ಎಲ್ಲಾ ಪ್ರಜಾಕೀಯಾದ ಅನುಯಾಯಿಗಳಲ್ಲಿ ನನ್ನ ವಿನಂತಿ.
1. ಇದೊಂದು “ಮೌನ ಕ್ರಾಂತಿ”.
2. ಇದೊಂದು ಹಣ ಖರ್ಚು ಮಾಡದೆ ನಡೆಯುವ ಪ್ರಕ್ರೀಯೆ.
3. ಇಲ್ಲಿ ಎಲ್ಲಾ ಪ್ರಜೆಗಳು ಸಮಾನರು.
ಇಲ್ಲಿ ಯಾರದೂ ಅನುಕರಣೆ ಇಲ್ಲ.
ಇಲ್ಲಿ ಪಾರ್ಟಿ, ವ್ಯಕ್ತಿ ಪ್ರಾಮುಖ್ಯವಲ್ಲ, ಕೇವಲ ವಿಚಾರವು ಪ್ರಚಾರವಾಗ ಬೇಕು.
4. ಪ್ರಜಾಕೀಯಾವು ಯಾವುದೆ ಮಾರ್ಕೇಟಿಂಗ್ ಮೂಲಕ ಪ್ರಚಾರವಾಗ ಬಾರದು.
5. ಪ್ರಜಾಕೀಯಾದ ಅರಿವು ಜನರಲ್ಲಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗ ಬೇಕು.
6. ಅದನ್ನು ಸರಿಯಾಗಿ ಅರ್ಥ ಮಾಡಿ ಜನರು ನಮಗೆ ಮತ ಕೊಡಬೇಕು.
7.ರಾಜಕೀಯಾದಲ್ಲಿ ನಡೆಯುವ, ಸಾವಿರ-ಸಾವಿರ ಕೋಟಿ ಖರ್ಚು ಮಾಡಿ, ಪಾರ್ಟಿ ಹಾಗು ಅಭ್ಯರ್ಥಿಯನ್ನು ಮಾರ್ಕೇಟಿಂಗ್ ಮಾಡುವ ವ್ಯವಸ್ಥೆ, ಪ್ರಜಾಕೀಯಾದಲ್ಲಿ ಖಂಡಿತಾ ಇರುವುದಿಲ್ಲ. ಇದು ವಸ್ತುವಲ್ಲ.
8. ಕೇವಲ ಸಾಮಾಜಿಕ ಜಾಲತಾಣ ಹಾಗು ಜನರ ನಿಜವಾದ ಸಂಪರ್ಕದಿಂದ ಪ್ರಜಾಕೀಯಾ ಜನರಿಗೆ ತಿಳಿಯ ಬೇಕು.
9. ನಮ್ಮ ಗುರಿ, ಪ್ರಜೆಗಳ ತೆರಿಗೆ ಹಣ ನೂರಕ್ಕೆ -ನೂರು ಶೇಖಡಾ ಪ್ರಜೆಗಳ ಸೇವೆ, ಸೌಕರ್ಯ ಹಾಗು ಸೌಲಭ್ಯಕ್ಕೆ ತಲುಪ ಬೇಕು.
10. ಹಾಗಾಗ ಬೇಕಾದರೆ ಭ್ರಷ್ಟಾಚಾರ ನಿರ್ಮೂಲನವಾಗ ಬೇಕು.
11. ಇಲ್ಲೊಂದು ಮುಖ್ಯ ವಿಷಯ ಪ್ರತೀ ಪ್ರಜಾಕೀಯಾ ಅನುಯಾಯಿ ತಿಳಿಯ ಬೇಕೇನೆಂದರೆ, ಮೇಲಿನ 9 ಹಾಗು 10 ಆಗಬೇಕಾದರೆ ಪ್ರಜಾಕೀಯಾದ ಸರ್ಕಾರ ಬರಬೇಕು.
12. ಇಲ್ಲಿ ಪಂಚಾಯಿತಿ ಅಥವಾ ವಾರ್ಡ್ನಲ್ಲಿ ಆರಿಸಿ ಬಂದರೆ, ಯಾವುದೆ ಬದಲಾವಣೆ ಮಾಡಲು ಸಾಧ್ಯವಿಲ್ಲ.
