ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪಂಚಮುಖಿ ಆಂಜನೇಯ ಸ್ವಾಮಿ ಹಿನ್ನಲೆ ಕಥೆ

ಪಂಚಮುಖಿ ಮಾರುತಿ…

ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ರಾವಣ ಇವರ ನಡುವೆ ಯುದ್ಧವಾಯಿತು. ಆಗ ನಿರ್ಮಾಣವಾಗಿದ್ದ ರಾಕ್ಷಸರು ಪಾತಾಳದಿಂದ ಸೂಕ್ಷ್ಮದಿಂದ ಬಂದಿದ್ದಾರೆ. ಅದರಿಂದಾಗಿ ಈ ಗಲಭೆಗಳು ಆದವು. ತ್ರೇತಾಯುಗದಲ್ಲಿ ಶ್ರೀರಾಮ-ರಾವಣನ ಯುದ್ಧದ ಸಮಯದಲ್ಲಿ ಅಹಿರಾವಣ ಮತ್ತು ಮಹಿರಾವಣ ಇವರಿಬ್ಬರು ರಾಕ್ಷಸರು ಪಾತಾಳದಿಂದ ನಿರ್ಮಾಣವಾದರು. ಆಗ ಮಾರುತಿರಾಯನು ಅವರನ್ನು ಕೊಂದನು. ಅದರಿಂದ ಮಾರುತಿರಾಯನು ರಾಕ್ಷಸರ ಉದ್ಧಾರವನ್ನೇ ಮಾಡಿದನು. ನಂತರ ಪಾತಾಳದಲ್ಲಿ ಆ ರಾಕ್ಷಸರಿಗಿಂತ ಭಯಂಕರ ದೊಡ್ಡ ರಾಕ್ಷಸರು ನಿರ್ಮಾಣವಾದರು. ಈ ರಾಕ್ಷಸರು ಮಾರುತಿರಾಯನಿಂದ ಸಾಯುತ್ತಿರಲಿಲ್ಲ. ಅವರನ್ನು ನಾಶಮಾಡಲು ಮಾರುತಿರಾಯನು ಪಂಚಮುಖಿ ಹನುಮಾನನ ಅವತಾರವನ್ನು ತೆಗೆದುಕೊಂಡನು. (ಪ.ಪೂ.ಶ್ರೀಧರಸ್ವಾಮಿಯವರು ಇದರ ಹಿನ್ನೆಲೆಯಲ್ಲಿನ ಕಥೆಯನ್ನು ಪ.ಪೂ. ಭಗವಾನದಾಸ ಮಹಾರಾಜರಿಗೆ ಹೇಳಿದರು.) ಮಹಿರಾವಣನನ್ನು ವಧಿಸಲು ಮಾರುತಿ ಪಾತಾಳಕ್ಕೆ ಹೋದನು. ಅಲ್ಲಿನ ಐದು ದೀಪಗಳನ್ನು (ಐದು ರಾಕ್ಷಸರ) ಒಂದೇ ಸಮಯದಲ್ಲಿ ವಿನಾಶ ಮಾಡದೇ (ಅಂದರೆ ಆ ಐದು ದೀಪಗಳನ್ನು ಆರಿಸದೆ) ಮಹಿರಾವಣನ ಮರಣವಿಲ್ಲವೆಂದು ಹನುಮಂತನಿಗೆ ಅರಿವಾಯಿತು. ಅದರಿಂದಾಗಿ ಆ ಐದು ದೀಪಗಳನ್ನು ಒಂದೇ ಸಮಯದಲ್ಲಿ ನಾಶ ಮಾಡದೇ ಪರ್ಯಾಯವಿರಲಿಲ್ಲ. ಆ ಐದು ರಾಕ್ಷಸರನ್ನು ಒಂದೇ ಸಮಯದಲ್ಲಿ ಕೊಲ್ಲಲು ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದನು.

  ಗರುಡ ಅಷ್ಟೋತ್ತರ ಶತನಾಮ ಸ್ತೋತ್ರಂ

ಮಾರುತಿಯ ಪಂಚಮುಖಗಳು ಮತ್ತು ಅವುಗಳ ಕಾರ್ಯ…

ಮಾರುತಿಯ ಐದು ಮುಖಗಳು ಬೇರೆ ಬೇರೆ ಶಕ್ತಿ ಮತ್ತು ಸಾಮರ್ಥ್ಯಗಳ ಪ್ರತೀಕಗಳಾಗಿವೆ. ಈ ಐದು ಮುಖಗಳು ಮತ್ತು ಅವುಗಳ ಕಾರ್ಯಗಳು ಮುಂದಿನಂತಿವೆ.

