ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಬೋಳಾರ ಮಂಗಳಾದೇವಿ ದೇವಾಲಯ

ಮಂಗಳಾದೇವಿ ದೇಗುಲ…!

ಸರ್ವ ಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಿಕೆ ಶರಣೈ ತ್ರಿಯಂಬಕೆ ಗೌರಿ ನಾರಾಯಣೀ ನಮೋಸ್ತುತೇ |

ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯವು ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ. ಅಂದರೆ ಮಂಗಳೂರು #ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯವು 9ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದಾಗಿದೆ.

ತಮಿಳುನಾಡನ್ನು ಆಳುತ್ತಿದ್ದ ಅರಸ ಕುಂದವರ್ಮ ಈ ದೇವಾಲಯವನ್ನು ನಿರ್ಮಿಸಿದ. ದೇವಿ ಮಂಗಳಾದೇವಿ ದೇವಾಲಯದ ಪ್ರಮುಖ ದೇವತೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ನವರಾತ್ರಿ ಉತ್ಸವದ ಒಂಬತ್ತನೇ ದಿನ ಬೃಹತ್‌ ರಥೋತ್ಸವ ಇಲ್ಲಿ ನಡೆಯುತ್ತದೆ. ದೊಡ್ಡ ಮೆರವಣಿಗೆ ಈ ಸಂದರ್ಭದಲ್ಲಿ ನಡೆಯುತ್ತದೆ. ಬೃಹತ್‌ ಮೆರವಣಿಗೆಯಲ್ಲಿ ದೇವಿಯನ್ನು ಹೊತ್ತು ಸಾಗುವ ದೃಶ್ಯ ಮನಮೋಹಕವಾಗಿರುತ್ತದೆ. ಉತ್ತಮ ಕಾಲಕ್ಕಾಗಿ ಈ ಸಂದರ್ಭದಲ್ಲಿ ದೇವಿಯನ್ನು ಪ್ರಾರ್ಥಿಸಲಾಗುತ್ತದೆ.

  ಕನ್ನಡ ಭಾಷೆ - Kannada Language Specialties

ಈ ದೇವಾಲಯದಲ್ಲಿ ಆಚರಣೆಯಾಗುವ ಇನ್ನೊಂದು ದೊಡ್ಡ ಹಬ್ಬ #ಗಣೇಶೋತ್ಸವ. ಮಂಗಳೂರು ನಗರ ಬಸ್‌ ನಿಲ್ದಾಣದಿಂದ ಈ ದೇವಾಲಯಕ್ಕೆ ಅತ್ಯಂತ ಸುಲಭವಾಗಿ ಬಸ್‌ ಮೂಲಕ ತೆರಳಬಹುದು. ಈ ದೇವಾಲಯ ಪ್ರಮುಖವಾಗಿ ಬಾಲೆಯರಿಗೆ ಪ್ರಮುಖವಾಗಿದೆ. #ಮಂಗಳ ಪಾರ್ವತಿ ವೃತ ದೇವಾಲಯದ ಪ್ರಮುಖ ವೃತಗಳಲ್ಲಿ ಒಂದು. ಇಲ್ಲಿ ಮಾತ್ರ ಇದನ್ನು ಆಚರಿಸಲಾಗುತ್ತದೆ. #ಕುವರಿಯರು ಇಲ್ಲಿ ಬಂದು ಈ ವೃತ ಮಾಡಿದರೆ ಉತ್ತಮ ಪತಿ ಸಿಕ್ಕು, ಜೀವನ ಅತ್ಯಂತ ಸುಗಮವಾಗಿ ಸಾಗುತ್ತದೆ ಎಂದು ನಂಬಲಾಗಿದೆ.

Leave a Reply

Your email address will not be published. Required fields are marked *

Translate »