ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ಜಗದ್ಗುರು ಮೌನೇಶ್ವರ ಇತಿಹಾಸ ವಿವರ

ಶ್ರೀ ಜಗದ್ಗುರು ಮೌನೇಶ್ವರ ಇತಿಹಾಸ ವಿವರ
ಕ್ಷೇತ್ರದ ಮಾಹಿತಿ : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸುಕ್ಷೇತ್ರ ತಿಂಥಣಿ ಗ್ರಾಮ.
– ಯಾದಗಿರಿ ಜಿಲ್ಲೆಯಿಂದ 70 ಕಿಲೋಮೀಟರ್ ದೂರ.
– ಸುರಪುರ ತಾಲೂಕಿನಿಂದ 20 ಕಿಲೋಮೀಟರು ದೂರ.
– ಗುಲ್ಬರ್ಗದಿಂದ 125 ಕಿ ಮೀ ದೂರ.
– ಬಸವಸಾಗರ ನಾರಾಯಣಪುರ ಡ್ಯಾಮಿನಿಂದ 57 ಕಿ ಮೀ ದೂರ.

ಕಾಲ, ಜನ್ಮಸ್ಥಳ ಮತ್ತು ಸಮಾಜ

  • ಶ್ರೀ ಮೌನೇಶ್ವರ ಕಾಲಾವಧಿ 16ನೇ ಶತಮಾನ.
    • ಜನ್ಮಸ್ಥಳ.. ಸುರಪುರ ತಾಲೂಕಿನ ದೇವರ ಗೋನಾಳ ಗ್ರಾಮ.
    • ತಂದೆ ಹೆಸರು ಶೇಷಾಚಾರ್ಯ, ತಾಯಿಯ ಹೆಸರು ಶೇಷಮ್ಮ. ವಿಶ್ವಕರ್ಮ ಸಮಾಜದ ಆಚಾರವಂತ ಮನೆತನ.
      ಸಂಚಾರ..
      ಶ್ರೀ ಜಗದ್ಗುರು ಮೌನೇಶ್ವರ ಹಿಂದೂ-ಮುಸ್ಲಿಂ ಸಮನ್ವಯದ ಭಾವೈಕ್ಯತೆ ಹರಿಕಾರರಾಗಿ ಸಾವಿರಾರು ವಚನಗಳನ್ನು ಹಾಗೂ ನೂರಾರು ಭವಿಷ್ಯವಾಣಿಗಳನ್ನು ಬರೆದಿದ್ದಾರೆ. ಇವರು ಆಂಧ್ರಪ್ರದೇಶದ ತಿರುಪತಿ ಹಾಗೂ ರಾಚೋಟಿ ಯಲ್ಲಿ ಪವಾಡಗಳನ್ನು ಮಾಡಿದ್ದಾರೆ. ಹಾಗೂ ಮಹಾರಾಷ್ಟ್ರದಲ್ಲಿ ಪವಾಡಗಳನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ಕಾಶಿಯಲ್ಲಿ,
      ಕರ್ನಾಟಕ ರಾಜ್ಯದಲ್ಲಿ ಗದಗ್, ಲಕ್ಷ್ಮೇಶ್ವರ, ಶಿರಹಟ್ಟಿ, ವರವಿ, ಛಬ್ಬಿ, ಲಿಂಗನಬಂಡಿ, ವಿಜಯಪುರ, ದೇವದುರ್ಗ, ಗುರುಗುಂಟ, ಗುಲ್ಬರ್ಗ, ಸುರಪುರ ಹೀಗೆ ಹಲವಾರು ಪ್ರದೇಶಗಳಲ್ಲಿ ಸಂಚಾರ ಮಾಡಿ ವಚನಗಳ ಮೂಲಕ ಸಾಮಾಜದಲ್ಲಿರುವ ದ್ವೇಶ, ಅಸೂಯೆ, ಮೇಲು ಕೀಳು,ಬೇದಭಾವ, ಜಾತಿ-ಮತ-ಪಂಥಗಳನ್ನು ಹೋಗಲಾಡಿಸಿ ಎಲ್ಲಾ ಜಾತಿಗಳು ಎಲ್ಲಾ ಮತಗಳು ಎಲ್ಲ ಧರ್ಮಗಳು ಮಾನವನ ಏಳಿಗೆಗಾಗಿವೆ ಎಂದು ತಮ್ಮ ವಚನಗಳ ಮೂಲಕ ಸಾರಿ ಹೇಳಿದ್ದಾರೆ.
      ಶ್ರೀ ಮೌನೇಶ್ವರ ಚರಿತ್ರೆ ವಿವರ
      ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ವಾಸವಿರುವ ವಿಶ್ವಕರ್ಮ ಸಮಾಜದ ಆಚಾರವಂತರಾದ ಶೇಷಾಚಾರ್ಯ, ಶೇಷಮ್ಮನವರಿಗೆ ಮಕ್ಕಳಾಗದ ಪ್ರಯುಕ್ತ ಏಕದಂಡಿಗಿ ಮಠದ ಪೂಜ್ಯ ಶ್ರೀ ಗುರುನಾಥೇಂದ್ರ ಮಹಾಸ್ವಾಮಿಗಳು ಹೇಳಿರುವ ವೃತದಂತೆ ಆದಿ ಲಿಂಗೇಶ್ವರರಲ್ಲಿ ದಿನಾಲು ನಸುಕಿನಲ್ಲಿ ಪೂಜಾ ಮಾಡಿ ಅರಿಕೆಯನ್ನು ಸಲ್ಲಿಸುತ್ತಾರೆ ಇದೇ ರೀತಿಯಾಗಿ 12 ವರ್ಷಗಳು ಆಯಿತು, ಆದರೂ ಅವರಿಗೆ ಮಕ್ಕಳ ಭಾಗ್ಯ ಸಿಗಲಿಲ್ಲ ಕೊನೆಗೆ ಶೇಷಮ್ಮಳು ಆದಿಲಿಂಗೇಶ್ವರನ ಕೃಪೆ ನಮಗೆ ಸಿಗಲಿಲ್ಲವೆಂದು ನೊಂದುಕೊಂಡು ಪ್ರಾಣವನ್ನು ಬಿಡುತ್ತೇನೆ ಎಂದು ಆದಿಲಿಂಗೇಶ್ವರನಿಗೆ ಹೇಳುತ್ತಾಳೆ, ಆಗ ಆದಿಲಿಂಗೇಶ್ವರ ಪ್ರತ್ಯಕ್ಷವಾಗಿ ನಾನೇ ನಿಮ್ಮ ಮಗುವಾಗಿ ಬರುತ್ತೇನೆಂದು ಹೇಳುತ್ತಾನೆ ಆಗ ಆದಿಲಿಂಗೇಶ್ವರನೆ ಉಷಃಕಾಲದಲ್ಲಿ ಮಗುವಾಗಿ ದಂಪತಿಗಳ ಪಕ್ಕದಲ್ಲಿ ಮಲಗುತ್ತಾನೆ. ತಂದೆ-ತಾಯಿಗಳಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ ಹಾಗೂ ಇಡೀ ಗ್ರಾಮದ ಜನರೆಲ್ಲ ಸಂತೋಷ ಪಡುತ್ತಾರೆ.
