ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಾರಂಜಾ ಶ್ರೀ ನೃಸಿಂಹ ಸರಸ್ವತೀಯ ಜನ್ಮಸ್ಥಾನ

ಕಾರಂಜಾ – ಶ್ರೀ ನೃಸಿಂಹ ಸರಸ್ವತೀಯ ಜನ್ಮಸ್ಥಾನ..!

ಕಾರಂಜಾದ ಪೌರಾಣಿಕ ಮತ್ತು ಐತಿಹಾಸಿಕ ಹೆಸರು ಶ್ರೀ ಕರಂಜ ಋಷಿಗಳ ಕೃಪೆಯಿಂದ ದೊರೆತಿದೆ. ಮೊದಲು ಈ ಊರಿಗೆ ಕರಂಜನಗರಿಯೆಂದು ಗುರುತಿಸುತ್ತಿದ್ದರು. ಈ ಊರಿನಲ್ಲಿ ಭಯಂಕರ ಬರಗಾಲವಿತ್ತು. ಆದ್ದರಿಂದ ಕರಂಜ ಋಷಿಗಳು ಕೈಯಲ್ಲಿ ಗುದ್ದಲಿಯನ್ನು ತೆಗೆದುಕೊಂಡು ಸರೋವರವನ್ನು ಅಗಿಯಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಉತ್ತರದಿಂದ ಋಷಿಯೋರ್ವರ ಸಂಘವು ಅಲ್ಲಿ ಬಂತು. ಅವರು ತಮ್ಮತಮ್ಮ ಕಮಂಡಲದಲ್ಲಿನ ನೀರನ್ನು ಅಲ್ಲಿ ಸುರಿದರು ಮತ್ತು ಒಂದು ದೊಡ್ಡ ಜಲಾಶಯ ಸಿದ್ಧವಾಯಿತು. ಈ ಜಲಾಶಯವು ಇಂದಿಗೂ ‘ಋಷಿ ಜಲಾಶಯ’ವೆಂದು ಪ್ರಸಿದ್ಧವಾಗಿದೆ. ಈ ಕರಂಜ ನಗರವು ‘ಜೈನರ ಕಾಶಿ’ಯೆಂದು ಗುರುತಿಸಲಾಗುತ್ತದೆ. ಇಲ್ಲಿ ಮೂರು ಜೈನ ದೇವಸ್ಥಾನಗಳು ಮತ್ತು ಒಂದು ಜೈನ ಗುರುಕುಲವಿದೆ. ಆದರೆ ಈ ಕಾರಂಜಾ ಗ್ರಾಮವು ಶ್ರೀ ದತ್ತಗುರುಗಳ ದ್ವಿತೀಯ ಅವತಾರ ಶ್ರೀ ನೃಸಿಂಹ ಸರಸ್ವತೀ ಸ್ವಾಮೀ ಮಹಾರಾಜರ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿದೆ.

  ಇಡಗುಂಜಿ ಶ್ರೀಮಹಾಗಣಪತಿ ಕ್ಷೇತ್ರ

ಕರಂಜ ಋಷಿಗಳ ಕಾರ್ಯಸ್ಥಾನವಾಗಿ ಪವಿತ್ರವಾದ ಈ ಕಾರಂಜಾ ನಗರವು, ಪ.ಪೂ. ಸ್ವಾಮೀ ಶ್ರೀ ವಾಸುದೇವಾನಂದ ಸರಸ್ವತೀ ಇಲ್ಲಿ ಬರುವವರೆಗೆ ಕಾರಂಜಾ ವಾಸಿಗಳಿಗೆ ದತ್ತ ಗುರುಗಳ ಅವತಾರ ನೃಸಿಂಹ ಸರಸ್ವತೀಯ ಜನ್ಮಸ್ಥಳವೆಂದು ಅಜ್ಞಾತವಾಗಿಯೇ ಇತ್ತು. ಸ್ವಾಮೀಜಿಯವರು ಈ ಸ್ಥಾನದ ಮಹಾತ್ಮೆಯನ್ನು ಪ.ಪೂ. ಬ್ರಹ್ಮಾನಂದ ಸರಸ್ವತೀ ಸ್ವಾಮೀ ಮಹಾರಾಜರಿಗೆ ತಿಳಿಸಿದರು.