ಹನುಮಂತ : ಇವನ ಮುಖವು ಪೂರ್ವದೆಡೆಗೆ ಇರುತ್ತದೆ. ಮನಸ್ಸಿನಲ್ಲಿ ಸಾತ್ತ್ವಿಕತೆ ಮತ್ತು ಪವಿತ್ರತೆಯನ್ನು ನಿರ್ಮಿಸುವುದರೊಂದಿಗೆ ಯಶಸ್ಸನ್ನು ನೀಡುವುದೇ ಈ ಮುಖದ ಕಾರ್ಯವಾಗಿದೆ.

ನರಸಿಂಹ : ಈ ಮುಖವು ದಕ್ಷಿಣದತ್ತ ಇದ್ದು ನಿರ್ಭಯತೆ ಮತ್ತು ಸಂಕಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ ಸಂಬಂಧಬಾಧೆ ಮತ್ತು ಶತ್ರು ಇವುಗಳ ನಿವಾರಣೆ ಮಾಡುವುದು, ಈ ಮುಖದ ಕಾರ್ಯವಾಗಿದೆ.

  ಬಳೆಗಳನ್ನು ಧರಿಸುವ ಮಹತ್ವ - ವೈಜ್ಞಾನಿಕ ಹಿನ್ನೆಲೆ

ಗರುಡ : ಇದು ಪಶ್ಚಿಮದಿಕ್ಕಿಗಿದ್ದು ಜಾದುಮಾಟ, ಮಂತ್ರ-ತಂತ್ರ, ಪಿಶಾಚಬಾಧೆ, ಭೂತಬಾಧೆ, ವಿಷಬಾಧೆ ಇವುಗಳಿಂದ ಸಂರಕ್ಷಣೆ ಮಾಡುತ್ತದೆ. ಕೋಟಿ ಸೂರ್ಯಗಳ ತೇಜದಂತೆ ಈ ಮುಖದ ತೇಜವಿದೆ.

ವರಾಹ : ಇದು ಉತ್ತರದಿಕ್ಕಿನಲ್ಲಿದ್ದು ಇದರ ಕಾರ್ಯವು ಮುಖ್ಯವಾಗಿ ಪ್ರಗತಿ, ಧನಸಂಪತ್ತು ಮತ್ತು ಸುಖೋಪಭೋಗವನ್ನು ನೀಡುವುದು, ಪುತ್ರಪೌತ್ರಾದಿಗಳ ವೃದ್ಧಿ ಮಾಡುವುದಿರುತ್ತದೆ. ಲಕ್ಷ್ಮಣನಿಗೆ ಶಕ್ತಿ ಬೇಕಾಗಿದ್ದಾಗ ಈ ಮುಖವು ಅವನಿಗೆ ಜೀವನದಾನ ನೀಡಿತು ಮತ್ತು ಲಂಕೆಯನ್ನು ದಹಿಸಿತ್ತು.

ಹಯಗ್ರೀವ : ಈ ಮುಖವು ಆಕಾಶದೆಡೆಗೆ ಇರುತ್ತದೆ. ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿರುವ ಈ ಮುಖವು ಹನುಮಾನನ ಮುಖದ ಮೇಲಿನ ಬದಿಗೆ ತೋರಿಸಲಾಗಿದೆ. ಈ ಮುಖದ ಸಂಬಂಧವು ಜ್ಞಾನ ಮತ್ತು ಸಂತತಿ ಈ ಎರಡು ಸಂಗತಿಗಳೊಂದಿಗೆ ಬರುತ್ತದೆ.

  ಜಾಂಬವಂತ ದೇವಸ್ಥಾನ

ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ, ಪಂಚಮುಖಿ ಮಾರುತಿಯ ಪಾದದ ಕೆಳಗಡೆಯಲ್ಲಿರುವ ರಾಕ್ಷಸನಾಗಿದ್ದಾನೆ. ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವಪೂರ್ಣ ಸಾಧನವಾಗಿದೆ.

Leave a Reply

Your email address will not be published. Required fields are marked *

Translate »