      ಮುಂದೆ ಮೌನೇಶ್ವರರು ಬಾಲಕನಾಗಿದ್ದಾಗ ಸಾಕಷ್ಟು ಬಾಲ ಪವಾಡಗಳನ್ನು ಮಾಡುತ್ತಾನೆ ಉಪನಯನಕ್ಕೆ ಬಂದ ಗುರುಗಳಿಗೆ ಅಹಂಕಾರವನ್ನು ಶಮನ ಮಾಡುತ್ತಾನೆ. ವಿದ್ಯಾಭ್ಯಾಸವನ್ನು ಹೇಳಿಕೊಡುವ ಗುರುಗಳಿಗೆ ಅಕ್ಷರ ಜ್ಞಾನಕ್ಕಿಂತ ಬಾಹ್ಯ ಜ್ಞಾನ ತಿಳಿಯಬೇಕೆಂದು ಗುರುಗಳಿಗೆ ಓಂಕಾರದ ಅರ್ಥವನ್ನು ಹೇಳುತ್ತಾನೆ.
      ತಮ್ಮ ಮನೆಯ ಮುಂದಿರುವ ಪರ್ವತಪ್ಪನು ಬಹಳ ಬಡತನದಿಂದ ಬದುಕು ಸಾಗಿಸುತ್ತಾನೆ ಎಣ್ಣೆ ಗಾಣವನ್ನು ನಡೆಸುತ್ತಿರುತ್ತಾನೆ ಅವರಿಗೆ ಸಂಕಷ್ಟ ಎದುರಾದಾಗ ಅವರಿಗೆ ನಿಜ ದರ್ಶನವನ್ನು ನೀಡಿ ಅವರ ಬಡತನವನ್ನು ನಿವಾರಣೆ ಮಾಡುತ್ತಾನೆ, ಹಾಗೂ ತಾಯಿಯು ಕೊಟ್ಟಿರುವ ಮೀಸಲು ತುಪ್ಪವನ್ನು ಆಂಧ್ರಪ್ರದೇಶದ ರಾಚೋಟಿ ವೀರಭದ್ರೇಶ್ವರನಿಗೆ ಮೀಸಲು ತುಪ್ಪವನ್ನು ಕಲ್ಲು ಮೂರ್ತಿಯನ್ನು ಪ್ರತ್ಯಕ್ಷವಾಗಿ ಮಾಡಿ ಸಾಕ್ಷಾತ್ ವೀರಭದ್ರೇಶ್ವರನಿಗೆ ಮೀಸಲು ತುಪ್ಪವನ್ನು ಉಣಬಡಿಸುತ್ತಾನೆ. ಲಿಂಗಾಯತ ಧರ್ಮದವರ ಅಂಗೈಯಲ್ಲಿರುವ ಲಿಂಗವನ್ನು ಮಾಯ ಮಾಡುತ್ತಾನೆ ಅಂಗವೇ ಲಿಂಗವೆಂದು ತಿಳಿಹೇಳುತ್ತಾನೆ ಆಗ ಹಸಿದವರಿಗೆ ಅನ್ನವನ್ನು ನೀಡಬೇಕು ಸಂಕಷ್ಟದಲ್ಲಿರುವವರಿಗೆ ಕೈಹಿಡಿಯಬೇಕು ಎಂದು ಹೇಳಿ ಅವರಿಗೆ ಬುದ್ಧಿಯನ್ನು ಕಲಿಸಿ ಅವರ ಲಿಂಗವನ್ನು ಮರಳಿಕೊಡುತ್ತಾನೆ. ಸುರಪುರದ ರಾಜಪುತ್ರನ್ನೊಂದಿಗೆ ಆಟವಾಡುವಾಗ, ಅನ್ಯಾಯವಾಗಿ ಆಟವಾಡುವ ರಾಜಪುತ್ರನನ್ನು ಚೆಂಡಿನಿಂದ ಹೊಡೆದು ಮರಣಿಸುತ್ತಾನೆ ನಂತರ ರಾಜಪುತ್ರನನ್ನು ಜೀವಂತ ಬದುಕಿಸಿ ನ್ಯಾಯ, ನೀತಿ, ಧರ್ಮ, ಸತ್ಯ ಮತ್ತು ನಿಷ್ಠೆಯನ್ನು ಪಾಲಿಸಬೇಕೆಂದು ಸುರಪುರದ ಅರಸರಿಗೆ ಉಪದೇಶವನ್ನು ಮಾಡಿ ಅವರಿಗೆ ಆಶೀರ್ವಾದ ಮಾಡುತ್ತಾನೆ.. ತನ್ನ ಪರಮ ಶಿಷ್ಯನಾದ ವೀರಬಲ್ಲಾಳನಿಗೆ ದೀರ್ಘಾಯಸ್ಸನ್ನು ನೀಡುತ್ತಾನೆ, ಮೌನೇಶ್ವರರ ತಂದೆತಾಯಿಗಳು ಮರಣ ಹೊಂದಿದಾಗ ವಿಶ್ವಕರ್ಮಸಮಾಜ ಬಾಂಧವರು ದ್ವೇಷ ಅಸೂಯೆಯಿಂದ ಹಿಂದೆ ಸರಿಯುತ್ತಾರೆ ಆಗ ಮೌನೇಶ್ವರರು ತಂದೆತಾಯಿಗಳನ್ನು ಜೀವಂತವಾಗಿ ಸ್ಮಶಾನದವರೆಗೆ ನಡೆದು ಹೋಗಲು ಹೇಳುತ್ತಾರೆ ಹೇಳಿದಂತೆ ಸ್ಮಶಾನಕ್ಕೆ ಹೋಗುತ್ತಾರೆ ಅಲ್ಲಿ ಅವರಿಗೆ ಅಂತ್ಯಸಂಸ್ಕಾರವನ್ನು ಮಾಡುತ್ತಾರೆ. ಅಲ್ಲಿಂದ ಮೌನೇಶ್ವರರು ವಿಧಿ-ವಿಧಾನಗಳನ್ನು ಮುಗಿಸಿಕೊಂಡು ದೇಶಪರ್ಯಟನೆ ಮಾಡುತ್ತಾರೆ, ಲಿಂಗನಬಂಡಿ ಗೆ ಹೋಗಿ ಅಲ್ಲಿ ಪವಾಡಗಳನ್ನು ಮಾಡುತ್ತಾರೆ ವಿಶ್ವಕರ್ಮ ಸಮಾಜದವರನ್ನು ಒಂದೆಡೆ ಸೇರಿಸಿ ಅವರಿಗೆ ಮಹಾಪ್ರಸಾದವನ್ನು ಏರ್ಪಡಿಸುತ್ತಾರೆ ಆದರೆ ಅವರು ಭೇದಭಾವವನ್ನು ಮಾಡಿ ಪ್ರಸಾದವನ್ನು ತಿರಸ್ಕರಿಸುತ್ತಾರೆ ಆಗ ಆ ಮಹಾಪ್ರಸಾದವನ್ನು ಹಾಲುಮತ ಸಮಾಜದವರು ಸ್ವೀಕಾರ ಮಾಡುತ್ತಾರೆ ಅವರಿಗೆ ಸಕಲ ಐಶ್ವರ್ಯವನ್ನು ನೀಡಿ ಮೌನೇಶ್ವರರು ಆಶೀರ್ವಾದ ಮಾಡುತ್ತಾರೆ. . ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆಂದು ಹೋಗುವ ಭಕ್ತರಿಗೆ ಶ್ರೀ ವೆಂಕಟೇಶ್ವರನನ್ನು ಕರೆದು ದರ್ಶನ ಮಾಡಿಸುತ್ತಾರೆ.. ಹಾಗೂ ಬ್ರಾಹ್ಮಣ ಧೀಕ್ಷೀತರು ಭೋಜನವನ್ನು ಏರ್ಪಡಿಸುತ್ತಾರೆ ಈ ಭೋಜನದಲ್ಲಿ ಮೌನೇಶ್ವರರು ವಿಕಾರ ರೂಪದ ಬ್ರಾಹ್ಮಣರಾಗಿ ಪಾಲ್ಗೊಳ್ಳುತ್ತಾರೆ ಹಾಗೂ ಇವರು ಭೋಜನ ಮಾಡಿದ ಎಂಜಲು ಎಲೆಯನ್ನು ತೆಗೆಯಲು ಬ್ರಾಹ್ಮಣರು ನಿರಾಕರಿಸುತ್ತಾರೆ ಹಾಗೂ ಶ್ರೀಮನ್ ನಾರಾಯಣನನ್ನು ಕರೆದು ಎಂಜಲು ಎಲೆಯನ್ನು ತೆಗೆಯಲು ಹೇಳುತ್ತಾರೆ ಆಗ ಶ್ರೀಮನ್ನಾರಾಯಣನೇ ಪ್ರತ್ಯಕ್ಷನಾಗಿ ಮೌನೇಶ್ವರರು ಭೋಜನ ಮಾಡಿದ ಎಂಜಲು ಎಲೆಯನ್ನು ತೆಗೆಯುತ್ತಾನೆ ಆಗ ಬ್ರಾಹ್ಮಣರೆಲ್ಲರಿಗೂ ಆಶ್ಚರ್ಯ ಮತ್ತು ಜ್ಞಾನೋದಯವಾಗುತ್ತದೆ..ಲಕ್ಷ್ಮೇಶ್ವರದಲ್ಲಿ ಸತ್ತುಬಿದ್ದಿರುವ ಬಸವಣ್ಣನನ್ನು ಜೀವಂತವಾಗಿ ಬದುಕಿಸುತ್ತಾರೆ, ನಂತರ ಅದೇ ಗ್ರಾಮದಲ್ಲಿ ಕದಿರು ಮಾರುವ ವೇಷದಲ್ಲಿ ಹಾಲುಮತದ ತಾಯಿ ಪಿಡ್ಡಮ್ಮಳಿಗೆ ಕದಿರು ಅನ್ನು ಕೊಟ್ಟು ಹೋಗುತ್ತಾನೆ ಆದರೆ ಕದಿರಿನ ಬೆಲೆಯನ್ನು ಮೌನೇಶ್ವರರಿಗೆ ಕೊಡದೆ ಪಿಡ್ಡಮ್ಮಳು ಸತ್ತು ಹೋಗುತ್ತಾಳೆ ಆಗ ಮೌನೇಶ್ವರರು ಪಿಡ್ಡಮ್ಮಳನ್ನು ಪುನಹ ಬದುಕಿಸಿ ಹಣವನ್ನು ಪಡೆದುಕೊಂಡು ಹೋಗುತ್ತಾನೆ,ಅಲ್ಲಿಂದ ಛಬ್ಬಿಗೆ ಹೋಗುತ್ತಾರೆ ಅಲ್ಲಿ ಕುರಿಗಳನ್ನು ಕಾಯುತ್ತಾ ಅಲ್ಲಿಯೂ ಸಾಕಷ್ಟು ಕುರಿಗಾಹಿಯಾಗಿ ಪವಾಡಗಳನ್ನು ಮಾಡುತ್ತಾನೆ ನಂತರ ವರವಿಗೆ ಬರುತ್ತಾರೆ ಈ ಗ್ರಾಮಕ್ಕೆ ನೀರಿನ ಬವಣೆ ಬಹಳ ಇರುತ್ತದೆ ಇದನ್ನು ನಿವಾರಿಸಲು ಅತ್ತೆಮನೆ ಸೊಸೆಯಿಂದ ಬೆಂಕಿಯನ್ನು ತರಲು ಹೇಳಿ ನಂತರ ಕಾಶಿಯಲ್ಲಿರುವ ಗಂಗೆಯನ್ನು ಕರೆಯುತ್ತಾ ತನ್ನ ಕೈಯಲ್ಲಿರುವ ಕೊಡಲಿಯಿಂದ ಬಂಡೆಯನ್ನು ಹೊಡೆಯುತ್ತಾನೆ ಬಂಡೆಯಿಂದ ಕಾಶಿಯ ಗಂಗೆ (ನೀರು) ಹರಿದು ಬರುತ್ತದೆ ಇನ್ನೂವರಿಗೂ ಎಷ್ಟೇ ಕ್ಷಾಮ ಬಿದ್ದರೂ ಕೂಡ ಇಲ್ಲಿಯ ನೀರು ಬತ್ತುವದಿಲ್ಲ ಕಾಶಿಯಲ್ಲಿರುವ ಗಂಗೆಯಂತೆ ಸ್ವಾದಿಷ್ಟವಾಗಿರುವ ನೀರು ಹರಿದುಬರುತ್ತದೆ. ನಂತರ ಮೌನೇಶ್ವರರು ಶಿರಸಂಗಿಯ ಜಗನ್ಮಾತೆ ಕಾಳಿಕಾದೇವಿಯ ದರ್ಶನಕ್ಕೆ ಹೋಗುತ್ತಾರೆ ಕುರೂಪಿಯಾಗಿ ಕೊಳಕು ವೇಷವನ್ನು ಹಾಕಿಕೊಂಡು ದೇವಸ್ಥಾನವನ್ನು ಪ್ರವೇಶ ಮಾಡುತ್ತಾನೆ ಇವರ ವೇಷಭೂಷಣವನ್ನು ನೋಡಿ ಹೊರಗೆ ನೂಕುತ್ತಾರೆ ಆದರೆ ಮೌನೇಶ್ವರರು ದೇವಸ್ಥಾನದಲ್ಲಿ ಮಲ ಮೂತ್ರ ಮಾಡುತ್ತಾರೆ ಆಗ ಎಲ್ಲರೂ ಈತನನ್ನು ಬಡಿಯಲು ಹೋಗುತ್ತಾರೆ ಆಗ ಮಲಮೂತ್ರಗಳು ಬಂಗಾರವಾಗುತ್ತದೆ ಶ್ರೀ ಮೌನೇಶ್ವರರು ಮಾಯವಾಗಿ ಅಲ್ಲಿಂದ ಮೌನೇಶ್ವರರು ಬಿಜಾಪುರಕ್ಕೆ ಹೋಗಿ ಪವಾಡಗಳನ್ನು ಮಾಡಿ ಬಿಜಾಪುರ ಆದಿಲ್ ಶಾಹಿಗೆ ಅಲ್ಲಾಹನ ಕುರಿತಾಗಿ ಉಪದೇಶವನ್ನು ಮಾಡುತ್ತಾರೆ ಆಗ ಸುಲ್ತಾನನು ಮೌನೇಶ್ವರರನ್ನು ಹೊಗಳುತ್ತಾನೆ ಅವರನ್ನು ಸನ್ಮಾನಿಸಿತ್ತಾನೆ ಸುಲ್ತಾನನು ಹೇಳಿದ ವಾಕ್ಯ ಇಂದಿನವರೆಗೂ ಪ್ರಚಲಿತವಾಗಿದೆ ಓಂ ಏಕ್ ಲಾಕ್ ಐಂಸೀ ಹಜಾರ್ ಪಾಂಚೊ ಪೀರ್ ಪೈಗಂಬರ್ ಮೌನದ್ದೀನ್ ಜಿತಾ ಪಿರ ಪೈಗಂಬರ್ ಮೌನಾದ್ದೀನ ಕಾಶಿಪತಿ ಗಂಗಾಧರ ಹರಹರ ಮಹಾದೇವ ಶ್ರೀ ಜಗದ್ಗುರು ಮೌನೇಶ್ವರ ಮಹಾರಾಜ ಕೀ ಜೈಎಂದು ಬಿಜಾಪುರ ಬಾದುಶಾ ಹೇಳಿರುವ ವಾಕ್ಯವಿದು ಈ ವಾಕ್ಯವನ್ನು ಮಂತ್ರದ ರೂಪದಲ್ಲಿ ಪ್ರತಿ ನಿತ್ಯ ಜಪಿಸಲಾಗುತಿದೆ. ಅನಂತರ ಮೌನೇಶ್ವರರನ್ನು ಬೀಳ್ಕೊಡುತ್ತಾರೆ.
      ಅಲ್ಲಿಂದ ಮೌನೇಶ್ವರರು ದೇವದುರ್ಗಕ್ಕೆ ಬರುತ್ತಾರೆ ಅಲ್ಲಿ ಮಕ್ಕಳಾಗದ ದಂಪತಿಗಳಿಗೆ ಮಕ್ಕಳನ್ನು ಕರುಣಿಸುತ್ತಾನೆ ಅದರಲ್ಲಿ ಒಬ್ಬ ಮಗನನ್ನು ಶ್ರೀಗಂಗಪ್ಪಯ್ಯನವರನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತಾನೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ ಆಗ ಮೌನೇಶ್ವರರು ಎಲ್ಲವನ್ನು ಸುತ್ತಿ ಕೊನೆಗೆ ದೇವದುರ್ಗ ತಾಲೂಕಿನ ವೀರಘಟ್ಟಕ್ಕೆ ಬರುತ್ತಾರೆ ಅಲ್ಲಿ ಒಂದು ದಿವಸ ವಾಸವಿದ್ದು ನಂತರ ಕೃಷ್ಣಾ ನದಿಯನ್ನು ದಾಟಿ ಬರಲು ಇಷ್ಟಪಡುತ್ತಾರೆ ಆದರೆ ಹರಿಗೋಲು ಹಾಕುವ ಅಂಬಿಗರು ಮೌನೇಶ್ವರನ ಕುರೂಪಿ ವೇಷವನ್ನು ನೋಡಿ ಅವರನ್ನು ತಿರಸ್ಕರಿಸುತ್ತಾರೆ ಅನಂತರ ಮೌನೇಶ್ವರರು ತನ್ನ ಮೇಲಿರುವ ಕಂಬಳಿಯನ್ನು ನೀರಿನ ಮೇಲೆ ಹಾಕಿ ಅದರ ಮೇಲೆ ಕುಳಿತುಕೊಂಡು ನದಿಯನ್ನು ದಾಟುತ್ತಾರೆ ಇದನ್ನು ನೋಡಿದ ಅಂಬಿಗರು ಪಶ್ಚತ್ತಾಪ ಪಡುತ್ತಾ ಮೌನೇಶ್ವರರಲ್ಲಿ ಕ್ಷಮೆಯನ್ನು ಕೇಳುತ್ತಾರೆ ಆಗ ಮೌನೇಶ್ವರರು ಸದಾ ನನ್ನ ಸೇವೆಯನ್ನು ಮಾಡಿ ತೃಪ್ತಿಯನ್ನು ನೀಡಿ ನಂತರ ನಿಮಗೆ ಸಕಲ ಐಶ್ವರ್ಯ ನೀಡುತ್ತೇನೆಂದು ಆಶೀರ್ವಾದ ಮಾಡುತ್ತಾರೆ ಇನ್ನೂವರೆಗೂ ಇಲ್ಲಿರುವ ಗಂಗಾಮತ ಸಮಾಜದವರು ಪಲ್ಲಕ್ಕಿ ಉತ್ಸವ ನಡೆದಾಗ ಅವರು ಪಲ್ಲಕ್ಕಿ ಸೇವೆಯನ್ನು ಮಾಡುತ್ತಾರೆ.
      ತಿಂಥಣಿ ಗ್ರಾಮದ ಕೃಷ್ಣಾನದಿಯ ಪಕ್ಕದ ಪ್ರದೇಶವನ್ನು ನೋಡುತ್ತಾರೆ ಇಲ್ಲಿರುವ ಸಕಲ ಪ್ರಾಣಿಗಳು(ಜೀವ ಜಂತು,ಕ್ರೂರ ಪ್ರಾಣಿ ಮತ್ತು ಸಾಧು ಪ್ರಾಣಿಗಳು) ಒಂದೇಕಡೆ ಇರುವುದನ್ನು ನೋಡಿ ಸಂತೋಷಪಟ್ಟು ಈ ಸ್ಥಳವು ಮುಂದೊಂದು ದಿನ ಭಾವೈಕ್ಯತಾ ಕೇಂದ್ರವಾಗಲಿ ಎಂದು ಇಚ್ಛೆಪಟ್ಟು ಇಲ್ಲಿಯೇ ನೆಲೆಸುತ್ತಾರೆ,ಈ ಕ್ಷೇತ್ರದಲ್ಲಿ ಆಧಿಕಾಲದಲ್ಲಿ ವೇದಾಧ್ಯಯನ ಕೇಂದ್ರ,ಆಗ್ರಾಹಾರ ಇದ್ದದ್ದು ತಾಮ್ರಶಾಸನ ಸಿಕ್ಕಿದೆ ಅದರಿಂದ ಕ್ರಿ.ಶ. 1076 ರಲ್ಲಿ ವಿಕ್ರಮಾದಿತ್ಯನು ವೇದಪಾಠ ಶಾಲೆಗೆ ದಾನದತ್ತಿಗಳನ್ನು ನೀಡಿದ ಉಲ್ಲೇಖಗಳು ದೊರೆಯುತ್ತವೆ.
