ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತಿರುಪತಿ ವಿಮಾನ ಗೋಪುರದ ವಿಶೇಷ ಏನು? ಯಾಕೆ ಹೋಗಿ ಕೈ ಮುಗಿಯಬೇಕು?

ತಿರುಪತಿ ವಿಮಾನ ಗೋಪುರ :-

ಶ್ರೀ ವೆಂಕಟೇಶನ ದರ್ಶನ ಮಾಡಲು ತಿರುಪತಿಗೆ ಹೋದವರು, ಭಗವಂತನ ದರ್ಶನ ಪಡೆಯಲು ಕಾಯುತ್ತಾ , ಗರ್ಭಗುಡಿಯ ಸಮೀಪ ಬರುತ್ತಿದ್ದಂತೆ
ಕಾತುರದಿಂದ ಸ್ವಾಮಿಯ ದರ್ಶನ ಮಾಡಿ ಸಾರ್ಥಕ ಭಾವ ಪಡೆಯುತ್ತಾರೆ.
ಸ್ವಾಮಿಯ ವದನಾರವನ್ನು ಮನದಲ್ಲಿ ತುಂಬಿಕೊಂಡು ಪ್ರಾಕಾರದ ಸುತ್ತ ಹೊರಟ ಸ್ವಲ್ಪ ಹೊತ್ತಿನಲ್ಲಿ , ತಲೆಯೆತ್ತಿ ನೋಡುತ್ತಿರುವ ಜನಗಳ ಗುಂಪು ದೇವಸ್ಥಾನದ ಶಿಖರಕ್ಕೆ ಕೈ ಮುಗಿಯುವುದನ್ನು ನೋಡುತ್ತಾರೆ. ಪ್ರಾಕಾರದಿಂದ ಹೊರ ಬಂದವರು ಅವರನ್ನೇ ಅನುಸರಿಸುತ್ತಾರೆ. ಗೊತ್ತಿಲ್ಲದವರು ಏನು ಎಂದು ಕೇಳಿದಾಗ ‘ವಿಮಾನ ಗೋಪುರ’ ಎನ್ನುತ್ತಾರೆ. ಅವರಂತೆ ಇವರು ಕೈಮುಗಿದು ಹೊರ ಬರುತ್ತಾರೆ. ಇನ್ನು ಕೆಲವರು ಕೇಳಿದಾಗ ‘ ವೆಂಕಟೇಶನ ದರ್ಶನ ಮಾಡಿ ‘ವಿಮಾನ ಗೋಪುರ ದರ್ಶನ’ ಮಾಡಿದಾಗ ತಿರುಪತಿ ಯಾತ್ರೆ ಸಂಪನ್ನವಾಗುತ್ತದೆ ಎನ್ನುತ್ತಾರೆ.

ಆದರೆ ಬಹಳಷ್ಟು ಜನಗಳಿಗೆ ವಿಮಾನ ಗೋಪುರ ಎಂದರೇನು? ವಿಮಾನ ಗೋಪುರದ ವಿಶೇಷ ಏನು? ಯಾಕೆ ಹೋಗಿ ಕೈ ಮುಗಿಯಬೇಕು? ಯಾವ ದೇವರಿದೆ ಎಂಬ ಸಂಗತಿ ತಿಳಿಯುವ ಆಸಕ್ತಿಗೆ ಅಲ್ಲಿನ ನೂಕು ನುಗ್ಗಲು, ಸಮಯ, ಅವಕಾಶ ಇರುವುದಿಲ್ಲ. ಎಲ್ಲೆಲ್ಲಿಂದಲೋ ಯಾತ್ರೆ ಬಂದವರು ಬಹಳಷ್ಟು ಗಂಟೆಗಳ ಕಾಲ ಸರದಿಯಲ್ಲಿ ನಿಂತು ‘ವೆಂಕಟೇಶ್ವರ ಸ್ವಾಮಿಯ
ದರ್ಶನ ಮಾಡಿ ಕಣ್ತುಂಬ ತುಂಬಿಕೊಂಡ ಮೇಲೆ ಹೆಚ್ಚಿನ ಕುರಿತು ಕೇಳಬೇಕು ಎನಿಸುವುದಿಲ್ಲ. ಹಾಗಾಗಿ ಈ ವಿಚಾರ ಕೆಲವರಿಗೆ ಗೊತ್ತಿರುವುದಿಲ್ಲ. ಇನ್ನು ವಿಮಾನ ಗೋಪುರ ಎಂದು ಕೂಡಲೇ ರಾಮಾಯಣದ ಕಾಲದಲ್ಲಿ ಇದ್ದಂತ ಪುಷ್ಪಕ ವಿಮಾನದ ಪ್ರತಿಮೆ ಇರಬೇಕು. ಹೀಗೆ ಅಂದು ಕೊಳ್ಳಬಹುದು.