ಶ್ರೀ ದತ್ತ ಸಂಪ್ರದಾಯದಲ್ಲಿ ನಿರ್ಗುಣ ಪಾದುಕೆಗಳಿಗೆ ಅತ್ಯಂತ ಮಹತ್ತ್ವವಿದೆ. ಆ ಪಾದುಕೆಗಳನ್ನು ಕಾಶಿ ಕ್ಷೇತ್ರದಿಂದ ಪ.ಪೂ. ಬ್ರಹ್ಮಾನಂದ ಸ್ವಾಮೀಯವರು ತಂದರು ಮತ್ತು ವಿಧಿಪೂರ್ಣವಾಗಿ ಪ್ರಾಣಪ್ರತಿಷ್ಠೆಯನ್ನು ಕಾರಂಜಾದ ದೇವಸ್ಥಾನದಲ್ಲಿ ಮಾಡಿದರು. ಈ ಪಾದುಕೆಗಳನ್ನು ಬೆಳಗ್ಗೆ ಗಂಧಲೇಪನಕ್ಕಾಗಿ ತೆಗೆಯುತ್ತಾರೆ ಮತ್ತು ಮಧ್ಯಾಹ್ನದ ಆರತಿಯಾದ ನಂತರ ಪೂಜಾಮಂಟಪದಲ್ಲಿಡುತ್ತಾರೆ. ಈ ಪಾದುಕೆಗಳಿಗೆ ಸುಗಂಧದ್ರವ್ಯ, ಕೇಸರಿ ಮಿಶ್ರಿತ ಗಂಧಲೇಪನವು ನಿಯಮಿತವಾಗಿ ಆಗುತ್ತದೆ. ಈ ಸಂಪ್ರದಾಯದ ಕಾರ್ಯಕ್ರಮವು ಹೇಗಿರಬೇಕೆಂಬುದನ್ನು ಪ.ಪೂ. ಬ್ರಹ್ಮಾನಂದ ಸ್ವಾಮೀಯವರು ನಿರ್ಧರಿಸಿಕೊಟ್ಟಿದ್ದಾರೆ. ಬೆಳಗ್ಗೆ ಐದುವರೆಗೆ ಕಾಕಡಆರತಿ, ಅದರ ನಂತರ ಮಹಾರಾಜರಿಗೆ ಲಘುರುದ್ರ ಮತ್ತು ಪಂಚೋಪಚಾರ ಪೂಜೆ, ನಂತರ ಸತ್ಯದತ್ತ ಪೂಜೆ, ಸಾಯಂಕಾಲ ಪೂಜೆ, ಪಂಚಪದಿ, ರಾತ್ರಿ ಎಂಟುವರೆಗೆ ಆರತಿ ಮತ್ತು ನಂತರ ಅಷ್ಟಕಗಳು ಮತ್ತು ಶಂಖೋದಕವಾಗಿ ಇತರ ಕೆಲವು ಕಾರ್ಯಕ್ರಮಗಳು ಇಲ್ಲದಿದ್ದರೆ ಶೇಜಾರತಿಯಾಗುತ್ತದೆ ಮತ್ತು ನಂತರ ಗರ್ಭಗೃಹದ ಬಾಗಿಲನ್ನು ಮುಚ್ಚಲಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಮರುದಿನದ ಕಾಕಡ ಆರತಿಯವರೆಗೆ ಬಾಗಿಲನ್ನು ತೆರೆಯುವುದಿಲ್ಲ. ಈ ಸ್ಥಳದ ಅರ್ಚಕನಿಗೆ ತ್ರಿಕಾಲ ಸ್ನಾನ ಮಾಡಿ ಗರ್ಭಗುಡಿಯಲ್ಲಿ ಹೋಗಬೇಕಾಗುತ್ತದೆ. ಅದು ಕೂಡಾ ಮನೆಯಲ್ಲಿ ಸ್ನಾನ ಮಾಡಿ ಬಂದರೆ ಆಗುವುದಿಲ್ಲ. ದೇವಸ್ಥಾನದಲ್ಲಿಯೇ ಅರ್ಚಕರಿಗಾಗಿ ಸ್ವತಂತ್ರ ಸ್ನಾನಗೃಹವಿದೆ. ಅಲ್ಲಿಯೇ ಸಾನ್ನ ಮಾಡಿದ ನಂತರ ಅವರು ತಮ್ಮತಮ್ಮ ಕೆಲಸಕ್ಕೆ ಹೋಗುತ್ತಾರೆ. ಅರ್ಚಕನ ಹೊರತು ಯಾರಿಗೂ ‘ಶ್ರೀ‘ಯವರ ಗರ್ಭಗೃಹದಲ್ಲಿ ಪ್ರವೇಶವಿಲ್ಲ. ಈ ಸ್ಥಳವು ಅತ್ಯಂತ ಜಾಗೃತವಾಗಿದೆ. ಇದರ ಅನುಭೂತಿಯನ್ನು ಅನೇಕ ಮಂದಿ ಭಕ್ತರು ಪಡೆದಿದ್ದಾರೆ.

  ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು

Leave a Reply

Your email address will not be published. Required fields are marked *

Translate »