ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ


ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ..!

ಅನಂತ ಚತುರ್ದಶಿಯನ್ನು ಎರಡು ಮಹತ್ವದ ಕಾರಣಗಳಿಗಾಗಿ ಆಚರಿಸಲಾಗುತ್ತದೆ. ಈ ದಿನ ಗಣೇಶ ಚತುರ್ಥಿ ಯಂದು ಪೂಜಿಸಲ್ಪಟ್ಟ ಗಣೇಶನಿಗೆ ಹತ್ತು ದಿವಸಗಳ ಬಳಿಕ ವಿಸರ್ಜನೋತ್ಸವ. ಅದೇ ದಿನ ಅನಂತ ಚತುರ್ದಶೀ ಪೂಜೆಯನ್ನು ಮಾಡಲಾಗುತ್ತದೆ. ಅಂದು ಅಂದರೆ ಭಾದ್ರಪದ ಶುಕ್ಲ ಚತುರ್ದಶಿಯಂದು, ಮಹಾವಿಷ್ಣುವಿಗೆ ವ್ರತ ಪುರಸ್ಸರ ವಿಶೇಷ ಪೂಜೆ. ಒಂದು ಪ್ರತೀತಿಯಂತೆ ಗಣೇಶ ಚತುರ್ಥಿಯಂದು ಗಣೇಶ ಕೈಲಾಸದಿಂದ ಭೂಮಿಗಿಳಿದು ತನ್ನ ಭಕ್ತರನ್ನು ಅನುಗ್ರಹಿಸಿ, ಅನಂತ ಚತುರ್ದಶಿಯಂದು ಮರಳುತ್ತಾನೆ. ಸಾಮಾನ್ಯವಾಗಿ ಗಣಪತಿ ವಿಸರ್ಜನೆ 1, 3, 5, 7 ದಿವಸಗಳಲ್ಲಿ ನಡೆಯುವುದು ವಾಡಿಕೆ. ಆದರೆ ಅನಂತ ಚತುರ್ದಶಿಯಂದು ವಿಸರ್ಜನೆ ಅತ್ಯಂತ ಪ್ರಶಸ್ತ ಮತ್ತು ಪುಣ್ಯಪ್ರದ.

ಮಹಾವಿಷ್ಣು ಅನಂತ ಚತುರ್ದಶಿಯ ದಿನದಂದು ಅನಂತ ಶೇಷನಲ್ಲಿ ಪವಡಿಸಿ ಪದ್ಮನಾಭ ರೂಪಿಯಾಗಿ ಕಾಣಿಸಿಕೊಳ್ಳುತ್ತಾನೆ. ಲೌಕಿಕ ಕಾಮನೆಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ವಿಶೇಷವಾಗಿ ಈ ವ್ರತವನ್ನು ಆಚರಿಸುತ್ತಾರೆ. ಇದು ಕಾಮ್ಯವ್ರತ. ಕಳೆದುಹೋದ ಸಂಪತ್ತನ್ನು ಮರಳಿಗಳಿಸುವುದು ಈ ವ್ರತದ ವೈಶಿಷ್ಟ. ಈ ದಿನದಂದು ಬ್ರಹ್ಮಾಂಡದಲ್ಲಿ ವಿಷ್ಣುವಿನ ವಿಶೇಷ ಕಂಪನವು ಭೂಮಿಯ ಮೇಲೆ ಫ‌ಲಿಸುವುದರಿಂದ ಸಾಮಾನ್ಯ ಜನರಿಗೂ ಅದನ್ನು ಸಂಪಾದಿಸುವ ಸುಯೋಗ.

ಅನಂತವ್ರತ ದಿನದ ಪ್ರಧಾನ ದೇವತೆಯೇ ಅನಂತ. ಅವನೇ ಶ್ರೀವಿಷ್ಣು. ಅನಂತ ಎಂದರೆ ಅಂತ್ಯವಿಲ್ಲದ, ಅಸಂಖ್ಯಾತ, ಪರಿಮಿತಿಯಿಲ್ಲದ ಎಂದರ್ಥ. ಸ್ವಾಮಿಯು ಅನಂತಶಯನ ರೂಪಿಯಾಗಿ ಭಕ್ತರಿಗೆ ಕಾಣಿಸುತ್ತಾನೆ. ಅನಂತವ್ರತವನ್ನು ನಿರಂತರ 14 ವರ್ಷಗಳ ಕಾಲ ಮಾಡಬೇಕೆಂದಿದೆ. ಈ ವ್ರತಧಾರಿಯು ತನ್ನ ಬದುಕಿನಲ್ಲಿ ಅನಂತ ಸುಖ ಸಂತೋಷವನ್ನು ಗಳಿಸಬಹುದು ಎಂಬ ವಿಶ್ವಾಸ. ವಿಶೇಷವಾಗಿ ದಂಪತಿ ವ್ರತವನ್ನು ಕೈಗೊಂಡರೆ ವೈವಾಹಿಕ ಬಂಧನ, ಸಂಸಾರದಲ್ಲಿ ಸುಖ ಶಾಂತಿ, ಏಳಿಗೆಯನ್ನು ಪಡೆಯಬಹುದು ಎಂದು ಪುರಾಣೋಕ್ತ ದಾಖಲೆ. ಜೂಜಿನಲ್ಲಿ ಕಳೆದುಕೊಂಡ ರಾಜ್ಯ, ಸಂಪತ್ತನ್ನೆಲ್ಲ ಮರಳಿ ಪಡೆಯಲು ಅನಂತವ್ರತವನ್ನು ಆಚರಿಸು ಎಂದು ಶ್ರೀಕೃಷ್ಣ ಯುಧಿಷ್ಟಿರನಿಗೆ ಸಲಹೆ ನೀಡಿದ ಎಂದು ಮಹಾಭಾರತದ ಉಲ್ಲೇಖ. ಭವಿಷ್ಯೋತ್ತರ ಪುರಾಣದಲ್ಲೂ ಈ ವ್ರತದ ಪ್ರಸ್ತಾವವಿದೆ. ಈ ವ್ರತದ ಪಾಲನೆಯಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಾದಿಗಳ ದ್ವಿಗುಣ ಫ‌ಲ ಲಭಿಸುತ್ತದೆ ಎಂದು ನಂಬಿಕೆ.