ಆದರೆ ಈ ವಿಮಾನ ಗೋಪುರಕ್ಕೆ ಪೌರಾಣಿಕದ ಹಿನ್ನೆಲೆ ಇದೆ:- ವೈಕುಂಠವಾಸಿ ಮಹಾವಿಷ್ಣುವಿಗೆ ಭೂಲೋಕ ಅಂದರೆ ಬಹಳ ಪ್ರೀತಿ. ಹೀಗಾಗಿ ನಾರಾಯಣ ಆಗಾಗ ಒಬ್ಬನೇ ಭೂಲೋಕ ಸಂಚಾರ ಮಾಡುತ್ತಾ ಬಂದು ಇಲ್ಲಿನ ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಾ ಭೂಲೋಕದ ಭಕ್ತ ಜನಗಳಿಗೆ ಮಾರುವೇಷದಲ್ಲಿ ಅನುಗ್ರಹಿಸುತ್ತಾ, ಒಂದಷ್ಟು ಕಾಲ ಭೂಲೋಕದಲ್ಲಿ ಇದ್ದು ಹೋಗುವುದು ಅವನ ವಾಡಿಕೆ. ನಡುವೆ ವಿಶ್ರಾಂತಿ ಪಡೆಯಲು ನಾರಾಯಣಗಿರಿ ಬೆಟ್ಟದ ಗುಹೆಯಲ್ಲಿ ನೆಲೆಸಿರುವುದು. ಲಕ್ಷ್ಮಿಯು ಬರುವೆ ಎಂದಾಗ ಕರೆದುಕೊಂಡು ಬಂದು ಭೂಲೋಕದಲ್ಲಿ ವಿಹಾರ ಮಾಡುತ್ತಿದ್ದನು. ಒಮ್ಮೆ ತ್ರಿಲೋಕ ಸಂಚಾರಿ ಗಳಾದ ನಾರದರು ವೈಕುಂಠದಲ್ಲಿರುವ ಮಹಾವಿಷ್ಣುವನ್ನು ದರ್ಶನ ಮಾಡಲು ಬಂದರು. ಇಡೀ ವೈಕುಂಠ ಸುತ್ತಿದರೂ ವೈಕುಂಠವಾಸಿ ನಾರಾಯಣ ಅವರಿಗೆ ಕಾಣಲಿಲ್ಲ. ಪ್ರಭು ವೈಕುಂಠ ಬಿಟ್ಟು ಎಲ್ಲಿ ಹೋಗಿದ್ದಾನೆ ಎಂದು ತಂದೆಯಾದ ಬ್ರಹ್ಮನ ಹತ್ತಿರ ಬಂದು ಕೇಳಿದರು. ಬ್ರಹ್ಮದೇವನು ಸ್ವಲ್ಪ ಹೊತ್ತು ಧ್ಯಾನಸ್ಥನಾಗಿ ನಂತರ ಹೀಗೆ ಹೇಳಿದರು ಪುತ್ರಾ, ಭೂಲೋಕದಲ್ಲಿ ‘ನಾರಾಯಣಗಿರಿ’ ಎಂಬ ಪರ್ವತವಿದೆ ಅದು ಮಹಾವಿಷ್ಣುಗೆ ಪ್ರಿಯವಾದ ಸ್ಥಳ. ಈಗ ನಾರಾಯಣನು ಲಕ್ಷ್ಮಿ ಸಮೇತ ಅಲ್ಲಿ ವಿಹಾರ ಮಾಡುತ್ತಿದ್ದಾನೆ. ನೀನು ಈ ಕೂಡಲೇ ಹೋದರೆ ನಾರಾಯಣನನ್ನು ಕಾಣಬಹುದು ಎಂದನು. ನಾರದರಿಗೆ ಹೇಳುತ್ತಿದ್ದ ಮಾತು ಗಳನ್ನು , ಹತ್ತಿರದಲ್ಲೇ ಇದ್ದ ಋಷಿಮುನಿಗಳು ದೇವತೆಗಳು, ದೇವ ಗಣಗಳು, ಎಲ್ಲರೂ ಕೇಳಿ ಆಶ್ಚರ್ಯಗೊಂಡರು ಏಕೆಂದರೆ ವೈಕುಂಠಕ್ಕಿಂತ ಮಿಗಿಲಾದ್ದು ಮಹಾವಿಷ್ಣುವನ್ನು ಸೆಳೆಯುವಂತಹದ್ದು ನಾರಾಯಣ ಗಿರಿಯಲ್ಲಿ ಏನಿದೆ? ಎಂದು ಕುತೂಹಲದಿಂದ ಮಾತನಾಡಿಕೊಂಡು ತಾವು ಅದನ್ನು ನೋಡ ಬೇಕೆಂದು ನಾರದರ ಜೊತೆ ಹೊರಟರು.

