ಮಂಗಳಾರತಿಯನ್ನು ಎರಡು ಕೈಗಳಿಂದ
ಸ್ವೀಕಾರ ಮಾಡಬಾರದು. ಆರತಿಯನ್ನು ಬಲ
ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು.
ಈ
ವಿಷಯವನ್ನು ವರಾಹದೇವರು ತನ್ನ ಪತ್ನಿಗೆ
ತಿಳಿಸುತ್ತಾನೆ.
ಆರತಿಯನ್ನು ಮೊದಲು ತಲೆಗೆ
ತೆಗೆದುಕೊಂಡು, ಆಮೇಲೆ ಹೃದಯ,
ಆಮೇಲೆ ನಾಭಿಯ ಎಡಭಾಗದಲ್ಲಿ
ತೆಗೆದುಕೊಳ್ಳಬೇಕು.
ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ
ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು
ನಾಭಿಯ ಎಡಭಾಗದಲ್ಲಿ ಇರುವ
ಪಾಪಪುರುಷನಲ್ಲಿ ಸುಡಬೇಕು.
ಅಲ್ಲಿಗೆ ನಮ್ಮ ದೇಹ ಶುದ್ಧ.
ಈ ಅನುಸಂಧಾನ ಮುಖ್ಯ.