ಅನಂತನಿಗೆ ನಮನಗಳು:

ನಮೋಸ್ತ್ವ ನಂತಾಯ ಸಹಸ್ರಮೂರ್ತಯೇ ಸಹಸ್ರಪಾದಾಕ್ಷಿಶಿರೋರುಬಾಹವೇ

ಸಹಸ್ರನಾಮ್ನೇ ಪುರುಷಾಯಶಾಶ್ವತೇ ಸಹಸ್ರಕೋಟಿಯುಗಧಾರಿಣೇ ನಮಃ

ಅನಂತನಿಗೆ ನಮನಗಳು. ಅಸಂಖ್ಯ ರೂಪಗಳನ್ನು ಧರಿಸಿದವನಿಗೆ, ಅಸಂಖ್ಯ ಪಾದಗಳು, ಕರಗಳು, ಕಣ್ಣುಗಳು, ಶಿರಗಳನ್ನು ಹೊಂದಿದವನಿಗೆ, ಅಸಂಖ್ಯ ನಾಮಗಳನ್ನು ಹೊಂದಿ ದವನಿಗೆ, ಶಾಶ್ವತ ಪುರುಷನಿಗೆ, ಸಾವಿರ ಕೋಟಿ ಯುಗಗಳನ್ನು ಹೊಂದಿದವನಿಗೆ ನಮಸ್ಕಾರಗಳು. ಇವನೇ ಅನಂತ. ಅನಂತ ಶ್ರೀಕೃಷ್ಣನ ವಿಭೂತಿ ರೂಪ. (ವಿಭೂತಿ ಯೋಗ ಭ.ಗೀ) ನಾಗರನಲ್ಲಿ ನಾನು ಅನಂತ ಎನ್ನುತ್ತಾನೆ ಶ್ರೀಕೃಷ್ಣ.

ಅನಂತಾಯ ಸಮಸ್ತುಭ್ಯಂ ಸಹಸ್ರ ಶಿರಸೇ ನಮಃ

ನಮೋಸ್ತು ಪದ್ಮನಾಭಾಯ ನಾಗಾನಾಂ ಪತಯೇ ನಮಃ

ಶೇಷ (ಆದಿಶೇಷ) ನಾಗನ ಹೆಸರು ಅನಂತ. ಸಾವಿರ ತಲೆಯುಳ್ಳವನು. ಇದರಲ್ಲಿ ಪವಡಿಸಿದವನೇ ಅನಂತ ಪದ್ಮನಾಭ.

ಅನಂತ ದಾರ – ಸೂತ್ರ :

ಅನಂತ ಚತುರ್ದಶಿಯಂದು ಶ್ರೀಮನ್ನಾರಾಯಣನನ್ನು ಪೂಜಿಸಿದ ಬಳಿಕ 14 ಗಂಟುಗಳುಳ್ಳ ಅನಂತ ಸೂತ್ರವನ್ನು ಬಲಕೈಗೆ ಧರಿಸಬೇಕು. ಅನಂತಪದ್ಮನಾಭನ ಪ್ರಸಾದ ಎಂದು ಅದರ ಪೂಜ್ಯತೆ. ರಾತ್ರಿಯಲ್ಲಿ ಅದನ್ನು ಕಳಚಿಟ್ಟು ಮರುದಿನ ಪವಿತ್ರ ನದಿಯಲ್ಲೋ ಕೆರೆಯಲ್ಲೋ ವಿಸರ್ಜಿಸಬೇಕು. ಮರುದಿನವೂ ಅಸಾಧ್ಯವಾದರೆ ಮುಂದಿನ 14 ದಿವಸಗಳವರೆಗೆ ಅದನ್ನು ಕೈಯಲ್ಲಿ ಧರಿಸಿರಬೇಕು. ಅದೂ ಸಾಧ್ಯವಾಗದಿದ್ದಲ್ಲಿ ಮುಂದಿನ ಅನಂತ ಚತುರ್ದಶಿಯವರೆಗೂ ಧರಿಸಬೇಕು. 14 ಗಂಟುಗಳು ದಾರ ವಿಷ್ಣುವಿನ 14 ಅವತಾರಗಳನ್ನು ಸೂಚಿಸುತ್ತದೆ. ಅನಂತಸೂತ್ರ ಧರಿಸಿದಾತನನ್ನು ಶ್ರೀಮಹಾವಿಷ್ಣು ರಕ್ಷಿಸುತ್ತಾನೆ ಮತ್ತು ಎಲ್ಲಾ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ನಂಬಿಕೆ.

ಚತುರ್ದಶಿ ಅಂದರೆ 14 – ಗುಟ್ಟೇನು?:

ಚತುರ್ದಶಿ ಅಂದರೆ 14. ಚತುರ್ದಶೀ ದಿನದಂದೇ ಬರುವುದು ಅನಂತ ಚತುರ್ದಶಿ ಅಥವಾ ವ್ರತ. ಈ ವ್ರತದಲ್ಲಿ ಹದಿನಾಲ್ಕು ಸಂಖ್ಯೆಗೆ ವಿಶೇಷ ಮಹತ್ವನ್ನೇಕೆ ನೀಡಿದ್ದಾರೆ ?

