ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಬಲರಾಮ ಜಯಂತಿ ಹಿನ್ನೆಲೆ ಪೂಜೆ ಮುಹೂರ್ತ

ಬಲರಾಮ ಎಂದರೆ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವುದು ಶ್ರೀಕೃಷ್ಣ ಅಣ್ಣ. ಶ್ರೀಕೃಷ್ಣನು ಲೋಕ ಕಲ್ಯಾಣ ಕೆಲಸ ಕೈಗೊಂಡಾಗ ಅವನೊಂದಿಗೆ ಸಹಕರಿಸುತ್ತಿದ್ದನು ಎನ್ನುವುದಷ್ಟೇ ನಮಗೆ ತಿಳಿದಿರುವ ವಿಚಾರ.

ಈ ವಿಚಾರಗಳಿಗಿಂತಲೂ ಮಿಗಿಲಾಗಿ ಸಾಕಷ್ಟು ಸಂಗತಿಗಳು ಬಲರಾಮನ ಕಥೆಯೊಂದಿಗೆ ಬೆಸೆದುಕೊಂಡಿದೆ. ಅತ್ಯಂತ ಶಕ್ತಿ ಶಾಲಿಯಾದ ಬಲರಾಮನು ಮನುಕುಲಕ್ಕೆ ಒಂದು ಆದರ್ಶ ವ್ಯಕ್ತಿ.

ಬಲರಾಮನ ಪರಿಚಯ:-

ಬಲಭದ್ರ ಎಂದು ಕರೆಯಲ್ಪಡುವ ಬಲರಾಮನು ಶ್ರೀಕೃಷ್ಣ ದೇವನ ಅಣ್ಣ. ರೇವತಿ ದೇವಿಯ ಪತಿ. ಹೆಸರೇ ಹೇಳುವಂತೆ ಬಲರಾಮನು ಅತ್ಯಂತ ಶಕ್ತಿವಂತನು.

ತಂದೆ ತಾಯಿಯ ವಿಧೇಯ ಮಗನು, ಆದರ್ಶ ಸಹೋದರನು, ಗಂಡನು ಮತ್ತು ಆದರ್ಶ ವ್ಯಕ್ತಿಯಾಗಿದ್ದನು. ನ್ಯಾಯವಾದಿಯಾದ ಬಲರಾಮನು ಸದಾ ಕಾಲ ನೀಲಿ ಬಟ್ಟೆಯನ್ನು ಧರಿಸುತ್ತಿದ್ದನು.
ರಕ್ಷಕನು ಹಾಗೂ ಪ್ರಾಮಾಣಿಕ ವ್ಯಕ್ತಿಯೂ ಆದ ಬಲರಾಮನು ಅತ್ಯಂತ ಶಕ್ತಿಯನ್ನು ಹೊಂದಿರುವ ದೇವನು. ಪುರಾಣ ಕಥೆಯಲ್ಲಿ ಬಲರಾಮನು ಅತ್ಯಂತ ಆದರ್ಶ ವ್ಯಕ್ತಿಯಾಗಿದ್ದನು.

ದೈವ ರೂಪ:-
ಶ್ರೀ ಕೃಷ್ಣ ಪರಮಾತ್ಮನ ಅಣ್ಣ ಬಲರಾಮ. ಅವನನ್ನು ಬಲದೇವ, ಬಲಭದ್ರ, ಹಲಧರ ಮತ್ತು ಹಲಾಯುಧ ಎಂದು ಕರೆಯುತ್ತಾರೆ. ಜಗನ್ನಾಥ ಸಂಪ್ರದಾಯದ ಪ್ರಕಾರ ಬಲರಾಮನನ್ನು ತ್ರಿಶೂಲ ದೇವತೆಗಳಲ್ಲಿ ಒಬ್ಬನು. ಈ ಅವತಾರದಲ್ಲಿ ಮಾನವರನ್ನು ಕೃಷಿಯ ಕಡೆಗೆ ಕರೆದೊಯ್ಯುವ ಜೀವನ ವಿಧಾನವನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು.

  ಮಹಾ ಶಿವರಾತ್ರಿ ಹಬ್ಬದ ಪೂಜೆಯನ್ನು ಮಾಡುವ ವಿಧಾನ

ಇಂದ್ರ ಮತ್ತು ಇತರ ದೇವತೆಗಳು ಮಥುರ ರಾಜನಾದ ಕಂಸನಿಂದ ನಡೆಯುವ ಉಪಟಳದಿಂದ ಪಾರು ಮಾಡಲು ಶ್ರೀ ವಿಷ್ಣು ದೇವರಲ್ಲಿ ಬೇಡಿಕೊಂಡರು. ಅದರಂತೆಯೇ ಮೊದಲು ಬಲರಾಮ ನಂತರ ಕೃಷ್ಣ ಇಬ್ಬರು ನಂದ ರಾಜನ ಆಶ್ರಯದಲ್ಲಿ ಹುಟ್ಟಿ ಬೆಳೆದರು.