      ಪಕ್ಕದಲ್ಲಿರುವ ಕೃಷ್ಣಾ ನದಿಯು ಭೋರ್ಗರೆಯುತ್ತ ಹರಿಯುತ್ತದೆ ಒಬ್ಬರ ಮಾತು ಒಬ್ಬರಿಗೆ ಕೇಳದಿದ್ದಾಗ ಶ್ರೀ ಮೌನೇಶ್ವರರು ಗಂಗಾ ಮಾತೆಯನ್ನು ಕರೆದು ಶಾಂತಿಯಿಂದ ಹರಿಯಲು ಆಜ್ಞೆ ನೀಡುತ್ತಾರೆ ಅಂದಿನಿಂದಲೂ ಕೃಷ್ಣಾ ನದಿಯು ಎಷ್ಟೇ ಪ್ರವಾಹ ಬಂದರು ತುಂಬಿ ಹರಿದರು ಶಾಂತವಾಗಿ ಹರಿಯುತ್ತದೆ ಇದೊಂದು ನಿದರ್ಶನವಾಗಿದೆ. ಮೌನೇಶ್ವರರು ತನ್ನ ಶಿಷ್ಯನಾದ ಗಂಗಪ್ಪಯ್ಯನಿಗೆ ಕೈಲಾಸ ಕಟ್ಟೆಯಲ್ಲಿ ಕೈಲಾಸವನ್ನು ತೋರಿಸುತ್ತಾರೆ, ಹಾಗೂ ಮೌನೇಶ್ವರರು ಕೋಣನ ಗವಿಯಲ್ಲಿ ಕುಳಿತುಕೊಂಡು ಸಾವಿರಾರು ವಚನಗಳನ್ನು ಹಾಗೂ ನೂರಾರು ಭವಿಷ್ಯವಾಣಿಗಳನ್ನು ಬರೆಯುತ್ತಾರೆ. ಅದರ ಪಕ್ಕದಲ್ಲಿರುವ ಗುಡ್ಡದಲ್ಲಿ ಕುಲುಮೆಯನ್ನು (ಅಕ್ಕಸಾಲಿಗ ಕೆಲಸವನ್ನು ಮಾಡುತ್ತಾರೆ) ಇಡುತ್ತಾರೆ ಅಕ್ಕಸಾಲಿಗ ಕೆಲಸವನ್ನು ಮಾಡುತ್ತಾರೆ ಈ ಸ್ಥಳವು ಇನ್ನೂವರೆಗೆ ನೋಡಬಹುದು.
      ಆಗ ಮೌನೇಶ್ವರರು ತನ್ನೆಲ್ಲಾ ಶಿಷ್ಯರನ್ನು ತಿಂಥಣಿ ಸುಕ್ಷೇತ್ರಕ್ಕೆ ಕರೆಸಿಕೊಳ್ಳುತ್ತಾರೆ ಮೌನೇಶ್ವರರು ಶಿಷ್ಯರೊಂದಿಗೆ ಇದ್ದು 5 ದಿನದವರೆಗೆ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಾರೆ
      ಸುರಪುರದ ಕಾಳಿಕಾದೇವಿ ಗುಡಿಯಿಂದ ಪಲ್ಲಕ್ಕಿಯಲ್ಲಿ ಸೂಗುರೇಶ್ವರ ದೇವರನ್ನು ಕರೆಯಿಸಿ ಪುರುವಂತರ ಸೇವೆಯೊಂದಿಗೆ ಪುರವನ್ನು ಪ್ರವೇಶ ಮಾಡುತ್ತಾರೆ ಅಂದಿನ ದಿವಸ ಏಕಾದಶಿಯನ್ನು ಆಚರಣೆಮಾಡಿ ವಿಶ್ವಕರ್ಮ ಸಮಾಜ ಕುಲಬಾಂಧವರನ್ನು ಒಂದೆಡೆ ಸೇರಿಸಿ ಮಹಾಪ್ರಸಾದವನ್ನು ಸ್ವೀಕಾರ ಮಾಡಲು ತಿಳಿಸುತ್ತಾರೆ ಅವರು ಭೇದಭಾವವಿಲ್ಲದೆ ಮಹಾಪ್ರಸಾದವನ್ನು ಸ್ವೀಕಾರ ಮಾಡುತ್ತಾರೆ ಹಾಗೂ ಅವರಿಗೆ ಸಕಲ ಐಶ್ವರ್ಯ ನೀಡುತ್ತೇನೆ ಎಂದು ಅಭಯವನ್ನು ನೀಡುತ್ತಾರೆ. ನಂತರ ಮರುದಿನ ಪಲ್ಲಕ್ಕಿ ಪ್ರಥಮ ಪುರುವಂತರ ಸೇವೆಯನ್ನು ಮಾಡುತ್ತಾರೆ, ನಂತರ ಮರುದಿನ ಧಾರ್ಮಿಕ ಮತ್ತು ಉಪನಯನ ಕಾರ್ಯಕ್ರಮಗಳನ್ನು ಮತ್ತು ಭಜನೆ ಕಾರ್ಯಕ್ರಮಗಳನ್ನು ಮಾಡಿಸುತ್ತಾರೆ ಇದಾದ ಮರುದಿನ ಮೌನೇಶ್ವರರು ಪಲ್ಲಕ್ಕಿ ಮಹಾಸೇವೆಯನ್ನು ನೂರಾರು ಪುರವಂತರು ಮಾಡುತ್ತಾರೆ. ನಂತರ ದಿನ ಬೆಳಿಗ್ಗೆ ಕೃಷ್ಣಾ ನದಿಯಲ್ಲಿ ಅಭ್ಯಂಗ ಸ್ನಾನ ಮಾಡಿ ನಂತರ ದಿನ ಧೂಳಗಾಯಿ ಆಚರಣೆಯನ್ನು ಮಾಡುತ್ತಾರೆ. ಅಂದಿನ ದಿನ ಮೌನೇಶ್ವರರು ಎಲ್ಲಾ ಶಿಷ್ಯರನ್ನು ಹಾಗೂ ಭಕ್ತರನ್ನು ಉದ್ದೇಶಿಸಿ ಭವಿಷ್ಯವನ್ನು ನುಡಿಯುತ್ತಾರೆ. ನಾನು ಇಂದು ಭಾರತ ಹುಣ್ಣಿಮೆಯೆಂದು ಈ ಶರೀರವನ್ನು ತ್ಯಜಿಸಿ ಭಗವಂತನಲ್ಲಿ ಸೇರುತ್ತೇನೆ ಪ್ರತಿವರ್ಷವೂ ಕೂಡ ಇದೇ ಜಾಗದಲ್ಲಿ ಬಂದು ಎಲ್ಲಾ ಕಾರ್ಯಕ್ರಮಗಳನ್ನು ಮಾಡಿ ಸದಾ ನನ್ನ ಆಶೀರ್ವಾದವನ್ನು ಪಡೆದುಕೊಂಡು ಹೋಗಿ ನಿಮಗೆ ಸದಾ ನನ್ನ ಆಶೀರ್ವಾದ ಇರುತ್ತದೆ ಎಂದು ಹೇಳಿ ತನ್ನ ಕೈಯಲ್ಲಿರುವ ಹೂಜಿ,ಚಪಕೊಡಲಿಯನ್ನು ಕೈಯಲ್ಲಿ ಹಿಡಿದುಕೊಂಡು ಗವಿಯನ್ನು ಪ್ರವೇಶ ಮಾಡುತ್ತಾರೆ ಆಗ ಗವಿಯಲ್ಲಿ ಅವರು ಜ್ಯೋತಿ ಆಕಾರದಲ್ಲಿ ಮಾಯವಾಗುತ್ತಾರೆ ಗವಿಯಲ್ಲಿ ಹೂಜಿ ಚಪಕೊಡಲಿ ಗದ್ದುಗೆಯ ಮೇಲೆ ಇಟ್ಟು ಅದೃಶ್ಯರಾಗುತ್ತಾರೆ
      ನಂತರ ತನ್ನ ಶಿಷ್ಯನಾದ ಅರ್ಚಕರಾದ ಪೂಜ್ಯ ಸೊಲಬಣ್ಣ ಮುತ್ಯನವರು ಇದ್ದು ಸುರಪುರದ ಅರಸರ ಆರ್ಥಿಕ ನೆರವಿನಿಂದ ಹಾಗೂ ಮೌನೇಶ್ವರ ಕೃಪಾ ಆಶೀರ್ವಾದದಿಂದ ಸುಂದರವಾದ ಹಿಂದೂ-ಮುಸ್ಲಿಂ ಶೈಲಿಯ ಮಹಾ ಮಂದಿರವನ್ನು ನಿರ್ಮಾಣ ಮಾಡುತ್ತಾರೆ. ಈ ಗುಡಿಯ ವೈಶಿಷ್ಟವೆಂದರೆ ಹಿಂದೂಗಳಿಗೆ ಮೌನೇಶ್ವರರಾಗಿ ಇಸ್ಲಾಂ ಬಾಂಧವರಿಗೆ ಪೈಗಂಬರನಾಗಿ, ಮೌನಾದ್ದೀನನಾಗಿ ಎರಡು ಧರ್ಮದವರಿಗೆ ಪೂಜ್ಯ ರಾಗಿದ್ದಾರೆಸ್ಥಳೀಯವಾಗಿ ದೇವಸ್ಥಾನದ ಸಮೀಪವಿರುವ ಬಂಡೋಳಿ ಗ್ರಾಮದ ಪೊಲೀಸ್ ಗೌಡರ ಮನೆತನದವರು ಬಹಳ ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಆಗ ಭೀಮನಗೌಡ ಶ್ರೀ ಮೌನೇಶ್ವರ ಪುರಾಣವನ್ನು ಹೇಳಿಸುತ್ತಾರೆ ಆ ಸಂದರ್ಭದಲ್ಲಿ 16 ಬಣಮಿಗೆ ಶತೃಗಳು ಬೆಂಕಿಯನ್ನು ಹಚ್ಚಿದಾಗ ಬೇಲಿಯನ್ನು ಸುಟ್ಟು ಬಣವಿಗಳು ಹಾಗೇ ಉಳಿಯುತ್ತವೆ ಇದು ಮೌನೇಶ್ವರ ಕೃಪಾಶೀರ್ವಾದ ಬಂಡೋಳಿ ಪೊಲೀಸ್ ಗೌಡರಿಗೆ ಇತ್ತು ಎಂಬುದು ತಿಳಿದುಬರುತ್ತದೆ.
      ಈ ರೀತಿಯಾಗಿ ಸ್ಥಳೀಯವಾಗಿ ಶ್ರೀ ಜಗದ್ಗುರು ಮೌನೇಶ್ವರ ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ. ಸ್ವತಃ ಬಂಡೋಳಿ ಪೊಲೀಸ್ ಗೌಡರಿಗೆ ಮೌನೇಶ್ವರರು ಭೇಟಿ ನೀಡಿ ಅವರ ಜೊತೆ ಮಾತನಾಡುತ್ತಿರುವುದು ಮತ್ತು ಅವರೊಂದಿಗೆ ಆಟಗಳು ಆಡುತ್ತಿರುವುದು ಮತ್ತು ಸದಾ ಅವರ ಮೇಲೆ ಆಶೀರ್ವಾದವನ್ನು ಮೌನೇಶ್ವರರು ನೀಡಿದ್ದಾರೆ ಎಂಬುದು ಕೆಲವೊಂದು ತತ್ವ ಪದಗಳಲ್ಲಿ ಹಾಗೂ ಪುರುವಂತರ ಹಾಡುಗಳ ಮೂಲಕ ತಿಳಿದುಬರುತ್ತದೆ.