ಅನಂತ ಚತುರ್ದಶಿ 14 ನೇ ದಿನದ ಆಚರಣೆ. ಈ ವ್ರತದ ಅವಧಿ 14 ವರ್ಷ. ಉದ್ಯಾಪನೆಯೊಂದಿಗೆ ವ್ರತ ಪರಿಸಮಾಪ್ತಿಗೊಳ್ಳುತ್ತದೆ. 14 ವಿಧದ ಹೂವು, ಹಣ್ಣು ಮತ್ತು ಖಾದ್ಯಗಳನ್ನರ್ಪಿಸಿ ವಿಷ್ಣುವಿನ ಆರಾಧನೆ. 14 ಗ್ರಂಥಿಗಳುಳ್ಳ ದಾರವನ್ನು(ದೋರಾ) ವಿಷ್ಣುವಿಗೆ ಅರ್ಪಿಸಲಾಗುತ್ತದೆ. 14 ಗಂಟುಗಳ ದಾರ ವಿಷ್ಣುವಿನ 14 ಅವತಾರ ಸೂಚಕ. ಗೋಧಿಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ 28 ಬಗೆಯ ಸಿಹಿ ಖಾದ್ಯದಲ್ಲಿ ಅರ್ಧದಷ್ಟು ಅನಂತಪದ್ಮನಾಭನಿಗೆ ನಿವೇದಿಸಿ ಉಳಿದರ್ಧವನ್ನು ಬ್ರಾಹ್ಮಣರಿಗೆ ಭೋಜನದಲ್ಲಿ ನೀಡಲಾಗುತ್ತದೆ. ಬ್ರಹ್ಮಾಂಡದಲ್ಲಿ 14 ಲೋಕಗಳಿವೆ. ಚತುರ್ದಶ ಭುವನ. ಭೂಮಿಯೂ ಸೇರಿದಂತೆ ಮೇಲೆ 7 (ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯ) ಮತ್ತು ಭೂಮಿ ಕೆಳಗೆ 7 ಲೋಕಗಳು.(ಅತಳ, ವಿತಳ, ಸುತಳ, ರಸಾತಳ, ತಳಾತಳ, ಮಹಾತಳ, ಪಾತಾಳ)ಸಂಬ ಬ್ರಹ್ಮಾಂಡದ ಪರಮ ಶ್ರೇಷ್ಠ ದೇವರು ಮಹಾವಿಷ್ಣು, ಅನಂತ. ಕಾಲಗಣನೆಯ ಮಾಪನದಲ್ಲಿ ಒಂದು ಕಲ್ಪದಲ್ಲಿ 14 ಮನ್ವಂತರಗಳಿವೆ. ಎಲ್ಲಾ ಮನ್ವಂತರಗಳ ದೇವತೆ, ಕಾಲಪುರುಷ ಮಹಾವಿಷ್ಣು, ಅನಂತ. ಅನಂತ ಚತುರ್ದಶಿಯಂದು ಗೋದಾನಕ್ಕೆ ವಿಶೇಷ ಫ‌ಲವಿದೆ.

  ಶ್ರೀ ಶಿವ ದಶಾವತಾರ ಮೂಲಾಕ್ಷರ ಸಹಸ್ರ ನಾಮಾವಳಿ

ಚಕ್ರಾಧಿಪತಿ ಶ್ರೀಮನ್ನಾರಾಯಣನೇ:

ನಮ್ಮ ಶರೀರದಲ್ಲಿರುವ ಏಳು ಚಕ್ರಗಳಿಗೂ (ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ) ಅನಂತವ್ರತಕ್ಕೂ ಸಂಬಂಧವಿದೆ ಎನ್ನುತ್ತಾರೆ ಸಾಧಕರು. ದೇಹದಲ್ಲಿನ 7 ಚಕ್ರಗಳಿಗೂ, ಚತುರ್ದಶ ಭುವನದ 14 ಲೋಕಕ್ಕೂ ಅಧಿಪತಿ ಶ್ರೀಮನ್ನಾರಾಯಣನೇ. ಅವನೇ ಅನಂತ ಪದ್ಮನಾಭ.

ಅನಂತ ಚತುರ್ದಶಿ: 14 ಗಂಟಿನ ಅನಂತ ಸೂತ್ರ ಕಟ್ಟಿದರೆ ವೃದ್ಧಿಸುವುದು ಸಂಪತ್ತು

ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಚತುರ್ದಶಿಯನ್ನು ‘ಅನಂತ ಚತುರ್ದಶಿ’ ಎಂದು ಆಚರಿಸಲಾಗುವುದು. ಇದು ಶ್ರೀ ಗಣೇಶ ಚತುರ್ಥಿಯ ಕೊನೆಯ ದಿನವೂ ಆಗಿದ್ದು ಈ ದಿನ ವ್ರತವನ್ನು ಮಾಡಲಾಗುವುದು.

ಅನಂತ ಚತುರ್ದಶಿಯಂದು ಶ್ರೀ ವಿಷ್ಣು ಅನಂತ ಪದ್ಮನಾಭನಾಗಿ ಅವತಾರ ತಾಳಿದ ಎಂದು ಹೇಳಲಾಗುತ್ತದೆ. ಈ ದಿನ ಭಕ್ತರು ಅನಂತನನ್ನು ಪೂಜಿಸುತ್ತಾ ವ್ರತ ಪಾಲಿಸಿದರೆ ಐಶ್ವರ್ಯ, ಆರೋಗ್ಯ ಪ್ರದಾನಿಸುತ್ತಾನೆ ಎಂಬ ನಂಬಿಕೆಯಿದೆ.

