ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಚಾರ್ಮಾಡಿ ಘಾಟ್ ಕಾಯುವ ತಾಯಿ ಗುಳಿಗಮ್ಮ

ಚಾರ್ಮಾಡಿ ಘಾಟ್ ಕಾಯುವ ತಾಯಿ ಗುಳಿಗಮ್ಮ..! ವಾಹನ ಸವಾರರಿಗೆ ಅಮ್ಮನೇ ಶ್ರೀರಕ್ಷೆ..!

​​ಚಾರ್ಮಾಡಿ ಘಾಟಿಯೇ ಅಲ್ಲೋಲ – ಕಲ್ಲೋಲವಾಗಿದ್ರೂ ಈ ಪ್ರದೇಶ ಅಲುಗಾಡಿಲ್ಲ. ದೇವಿ ನೆಲೆಸಿರೋ ನೂರು ಮೀಟರ್ ಅಂತರದಲ್ಲಿ ಎಡ – ಬಲ ಭಾಗದ ಎರಡು ಕಡೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿದಿದ್ರೂ ದೇವಿ ಇರುವ ಸ್ಥಳದಲ್ಲಿ ಮಾತ್ರ ಒಂದಿಂಚೂ ಭೂಮಿ ಹಾನಿಯಾಗಿಲ್ಲ.

ಮಳೆಗಾಲದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ
ದೇವಿ ಇರುವ ಸ್ಥಳದ ಸುತ್ತಮುತ್ತ ಯಾವುದೇ ಅಪಾಯವಾಗಿಲ್ಲ
ಸಮೀಪದ ಗ್ರಾಮಕ್ಕೂ ಯಾವುದೇ ಅಪಾಯ ಆಗಿಲ್ಲ
ಚಾರ್ಮಾಡಿ ಘಾಟ್ ಕಾಯುವ ತಾಯಿ ಗುಳಿಗಮ್ಮ..! ವಾಹನ ಸವಾರರಿಗೆ ಅಮ್ಮನೇ ಶ್ರೀರಕ್ಷೆ..!

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ನೋಡೋಕೆ ಎಷ್ಟು ಸುಂದರವೋ, ಅಷ್ಟೇ ಡೇಂಜರ್..! ಹಾವಿನಂತೆ ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಒಂದೇ ಒಂದು ಸೆಕೆಂಡ್ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ..! ಅದರಲ್ಲೂ ಮಳೆಗಾಲದಲ್ಲಿ ಇಲ್ಲಿನ ಹಲವು ಗ್ರಾಮದ ಜನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಆದರೆ, ಒಂದೇ ಒಂದು ಸಾವು, ಅನಾಹುತ ಸಂಭವಿಸಲಿಲ್ಲ.. ಅದಕ್ಕೆಲ್ಲಾ ಕಾರಣ ಅದೊಂದು ಅಗೋಚರ ಶಕ್ತಿ ಮಾತ್ರ..! ಈ ಮಾರ್ಗದಲ್ಲಿ ಓಡಾಡುವವರಿಗೆ ಹಾಗೂ ಇಲ್ಲಿನ ಗ್ರಾಮಗಳ ಜನರ ಆಸ್ತಿ – ಪಾಸ್ತಿ ರಕ್ಷಣೆ ಆ ದೇವರ ಹೊಣೆ ಅನ್ನೋದು ಇಲ್ಲಿನ ಜನರ ನಂಬಿಕೆ.

  ಮನುಷ್ಯನ ಪಾಪ ಪುಣ್ಯ ಎಲ್ಲಿ ಹೋಗುತ್ತದೆ ?

ಕಾಫಿ ನಾಡಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಯಾರಿಗೆ ತಾನೇ ಗೊತ್ತಿಲ್ಲ. ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆ. ಇಲ್ಲಿನ ದಟ್ಟಾರಣ್ಯದಲ್ಲಿ ಚಲಿಸುವಾಗ ಗಟ್ಟಿ ಗುಂಡಿಗೆ ಇರ್ಬೇಕು. ಪ್ರಯಾಣದ ವೇಳೆ ಬಹುತೇಕ ಪ್ರಯಾಣಿಕರು ಈ ದೇವಿಗೆ ನಮಸ್ಕಾರ ಹಾಕದೆ ಮುಂದೆ ಹೋಗೋದಿಲ್ಲ.
ಚಾರ್ಮಾಡಿ ರಸ್ತೆಯ ಅಲೇಖಾನ್ ಹೊರಟ್ಟಿ ಗ್ರಾಮದ ಎಂಟ್ರಿಯಲ್ಲೇ ಈ ದೇವಿ ವಿರಾಜಮಾನವಾಗಿದ್ದಾಳೆ. ಈಕೆಗೆ ಮೂರ್ತಿ ಇಲ್ಲ. ಈ ಕಲ್ಲಿನ ಮೂರ್ತಿಯೇ ಆ ಗುಳಿಗಮ್ಮ ದೇವಿ. ಈ ದೇವಿಯದ್ದು ಅಪಾರ ಶಕ್ತಿ ಅನ್ನೋದು ಭಕ್ತರ ನಂಬಿಕೆ. ಮಳೆಗಾಲದಲ್ಲಿ ಅತಿ ಹೆಚ್ಚು ಭೂ ಕುಸಿತ, ಗುಡ್ಡ ಕುಸಿತವಾದ್ರೂ ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ಯಾರಿಗೂ ಅಪಾಯವಾಗಿಲ್ಲ.