  ಜ್ಯೋತಿರಾಯುರ್ವೇದ - ಜ್ವರಾದಿ ಸಕಲ ರೋಗಮೂಲಗಳು

ಹೀಗೆ ನಾರದರ ಜೊತೆ ಋಷಿಮುನಿಗಳು ದೇವತೆಗಳ ದಂಡೇ ಬಂದರು. ಪರ್ವತ ಶಿಖರದ ಸುತ್ತ ಸುತ್ತಿದರು. ಎಷ್ಟೇ ಸುತ್ತಿದರು ನಾರಾಯಣಗಿರಿ ಪರ್ವತ ಕಾಣಲಿಲ್ಲ. ಅವರು ಆಯಾಸದಿಂದ ಬಳಲಿದರು. ಆಗ ಮತ್ತೆ ಬ್ರಹ್ಮನನ್ನೆ ಕುರಿತು ಧ್ಯಾನ ಮಾಡಿ ನಾರಾಯಣಗಿರಿ ಪರ್ವತ ಎಲ್ಲಿದೆ ಎಂದು ಕೇಳಿದರು. ಬ್ರಹ್ಮನು ಅವರಿಗೆಲ್ಲ ನಾರಾಯಣ ಗಿರಿ ಪರ್ವತದ ದಾರಿಯನ್ನು ತೋರಿಸಿ ಈ ನಾರಾಯಣಗಿರಿ ಪರ್ವತ ನಿಮಗೆ ಸಿಗಬೇಕೆಂದರೆ ನೀವೆಲ್ಲರೂ ಈ ಬೆಟ್ಟದ ತಪ್ಪಲಿನಲ್ಲಿರುವ ಪುಷ್ಕರಣಿ – ಕಲ್ಯಾಣಿಗಳಲ್ಲಿ ಸ್ನಾನ ಮಾಡಿ, ಭಗವಂತನ ನಾಮ ಸ್ಮರಣೆ ಧ್ಯಾನಗಳನ್ನು ಮಾಡುತ್ತಾ ನಾರಾಯಣಗಿರಿ ಸುತ್ತ ಇರುವ ಏಳು ಬೆಟ್ಟಗಳನ್ನು ಪ್ರದಕ್ಷಣೆ ಸುತ್ತಿರಿ ಎಂದು ತಿಳಿಸಿ ಅದೃಶ್ಯನಾದನು.

ಬ್ರಹ್ಮನ ಆದೇಶದಂತೆ ಅವರೆಲ್ಲರೂ ಅಲ್ಲಿದ್ದ ಪುಷ್ಕರಣಿ ತೀರ್ಥಗಳಲ್ಲಿ ಸ್ನಾನ ಮಾಡಿ ಭಗವಂತನ ಧ್ಯಾನ- ನಾಮ ಸ್ಮರಣೆ ಮಾಡುತ್ತಾ ಭಕ್ತಿಯಿಂದ ಪ್ರಾರ್ಥಿಸಿ
ಆ ಬೆಟ್ಟಗಳನ್ನೆಲ್ಲ ಪ್ರದಕ್ಷಿಣೆ ಹಾಕಿದರು. ಭಗವಂತನ ದರ್ಶನವಾಗುವರೆಗೂ
ಕಾತರಿಸುತ್ತಾ ಕಾಯುತ್ತಾ ಅಷ್ಟ ದಿಕ್ಕುಗಳನ್ನು ಪರಿಭ್ರಮಣಿಸಿದರು. ಅವರ
ಭಕ್ತಿಯ ಪ್ರಾರ್ಥನೆಗೆ ಒಲಿದನೋ ಎಂಬಂತೆ ವಿಷ್ಣುವಿನ ವಿಶ್ರಾಂತಿಧಾಮ ವಾದ ನಾರಾಯಣಗಿರಿ ಪರ್ವತದ ಮುಖ್ಯ ಸ್ಥಾನಕ್ಕೆ ಬಂದರು. ನಾರಾಯಣ ಗಿರಿ ಪರ್ವತ ಅದೇಂಥ ಪುಣ್ಯ ಪರ್ವತವಾಗಿತ್ತು ಎಂದರೆ ಸುತ್ತಲೂ ಔಷಧಿ ಸಸ್ಯಗಳು, ಗಗನಚುಂಬಿತ ಮರಗಳು, ಹೂ ಬನಗಳು, ವೃಕ್ಷ ರಾಶಿಗಳು, ಪುಷ್ಪಗಳಿಂದ ತುಂಬಿದ್ದು, ಗಿರಿ ಶಿಖರಗಳಿಂದ ಇಳಿದುಬರುವ ಜಲಪಾತಗಳು ರಮ್ಯ ಮನೋಹರ ವಿಹಂಗಮ ನೋಟ. ಇಂಥ ರಮ್ಯ ಮನೋಹರವಾದ ಭೂಲೋಕದಲ್ಲಿರುವ ನಾರಾಯಣಗಿರಿ ಪರ್ವತದ ಗುಹೆಯಲ್ಲಿ ವಿಶ್ರಾಂತಿ ಪಡೆಯುವುದು ವಿಷ್ಣುಗೆ ಅತ್ಯಂತ ಪ್ರಿಯವಾದ ತಾಣವಾಗಿದೆ. ಪರ್ವತದ
ಮೇಲೆ ನಿಂತರೆ ಇಡೀ ಬ್ರಹ್ಮಾಂಡದಲ್ಲಿರುವ ಎಲ್ಲಾ ಲೋಕಗಳು, ಗಿರಿ, ಶಿಖರ ಪರ್ವತಗಳಿಗಿಂತ ಮೇಲಿದ್ದೇವೆ ಎಂದು ಭಾಸವಾಗುತ್ತಿತ್ತು.