ಅನಂತ ಚತುರ್ದಶಿಯ ಪೌರಾಣಿಕ ಹಿನ್ನೆಲೆ ಹಾಗೂ ವ್ರತದ ಮಹತ್ವದ ಬಗ್ಗೆ ತಿಳಿಯೋಣ:

ಕೌಂಡಿಲ್ಯ ಮುನಿಯು ವಿವಾಹಚವಾದ ನಂತರ ಪತ್ನಿಯ ಜೊತೆ ತನ್ನ ಕುಟೀರಕ್ಕೆ ಹಿಂತಿರುವಾಗ ನಿತ್ಯ ಕರ್ಮಗಳಿಗಾಗಿ ನದಿ ಬಳಿ ಹೋಗುತ್ತಾರೆ. ಆಗ ಅವರ ಪತ್ನಿಯು ಅಲ್ಲಿ ಸ್ವಲ್ಪ ಮಹಿಳೆಯರು ಒಂದು ವ್ರತ ಆಚರಿಸುತ್ತಿರುವುದನ್ನು ನೋಡಿ ಅದರ ಕುರಿತು ಮಹಿಳೆಯರನ್ನು ಕೇಳಿದಾಗ ಅವರು ‘ನಾವು ಅನಂತ ವ್ರತ’ವನ್ನು ಆಚರಿಸುತ್ತಿರುವಾಗಿ ಹೇಳಿದರು.

ಆಗ ಕೌಂಡಿಲ್ಯ ಮುನಿಯ ಪತ್ನಿಯು ಕೂಡ ಆ ವ್ರತ ಮಾಡಲಾರಂಭಿಸುತ್ತಾರೆ. ಇದರಿಂದ ಕೌಂಡಿಲ್ಯ ಮುನಿಯ ಧನ-ಸಂಪತ್ತು ವೃದ್ಧಿಯಾಯಿತು. ಕೌಂಡಿಲ್ಯ ಮುನಿಯು ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದಾಗ ಇದು ಅನಂತ ವ್ರತದ ದಾರ, ಈ ವ್ರತದಿಂದಾಗಿ ನಮಗೆ ಸಂಪತ್ತು ಲಭಿಸಿದೆ ಎಂದಾಗ ಕೋಪಗೊಂಡ ಕೌಂಡಿಲ್ಯ ಮುನಿ ಇದೆಲ್ಲಾ ನನ್ನ ಪಾಂಡಿತ್ಯದಿಂದಾಗಿ ಬಂದಿದ್ದು, ನಿನ್ನ ವ್ರತದಿಂದಲ್ಲ ಎಂದು ಆ ದಾರವನ್ನು ಕಿತ್ತು ಎಸೆಯುತ್ತಾನೆ.

ಅದಾದ ಬಳಿಕ ಕೌಂಡಿಲ್ಯ ಮುನಿಯ ಸಂಪತ್ತು ಕರಗಲಾರಂಭಿಸುತ್ತದೆ, ಆಗ ಮುನಿಗೆ ತನ್ನ ತಪ್ಪಿನ ಅರಿವು ಉಂಟಾಗಿ ಅನಂತನ ಕೃಪೆಗಾಗಿ ಕಠಿಣ ತಪಸ್ಸು ಮಾಡುತ್ತಾನೆ.

ಈತನ ತಪ್ಪಿಸ್ಸಿಗೆ ಮೆಚ್ಚಿದ ಶ್ರೀವಿಷ್ಣು 14 ವರ್ಷಗಳ ಕಾಲ ಅನಂತ ವ್ರತ ಆಚರಿಸಿದರೆ ಹೋದ ಸುಖ, ಸಂಪತ್ತು ಮರಳಿ ಬರುವುದು ಎಂದು ಹೇಳುತ್ತಾನೆ. ಹೀಗೆ ಅನಂತ ವ್ರತದ ಮಹತ್ವದ ಬಗ್ಗೆ ಹೇಳಲಾಗುವುದು.

ಅನಂತ ವ್ರತದಲ್ಲಿ ಕಟ್ಟುವ ಅನಂತ ಸೂತ್ರದ ಮಹತ್ವ

ಅನಂತ ವ್ರತವನ್ನು ಪಾಲಿಸುವವರು ಅನಂತ ಸೂತ್ರವನ್ನು ಕಟ್ಟಿಕೊಳ್ಳುತ್ತಾರೆ. ಭಗವಾನ್ ವಿಷ್ಣು ಅನಂತ ಸೂತ್ರದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಮೇಲೆ ಅನಂತ ಸೂತ್ರ ಕಟ್ಟಲಾಗುವುದು. ಈ ಸೂತ್ರವನ್ನು ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸಿದ ಬಳಿಕ ಕಟ್ಟಲಾಗುವುದು. ಈ ದಾರಕ್ಕೆ 14 ಗಂಟುಗಳಿರುತ್ತದೆ.

ಈ ದಾರದಲ್ಲಿರುವ 14 ಗಂಟು ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹಾಲೋರ್ಕ, ಜನಲೋಕ, ತಪೋಲೋಕ, ಬ್ರಹ್ಮಲೋಕ, ಅತಳ ಲೋಕ, ವಿತಳ ಲೋಕ. ಸತಳ ಲೋಕ, ರಸಾತಳ ಲೋಕ, ಮಹಾತಳ ಲೋಕ, ತಳಾತಳ ಲೋಕ, ಪಾತಾಳ ಲೋಕ ಹೀಗೆ 14 ಲೋಕವನ್ನು ಪ್ರತಿನಿಧಿಸುತ್ತದೆ.

ಅನಂತ ಸೂತ್ರ ಕಟ್ಟುವ ವಿಧಾನ
ಈ ಸೂತ್ರ ಕಟ್ಟಿಕೊಳ್ಳಲು ಕೆಲವು ನಿಯಮಗಳಿವೆ. ಈ ಸೂತ್ರವನ್ನು ಪುರುಷರು ಬಲಗೈಗೆ, ಮಹಿಳೆಯರು ಎಡಗೈಗೆ ಕಟ್ಟಿಕೊಳ್ಳಬೇಕು. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಪೂಜಿಸಿದರೆ ಆತನ ಕೃಪೆ ನಿಮಗೆ ಲಭಿಸುವುದು.

