ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಾತಂಗೇಶ್ವರ ಮಹದೇವ ದೇವಾಲಯ ಖುಜರಾಹೋ

ಮಾತಂಗೇಶ್ವರ ಮಹದೇವ ಎಲ್ಲಿದ್ದಾರೆ ಗೊತ್ತೆ…!

  ನಾವು ಊಹಿಸಲು ಸಾಧ್ಯವಿಲ್ಲದಷ್ಟು ವೈಭವವಾಗಿರುವ ಪ್ರಾಚೀನ ದೈವಿಕ ತಾಣಗಳಲ್ಲಿ      ಮಾತಂಗೇಶ್ವರ ದೇವಾಲಯವು ಒಂದು. ಸುಮಾರು 1200 ವರ್ಷಗಳ ಹಿಂದೆ ಒಂಬತ್ತನೇ ಶತಮಾನದಲ್ಲಿ ಶಿವನಿಗೆ ಸಮರ್ಪಿತವಾಗಿ ನಿರ್ಮಾಣವಾಗಿರುವ ಈ ದೇವಾಲಯವು ಭಾರತದ ಮಧ್ಯಪ್ರದೇಶ ರಾಜ್ಯದ ಖಜುರಹೋ ಪಟ್ಟಣದ ಸೇವಾಗ್ರಾಮದಲ್ಲಿದೆ. ಈ ಭಾಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಚಂಡೇಲಾ ರಾಜವಂಶದ ಚಂದ್ರದೇವ್ ಮಹಾರಾಜನು ಈ ದೇವಾಲಯವನ್ನು ನಿರ್ಮಿಸಿದ. ಇದು ಮಧ್ಯಪ್ರದೇಶದ ಪ್ರಸಿದ್ಧ ದೇವಾಲಯವಾಗಿದೆ. ರಾಜನು ಪರಮಶಿವನ ಮಹಾನ್ ಭಕ್ತನಾಗಿದ್ದನು. ಇಲ್ಲಿರುವ ಭಗವಾನ್ #ಶಿವನನ್ನು_ಪೂಜ್ಯ_ಋಷಿಮಾತಂಗ_ಎಂದು_ಪರಿಗಣಿಸಲಾಗುತ್ತದ_ಹಾಗಾಗಿಯೇ_ಶಿವಲಿಂಗದ_ಹೆಸರು_ಮಾತಂಗೇಶ್ವರರ್ ಎಂಬುದಾಗಿ ಹೆಸರುವಾಸಿಯಾಗಿದೆ.
 ಈ ದೇವಾಲಯದ ಒಳಭಾಗದಲ್ಲಿರುವ ಎಂಟು ಅಡಿ ಎತ್ತರದ ಶಿವಲಿಂಗವವು ಹಳದಿಮಿಶ್ರಿತ ಹೊಳಪು ಬಣ್ಣವನ್ನು ಹೊಂದಿದ್ದು ಇದನ್ನು ಮರಳುಗಲ್ಲಿನಿಂದ ಮಾಡಲಾಗಿದೆ ಹಾಗೂ ಉತ್ತರ ಭಾರತದ ಅತಿದೊಡ್ಡ ಲಿಂಗಗಳಲ್ಲಿ ಇದನ್ನು ಒಂದೆಂದು ಪರಿಗಣಿಸಲಾಗಿದೆ. ಮಾತಂಗೇಶ್ವರ ಅಥವಾ ಮೃತ್ಯುಂಜಯ ಮಹಾದೇವ್ ದೇವಾಲಯವು (ಸಾವನ್ನು ಗೆದ್ದ ಮಹಾನ್ ಭಗವಂತ) ಖಜುರಾಹೋದಲ್ಲಿ ನಿರ್ಮಿಸಲಾದ ಆರಂಭಿಕ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ಹೊರಭಾಗ ಮತ್ತು ಒಳಭಾಗಗಳಲ್ಲಿ ಯಾವುದೇ ಕಂಬಗಳು ಕೆತ್ತನೆಗಳಿಲ್ಲದಿದ್ದರೂ ಮೇಲ್ಛಾವಣಿಗಳು ಸುರಳಿ ಆಕಾರದ ಕೇಂದ್ರೀಕೃತ ರಚನೆಗಳೊಂದಿಗೆ ರೂಪುಗೊಂಡಿವೆ. ಮಾತಂಗೇಶ್ವರ ಖಜುರಾಹೊದ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಲಕ್ಷ್ಮಣ ದೇವಾಲಯದ ಪಕ್ಕದಲ್ಲಿರುವ ಈ

ದೇವಾಲಯವು ಅದರ ವಿನ್ಯಾಸ ಮತ್ತು ವಾಸ್ತುಶಿಲ್ಪದ ಯೋಜನೆಯಲ್ಲಿ ಬ್ರಹ್ಮ ದೇವಾಲಯವನ್ನು ಹೋಲುತ್ತದೆ. ದೇವಾಲಯದ ಗರ್ಭಗುಡಿಯೊಳಗೆ, ನಯಗೊಳಿಸಿದ ಲಿಂಗವನ್ನು ವಿಶಾಲವಾದ ಗೌರಿ-ಪಟ್ಟದ (ಎಲೆಯಂತಹ ರಚನೆಯ) ಮೇಲೆ ಸ್ಥಾಪಿಸಲಾಗಿದೆ. ಲಿಂಗದ ಮೇಲೆ ಪರ್ಷಿಯನ್ ಮತ್ತು ದೇವನಾಗರಿ ಲಿಪಿಯಲ್ಲಿ ಶಾಸನಗಳಿವೆ, ಇವುಗಳನ್ನು ಅಳಿಸಲಾಗದ ಶಾಯಿಯಲ್ಲಿ ಬರೆಯಲಾಗಿದೆ.
ಹೀಗೆ ಅತ್ಯಂತ ವಿಶಿಷ್ಟವಾದ ಈ ದೇವಾಲಯದಲ್ಲಿನ ಶಿವಲಿಂಗವು ಸ್ಥಾಪಿತವಾದ ದಿನದಿಂದ ಇಂದಿನವರೆವಿಗೂ ಅಡೆ ತಡೆಗಳಿಲ್ಲದೆ ಪೂಜಿತಗೊಂಡು ಭಕ್ತಾದಿಗಳ ಮನೋಕಾಮನೆಗಳನ್ನು ನೆರೆವೇರಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ.

Leave a Reply

Your email address will not be published. Required fields are marked *

Translate »