‘ ಭಿಕ್ಷುಕಾ ನೈವ ಭಿಕ್ಷ ಬೋಧಯಂತಿ ಚ । ’
‘ ಅವ್ವಾ , ಭಿಕ್ಷೆ ನೀಡಿರಿ ’ ಎಂದು ಕೂಗುತ್ತಾ ಭಿಕಾರಿಗಳು ಮನೆ ಮನೆಗಳಲ್ಲಿ ಭಿಕ್ಷೆ ಬೇಡುತ್ತಾರೆ . ಮನೆ ಬಾಗಿಲಿಗೆ ಭಿಕ್ಷುಕ ಬಂದನೆಂದು ನಾವು ಬೇಸರ ಪಟ್ಟು ಕೊಳ್ಳ
ಬಾರದು . ಏಕೆಂದರೆ ಭಿಕ್ಷೆಗಾಗಿ ಬಂದಿದ್ದರೂ ಅವರು ಒಂದ ತತ್ವವನ್ನು ತಿಳಿಸಿ ಹೇಳುತ್ತಿರುತ್ತಾರೆ . ‘ ಭಿಕ್ಷೆ ನೀಡಿರಿ ’ ಎನ್ನುವುದರ ಅರ್ಥ – ‘ ನಾವು ದಾನ ಮಾಡದಿದ್ದುದರಿಂದಲೇ ನಮಗೆ ಈ ಪರಿಸ್ಥಿತಿಯು ಪ್ರಾಪ್ತವಾಗಿದೆ ; ಆದ್ದರಿಂದ ನೀವಾದರೂ ದಾನಮಾಡಿರಿ . ನಮ್ಮ ಪರಿಸ್ಥಿತಿಗೆ ಬರಬೇಡಿರಿ ’ ಎಂಬುದೇ ಅಲ್ಲವೇ ?
ಎಲ್ಲಕ್ಕಿಂತ ಮೋಹಕ ವಸ್ತು ಯಾವುದು ಎನ್ನುವುದನ್ನು ಶಾಸ್ತ್ರವ ಶೋಧನೆಮಾಡಿದೆ . ವ್ಯವಹಾರದಲ್ಲಿ ಹಣಕ್ಕಾಗಿಯೇ ಅಣ್ಣ – ತಮ್ಮಂ ದಿರಲ್ಲಿ ಜಗಳ ಆರಂಭವಾಗುತ್ತದೆ ; ಗುರುಶಿಷ್ಯರಲ್ಲೂ ವಾದ ನಿರ್ಮಾಣವಾಗುತ್ತದೆ . ಹೆಚ್ಚು ಕಡಿಮೆ ಖರ್ಚುಮಾಡಿದರೆ ಹೆಂಡತಿ – ಮಕ್ಕಳಿಗೂ ಕೋಪಬರುತ್ತದೆ .
‘ ದಾನ ’ ಇದೊಂದು ಮಹಾನ್ ತಪಸ್ಸು . ಬ್ರಹ್ಮಚರ್ಯ , ವಾನಪ್ರಸ್ಥ , ಮತ್ತು ಸನ್ಯಾಸ ಈ ಮೂರು ಆಶ್ರಮಗಳಲ್ಲಿ ದಾನಮಾಡುವುದು ಸಾಧ್ಯವಿರುವುದಿಲ್ಲ . ಆದ್ದರಿಂದ ಗೃಹಸ್ಥಾಶ್ರಮಿಗಳಿಗೆ ‘ ದಾನ ಮಾಡುವುದು ’ ತಪಸ್ಸಿನ ಒಂದು ವಿಶೇಷ ಪ್ರಕಾರವೆಂದು ಹೇಳಲಾಗಿದೆ . ದಾನ ಸ್ವೀಕರಿಸಲು ಮಹಾತ್ಮರು ನಿಮ್ಮಲ್ಲಿಗೆ ಬರುತ್ತಾರೆ ; ಆಗ ಕೃತಜ್ಞತೆಯಿಂದ , ಭಕ್ತಿಯಿಂದ ದಾನ ಮಾಡಿರಿ ! ಅನ್ನದಾನ ಮಾಡಿರಿ !! ಮೋಹಾದಿಗಳ ನಿರಸನೆಗೋಸ್ಕರವೇ ದಾನ ಧರ್ಮದ ವಿಧಿ ಹೇಳಲ್ಪಟ್ಟಿದೆ . ಜಗತ್ತಿನಲ್ಲಿ ಏನೆಲ್ಲವೂ ನಡೆಯುತ್ತಿರುತ್ತದೆ . ನಮಗೋಸ್ಕರ , ನಮ್ಮ ಉದ್ಧಾರಕ್ಕೋಸ್ಕರ , ಪರಮೇಶ್ವರನ ಕೃಪೆಯಿಂದ ಇವೆಲ್ಲ ನಡೆಯುತ್ತಿವೆ . ದಾನದಿಂದ ನೀವು ಜ್ಞಾನ ಮತ್ತು ಸಾಮರ್ಥ್ಯ ನೀಡುವ ಶ್ರೀ ಗುರುರೂಪೀ ಪರಮಾತ್ಮನ ಸೇವೆಯನ್ನು ಕಾಯಾ , ವಾಚಾ , ಮನಸಾ ಮಾಡಿ ಆದರ್ಶ ಜೀವನ ನಡೆಸಿ ಕೃತಾರ್ಥರಾಗಿರಿ !!
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳವರು .
ಶ್ರೀಧಾರಮೃತ ೩೬೫ ಪ್ರವಚನಗಳು ಎಂಬ ಪುಸ್ತಕದಿಂದ ಆಯ್ದ ಕುಸುಮ ,