‌ ‌ ‌ ಅನಂತ ಚತುರ್ದಶೀ: ಅನಂತ ಸೂತ್ರ ಕಟ್ಟುಕೊಳ್ಳುವುದು ಹೇಗೆ.?
ಭಗವಾನ್ ವಿಷ್ಣು, ತಾಯಿ ಯಮುನಾ ಮತ್ತು ಶೇಷನಾಗನನ್ನು ಈ ದಿನ ಪೂಜಿಸಲಾಗುತ್ತದೆ. ಇದರ ಹೊರತಾಗಿ, ಅನಂತ ಚತುರ್ದಶಿಯಂದು ಅನಂತ ದಾರವನ್ನು ಕೈಗೆ ಕಟ್ಟಿಕೊಳ್ಳುವ ಅತ್ಯಂತ ಹಳೆಯ ಮತ್ತು ಪ್ರಾಚೀನ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಹಾಗಾದರೆ ಅನಂತ ಚತುರ್ದಶಿಯ ದಿನ ಏನು ಮಾಡಬೇಕು..? ಮತ್ತು ಮಾಡಬಾರದು..?


​ಅನಂತ ಚತುರ್ದಶಿಯಂದು ಏನು ಮಾಡಬೇಕು..?

ಅನಂತ ಚತುರ್ದಶಿಯ ದಿನದಂದು ವಿಷ್ಣು, ಯಮುನಾ ನದಿ ಮತ್ತು ಶೇಷನಾಗನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಈ ಮೂವರನ್ನು ಈ ದಿನ ಪೂಜಿಸಬೇಕು.

  ಸರ್ಪ ಸಂಸ್ಕಾರ

​ಅನಂತ ದಾರ ಕಟ್ಟಿಕೊಳ್ಳಿ

ಈ ದಿನ ಅನಂತ ದಾರವನ್ನು ಸಹ ಕಟ್ಟಲಾಗುತ್ತದೆ. ಆದರೆ ಅನಂತ ದಾರವನ್ನು ಕಟ್ಟುವ ಮೊದಲು, ನೀವು ಅದನ್ನು ವಿಷ್ಣುವಿನ ಪಾದದಲ್ಲಿ ಇಟ್ಟು ವಿಧಿ – ವಿಧಾನಗಳ ಮೂಲಕ ಪೂಜೆ ಮಾಡಿದ ನಂತರವೇ ದಾರವನ್ನು ಕಟ್ಟಿಕೊಳ್ಳಬೇಕು.

​ಅನಂತ ದಾರ ಹೀಗಿರಲಿ

ಅನಂತ ಚತುರ್ದಶಿಯ ದಿನ ನೀವು ರೇಷ್ಮೆ ಅಥವಾ ಹತ್ತಿ ದಾರವನ್ನು ಅನಂತ ದಾರವಾಗಿ ಬಳಸಬೇಕು. ಅನಂತ ದಾರವನ್ನು ಕಟ್ಟುವ ಮೊದಲು, ಅದರಲ್ಲಿ 14 ಗಂಟುಗಳನ್ನು ಹಾಕಿ ಮತ್ತು ಅದರ ನಂತರ ಅದನ್ನು ಸರಿಯಾಗಿ ಪೂಜಿಸಿ, ನಂತರ ಮಾತ್ರ ಅದನ್ನು ಧರಿಸಿ.

​​ಅನಂತ ಸೂತ್ರ ಧರಿಸುವ ವಿಧಾನ
ನೀವು ಈಗಾಗಲೇ ಅನಂತ ಸೂತ್ರವನ್ನು ಹೊಂದಿದ್ದರೆ, ನಂತರ ಅದನ್ನು ಪವಿತ್ರ ನದಿ ಅಥವಾ ಯಾವುದೇ ಪವಿತ್ರ ಸರೋವರ ಅಥವಾ ತುಳಸಿಯ ಬಳಿ ಇರಿಸಿ ಮತ್ತು ನಂತರ ಮಾತ್ರ ಇನ್ನೊಂದು ಅನಂತ ಸೂತ್ರವನ್ನು ಧರಿಸಿ. ಅನಂತ ಚತುರ್ದಶಿಯಂದು ನೀವು ಪ್ರಾಣಿಗಳಿಗೆ, ಪಕ್ಷಿಗಳಿಗೆ, ಬಡ ಜನರಿಗೆ ಮತ್ತು ಸತ್ಪಾತ್ರರಿಗೆ ಸಾಧ್ಯವಾದಷ್ಟು ದಾನ ಮಾಡಬೇಕು.

​ಎಷ್ಟು ದಿನಗಳವರೆಗೆ ಅನಂತ ದಾರ ಕಟ್ಟಿಕೊಂಡಿರಬೇಕು..?
ಯಾರು ಅನಂತ ದಾರವನ್ನು ಕಟ್ಟಿಕೊಳ್ಳಲು ಬಯಸುತ್ತಾರೋ ಅವರು ಒಂದು ವರ್ಷದವರೆಗೆ ಆ ಅನಂತ ದಾರವನ್ನು ಕಟ್ಟಿಕೊಂಡೇ ಇರಬೇಕು. ನೀವು ಇದನ್ನು ಮಾಡಲು ಬಯಸದಿದ್ದರೆ, ನೀವು ಇದನ್ನು ಕನಿಷ್ಠ 14 ದಿನಗಳವರೆಗಾದರೂ ಧರಿಸಬಹುದು. ಪುರುಷರು ಅನಂತ ಸೂತ್ರವನ್ನು ಬಲ ಮಣಿಕಟ್ಟಿನ ಮೇಲೆ ಮತ್ತು ಮಹಿಳೆಯರು ಅನಂತ ಸೂತ್ರವನ್ನು ಎಡ ಮಣಿಕಟ್ಟಿನ ಮೇಲೆ ಕಟ್ಟಿಕೊಳ್ಳಬೇಕು.

