ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವರು

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವರು..!

“ಶ್ರೀ ಕೋಟಿಲಿಂಗೇಶ್ವರ ಸ್ತೋತ್ರ”

ಯತ್ರ ಕೋಟೀಶ್ವರೋದೇವ: ಸರ್ವ ಕೋಟಿಗುಣಂ ಭವೇತ್ ಯತ್ ಕಿಂಜಿತ್ ಕ್ರಿಯತಚಾತ್ರಸ್ನಾನಾದಿಕಂ ನರೈ:/
ನಮಸ್ತುಂಗ ಶಿರಶ್ಚುಂಭಿ ಚಂದ್ರ ಚಾಮರ ಚಾರವೇ|
ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ||

ಶ್ರೀ ಕೋಟೇಶ್ವರ ಕೋಟಿಲಿಂಗೇಶ್ವರ ದೇವರು…

ಶ್ರೀ ಕ್ಷೇತ್ರ ಕೋಟೇಶ್ವರವು ಪರಮ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಪವಿತ್ರ ಸಪ್ತ ಕ್ಷೇತ್ರಗಳಲ್ಲಿ ಮುಖ್ಯವಾದುದಾಗಿದೆ. ಇಲ್ಲಿ ಶ್ರೀ ಕೋಟಿಲಿಂಗೇಶ್ವರನು ನೆಲೆಸಿ ಈ ತಾಣವು ಪರಮ ಪವಿತ್ರ ಎನಿಸಿಕೊಂಡು ಇಂದು ಮೆರೆಯುತ್ತಿದೆ. ನಮ್ಮ ಸುಂದರ ‘ಕೋಟೇಶ್ವರ’ ವು ಪುರಾತನ ಕಾಲದಿಂದಲೂ ರಾಜ-ಮಹಾರಾಜರು ಆಳಿ-ಮೆರೆದ ನಾಡು. ಐತಿಹಾಸಿಕ ಸಾಂಸ್ಕೃತಿಕ ಮತ್ತು ಎಲ್ಲಾ ರೀತಿಯಿಂದಲೂ ಗುರುತಿಸಿಕೊಂಡಿರುವ ‘ಕೋಟಿಲಿಂಗನ’ ಬೀಡು. ಈ ಊರು ಪುರಾತನ ಕಾಲದಲ್ಲಿ ‘ಧ್ವಜಪುರ’ ಎಂಬ ನಾಮದಿಂದ ಪ್ರಸಿಧ್ದಿಯನ್ನು ಹೊಂದಿದ ಪರಶಿವನು ನೆಲೆಸಿ ಪಾವನಗೊಳಿಸಿದ ಭವ್ಯ ತಾಣ. ಪರಶಿವನು ಇಲ್ಲಿ ನೆಲೆಸಿರುವ ಬಗ್ಗೆ ಕೆಲವಾರು ಗ್ರಂಥ ಉಲ್ಲೇಖಗಳೂ ಕೂಡಾ ಇವೆ. ಅನಾದಿ ಕಾಲದಲ್ಲಿ ‘ಕೋಟಿ ಋಷಿಗಳು’ ಒಂದಾಗಿ ಈ ಪುಣ್ಯಭೂಮಿಯಲ್ಲಿ ತಪವನ್ನಾಚರಿಸಿ ಶ್ರೀ ಪರಶಿವನನ್ನು ಒಲಿಸಿಕೊಂಡಂತ ಪುಣ್ಯ ತಾಣ, ‘ಕೋಟಿ ಋಷಿಗಳು’ ತಪಗೈದ ಕಾರಣದಿಂದ ಈ ಪುಣ್ಯ ತಾಣದಲ್ಲಿ ಪರಶಿವನು ‘ಕೋಟಿಲಿಂಗೇಶ್ವರ’ ನಾಗಿ ನೆಲೆಯಾದನು ಎಂದು ಪ್ರತೀತಿ.

