🙏ಮನುಷ್ಯರಿಗೆ ಅತ್ಯಂತ ಪವಿತ್ರತೆಯನ್ನು ಉಂಟುಮಾಡುವ ಕರ್ಮಗಳು – ಯಜ್ಞ, ದಾನ ಮತ್ತು ತಪಸ್ಸು ಎಂದು ಗೀತಾಶಾಸ್ತ್ರವು ಹೇಳುತ್ತದೆ. ಶ್ರೀ ರಾಮ ಪೂಜಾ ಕಲ್ಪದಲ್ಲಿ ಅವು ಮೂರೂ ಸೇರುತ್ತವೆ. ಅದರಲ್ಲಿ ಜ್ಞಾನಯಜ್ಞ ದ್ರವ್ಯಯಜ್ಞಗಳು ಅರ್ಪಿತವಾಗುತ್ತವೆ. ಸಾತ್ವಿಕ ದಾನವು ನೆರವೇರುತ್ತವೆ. ಕಾಯಕ,ವಾಚಿಕ ಮತ್ತು ಮಾನಸಿಕವಾದ ತಪಸ್ಸೂ ಸಂಪನ್ನವಾಗುತ್ತದೆ. ಮೂರೂ ಸೇರಿ ” ಪೂರ್ವಸುಕೃತ ” ಎಂಬಂತೆ ಅವುಗಳ ಸೇರುವಿಕೆಯಿಂದಾಗಿ ಶ್ರೀ ರಾಮಚಂದ್ರನ ಅನುಷ್ಠಾನ ಮಾಡುವವನು ಅತ್ಯಂತ ಧನ್ಯನಾಗುತ್ತಾನೆ