​ಉಪವಾಸ ವ್ರತ
ನೀವು ಅನಂತ ಚತುರ್ದಶಿಯಂದು ಉಪವಾಸ ವ್ರತ ಮಾಡಿದರೆ, ನೀವು ಕೇವಲ ಸಿಹಿ ಆಹಾರವನ್ನು ಮಾತ್ರ ಈ ದಿನ ಬಳಸಬೇಕು ಮತ್ತು ದಿನದಲ್ಲಿ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸಬೇಕು. ಅನಂತ ಚತುರ್ದಶಿಯ ದಿನ, ಬ್ರಾಹ್ಮಣರಿಗೆ ನಿಮ್ಮ ಗೌರವಕ್ಕೆ ಅನುಗುಣವಾಗಿ ಆಹಾರ ನೀಡಿದ ನಂತರ ನೀವು ಅವರಿಗೆ ಫಲ-ತಾಂಬೂಲ, ವಸ್ತ್ರ ದಕ್ಷಿಣೆಯನ್ನು ನೀಡಬೇಕು.

ಅನಂತ ಚತುರ್ದಶಿಯಂದು ಏನು ಮಾಡಬಾರದು..?
ಅನಂತ ಚತುರ್ದಶಿಯಂದು, ನೀವು ಯಾವುದೇ ರೀತಿಯ ಅನೈತಿಕ ಕ್ರಿಯೆಯನ್ನು ಮಾಡಬಾರದು. ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ನೋಯಿಸಬೇಡಿ. ಅನಂತ ಚತುರ್ದಶಿಯ ದಿನ, ನಿಮಗೆ ಸಾಧ್ಯವಾದಷ್ಟು, ಮಧುರವಾದ ಮಾತನ್ನು ಮಾತ್ರ ಬಳಸಿ. ಈ ದಿನ ಯಾರೊಂದಿಗೂ ಜಗಳವಾಡಬೇಡಿ ಅಥವಾ ಈ ದಿನ ಯಾವುದೇ ವ್ಯಕ್ತಿಯೊಂದಿಗೆ ಕಠಿಣ ಪದಗಳನ್ನು ಬಳಸಬೇಡಿ.

​ಇವುಗಳನ್ನು ಸೇವಿಸಬೇಡಿ
ನೀವು ಮಣಿಕಟ್ಟಿನ ಮೇಲೆ ಅನಂತ ಸೂತ್ರವನ್ನು ಕಟ್ಟಿದ್ದರೆ, ಮಾಂಸ ಅಥವಾ ಮದ್ಯವನ್ನು ಸೇವಿಸಬೇಡಿ. ನೀವು ಅನಂತ ದಾರವನ್ನು ಕಟ್ಟಿದ್ದರೆ, ನೀವು ಅದನ್ನು ಹರಿಯಬಾರದು ಅಥವಾ ಹರಿಯಲು ಬಿಡಬಾರದು, ಏಕೆಂದರೆ ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ಅನಂತ ಚತುರ್ದಶಿಯಂದು ಉಪವಾಸ ಮಾಡಿದರೆ, ಈ ದಿನ ಉಪ್ಪನ್ನು ಬಳಸಬೇಡಿ. ಈ ದಿನ ಸುಳ್ಳನ್ನು ಹೇಳಬೇಡಿ ಮತ್ತು ಯಾವುದೇ ವಯಸ್ಸಾದ ವ್ಯಕ್ತಿ ಅಥವಾ ಯಾವುದೇ ವ್ಯಕ್ತಿಯನ್ನು ಅವಮಾನಿಸಬೇಡಿ.

‌ ‌ ‌ ಅನಂತ ವ್ರತ ಪೂಜೆಗೆ ಬೇಕಾದ ಪೂಜಾ ದ್ರವ್ಯಗಳು
‌ ೧. ಅರಿಶಿನ
೨. ಕುಂಕುಮ
೩. ಅನಂತನ ದಾರ
೪. ಧೂಪ ದ್ರವ್ಯಗಳು
೫. ಕರ್ಪೂರ
೬. ಶ್ರೀಗಂಧ
೭. ಅನಂತ ಪದ್ಮನಾಭ ಸ್ವಾಮಿಯ ಚಿತ್ರ ಅಥವಾ ಮೂರ್ತಿ ೮. ಅನಂತ ವಸ್ತ್ರ
೯. ವೀಳ್ಯದೆಲೆ ಒಂದು ಕಟ್ಟು
೧೦. ಬಟ್ಲಡಿಕೆ – 50
೧೧. ನಾಣ್ಯಗಳು (40 ಸಂಖ್ಯೆ)
೧೨. ತೆಂಗಿನಕಾಯಿ ಐದು
೧೩. ಬಿಡಿ ಹೂವುಗಳು
೧೪. ಹೂವಿನ ಹಾರಗಳು
೧೫. ಪತ್ರೆಗಳು (14 ವಿಧದ ಎಲೆಗಳು)
೧೬. ಪಂಚೆ (ಕೆಂಪು ವಸ್ತ್ರವನ್ನು ಧರಿಸುವುದು ಪದ್ಧತಿ)
೧೭. ಎರಡು ಕಲಶ ಪಾತ್ರೆಗಳು
೧೮. ಒಂದು ಶಲ್ಯ (ಬಲಿಪೀಠವನ್ನು ಮುಚ್ಚಲು)
೧೯. ಹಳದಿ ಮತ್ತು ಕೆಂಪು ವಸ್ತ್ರಗಳು (ಕಲಶಕ್ಕಾಗಿ)
೨೦. ತುಪ್ಪದ ದೀಪಗಳು ಮೂರು
೨೧. ಎಣ್ಣೆ ದೀಪಗಳು
೨೨. ಹತ್ತಿ ಬತ್ತಿಗಳು
೨೩. ಗೆಜ್ಜೆ ವಸ್ತ್ರ
೨೪. ಶಂಖ
೨೫. ತುಳಸಿ ೨೬. ದರ್ಭೆ ೨೭. ಒಣ ಹಣ್ಣುಗಳು (ಡ್ರೈ ಫ್ರೂಟ್ಸ್). ೨೮. ನೈವೇದ್ಯಕ್ಕೆ – ಹೋಳಿಗೆ ಮತ್ತು ಹಣ್ಣುಗಳು ೨೯. ಗರಿಕೆ