ಪರಶಿವನು ಪಾರ್ವತಿ ಸಮೇತನಾಗಿ ಸಕಲ ದೇವಾನುದೇವತೆಗಳೊಡನೆ ನೆಲೆಸಿರುವ ಪರಮಪವಿತ್ರ ಪುಣ್ಯಸ್ಥಳವೇ ಈ ಪುಣ್ಯ ಭೂಮಿ ‘ಕೋಟೇಶ್ವರ’. ಹೀಗೆ ಈ ಪುಣ್ಯಭೂಮಿಯ ಬಗ್ಗೆ ಇನ್ನೂ ಹಲವಾರು ಪ್ರತೀತಿಯೂ ಪ್ರಚಲಿತವಿದೆ. ಒಮ್ಮೆ ಸತ್ಯಯುಗದಲ್ಲಿ ಬ್ರಹ್ಮದೇವನ ತಪಸ್ಸಿಗೆ ಒಲಿದು ಮೈದೋರಿ ಈ ಭೂಮಿಯಲ್ಲಿ ನಿಂದನೆಂದು ಪ್ರತೀತಿ. ಹೀಗೆ ಬ್ರಹ್ಮದೇವ ತಪಸ್ಸನ್ನು ಆಚರಿಸಿದ ಸ್ಥಳ ದೇವಾಲಯದ ಎಡಭಾಗಕ್ಕೆ ಇರುವ ಬೃಹತ್ ‘ಅಶ್ವತ್ಥ’ ವೃಕ್ಷವೆಂದು ಪುರಾಣಗಳು ಸಾರುತ್ತೆ.
ಅಂತೆ ಬ್ರಹ್ಮದೇವನ ಕಮಂಡಲದಿಂದ ಅಲ್ಲೇ ಪಕ್ಕದಲ್ಲೆ ಕೋಟಿ ಪುಣ್ಯವನ್ನು ನೀಡುವ ‘ಕೋಟಿ ತೀರ್ಥ’ ಪುಷ್ಕರಣಿಯನ್ನು ನಿರ್ಮಿಸಿದ್ದ ಎಂಬುದು ಪ್ರತೀತಿಯಿದೆ. ಹೀಗೆ ಈ ಪುಷ್ಕಕರಣಿಯನ್ನು ಪಾಂಡವರು ರಾತ್ರಿಯಲ್ಲಿ ಆರಂಭಿಸಿ ಬೆಳಗಾಗುವ ಮುನ್ನ ಮಾಡಿ ಮುಗಿಸಿದರೆಂದು ಇನ್ನೊಂದು ಉಲ್ಲೇಖವಾಗಿದೆ.

  ದೈವರಾಧನೆಯಲ್ಲಿ ಬರುವ ವಸ್ತುಗಳ ಹೆಸರು ಮತ್ತು ಸ0ಪ್ರದಾಯಗಳ ವಿವರ

ಹೀಗೆ ಈ ದೇವಾಲಯ ಪರಿಪೂರ್ಣವಾಗಿ ಬೃಹತ್ ಕಲ್ಲುಗಳಿಂದ ಮಾಡಲ್ಪಟ್ಟಿದೆ. ವಿಚಿತ್ರ, ವಿಸ್ಮಯ ರೀತಿಯಲ್ಲಿ ಬೃಹದಾಕಾರದ ಕಲ್ಲಿನಿಂದ ಈ ದೇವಾಲಯ ನಿರ್ಮಿತವಾಗಿದೆ. ಈ ದೇವಾಲಯದ ಪ್ರದಾನ ದೇವತೆಯು ‘ಶ್ರೀ ಕೋಟಿಲಿಂಗೇಶ್ವರ’ ನು ಪ್ರಜ್ವಲಿತ ಸೂರ್ಯನಂತೆ ಕಂಗೊಳಿಸುತ್ತಾನೆ. ದೇವನು ಇಲ್ಲಿ ಗರ್ಭಗ್ರಹದ ಮದ್ಯೆ ಪುಟ್ಟದಾದ ಬಾವಿಯಲ್ಲಿ ‘ಕೋಟಿಲಿಂಗ’ ದ ರೂಪದಲ್ಲಿ ನೆಲೆಸಿ ಪರಮೇಶ್ವರನು ಸರ್ವರನ್ನೂ ಕಾಯುತ್ತಾ ಇದ್ದಾನೆ. ಈ ಚಿಕ್ಕಬಾವಿಯಲ್ಲಿ ‘ರುದ್ರಾಕ್ಷಿ’ ಯನ್ನು ಹೋಲುವ ಪುಟ್ಟ-ಪುಟ್ಟ ಲಿಂಗಗಳು ಇವೆ. ಹಾಗೇ ಇಲ್ಲಿ ಪಂಚಲೋಹದ ಪರಶಿವನ ಮೂರ್ತಿ ಈ ಕೋಟಿಲಿಂಗದ ಮೇಲಿಂದ ಭಕ್ತರಿಗೆ ‘ಕೋಟಿಲಿಂಗೇಶ್ವರ’ ನಾಗಿ ಕಂಗೊಳಿಸುತ್ತಾನೆ. ಹೀಗೆ ರುದ್ರಾಭಿಷೇಕ ಪ್ರಿಯ ರುದ್ರನಿಗೆ ಅನುಗಾಲವು ರುದ್ರಾಭಿಷೇಕ ನಡೆಯುತ್ತಿರುತ್ತದೆ.

  ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ಏಕೈಕ ಕ್ಷೇತ್ರ ಕೊಂಡೇಶ್ವರ

ಹೀಗೆ ಈ ಪರಮಪವಿತ್ರ ಕ್ಷೇತ್ರ ಸರ್ವದೇವತೆಗಳ ನೆಲೆವೀಡು ಆಗಿದೆ ಎಂದರೆ ತಪ್ಪಾಗಲಾರದು. ಪರಶಿವನೊಂದಿಗೆ ಆದಿಶಕ್ತಿ ರೂಪಿಣಿಯಾದ ಸರ್ವಮಂಗಳೆ ಶಿವನ ಎಡದಲ್ಲಿ ದಕ್ಷಿಣಕ್ಕೆ ಮುಖಮಾಡಿ ಕುಳಿತು ಸರ್ವರ ಅಭೀಷ್ಟವನ್ನು ಈಡೇರಿಸುತ್ತಾ ಇದ್ದಾಳೆ. ಇವಳ ಪುಟ್ಟ ವಿಗ್ರಹ ಅತೀ ಸುಂದರ ಮನೋಹರವಾಗಿದೆ.

ಪರಶಿವನನಿಗೆ ಎಡದಲ್ಲಿ ಶಿವನಿಗೆ ಮುಖಮಾಡಿ ಬ್ರಹತ್ ನಂದಿಯು ಕುಳಿತು ಜ್ಞಾನವನ್ನು ಬೆಳಗುತ್ತಾ ಇದ್ದಾನೆ. ಪಾರ್ವತಿ ಪರಶಿವನ ಪ್ರೀತಿ ಪುತ್ರ ವಿಘ್ನನಾಶಕನಾದ ಶಿವನ ಬಲಭಾಗದಲ್ಲಿ ‘ಮೂಲೆಗಣಪತಿ’ ಎಂಬ ನಾಮದಿಂದ ಕ್ಷೇತ್ರದ ಕಾರಣಿಕ ಶಕ್ತಿಯಾಗಿ ನೆಲೆಸಿದ್ದಾನೆ. ಈ ದೇವ ಕಳೆದು ಹೋದ ಅಮೂಲ್ಯ ವಸ್ತುಗಳನ್ನು ಯಾವ ಮೂಲೆಯಲ್ಲಿದ್ದರೂ ಮರಳಿಕೊಡುತ್ತಾನೆ ಎಂಬುದು ಪ್ರತೀತಿ.
ಹೀಗೆ ನಾವು ಪ್ರದಕ್ಷಿಣಾ ಪಥದಲ್ಲಿ ಸಾಗಿದಂತೆ ಮೊದಲಿಗೆ ‘ಸಪ್ತಮಾತೃಕೆ’ ಯರು ಒಡಗೂಡಿ ಕುಳಿತು, ಇವರೊಡನೆ ಭೂತಗಣಗಳ ನಾಯಕ ‘ವೀರಭದ್ರ’ ಮತ್ತು ಮಹಾಗಣಪತಿಯೂ ಕೂಡಾ ನೆಲೆಸಿದ್ದಾರೆ. ಮುಂದೆ ಹೆಜ್ಜೆಯಿಟ್ಟು ಸಾಗಿದಂತೆ ದೇವಾಲಯದ ಹಿಂಬಾಗದಲ್ಲಿ ‘ಶ್ರೀ ಸುಬ್ರಹ್ಮಣ್ಯ ಸ್ವಾಮಿ’ ನೆಲೆಸಿ ನಿಂದಿದ್ದಾನೆ. ಅದೇ ಪಥದಲ್ಲಿ ನಡೆದಾಗ ‘ಜ್ಯೇಷ್ಠ ಲಕ್ಷ್ಮಿ’ ನೆಲೆಸಿದ್ದಾಳೆ. ಅದೇ ರೀತಿ ವೆಂಕಟರಮಣ, ತಾಂಡವೇಶ್ವರ ಕೂಡಾ ಒಳ ಪ್ರಾಕಾರಗಳಲ್ಲಿ ನೆಲೆಸಿ ನಿಂತಿದ್ದಾರೆ.
