ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಒತ್ತಡಗಳ ನಿರ್ವಹಣೆ, ಧ್ಯಾನದ ಲಾಭಗಳು

  1. ಪರಸ್ಪರ ಸಂಬಂಧಗಳಲ್ಲಿನ ವ್ಯತ್ಯಾಸಗಳು.
  2. ಉದಾಸೀನತೆ.
  3. ಉತ್ಸಾಹರಹಿತ ಸ್ಥಿತಿ, ಅನಾರೋಗ್ಯ,
  4. ಸ್ಪರ್ಧಾತ್ಮಕ ಜೀವನ.
  5. ವೈವಾಹಿಕ ಜೀವನದಲ್ಲಿ ಅಸಮಾಧಾನಗಳು.
  6. ಧರ್ಮಾಚರಣೆಗಳು, ಸಂಪ್ರದಾಯಗಳು.
  7. ಅತಿನಿರೀಕ್ಷೆ, ದುರಾಸೆಗಳು.
  8. ಸ್ಪರ್ಧಾತ್ಮಕ ಪರೀಕ್ಷೆಗಳು,
  9. ಹಣದ ಕೊರತೆ.
  10. ದುರಭ್ಯಾಸಗಳು.
    ಒತ್ತಡಗಳ ನಿರ್ವಹಣೆ

ಒತ್ತಡಗಳಿಂದ ಮುಕ್ತರಾಗಬೇಕಾದರೆ ಒಂದು ಮಹಾನ್ ಔಷಧವಿದೆ. ಅದೇ ಧ್ಯಾನ. ಪ್ರತಿನಿತ್ಯ ಎರಡು ಬಾರಿ ಧ್ಯಾನ ಮಾಡಿ, ಎಲ್ಲಾ ಸಮಸ್ಯೆಗಳಿಗೆ ರಾಮಬಾಣವೆಂದರೆ ಧ್ಯಾನ.

ಒತ್ತಡಗಳ ನಿರ್ವಹಣೆಗೆ ಉಪಯುಕ್ತವಾದ ಅಭ್ಯಾಸಗಳು

  1. ಪ್ರತಿನಿತ್ಯ ಧ್ಯಾನ ಮಾಡಿ, ವಾರಕ್ಕೊಮ್ಮೆಯಾದರೂ ಧ್ಯಾನ ತರಗತಿಗಳನ್ನು ಏರ್ಪಡಿಸುವುದು.
  2. ಆರೋಗ್ಯಕರ ಊಟವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಊಟ ಸಸ್ಯಾಹಾರ ಇನ್ನೂ ಉತ್ತಮ.
    ‌ 3. ಒಳ್ಳೆಯ ನಿದ್ದೆ ಮಾಡಿ, ವಿಶ್ರಾಂತಿ ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ 6-8 ಗಂಟೆಗಳ ನಿದ್ರೆ ಉತ್ತಮ.
  3. ಕಾಫಿ, ಟೀ, ಸಿಗರೇಟ್, ಆಲ್ನೋಹಾಲ್ ಸೇವನೆಯಿಂದ ದೂರವಿರಿ.
  4. ಜೀವನವನ್ನು ವಿನೋದದಿಂದ ಸ್ವೀಕರಿಸಿ,
  5. ಒಳ್ಳೆಯ ಕೌಟುಂಬಿಕ ಸಂಬಂಧಗಳನ್ನು ಬೆಳೆಸಿರಿ,
  6. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಮಕ್ಕಳ ಜೊತೆ ಆಟವಾಡಿ ಸಾಕುಪ್ರಾಣಿಗಳ ಜೊತೆ ಆಟವಾಡಿ, ಕೈತೋಟವನ್ನು ಬೆಳೆಸಿ, ಪ್ರಕೃತಿ ಜೊತೆಯಿರಿ, ಸಂಗೀತ ಅಭ್ಯಾಸ ಮಾಡಿ, ಸಂಗೀತ ಕೇಳಿ, ವ್ಯಾಯಾಮ ಮಾಡುವುದು.
  7. ಒತ್ತಡವುಂಟು ಮಾಡುವ ವ್ಯಕ್ತಿಗಳಿಂದ ದೂರವಿರಿ.
  8. ಕೆಲಸಗಳನ್ನು ವಿಂಗಡಿಸಿ, ಕೆಲವನ್ನು ನೀವು ಮಾಡಿ, ಇನ್ನು ಕೆಲವನ್ನು ಬೇರೆಯವರಿಗೆ ಮಾಡಲು ಹೇಳಿ, ಅವುಗಳಿಗೆ ಸಂಬಳ ಕೊಟ್ಟರೂ ಪರವಾಗಿಲ್ಲ.
  9. ಆಪ್ತಸಲಹೆಗಾರರನ್ನು ಭೇಟಿಯಾಗಿ, ಸ್ನೇಹಿತರೊಡನೆ ನಿಮ್ಮ ನೋವುಗಳನ್ನು ಹಂಚಿಕೊಳ್ಳಿ ವ್ಯತ್ಯಾಸಗಳು ಇದ್ದರೆ, ಅಲ್ಲೇ ಪರಿಹರಿಸಿಕೊಳ್ಳಿರಿ.
  10. ಒಳ್ಳೆಯ ಪುಸ್ತಕಗಳನ್ನು ಓದಿ, ಸ್ವಾಧ್ಯಾಯ ಮಾಡಿ,
  11. ಸಜ್ಜನರ ಸಂಗ ಮಾಡಿ.
  12. ಯಾರಿಗಾದರೂ ಉತ್ತಮ ಉಡುಗೊರೆ ನೀಡಿ, ಸಂತೋಷವನ್ನು ನೀಡಿ, ಆಗ ನೀವು ಸಂತೋಷದಿಂದಿರುವಿರಿ.
  13. ಸುಖ-ದುಃಖ, ನೋವು-ನಲಿವು, ಸೋಲು-ಗೆಲುವು, ಲಾಭ-ನಷ್ಟ ಬೆಳಕು-ಕತ್ತಲೆ, ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಮನದಟ್ಟು ಮಾಡಿಕೊಳ್ಳಿ.
  14. ‘ಜೋಕ್ಸ್-ಪಾಯಿಂಟ್ ನ್ನು ಸ್ಥಾಪಿಸಿ, ಎಲ್ಲರನ್ನು ನಗಿಸುವ ಕೆಲಸದಲ್ಲಿ ಭಾಗಿಯಾಗಿ.
  ಬಾಳೆಹಣ್ಣಿನ 12 ವೈಶಿಷ್ಟ್ಯ

