ದನು. ಅವರಿಗೆ ಮಕ್ಕಳಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು. ಒಂದು ದಿನ ಲೇವಾದೇವಿಗಾರನ ಹೆಂಡತಿಗೆ ನೆರೆ ಮನೆಯ ಮಹಿಳೆ ಸಂಕಷ್ಟ ಚತುರ್ಥಿಯನ್ನು ಪೂಜಿಸುವಂತೆ ತಿಳಿಸುತ್ತಾಳೆ. ಗಣೇಶನ ಕಥೆ ಕೇಳಿದ ಆಕೆ ಮನೆಗೆ ಬಂದು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜೆ ಮಾಡಿ ಮುಂದಿನ ಚತುರ್ಥಿಯಂದು ಉಪವಾಸ ಮಾಡುತ್ತಾಳೆ. ಗಣೇಶನ ಆಶೀರ್ವಾದದಿಂದ ಲೇವಾದೇವಿ ದಂಪತಿಗೆ ಗಂಡು ಮಗುವಾಯಿತು. ಲೇವಾದೇವಿಗಾರನ ಮಗ ಬೆಳೆದನು.

ಗಣೇಶನ ಮರೆತ ದಂಪತಿ

ಆಗ ಉಪವಾಸ ವ್ರತ ಮಾಡಿ ಗಣೇಶನಿಗೆ ಪ್ರಸಾದ ನೀಡಬೇಕು ಎಂದು ನಿರ್ಧರಿಸಿದಳು. ಆದರೆ, ಮಗ ಮದುವೆ ವಯಸ್ಸಿಗೆ ಬಂದಿದ್ದಾನೆ. ಮದುವೆ ಆದ ಬಳಿಕ ಈ ವ್ರತ ಮಾಡೋಣ ಎಂದು ದಂಪತಿ ಸುಮ್ಮನಾದರೂ. ಇಷ್ಟು ವರ್ಷಗಳ ಕಾಲ ಒಂದಲ್ಲ ಒಂದು ನೆಪ ಹೇಳಿ ಪೊಜೆಯನ್ನು ಮುಂದೂಡುತ್ತಿದ್ದ ಲೇವಾದೇವಿಗಾರ ದಂಪತಿ ವಿರುದ್ಧ ಗಣೇಶ ಕೋಪಗೊಳ್ಳುತ್ತಾನೆ. ಈ ವೇಳೆ ಮದುವೆಗೆ ಇನ್ನೇನು ದಿನ ಬಾಕಿ ಇದೆ ಎಂದಾಗ ಗಣೇಶ ಲೇವಾದೇವಿಗಾರನ ಮಗನನ್ನು ಅರಳಿ ಮರದಲ್ಲಿ ಬಂಧಿಯಾಗಿ ಇಡುತ್ತಾನೆ

  ಕಷ್ಟಗಳನ್ನು ದೂರಾಗಿಸುವ ಗುರುವಾರದ ಪರಿಹಾರ

ಕಡೆಗೂ ಪ್ರಸನ್ನನಾದ ವಿಘ್ನ ವಿನಾಶಕ

ಮಗ ಕಾಣದಾದಾಗ ಇಬ್ಬರು ಹುಡುಕುತ್ತಾರೆ. ಆದರೆ, ಆತನ ಸುಳಿವು ಮಾತ್ರ ಸಿಗುವುದಿಲ್ಲ. ಈ ವೇಳೆ ಮಗನ ಧ್ವನಿ ಅರಳಿಮರದಿಂದ ಬರುತ್ತಿರುವುದು ಕೇಳುತ್ತದೆ. ಆಗ ಮಗ ಯಾವ ಉದ್ದೇಶಕ್ಕಾಗಿ ಅರಳಿ ಮರದಲ್ಲಿ ಬಂಧಿಯಾಗಿದ್ದಾನೆ ಎಂಬುದು ತಿಳಿಯುತ್ತದೆ. ತಪ್ಪಿನ ಅರಿವಾದ ಲೇವಾದೇವಿಗಾರ ದಂಪತಿಗಳು ಸಂಕಷ್ಟ ಚತುರ್ಥಿಯ ದಿನ ವಿಧಿವತ್ತಾಗಿ ಪೂಜೆ ಆಚರಿಸಿ ಕಥೆ ಕೇಳಿ ಗಣೇಶನಿಗೆ ಪ್ರಸಾದ ಅರ್ಪಿಸುತ್ತಾರೆ. ಇದರಿಂದ ಸಂತಸ ಗೊಂಡ ಗಣೇಶ ಮಗನನ್ನು ಬಿಟ್ಟು ಕಳಿಸುತ್ತಾನೆ ಎಂಬ ವಿಷಯದ ವಿಚಾರ ರೂಡಿಯಲ್ಲಿದೆ.

ಪೂಜಾ ವಿಧಾನ

ಬೆಳಗ್ಗೆ ಬೇಗ ಎದ್ದು ಗಣೇಶನಿಗೆ ಪೂಜಿಸಬೇಕು. ಇಡೀ ದಿನ ಉಪವಾಸವನ್ನು ಆಚರಿಸಿ ಏಕೆಂದರೆ ಹೀಗೆ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ದಿನದಲ್ಲಿ ಯಾವುದೇ ರೂಪದಲ್ಲಿ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಸೇವಿಸ ಬಾರದು

  ಪ್ರಜಾಕೀಯ WhatsApp ಸಂಪರ್ಕ ವಿವರ

ಸಂಜೆ ಗಣಪತಿಯನ್ನು ಗರಿಕೆ, ಹೂವುಗಳು, ಧೂಪದ್ರವ್ಯಗಳನ್ನು ಅರ್ಪಿಸಿ, ಮಂಗಳಾರತಿ ಮಾಡಬೇಕು.