ಹೊರ ಪ್ರಕಾರದಲ್ಲಿ ‘ಆದಿಗಣಪತಿ’, ‘ಮುಖ್ಯಪ್ರಾಣ’, ‘ಮಹಾವಿಷ್ಣು’, ‘ಗೋಪಾಲಕೃಷ್ಣ’ ರು ನೆಲೆಸಿ ನಿಂದು ಭಕ್ತರ ಪೊರೆಯುತ್ತಾ ನಿಂದಿದ್ದಾರೆ. ಅದೇ ರೀತಿ ಇಲ್ಲಿ ಆಕರ್ಷಣೆಗಳಲ್ಲಿ ‘ತಟ್ಟಿರಾಯ’ಗಳು ಬಹಳ ಆಕರ್ಷಣೀಯವಾಗಿವೆ.

  ಶ್ರೀಶೈಲ ಕ್ಷೇತ್ರ

ಕೋಟಿತೀರ್ಥ ಶಿಲ್ಪ ಕಲಾ ವೈಭವ-
ಹಾಗೆ ಇಲ್ಲಿನ ಪುಷ್ಕರಣಿಯ ಕಲ್ಲುಗಳ ಮೇಲೆ ಅನೇಕ ಪ್ರಾಣಿ-ಪಕ್ಷಿಗಳ ಕೆತ್ತನೆಗಳೂ ಕೂಡಾ ಕಂಡು ಬರುತ್ತದೆ. ಅದರಲ್ಲಿ ನವಿಲು, ಮೊಸಳೆ, ಆಮೆ ಹಾಗೆ ಶಿವಲಿಂಗವೂ ಕೂಡಾ ಇದೆ. ಶಿವಲಿಂಗ ಇರುವ ಸ್ಥಳದಲ್ಲಿ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಹಾಗೆ ಅಲ್ಲೇ ಪಕ್ಕದಲ್ಲಿ ಪ್ರಸನ್ನ ಗಣಪತಿಯ ಗುಡಿಯು ಇದೆ. ಇಲ್ಲಿ “ಕೊಡಿ ಹಬ್ಬದ” ದಿನ ಈ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿ ನಂತರ ಇಲ್ಲಿ ಗಣಪತಿಯನ್ನು ಮೊದಲು ವಂದಿಸುವುದು ರೂಢಿ. ಇಲ್ಲಿ “ಕೊಡಿ ಹಬ್ಬ” ವು ಅತ್ಯಂತ ಪ್ರಸಿದ್ದವಾದ ಹಬ್ಬವಾಗಿದೆ.

ಶ್ರೀ ಕೋಟಿಲಿಂಗೇಶ್ವರ ದೇವರು
ಸಮಸ್ತ ರಿಗೂ ಸನ್ಮಂಗಳವುಂಟು ಮಾಡಲಿ ಎಂದು ಪ್ರಾರ್ಥಿಸೋಣ.
ಸಂಗ್ರಹ.🙏

Leave a Reply

Your email address will not be published. Required fields are marked *

Translate »