      ಮುನೇಶ್ವರ ದೇವಸ್ಥಾನದ ಬಲಗಡೆ ಉಗ್ರಾಣ ಕೋಣೆಯಿದೆ ಇಲ್ಲಿ ಮೌನೇಶ್ವರರು ಲಕ್ಷ್ಮೀದೇವಿಯನ್ನು ಸ್ಥಾಪಿಸುತ್ತಾರೆ ಅಲ್ಲದೆ ತನ್ನ ಭಕ್ತಾದಿಗಳಿಗೆ ಯಾವುದೇ ಕಾಲಕ್ಕೂ ಆಹಾರದ ಕೊರತೆಯಾಗಬಾರದು, ಎಂಬುದನ್ನರಿತು ಗ್ರಹಣ ಕೋಣೆಯಲ್ಲಿ ಪರಶಿವನೇ ಆಗತಾನೆ ಪರಸು ಪಟ್ಟವನ್ನು ಸ್ಥಾಪಿಸುತ್ತಾರೆ ಇದರಿಂದ ಮಹಾಪ್ರಸಾದ ಅಥವಾ ಭಕ್ತಾದಿಗಳಿಗೆ ದಾಸೋಹದ ಕೊರತೆಯಾಗಬಾರದೆಂದು ಉದ್ದೇಶದಿಂದ ತನ್ನ ಪರಶುವನ್ನು ಅಲ್ಲಿ ಸ್ಥಾಪಿಸುತ್ತಾನೆ ಆದ್ದರಿಂದ ಮಹಾಪ್ರಸಾದ ಅಡಿಗೆ ಅಡಿಗೆ ಈ ಸ್ಥಳದಲ್ಲಿ ಹಾಕಿ ಮಜಾ ಮಾಡಿ ಹಾಗೂ ಅನ್ನವನ್ನು ಹಾಕಿಸುತ್ತಾರೆ ಅದನ್ನು ಎಲ್ಲ ಭಕ್ತಾದಿಗಳಿಗೆ ಉಣಬಡಿಸುತ್ತಾರೆ ಯಾವುದೇ ಕೊರತೆ ಆಗುವುದಿಲ್ಲ ಇದೊಂದು ಬಹಳ ವಿಶೇಷವಾದದ್ದು
      ಶ್ರೀ ಜಗದ್ಗುರು ಮೌನೇಶ್ವರ ತನ್ನ ಕ್ಷೇತ್ರಕ್ಕೆ ಹಾಗೂ ಭಕ್ತಾದಿಗಳಿಗೆ ಯಾವುದೇ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಮತ್ತು ಬರಗಾಲ ಬರಬಾರದೆಂಬ ಉದ್ದೇಶದಿಂದ ಮೇಘರಾಜನ ಸ್ಥಾಪಿಸುತ್ತಾರೆ ದೇವಸ್ಥಾನದ ಬಲಭಾಗ ಉಗ್ರಾಣದ ಮುಂದುಗಡೆ ಮಳೆರಾಯನನ್ನು ಸ್ಥಾಪನೆ ಮಾಡಿದ್ದಾರೆ ಮಳೆ ಬಾರದಿದ್ದಾಗ ಈ ಮಳೆರಾಯ ಕುಂಡಕ್ಕೆ ಹಾಲೆರೆಯುತ್ತಾರೆ ಇದರಿಂದ ತಕ್ಷಣ ಮಳೆ ಬರುತ್ತದೆ ಅಥವಾ ಅತಿವೃಷ್ಟಿಯಾದರೆ ಜಾಸ್ತಿ ಮಳೆಯಾದಾಗ ಮಳೆರಾಯ ಕೊಂಡಕ್ಕೆ ಹಾಲನ್ನು ಎರೆದಾಗ ಅಥವಾ ಅಭಿಷೇಕ ಮಾಡಿದಾಗ ಅತಿವೃಷ್ಟಿ ಕಡಿಮೆಯಾಗುತ್ತದೆ ಹಾಗೂ ಮಳೆ ಕಡಿಮೆಯಾಗುತ್ತದೆ ಇದೊಂದು ವಿಶೇಷವಾದದ್ದು ಈ ಕ್ಷೇತ್ರದಲ್ಲಿ ನೋಡಬಹುದು ಇನ್ನೂವರೆಗೂ ಅತಿವೃಷ್ಟಿಯಾದರೆ ಅಥವಾ ಬರಗಾಲ ಬಂದಾಗ ಮಳೆರಾಯನ ಕುಂಡಕ್ಕೆ ಹಾಲಿನ ಅಭಿಷೇಕವನ್ನು ಮಾಡಿದಾಗ ತಕ್ಷಣ ಬೇಡಿಕೆ ಈಡೇರುತ್ತದೆ.
      ಶ್ರೀ ಕ್ಷೇತ್ರದಲ್ಲಿ ಪಲ್ಲಕ್ಕಿ ಉತ್ಸವ ಸಂಪ್ರದಾಯ ಪೂರ್ವ ಕಾಲದಿಂದಲೂ ನಡೆದು ಬಂದಿದೆ ಆದರೆ ಇತ್ತೀಚೆಗೆ ರಥೋತ್ಸವ ಸಂಪ್ರದಾಯವನ್ನು ಹಾಕಿಕೊಳ್ಳಲಾಗಿದೆ ಇದರ ಹಿನ್ನೆಲೆ ಇಚಲಕರಂಜಿ ಭಕ್ತನಾದ ಪೂಜ್ಯಶ್ರೀ ಗೋಪಾಲಪ್ಪ ಮಹಾರುದ್ರಪ್ಪ ಸೋನಾರ್ ಎಂಬುವವರು ಇಚಲಕರಂಜಿ ಇಂದ ಮೌನೇಶ್ವರ ಗ್ರಾನೈಟ್ ಮೂರ್ತಿ ರಥದಲ್ಲಿ ಮಾಡಿಕೊಂಡು ಅದನ್ನು ಉಪವಾಸವಿದ್ದು ಬೆನ್ನಿಗೆ ಕಟ್ಟಿಕೊಂಡು ದೀಡನಮಸ್ಕಾರ ಹಾಕಿಕೊಂಡು ಶ್ರೀಕ್ಷೇತ್ರ ಮೌನೇಶ್ವರ ಆಗಮಿಸಿ ಇಲ್ಲಿ ರಥೋತ್ಸವ ಸಂಪ್ರದಾಯವನ್ನು ಹಾಕಿದ್ದಾರೆ ನಂತರ ಇವರು 51 ಅಡಿ ಎತ್ತರದ ರಥವನ್ನು ಮಾಡಿ ಶ್ರೀಕ್ಷೇತ್ರಕ್ಕೆ ಅರ್ಪಿಸುತ್ತಾರೆ ಅಲ್ಲದೆ ಇವರು ಮೌನೇಶ್ವರ ಗ್ರಾನೆಟ್ ಮೂರ್ತಿಯನ್ನು ಹೋಮ-ಹವನಗಳನ್ನು ಮಾಡಿ ಕೈಲಾಸ ಕಟ್ಟೆಯ ಗದ್ದುಗೆ ಮೇಲೆ ಪ್ರಾಣ ಪ್ರತಿಷ್ಠೆಯನ್ನು ಮಾಡುತ್ತಾರೆ ಹಾಗೂ ಬೆಳ್ಳಿ ಪಲ್ಲಕ್ಕಿ ದೇವಸ್ಥಾನಕ್ಕೆ ಮಾಡಿ ಅರ್ಪಿಸಿದ್ದಾರೆ.
