ನಾನು ಒಬ್ಬ ಹಿರಿಯರನ್ನು ಕೇಳಿದೆ –
” ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು?”
ಹಿರಿಯರು ಹೇಳಿದರು –
” ಮೊದಲು ನೀನು ನಿನ್ನ ಕೋಣೆಯನ್ನು ತಪಾಸಣೆ ಮಾಡಿ ಅರ್ಥಮಾಡಿಕೊ…”
ಹಿರಿಯರ ಮಾತಿನಂತೆ ನಾನು ನನ್ನ ಕೋಣೆಯಲ್ಲೆಲ್ಲಾ ಕಣ್ಣೋಡಿಸಿದಾಗ ನನ್ನ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿತು…
ಮನೆಯ ಮೇಲ್ಛಾವಣಿ ಹೇಳಿತು –
” ನಿನ್ನ ಗುರಿ ಎತ್ತರವಾಗಿರಬೇಕು…”
ಫ್ಯಾನ್ ಹೇಳಿತು –
” ಯಾವಾಗಲೂ ಕೂಲ್ ಆಗಿರು…”
ಗಡಿಯಾರ ಹೇಳಿತು –
” ಸಮಯವು ಬೆಲೆಯುಳ್ಳದ್ದಾಗಿದೆ…”
ಕ್ಯಾಲೆಂಡರ್ ಹೇಳಿತು –
” ದಿನಗಳು ಅತ್ಯಮೂಲ್ಯವಾದದ್ದು ದಿನವನ್ನು ಸದುಪಯೋಗಪಡಿಸಿಕೊ…..”
ಪರ್ಸ್ ಹೇಳಿತು –
” ಮುಂದಿನ ಭವಿಷ್ಯಕ್ಕಾಗಿ ಈಗಿನಿಂದಲೇ ಶೇಖರಿಸಿ ಇಡು….
ಕನ್ನಡಿ ಹೇಳಿತು –
” ನೀನು ಮೊದಲು ನಿನ್ನನ್ನು ಅರ್ಥ ಮಾಡಿಕೊ…”
ದೀಪ ಹೇಳಿತು –
” ಇತರರಿಗೂ ಬೆಳಕನ್ನು ಹರಡು…”
ಗೋಡೆ ಹೇಳಿತು –
” ಕೈಲಾದಷ್ಟು ಇತರರ ಭಾರವನ್ನು ಹೋರು…”
ಕಿಟಕಿ ಹೇಳಿತು –
” ನಿನ್ನ ನೋಟ ದೀರ್ಘ ದೂರದವರೆಗೂ ವ್ಯಾಪಿಸುವಂತಿರಲಿ….”
ನೆಲ ಹೇಳಿತು –
” ಭೂಮಿಯನ್ನು ಪ್ರೀತಿಸು...”
ಮೆಟ್ಟಿಲು ಹೇಳಿತು –
” ಮುಂದೆ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಶ್ರದ್ಧೆಯಿಂದ ಇಡು….”