13. ಬಹುಶ MP ಚುಣಾವಣೆಗೆ ನಿಲ್ಲುವುದು ಸಮಂಜಸವಾಗ ಬಹುದು. ಈಗ ನಾವು ರಾಜ್ಯದಲ್ಲಿ ಬದಲಾವಣೆ ತಂದರೆ ಮಾತ್ರ ದೇಶದಲ್ಲಿ ಪ್ರಜಾಕೀಯಾ ಪ್ರಯತ್ನಿಸ ಬಹುದು. ಈ ವಿಷಯ ಪಾರ್ಟಿಯಿಂದ ಅದಿಕ್ರತ ಸೂಚನೆ ಹೊರಡಿಸಿದ ಮೇಲೆಯೆ ಮುಂದುವರಿಯುವುದು ಉತ್ತಮ.
14. ಜನರಿಗೆ, ಪ್ರಜಾಕೀಯಾ ತಲುಪುವುದು ಕೇವಲ ಪ್ರಜಾಕೀಯಾದ ಅನುಯಾಯಿಗಳ ಮೇಲೆ ಅವಲಂಬಿಸುತ್ತದೆ. ಎಷ್ಷು ಬೇಗ ತಲುಪುವೆವೆಂದು ನಾವೆ ತಿಳಿದು ಕೊಳ್ಳ ಬೇಕಾಗಿದೆ.
15. ಇಲ್ಲಿ ಯಾವುದೇ ರೀತಿಯ ಅವಸರ, ಅತೀಯಾದ ಕುತೂಹಲ ಹಾಗು ನಿರಾಸೆ ಇರಬಾರದು.
16. ಇದು ಕೇವಲ ಭರವಸೆ ಹಾಗು ಅನುಯಾಯಿಗಳ ಶ್ರಮಧಾನದಿಂದ ಸಾಧ್ಯ.
17. ಇದೊಂದು ಸ್ವಾತಂತ್ರ್ಯ ಹೊರಾಟ. ರಾಜ್ಯವನ್ನು ಭ್ರಷ್ಟಾಚಾರದ ಸೆರೆಮನೆಯಿಂದ ಸ್ವತಂತ್ರಗೊಳಿಸುವುದು.
18. ರಾಜ್ಯವನ್ನು ರಾಜಕೀಯಾದ ಭ್ರಷ್ಟ ರಾಕ್ಷಸರಿಂದ ಹಾಗು ಘೋರ ಭ್ರಷ್ಟ ವ್ಯವಸ್ಥೆಯಿಂದ ಬಿಡುಗಡೆ ಗೊಳಿಸುವುದು.
19.ಇದಕ್ಕಾಗಿ ಪ್ರಜಾಕೀಯಾ ಅನುಯಾಯಿಗಳು ತಮ್ಮ ಸ್ವಾರ್ಥ, ಪ್ರತಿಷ್ಟೆ, ಮಹಾತ್ವಕಾಂಕ್ಷೆ ಹಾಗು ಆತುರವನ್ನು ಪ್ರಜಾಕೀಯಾದಲ್ಲಿ ತರಬಾರದು.
20. ಪ್ರಜಾಕೀಯಾ ಅನುಯಾಯಿಗಳು, ಕೇವಲ ಪ್ರಜೆಗಳ ಹಾಗು ರಾಜ್ಯದ ಅಬಿವ್ರದ್ದಿ ಹಾಗು ಬದಲಾವಣೆಯ ಮಹಾತ್ವಕಾಂಕ್ಷೆ ಇರ ಬೇಕು.
21. ಪ್ರಜಾಕೀಯಾದ ಅನುಯಾಯಿಗಳು ತಮ್ಮ ಸ್ವಂತದ ( Personal & Private) ವಿಷಯವನ್ನು ಪ್ರಜಾಕೀಯಾದಲ್ಲಿ ತರಬಾರದು.
22. ಹಾಗಾದಲ್ಲಿ, ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಸ್ವಾರ್ಥ ತಲೆ ಎತ್ತುವುದು.
23. ಎಲ್ಲರೂ ತಮ್ಮ-ತಮ್ಮ ಕಾಯಕವನ್ನು ಮುಂದುವರಿಸುತ್ತಾ, ಪ್ರಜಾಕೀಯಾದಲ್ಲಿ ತೊಡಗಿಸಿ ಕೊಳ್ಳಬೇಕು.