      ಇನ್ನೊಬ್ಬ ಭಕ್ತರು ಕಾಟವಾ ಮಸಾಲಾ ಕಂಪನಿಯ ಮಾಲೀಕರಾದ ಶ್ರೀಯುತ ಬಂದೇನವಾಜ್ ತಂದೆ ಅಲ್ಲಿಸಾಬ್ ಜಮಾನ ಸಾಕಿನ್ ಗುಳೇದಗುಡ್ಡ ಜಿಲ್ಲಾ ಬಾಗಲಕೋಟೆ ಇವರು ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ಒಂದುವರೆ ಕೆಜಿ ಬೆಳ್ಳಿಯ ನಾಗಪ್ಪನ ಮೂರ್ತಿಯನ್ನು ಅರ್ಪಿಸಿದ್ದಾರೆ ಹಾಗೂ ಶ್ರೀ ಮೌನೇಶ್ವರ ದೇವಸ್ಥಾನ ಹಾಗೂ ಶ್ರೀ ಗಂಗಪ್ಪ ಅಯ್ಯನ ದೇವಸ್ಥಾನ ಹಾಗೂ ಈಶ್ವರ ದೇವಸ್ಥಾನ ಒಳಗೆ ಕರೆಂಟು ಫಿಟಿಂಗ್ ಮಾಡಿಸಿದ್ದಾರೆ, ಅಲ್ಲದೆ ಶ್ರೀ ಜಗದ್ಗುರು ಮೌನೇಶ್ವರ ಭವ್ಯವಾದ ಐದು ಅಡಿ ಎತ್ತರದ ಪಂಚಲೋಹದ ಮೂರ್ತಿಯನ್ನು ಅಂದಾಜು ಒಂದೂವರೆಯಿಂದ ಎರಡು ಲಕ್ಷ ರೂಪಾಯಿವರೆಗೆ ಖರ್ಚು ಮಾಡಿ ಮೂರ್ತಿಯನ್ನು ದೇವಸ್ಥಾನಕ್ಕೆ ಅರ್ಪಿಸಿದ್ದಾರೆ ಇಸ್ಲಾಂ ಧರ್ಮದಲ್ಲಿದ್ದರು ಕೂಡ ಅವರು ಅಪ್ಪಟ ಮೌನೇಶ್ವರರ ಭಕ್ತರಾಗಿದ್ದಾರೆ ದಿನಾಂಕ 10-2-2022 ರಂದು ಈ ಮೂರ್ತಿಯು ಶ್ರೀ ಮೌನೇಶ್ವರ ದೇವಸ್ಥಾನದ ವರೆಗೆ ಅದ್ದೂರಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಅರ್ಪಿಸಲಾಯಿತು ಆದರೆ ಭಕ್ತಾದಿಗಳು ಈ ಕೆಲಸವನ್ನು ಮಾಡಿದ್ದಾರೆ ಮೆರವಣಿಗೆ ಮಾಡಿಸಿದ್ದಾರೆ ನಂತರ ಆ ಭಕ್ತಾದಿಗಳು ಶ್ರೀ ಬಂದೇನವಾಜ್ ಜಮಾನ ಇವರು ಬೆಳ್ಳಿಯ ಹೂಜಿಯನ್ನು ಮಾಡಲು ಮೌನೇಶ್ವರರು ಪ್ರೇರಣೆ ನೀಡಿದ್ದಾರೆ ಎಂದು ಹೇಳಿದ್ದಾರೆ.
      ಹೀಗೆ ಶ್ರೀ ಮೌನೇಶ್ವರ ಭಕ್ತಾದಿಗಳು ಸಾಕಷ್ಟು ಮೌನೇಶ್ವರ ದೇವಸ್ಥಾನಕ್ಕೆ ಏಳಿಗೆಗಾಗಿ ಹಾಗೂ ತಮ್ಮ ಸಂಕಲ್ಪದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಶ್ರೀ ಜಗದ್ಗುರು ಮೌನೇಶ್ವರರು ಚೇತನ ಸ್ವರೂಪಿಯಾಗಿ ಈ ಸ್ಥಳದಲ್ಲಿ ಇದ್ದಾರೆ ಭಕ್ತಾದಿಗಳಿಗೆ ಬೇಡಿದ ಇಷ್ಟಾರ್ಥವನ್ನು ನೆರವೇರಿಸುತ್ತಾ ಬಂದಿದ್ದಾರೆ ಈ ಕ್ಷೇತ್ರ ಪುಣ್ಯಕ್ಷೇತ್ರವಾಗಿದೆ ಕ್ಷೇತ್ರದ ಧೂಳು ನಮ್ಮ ದೇಹಕ್ಕೆ ಸೋಂಕಿದರೆ ನಮ್ಮ ಪಾಪಕರ್ಮಗಳ ನಾಶವಾಗುತ್ತವೆ ಏಕೆಂದರೆ ಇದು ಮುಕ್ತಿದಾಮ ವಾಗಿ ಮೌನೇಶ್ವರರು ಪರಿವರ್ತಿಸಿದ್ದಾರೆ ತಿಂಥಣಿ ಯಲ್ಲಿ ನೆಲೆಸಿದವರೇ ಪುಣ್ಯವಂತರು
  ಒಂದು ರೊಟ್ಟಿಯ ಕಥೆ - ಒಳ್ಳೆಯ ಆದರ್ಶದ ಕಥೆ

“””””””“””””“””””“””””””””””“”””””””””*

   ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಈಗ ಸರಕಾರದ ವ್ಯಾಪ್ತಿಯಲ್ಲಿದೆ ಮುಜರಾಯಿ ಇಲಾಖೆಯ ಪ್ರಥಮ ದರ್ಜೆಯ ದೇವಸ್ಥಾನವಾಗಿದೆ

ದೇವಸ್ಥಾನದ ಆಡಳಿತ ಅಧಿಕಾರಿಗಳಾಗಿ ಮಾನ್ಯ ಜಿಲ್ಲಾಧಿಕಾರಿಗಳು ಇರುತ್ತಾರೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಮಾನ್ಯ ತಹಶೀಲ್ದಾರರು ಇರುತ್ತಾರೆ ಹಾಗೂ 9ಜನ ಸರಕಾರದಿಂದ ನಿರ್ದೇಶಿಸಲ್ಪಟ್ಟ ಸದಸ್ಯರಿರುತ್ತಾರೆ. ಈಗ ದೇವಸ್ಥಾನದ ಆದಾಯವು ಸುಮಾರು 60ರಿಂದ 70 ಲಕ್ಷದವರೆಗೆ ಆದಾಯ ಇದೆ… ಕೃಷ್ಣಾ ನದಿಯಲ್ಲಿ ಭಕ್ತರಿಗೆ ಸ್ನಾನಮಾಡಲು ಸ್ನಾನಘಟ್ಟ ನಿರ್ಮಾಣ ಮಾಡಲಾಗಿದೆ ಹಾಗೂ ಭಕ್ತರಿಗೆ ಉಳಿದುಕೊಳ್ಳಲು 35ರಿಂದ 40 ರೂಮುಗಳ ವ್ಯವಸ್ಥೆ ಇದೆ ದೇವಸ್ಥಾನದಲ್ಲಿ ಈಗಾಗಲೇ ಅಂತರ್ಜಾಲವನ್ನು(ಇಂಟರ್ ನೆಟ್) ಹೊಂದಿದೆ.. ಇಲ್ಲಿ ಒಬ್ಬರು ಮೇಲ್ವಿಚಾರಕರು ಶ್ರೀ ಶಿವಾನಂದ ಸ್ವಾಮಿ ಮಠ ಹಾಗೂ ಕಂಪ್ಯೂಟರ್ ಆಪರೇಟರ ಶ್ರೀ ಶುಭಾಸ ನಾಯಕ ಹಾಗೂ ಸಿಪಾಯಿಗಳು ಹಾಗೂ ವಾಚಮನ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ.‌…..

          **ಗಂಗಾಧರ ನಾಯಕ ತಿಂಥಣಿ **

ಸಾಮಾಜಿಕ ಕಾರ್ಯಕರ್ತ, ಹಾಗೂ ವನವಾಸಿ ಕಲ್ಯಾಣ ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿಗಳು, ಹಾಗೂ ಹೋರಾಟಗಾರರು, ವರದಿಗಾರರು ಸುದ್ದಿಸಾರ ದಿನಪತ್ರಿಕೆ**

Leave a Reply

Your email address will not be published. Required fields are marked *

Translate »