ಸಂಪೂರ್ಣ ಪೂಜಾ ವಿಧಾನವನ್ನು ಅನುಸರಿಸಿ ಗಣೇಶ ಮಂತ್ರಗಳನ್ನು ಪಠಿಸಿ.

ಗಣಪತಿ ಮೋದಕ ಮತ್ತು ಲಡ್ಡುಗಳನ್ನು ನೈವೇದ್ಯ ಮಾಡಿ.

ಚಂದ್ರೋದಯದ ನಂತರ ಉಪವಾಸವನ್ನು ಮುರಿಯಿರಿ. ಚಂದ್ರ ದರ್ಶನವು ತುಂಬಾ ಶುಭಕರ. ಆದ್ದರಿಂದ, ಚಂದ್ರನು ಗೋಚರಿಸಿದಾಗ, ಅರ್ಘ್ಯವನ್ನು ಅರ್ಪಿಸಿ

ಗಣಪತಿಯ ಉಪಾಸನೆ ಬಹು ಫಲಪ್ರದವಾದದ್ದೆಂದು ನಂಬಿಕೆ. ಹೀಗೆ ಉಪಾಸನೆ ಮಾಡಿ ಔನ್ನತ್ಯವನ್ನು ಕಂಡವರ ಕಥೆಗಳೂ ಅಸಂಖ್ಯವಾಗಿ ಪುರಾಣಗಳಲ್ಲಿವೆ. ಹೀಗೆ ಬಹುವಿಧವಾದ ನಾಮರೂಪಗಳನ್ನಾಂತು ಪೂಜಿತನಾಗಿ ಲೋಕಕಲ್ಯಾಣಕಾರಕನಾದ ಗಣಪತಿಯು ಚೌತಿಯಂದು ಎಲ್ಲರಿಗೂ ಸುಖಶಾಂತಿಗಳನ್ನೀಯಲಿ.

ಈ ದಿನದಂದು ಗಣೇಶನನ್ನು ಬಾಲಚಂದ್ರ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ. ಈ ಚತುರ್ಥಿಯಲ್ಲಿ ಚಂದ್ರನ ದರ್ಶನ ಮಾಡುವುದರಿಂದ ಗಣೇಶನ ದರ್ಶನ ಮಾಡಿದ ಪುಣ್ಯ ಫಲ ಸಿಗುತ್ತದೆ

ನಾರದ ಪುರಾಣದ ಪ್ರಕಾರ, ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ.
ಮನೆ ಮತ್ತು ಕುಟುಂಬದಲ್ಲಿನ ಅಡೆತಡೆಗಳಿಂದ ಮುಕ್ತಿ ಪಡೆಯಬಹುದು. ಜೊತೆಗೆ ಬಾಕಿ ಉಳಿದಿರುವ ಶುಭ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ದಿನದಂದು ಗಣೇಶನನ್ನು ಬಾಲಚಂದ್ರ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ.

ಈ ಚತುರ್ಥಿಯಲ್ಲಿ ಚಂದ್ರನ ದರ್ಶನ ಮಾಡುವುದರಿಂದ ಗಣೇಶನ ದರ್ಶನ ಮಾಡಿದ ಪುಣ್ಯ ಫಲ ಸಿಗುತ್ತದೆ. ಈ ದಿನ, ಮಹಿಳೆಯರು ತಮ್ಮ ಮಕ್ಕಳ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಉಪವಾಸವನ್ನು ಆಚರಿಸುತ್ತಾರೆ. ಜೊತೆಗೆ ಗಣೇಶನ ಕಥೆಗಳನ್ನು ಕೇಳುವುದರಿಂದ ಪುಣ್ಯ ಫಲ ಸಿಗಲಿದೆ ಎಂಬ ನಂಬಿಕೆ ಇದೆ.

  ಏಕಾದಶಿ ಎಂದರೇನು ? ಯಾರು ಆಚರಿಸಬೇಕು?

ಪೂಜೆಯ ಸಮಯದಲ್ಲಿ ಗಣಪತಿಗೆ ಮರೆತು ಕೂಡ ತುಳಸಿ ಎಲೆಗಳನ್ನು ಅರ್ಪಿಸಬೇಡಿ.
ಶಾಸ್ತ್ರದ ಪ್ರಕಾರ, ಗಣೇಶ ತುಳಸಿಗೆ ಶಪಿಸಿದರು. ಈ ವೇಳೆ ಗಣೇಶ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಲು ನಿರಾಕರಿಸಿದರು.

ಗಣೇಶನ ವ್ರತದ ದಿನದಂದು ಚಂದ್ರನನ್ನು ನೋಡಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದನ್ನು ಮರೆಯಬೇಡಿ. ಈ ದಿನ, ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರವೇ ಉಪವಾಸವನ್ನು ಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ವಿನಾಯಕ ಚತುರ್ಥಿಯ ದಿನದಂದು ಚಂದ್ರನನ್ನು ನೋಡಬಾರದು ಎಂಬ ಪ್ರತೀತಿ ಇದೆ.
ಪೂಜೆಯ ಸಮಯದಲ್ಲಿ ಹಾಲು ಮತ್ತು ಅಕ್ಷತೆಯನ್ನು ನೀರಿನಲ್ಲಿ ಬೆರೆಸಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದರಿಂದ ಪೂಜೆ ಸಂಪನ್ನ ಆಗುತ್ತದೆ.

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Leave a Reply

Your email address will not be published. Required fields are marked *

Translate »