24. ರಜಾದಿನಗಳಲ್ಲಿ ಹಾಗು ಬಿಡುವಿನ ಸಮಯದಲ್ಲಿ, ಪ್ರಜಾಕೀಯಾದಲ್ಲಿ, ತನ್ನನ್ನು ತಾನು ತೊಡಗಿಸಿ ಕೊಳ್ಳಬೇಕು.
25. ಹೋರಾಟ, ಪ್ರತೀ ಭಟನೆ ಹಾಗು ಸಮಾಜ ಸೇವೆಯ ಅವಶ್ಯಕತೆ ಇರದಂತೆ ಸರ್ಕಾರ ನಡೆಸುವುದು ನಮ್ಮ ಉದ್ದೇಶವಾಗಿರುವುದರಿಂದ, ನಾವು ಅಂತಹ ಕಾರ್ಯದಲ್ಲಿ ನಿರತರಾಗ ಬಾರದು.
26. ಪ್ರತೀ ಒಬ್ಬ ಪ್ರಜೆಯು ಪ್ರತೀ ವರ್ಷ ಸರಾಸರಿ ರೂ. 35,500/- ರಾಜ್ಯ ಸರ್ಕಾರಕ್ಕೆ ತೆರಿಗೆ ಕೊಟ್ಟು, ಹಾಗೆ ಕೇಂದ್ರ ಸರ್ಕಾರಕ್ಕೂ ಅಷ್ಟೆ ತೆರಿಗೆ ಕೊಟ್ಟ ಮೇಲೂ ಜನರಿಗೆ ಬೇಕಾದ ಸೌಕರ್ಯ-ಸೌಲಭ್ಯ ಸಿಗುವುದಿಲ್ಲವಾದ್ದರಿಂದಲೇ ಪ್ರಜಾಕೀಯಾ ಹುಟ್ಟಿ ಕೊಂಡಿದೆ.
27. ಇಷ್ಟರವರೆಗೆ ಜಾತಿಬಲ, ಧರ್ಮಬಲ, ಹಣಬಲ, ಪಾರ್ಟಿಬಲ, ಧಾನಿಬಲ ಎಂದು ಪ್ರಜಾಪ್ರಭುತ್ವವನ್ನು ಹಣದ ಮಾಫಿಯಾಗಳ ರಾಜ್ಯ- ದೇಶವನ್ನಾಗಿ ಮಾಡಿರುವ ರಾಜಕಾರಣವನ್ನು, ಪ್ರಜಾಕಾರಣವಾಗಿ ಪರಿವರ್ತಿಸ ಬೇಕು.
28. ನಿಜವಾದ, ನಮ್ಮ ಸಂವಿದಾನದಲ್ಲಿ ಉಲ್ಲೇಖಿಸಿದ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕು. ಈಗಾಗಲೆ ಮನೀ ಮಾಫಿಯಾಗಳು ನಿಜವಾದ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿರುವರು.
29. ದೇಶಕ್ಕಾಗಿ ಪಾರ್ಟಿ ಹಾಗು ರಾಜಕಾರಣಿ ಇರಬೇಕು. ಪಾರ್ಟಿ ಹಾಗು ರಾಜಕಾರಣಿಗಾಗಿ ದೇಶವಾಗಿದೆ. ಪಾರ್ಟಿ ಫಂಡ್, ಸ್ವಂತ ಆಸ್ತಿ, ಕುಟುಂಬದ ಆಸ್ತಿ, ಸ್ವಂತ ಪ್ರತಿಷ್ಠೆಗಾಗಿ ದುಡಿಯುವ ರಾಜಕಾರಣ ನಿರ್ಮೂಲನವಾಗ ಬೇಕು.
30. ನಿಜವಾದ, ಸ್ವಚ್ಚ, ಭ್ರಷ್ಟಾಚಾರ ಮುಕ್ತ, ಹಣ ಬಲವಿರದ, ಸಾಮಾನ್ಯ ಪ್ರಜೆಗಳಿಂದ ಆರಿಸಿ ಬಂದ ಪ್ರತಿನಿದಿ ಇರುವ, ಸಂವಿಧಾನದ ನಿಜ ಅರ್ಥ ಕೊಡುವ ಪ್ರಜಾಪ್ರಭುತ್ವ ಸ್ಥಾಪಿಸಬೇಕು.