  ತಾರ್ಕಿಕ ಆಲೋಚನೆ - Logical Thinking - Critical Thinking

ಚಾರ್ಮಾಡಿ ಘಾಟಿಯೇ ಅಲ್ಲೋಲ – ಕಲ್ಲೋಲವಾಗಿದ್ರೂ ಈ ಪ್ರದೇಶ ಅಲುಗಾಡಿಲ್ಲ. ದೇವಿ ನೆಲೆಸಿರೋ ನೂರು ಮೀಟರ್ ಅಂತರದಲ್ಲಿ ಎಡ – ಬಲ ಭಾಗದ ಎರಡು ಕಡೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿದಿದ್ರೂ ದೇವಿ ಇರುವ ಸ್ಥಳದಲ್ಲಿ ಮಾತ್ರ ಒಂದಿಂಚೂ ಭೂಮಿ ಹಾನಿಯಾಗಿಲ್ಲ.

ಚಾರ್ಮಾಡಿ ಘಾಟಿಗೆ ಅಂಟಿಕೊಂಡಂತೆಯೇ ಇರುವ ಆಲೇಖಾನ್ ಹೊರಟ್ಟಿ ಗ್ರಾಮದ ರಸ್ತೆಯ ಹಲವೆಡೆ ಬೃಹತ್ ಪ್ರಮಾಣದ ಬಂಡೆಗಳು ಬಿದ್ದರೂ ಗ್ರಾಮ ಹಾಗೂ ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ, ಗಂಡಾಂತರದಿಂದ ಕಾಪಾಡೋ ಈ ದೇವಿಗೆ ಜನ ಪ್ರತಿ ವರ್ಷ ಪೂಜೆ ಸಲ್ಲಿಸ್ತಾರೆ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ರಸ್ತೆ ಎಂಥಾ ಮಳೆಗೂ ಶೇಕ್ ಆಗಿರಲಿಲ್ಲ. ಆದ್ರೆ ಕಳೆದ ಬಾರಿಯ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಓಡಾಡೋದೇ ಅನುಮಾನವೇನೋ ಅನ್ನೋ ರೀತಿಯಲ್ಲಿ ಚಿಂದಿ ಚಿತ್ರಾನ್ನವಾಗಿತ್ತು. ಹುಚ್ಚು ಮಳೆಯ ಆರ್ಭಟ ಒಂದೆಡೆ, ನೋಡು ನೋಡುತ್ತಿದ್ದಂತೆಯೇ ಕುಸಿದು ಬೀಳುತ್ತಿದ್ದ ಗುಡ್ಡಗಳು ಮತ್ತೊಂದೆಡೆ.

ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನಗಳಿಗೆ ದಿನಪೂರ್ತಿ ಸಂಚಾರಕ್ಕೆ ಅವಕಾಶ
ಈ ಮಧ್ಯೆ ಇದೇ ಮಳೆಯಲ್ಲಿ ಸಿಲುಕಿಕೊಂಡ 10 ಜನರು ಅಕ್ಷರಶಃ ಸಾವನ್ನೇ ಗೆದ್ದಿದ್ರು. ಇಷ್ಟೆಲ್ಲಾ ಆಗುವಾಗ ನಮ್ಮನ್ನ ಬದುಕಿಸಿದ್ದು ಬೇರೆ ಯಾರೂ ಅಲ್ಲ, ಇದೇ ಗುಳಿಗಮ್ಮ ಅನ್ನೋದು ಜನರ ಬಲವಾದ ನಂಬಿಕೆ. ಒಟ್ಟಾರೆ, ಅಲೇಖಾನ್ ಗ್ರಾಮದವರಷ್ಟೆ ಅಲ್ಲ, ಸುತ್ತಲಿನ ಆದಿವಾಸಿಗಳ ಸಂಕಷ್ಟ ಪರಿಹರಿಸ್ತಿರೋದು ಕೂಡ ಈ ಗುಳಿಗಮ್ಮ ದೇವಿ.
ಇಲ್ಲಿ ಸಂಚರಿಸೋ ನೂರಾರು ಜನ ಇಲ್ಲಿ ಪೂಜೆ ಮಾಡಿ ದೇವಿಯ ಕೃಪೆಗೆ ಪಾತ್ರವಾಗಿ ತಮ್ಮ ಇಷ್ಟಾರ್ಥ ಸಿದ್ದಿಸಿ ಕೊಳ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಬೆಟ್ಟ – ಗುಡ್ಡ ಕುಸಿಯೋ ಸಂದರ್ಭದಲ್ಲಿ ನಮ್ಮನ್ನ ಕಾಯ್ತಿದ್ದಾಳೆಂದು ಇಲ್ಲಿನ ಜನ ಗುಳಿಗಮ್ಮ ದೇವಿಗೂ ಕೂಡ ಭಯ – ಭಕ್ತಿಯಿಂದ ಪೂಜಾ – ಕೈಂಕರ್ಯ ನಡೆಸಿಕೊಂಡು ಬರ್ತಿದ್ದಾರೆ..
ಹರೇ ಕೃಷ್ಣ

Leave a Reply

Your email address will not be published. Required fields are marked *

Translate »