ಭಾದ್ರಪದ ಶುಕ್ಲ ಪಕ್ಷದ ಚತುರ್ದಶಿ ದಿನವನ್ನು ಅನಂತ ಚತುರ್ದಶಿ ಎಂದು ಕರೆಯಲಾಗುತ್ತದೆ. ಭಗವಾನ್ ವಿಷ್ಣುವಿನ ಶಾಶ್ವತ ರೂಪವನ್ನು ಪೂಜಿಸಲು ಈ ದಿನ ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣುವಿನ ಭಕ್ತರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಪೂಜೆಯ ಸಮಯದಲ್ಲಿ ಪವಿತ್ರ ದಾರವನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ಈ ಉಪವಾಸವನ್ನು ಆಚರಿಸುವ ಮೂಲಕ, ಒಬ್ಬ ವ್ಯಕ್ತಿಯು ಅನೇಕ ಪಟ್ಟು ಹೆಚ್ಚು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ. ಸತತ 14 ವರ್ಷಗಳ ಕಾಲ ಈ ಉಪವಾಸವನ್ನು ಆಚರಿಸುವ ಮೂಲಕ ವೈಕುಂಠ ಲೋಕದಲ್ಲಿ ಸ್ಥಾನವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಅನಂತ ಚತುರ್ದಶಿ ಹಬ್ಬವು ಗಣೇಶ ಚತುರ್ಥಿಯ ಅಂತ್ಯವನ್ನು ಸೂಚಿಸುತ್ತದೆ. ಈ ದಿನವೇ ಗಣೇಶ ವಿಸರ್ಜನೆಯನ್ನು ಮಾಡಲಾಗುತ್ತದೆ.

  ಶ್ರೀ ಅನಂತಪದ್ಮನಾಭ ದೇವರು ಹೆಬ್ರಿಯ ಪ್ರಧಾನ ಗ್ರಾಮ ದೇವರು

​ಅನಂತ ಚತುರ್ದಶಿಯಂದೇ ಗಣೇಶ ವಿಸರ್ಜನೆ ಮಾಡಲು ಕಾರಣವೇನು..?

ಗಣೇಶ ಚತುರ್ಥಿಯ ದಿನದಂದು ಕೂರಿಸಲಾಗುವ ಗಣೇಶನನ್ನು ಅನಂತ ಚತುರ್ದಶಿಯ ದಿನ ವಿಸರ್ಜನೆ ಮಾಡಲಾಗುತ್ತದೆ. ಇದರ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಈ ಕಥೆಯ ಪ್ರಕಾರ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಲ್ಲಿ ವೇದವ್ಯಾಸರು ಮಹಾಭಾರತ ಕಥೆಯನ್ನು ಭಗವಾನ್‌ ಗಣೇಶನಿಗೆ ಹೇಳಿದನು. ಕಥೆಯನ್ನು ವಿವರಿಸುವಾಗ, ವೇದವ್ಯಾಸರು ತನ್ನ ಕಣ್ಣುಗಳನ್ನು ಮುಚ್ಚಿ ಮತ್ತು ಸತತ 10 ದಿನಗಳ ಕಾಲ ಗಣೇಶನಿಗೆ ಕಥೆ ಹೇಳುವುದನ್ನು ಮುಂದುವರೆಸಿದರು ಮತ್ತು ಗಣೇಶನು ವೇದವ್ಯಾಸರು ಹೇಳಿದಂತೆ ಕಥೆಯನ್ನು ಬರೆಯುತ್ತಾ ಹೋದನು. 10 ನೇ ದಿನ, ವೇದವ್ಯಾಸರು ಕಣ್ಣು ತೆರೆದಾಗ, ಗಣೇಶನು ಒಂದೇ ಸ್ಥಳದಲ್ಲಿ ಕುಳಿತು ನಿರಂತರವಾಗಿ ಕಥೆಯನ್ನು ಬರೆದಿರುವುದರಿಂದ ಅವನ ದೇಹದ ಉಷ್ಣತೆ ಏರುತ್ತಿರುವುದನ್ನು ಕಂಡುಕೊಂಡರು. ಇಂತಹ ಪರಿಸ್ಥಿತಿಯಲ್ಲಿ, ಗಣಪತಿಗೆ ತಂಪನ್ನು ನೀಡಲು ವೇದವ್ಯಾಸರು ತಣ್ಣೀರಿನಲ್ಲಿ ಸ್ನಾನ ಮಾಡಿಸಿದರು. ವೇದವ್ಯಾಸರ ಆಜ್ಞೆಯಂತೆ ಗಣಪತಿ ಮಹಾಭಾರತವನ್ನು ಬರೆಯುತ್ತಿದ್ದ ಸ್ಥಳದಲ್ಲಿ ಅಲಕಾನಂದ ಮತ್ತು ಸರಸ್ವತಿ ನದಿಗಳ ಸಂಗಮವಾಯಿತು. ವೇದ ವ್ಯಾಸರು ಸರಸ್ವತಿ ಮತ್ತು ಅಲಕನಂದರ ಸಂಗಮದಲ್ಲಿ ಸ್ನಾನ ಮಾಡಿದ ದಿನ, ಅನಂತ ಚತುರ್ದಶಿಯ ದಿನವಾಗಿತ್ತು.