ಧ್ಯಾನ ಮಾಡುವ ಪದ್ಧತಿ

ಸುಖಾಸನದಲ್ಲಿ ಹಾಯಾಗಿ ಕುಳಿತುಕೊಂಡು… ಎರಡು ಕೈ ಬೆರಳುಗಳನ್ನು ಪರಸ್ಪರ ಜೋಡಿಸಿಕೊಂಡು… ಕಣ್ಣುಗಳನ್ನು ಮುಚ್ಚಿಕೊಂಡು, ಸಹಜವಾಗಿ, ಸುಲಲಿತವಾಗಿ ನಡೆಯುತ್ತಿರುವ ಉಸಿರಾಟವನ್ನು ಗಮನಿಸುತ್ತಿರಬೇಕು.

ಯಾವ ಮಂತ್ರ, ಜಪ ಅಥವಾ ನಾಮಸ್ಮರಣೆ ಮಾಡುವ ಅಗತ್ಯವಿಲ್ಲ. ಸಹಜವಾದ
ಉಸಿರಾಟದ ಮೇಲೆ ಗಮನವಿಡುತ್ತಿದ್ದರೆ, ಕ್ರಮೇಣ ಆಲೋಚನ ರಹಿತ ಸ್ಥಿತಿ ಉಂಟಾಗುತ್ತದೆ. ಇದೇ ಧ್ಯಾನದ ಸ್ಥಿತಿ ನಮ್ಮ ವಯಸ್ಸಿಗೆ ಅನುಗುವಾಗಿ ಅಂದರೆ, ನಮ್ಮ ವಯಸ್ಸು ಎಷ್ಟು ವರ್ಷಗಳೋ ಅಷ್ಟು ನಿಮಿಷಗಳ ಕಾಲ ದಿನಕ್ಕೆ ಎರಡು ಬಾರಿ ಧ್ಯಾನ ಮಾಡಬೇಕು.

  ಔದಂಬರ ಅಥವಾ ಅತ್ತಿಮರ…

ಈ ಧ್ಯಾನದ ಸ್ಥಿತಿಯಲ್ಲಿ ಅಪಾರವಾದ ವಿಶ್ವ ಪ್ರಾಣಶಕ್ತಿ ಶರೀರದಲ್ಲಿ ಪ್ರವೇಶಿಸಿ, ನಾಡಿ ಮಂಡಲವು ಶುದ್ಧಿಯಾಗಿ ಸಂಪೂರ್ಣ ಆರೋಗ್ಯ ನಮಗೆ ದೊರಕುತ್ತದೆ.

ಪ್ರತಿದಿನ ನಿಯಮಬದ್ಧವಾಗಿ ಧ್ಯಾನ ಮಾಡುವುದರಿಂದ ದೇಹದಲ್ಲಿ ಪ್ರಾಣ ಶಕ್ತಿಯ ಮಟ್ಟ ಹೆಚ್ಚಿ ಸುಪ್ತ ಚೇತನಗಳು ಜಾಗೃತಿಯಾಗುತ್ತದೆ. ಕ್ರಮೇಣ, ನಮ್ಮಲ್ಲಿನ ದಿವ್ಯಚಕ್ಷು ಉತ್ತೇಜನಗೊಳ್ಳುತ್ತದೆ.

ಧ್ಯಾನ ಮಾಡಿ…! ಧ್ಯಾನ ಮಾಡಿಸಿರಿ…!

ಧ್ಯಾನದ ಲಾಭಗಳು

  1. ಸಂಪೂರ್ಣ ಆರೋಗ್ಯ.
  2. ಬುದ್ಧಿ ಸೂಕ್ಷತೆ.
  3. ಆಧ್ಯಾತ್ಮಿಕ ಜ್ಞಾನ.
  4. ಜೀವನದ ಗುರಿಗಳ ಸಮತೆ,
  5. ಏಕಾಗ್ರತೆಯ ಶಕ್ತಿ. 6.ಆತ್ಮ ವಿಕಾಸ.
  6. ಮಾನಸಿಕ ಶಾಂತಿ,
  7. ನೆನಪಿನ ಶಕ್ತಿ.
  8. ಮೂರನೇ ಕಣ್ಣು ಉತ್ತೇಜನ. 10‌. ಉತ್ತಮ ಸಂಬಂಧಗಳು.
  ನವ - ಒಂಭತ್ತು ವಿಧ ಭಕ್ತಿಗಳು

“ಧ್ಯಾನ ಬೇಗ ಮನಸ್ಸು ಪ್ರಶಾಂತವಾಗುತ್ತದೆ”.🙏🏻

Leave a Reply

Your email address will not be published. Required fields are marked *

Translate »