ಆದಿಶೇಷ ಅವತಾರ:-

ಶ್ರೀ ವಿಷ್ಣುವಿನ ಅವತಾರದ ಜೊತೆಗೆ ಅನೇಕ ಗ್ರಂಥಗಳು ಬಲರಾಮನನ್ನು ಆದಶೇಷ ಅವತಾರ ಎಂದು ಕರೆಯಲಾಗುವುದು. ಅನೇಕ ತಲೆಯನ್ನು ಹೊಂದಿರುವ ಶೇಷನು, ಹಾವುಗಳ ರಾಜ. ಅವನ ಮೇಲೆಯೇ ವಿಷ್ಣು ಕ್ಷೀರ ಸಾಗರದಲ್ಲಿ ನೆಲೆಸಿರುತ್ತಾನೆ ಎಂದು ಹೇಳಲಾಗುವುದು. ಬಲರಾಮನು ಆನೆಗಿಂತಲೂ ಹೆಚ್ಚು ಬಲಶಾಲಿಯಾದವನು ಎಂದು ಹೇಳಲಾಗುವುದು.
ರಾಮಾಯಣದಲ್ಲಿ ರಾಮ ಲಕ್ಷ್ಮಣರಂತೆ ಮಹಾ ಭಾರತದಲ್ಲಿ ಕೃಷ್ಣ ಬಲರಾಮನು ಅತ್ಯಂತ ಪ್ರೀತಿಯ ಸಹೋದರರಾಗಿ ಇದ್ದರು. ಎರಡು ಅವತಾರದಲ್ಲೂ ಬೇರೆ ಬೇರೆ ತಾಯಂದಿರರನ್ನು ಹೊಂದಿದ್ದರು.

ಶಕ್ತಿಯುತ ಯೋಧನಾಗಿದ್ದನು:-

ಬಲರಾಮನು ಅತ್ಯಂತ ಶಕ್ತಿಶಾಲಿಯಾಗಿದ್ದನು. ಇವನು ಬಾಲ್ಯದಲ್ಲಿ ಇರುವಾಗಲೇ ಕಂಸ ಕಳುಹಿಸುತ್ತಿದ್ದ ಅನೇಕ ಅಸುರರನ್ನು ಕೊಂದುಹಾಕಿದ್ದನು. ಅವರಲ್ಲಿ ಪ್ರಮುಖವಾಗ ಪ್ರಲಾಂಬಸುರ ಎನ್ನುವ ರಾಕ್ಷಸರನ್ನು ಸದೆ ಬಡೆದಿದ್ದನು. ಕೆಲವರು ಕೃಷ್ಣನಿಂದ ಇನ್ನೂ ಕೆಲವರು ಬಲರಾಮನಿಂದ ವಧಿಸಲ್ಪಟ್ಟರು. ಬಲರಾಮನ ಶಕ್ತಿಯು ಆನೆಗಳ ಹಿಂಡುಗಳಿಗೆ ಇರುವ ಶಕ್ತಿಗಳಿಗಿಂತ ಹೆಚ್ಚು ಬಲವನ್ನು ಹೊಂದಿದ್ದನು ಎನ್ನಲಾಗುವುದು.

  ಮಣ್ಣಿನ ಪಾಲಿನ ಅನ್ನ

ಭೀಮ ಮತ್ತು ಧುರ್ಯೋಧನನ ಗುರು:-

ಬಲರಾಮನು ದುರ್ಯೋದನನಿಗೆ ಗುರುವಾಗಿದ್ದನು. ಅವನಿಗೆ ಗಾಢವಾದ ಹಾಗೂ ಸೂಕ್ತ ರೀತಿಯಲ್ಲಿ ಹೇಗೆ ಯುದ್ಧ ಮಾಡಬೇಕು ಎನ್ನುವ ವಿದ್ಯೆಯನ್ನು ಕಲಿಸಿಕೊಟ್ಟಿದ್ದನು. ಧುರ್ಯೋದನನು ಬಲರಾಮನ ನೆಚ್ಚಿನ ಶಿಷ್ಯನಾಗಿದ್ದನು. ಹಾಗಾಗಿಯೇ ಯುದ್ಧದಲ್ಲಿ ತಟಸ್ಥತೆಯನ್ನು ಕಾಯ್ದುಕೊಂಡನು.

ಕೃಷಿಯ ದೇವ:-

ಬಲರಾಮನು ಸಾಮಾನ್ಯವಾಗಿ ನೇಗಿಲನ್ನು ಚಲಾಯಿಸುವ ಚಿತ್ರವನ್ನು ನೋಡುತ್ತೇವೆ. ಬಲರಾಮನನ್ನು ಕೃಷಿಯ ದೇವ ಎಂದು ಕರೆಯಲಾಗುವುದು. ಬಲಶಾಲಿಯಾದ ಬಲರಾಮನ ಆಯುಧ ನೇಗಿಲು. ಯಾರು ಕೃಷಿಯಲ್ಲಿ ಏಳಿಗೆ ಹೊಂದಲು ಬಯಸುತ್ತಾರೆ, ಅವರು ಬಲರಾಮನ ಪೂಜೆ ಮಾಡಬೇಕು ಎಂದು ವಿಷ್ಣುಧರ್ಮೋತ್ತರ ಪುರಾಣವು ತಿಳಿಸುತ್ತದೆ.