​ಅನಂತ ಚತುರ್ದಶಿ ಪೂಜೆ ವಿಧಾನ

ಚತುರ್ದಶಿಯ ದಿನ ಬೆಳಿಗ್ಗೆ ಸ್ನಾನ ಇತ್ಯಾದಿ ನಿತ್ಯ ಕರ್ಮಗಳನ್ನು ಮುಗಿಸಿ, ಇದರ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಮತ್ತು ಕೈಯಲ್ಲಿ ನೀರನ್ನು ತೆಗೆದುಕೊಂಡು ಅನಂತ ಚತುರ್ದಶಿಯ ಉಪವಾಸ ಮತ್ತು ಪೂಜೆಗೆ ಸಂಕಲ್ಪ ಮಾಡಿ. ಇದರ ನಂತರ ಪ್ರಾರ್ಥನಾ ಸ್ಥಳವನ್ನು ಸ್ವಚ್ಛಗೊಳಿಸಿ. ಕುಶದ ಹಾಸಿನ ಮೇಲೆ ವಿಷ್ಣುವಿನ ವಿಗ್ರಹವನ್ನು ಅಥವಾ ಫೋಟೋವನ್ನು ಇರಿಸಿ. ಈಗ 14 ಗಂಟುಗಳನ್ನು ಹೊಂದಿರುವ ಅನಂತ ಸೂತ್ರವನ್ನು ವಿಗ್ರಹದ ಮುಂದೆ ಇರಿಸಿ. ಈಗ ನೀವು ಮಾವಿನ ಎಲೆಗಳು, ನೈವೇದ್ಯ, ಹೂಗಳು, ಧೂಪ, ದೀಪಗಳು ಮುಂತಾದ ವಸ್ತುಗಳಿಂದ ಅನಂತ ದೇವರನ್ನು ಪೂಜಿಸಬೇಕು. ವಿಷ್ಣುವಿಗೆ ಪಂಚಾಮೃತ, ಬಾಳೆಹಣ್ಣು ಮತ್ತು ಮೋದಕ ಪ್ರಸಾದವನ್ನು ಅರ್ಪಿಸಿ. ಪೂಜೆಯ ಸಮಯದಲ್ಲಿ ಮಂತ್ರವನ್ನು ಪಠಿಸಿ.

​ಅನಂತ ಚತುರ್ದಶಿಯಂದು ಈ ಕೆಲಸವನ್ನು ಮಾಡಿ
ಭಗವಾನ್ ವಿಷ್ಣುವಿನ ಆರಾಧನೆ: ಅನಂತ ಚತುರ್ದಶಿಯ ದಿನದಂದು ವಿಷ್ಣುವನ್ನು ಪೂಜಿಸಬೇಕು ಏಕೆಂದರೆ ಭಗವಾನ್ ವಿಷ್ಣುವಿನ ಪ್ರೀತಿಯ ಶೇಷನಾಗನ ಹೆಸರು ಅನಂತ. ಆದ್ದರಿಂದ ಈ ಚತುರ್ದಶಿಗೆ ಅನಂತ ಚತುರ್ದಶಿ ಎಂದು ಹೆಸರಿಡಲಾಗಿದೆ.

​ಉಪವಾಸ ವ್ರತ
ಅನಂತ ಚತುರ್ದಶಿಯನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಉಪವಾಸವನ್ನು ಆಚರಿಸುವ ಮೂಲಕ, ಎಲ್ಲಾ ತೊಂದರೆಗಳನ್ನು ತೆಗೆದುಹಾಕಲಾಗುತ್ತದೆ. ಜೂಜಾಟದಲ್ಲಿ ಪಾಂಡವರು ತಮ್ಮ ಸಾಮ್ರಾಜ್ಯವನ್ನು ಕಳೆದುಕೊಂಡಾಗ, ಶ್ರೀಕೃಷ್ಣನು ತಮ್ಮ ಕುಟುಂಬದೊಂದಿಗೆ ಅನಂತ ಚತುರ್ದಶಿಯಂದು ಉಪವಾಸ ಮಾಡುವಂತೆ ಹೇಳಿದನು. ನಂತರ ಪಾಂಡವರು ಮತ್ತೆ ಸಾಮ್ರಾಜ್ಯವನ್ನು ಪಡೆದರು.

​ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ
ಅನಂತ ಚತುರ್ದಶಿಯಂದು ಉಪವಾಸ ಮಾಡುವುದರ ಜೊತೆಗೆ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಕೂಡ ಪಠಿಸಬೇಕು. ಇದನ್ನು ಮಾಡುವ ಮೂಲಕ ವಿಷ್ಣು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಅವನು ನಿಮಗೆ ಸಂತಾನ ಭಾಗ್ಯವನ್ನು, ಸಂತೋಷವನ್ನು ಮತ್ತು ಆಸ್ತಿಯನ್ನು ನೀಡುತ್ತಾನೆ.

ಅನಂತ ಚತುರ್ದಶಿಯಂದೇ ಮಂಗಳಾದಿತ್ಯ ಯೋಗ
ಗಣಪತಿ ಬಪ್ಪನನ್ನು ಬೀಳ್ಕೊಡುವ ಅನಂತ ಚತುರ್ದಶಿ ದಿನದಂದು ಭಕ್ತರು ಉಪವಾಸ ಆಚರಿಸುತ್ತಾರೆ ಮತ್ತು ವಿಷ್ಣುವಿನ ಅನಂತ ರೂಪವನ್ನು ಪೂಜಿಸುತ್ತಾರೆ. ವಿಷ್ಣುವಿಗೆ ಅನಂತ ದಾರವನ್ನು ಕಟ್ಟುತ್ತಾರೆ. ಇದು ನಮಗೆ ಎಲ್ಲಾ ಅಡೆತಡೆಗಳಿಂದ ಮುಕ್ತಿಯನ್ನು ನೀಡುತ್ತದೆ. ಅನಂತಸೂತ್ರವನ್ನು ಬಟ್ಟೆ ಅಥವಾ ರೇಷ್ಮೆಯಿಂದ ಮಾಡಲಾಗಿದ್ದು, ಅದಕ್ಕೆ 14 ಗಂಟುಗಳನ್ನು ಜೋಡಿಸಲಾಗಿದೆ. ಈ ಯೋಗದಲ್ಲಿ ಮಾಡಿದ ಪೂಜೆಯು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.


Leave a Reply

Your email address will not be published. Required fields are marked *

Translate »