ಸರಳ ಮತ್ತು ಗೌರವಾನ್ವಿತ:-

ಬಲರಾಮನು ಬಹಳ ನೇರ ಮತ್ತು ಸರಳ ವ್ಯಕ್ತಿಯಾಗಿದ್ದನು. ಕೃಷ್ಣನ ಸಂಕೀರ್ಣ ತರ್ಕವನ್ನು ಎಂದಿಗೂ ಅರ್ಥೈಸಿಕೊಳ್ಳುತ್ತಿರಲಿಲ್ಲ. ಆದರೆ ತನ್ನ ಕಿರಿಯ ಸಹೋದರನ ಬಲರಾಮನಿಗೆ ಧುರ್ಯೋಧನ ಹಾಗೂ ಪಾಂಡವರು ಯುದ್ಧ ಮಾಡುವುದು ಇಷ್ಟ ಇರಲಿಲ್ಲ. ಹಾಗಾಗಿ ಇಬ್ಬರ ಕಡೆಯೂ ನಿಲ್ಲದೆ, ಯುದ್ಧ ಮಾಡದೆ ಇರಲು ಸಲಹೆ ನೀಡಿದರು. ಆದರೆ ಅವರು ನಿರಾಕರಿಸಿದರು. ಯುದ್ಧದ ಸಮಯದಲ್ಲಿ ತೀರ್ಥ ಯಾತ್ರೆಯನ್ನು ಕೈಗೊಂಡು, ಯುದ್ಧದ ಕೊನೆಯಲ್ಲಿ ಬಲರಾಮ ಬಂದನು ಎಂದು ಹೇಳಲಾಗುವುದು.

ವಿಶೇಷ ವಿವಾಹ
ಅತ್ಯಂತ ಸಮೃದ್ಧ ಸಾಮ್ರಾಜ್ಯವನ್ನು ಹೊಂದಿದ್ದ ಕುಶಸ್ಥಲಿಯ ರಾಜ ಕಕುದ್ಮಿ(ರೈವತ) .ಅವನ ಏಕೈಕ ಪುತ್ರಿ ರೇವತಿ. ಅವಳೇ ಬಲರಾಮನ ಹೆಂಡತಿ. ಅತ್ಯಂತ ಸುಂದರಿ ಹಾಗೂ ಬುದ್ಧಿವಂತೆಯಾದ ತನ್ನ ಮಗಳಿಗೆ ಯೋಗ್ಯ ವರವನ್ನು ಹುಡುಕಿ ಕೊಡಬೇಕು ಎಂದು ತಂದೆಯು ಬ್ರಹ್ಮಲೋಕಕ್ಕೆ ಹೋಗಿದ್ದನು. ಆಗ ಬ್ರಹ್ಮನು ನಿನ್ನ ಮಗಳಿಗೆ ಸೂಕ್ತವಾದ ವರ ಭೂಲೋಕದಲ್ಲಿ ಇದ್ದಾನೆ. ನಿನ್ನ ಮಗಳನ್ನು ಬಲರಾಮನಿಗೆ ನೀಡಿ ವಿವಾಹ ಮಾಡಲು ಸಲಹೆ ನೀಡಿದನು. ಅದರಂತೆಯೇ ರಾಜನು ತನ್ನ ಮಗಳನ್ನು ಬಲರಾಮನಿಗೆ ಕೊಟ್ಟು ವಿವಾಹ ಮಾಡಿದನು ಎಂದು ಹೇಳಲಾಗುವುದು.

  ಪ್ರಜಾಕೀಯಾವೇ ನಿಜವಾದ ಪ್ರಜಾಪ್ರಭುತ್ವ

ಬಲರಾಮ ಜಯಂತಿ ಪೂಜೆ ಮುಹೂರ್ತ:-

ಬಲರಾಮ ಜಯಂತಿ ಮಂಗಳವಾರ, ಸೆಪ್ಟೆಂಬರ್ 5, 2023

ಷಷ್ಠಿ ತಿಥಿ ಆರಂಭ – 16:41 ಸೆಪ್ಟೆಂಬರ್ 04, 2023 ರಂದು

ಷಷ್ಠಿ ತಿಥಿ ಕೊನೆಗೊಳ್ಳುತ್ತದೆ – 15:46 ಸೆಪ್ಟೆಂಬರ್ 05, 2023 ರಂದು

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

ಭಾಗ್ಯ ಶ್ರೀ ದೇಶಪಾಂಡೆ.

Leave a Reply

Your email address will not be published. Required fields are marked *

Translate »