  ಚಾರ್ಮಾಡಿ ಘಾಟ್ ಕಾಯುವ ತಾಯಿ ಗುಳಿಗಮ್ಮ

ನಾರಾಯಣ ಗಿರಿ ಪರ್ವತದಲ್ಲಿ ನಿಂತು ಶ್ರೀಮನ್ನಾರಾಯಣನನ್ನು ಋಷಿಮುನಿ ಗಳಾದಿಯಾಗಿ ಭಕ್ತಿಯಿಂದ ಪ್ರಾರ್ಥಿಸಿ ಸ್ತುತಿಸಿದರು. ಗೋವಿಂದ, ಗೋವಿಂದ, ಗೋವಿಂದ, ಎಂದು ಪ್ರತಿಧ್ವನಿಸುವಂತೆ ಕೂಗಿ ಕರೆದರು. ಭಕ್ತರ ದಿವ್ಯಮಂತ್ರ ಪ್ರಾರ್ಥನೆಗೆ ಮನಸೊತು ಪೀತಾಂಬರ ಧಾರಿ, ಚತುರ್ಭಜನಾಗಿ ಶಂಖ- ಚಕ್ರ- ಗಧಾ- ಪದ್ಮಗಳನ್ನು ಧರಿಸಿ ಸರ್ವಾಲಂಕಾರದಿಂದ ಕಂಗೊಳಿಸುತ್ತಾ ಕೋಟಿ ಸೂರ್ಯಗಳ ಪ್ರಭೆಯನ್ನು ಸುತ್ತಲು ಹರಡಿದ ನಡುವೆ ವಿಮಾನದಲ್ಲಿ ಮುಗುಳ್ನಗುತ್ತ ನಿಂತು ಪ್ರಕಟಗೊಂಡನು. ಭಗವಂತನನ್ನು ನೋಡುತ್ತದೆ ಋಷಿಮುನಿಗಳ ದೇವತೆಗಳ ಆಯಾಸ ಬಳಕೆಗಳು ಮಾಯವಾಗಿ ಕಣ್ತುಂಬಾ
ತುಂಬಿಕೊಂಡು ಭಗವಂತನನ್ನು ಸ್ತೋತ್ರ ಪಠಣೆ ಮಾಡಿ ಪ್ರಾರ್ಥಿಸಿದರು. ನಂತರ ಭಗವಂತನ ಅವತಾರಗಳ ಕಥಾ ವರ್ಣನೆ ಮಾಡಿದರು. ಋಷಿಗಳು ದೇವತೆಗಳು, ದೇವಗಣಗಳು ಗಂಧರ್ವರು, ಮೈಮರೆತು ಕೇಳುತ್ತಾ ತನ್ಮಯ ರಾಗಿದ್ದರು. ಬೆಟ್ಟ ಗುಡ್ಡ ಪರ್ವತ ಪ್ರದೇಶ- ನದಿ- ಸಮುದ್ರ -ಹಳ್ಳ -ಕೊಳ್ಳ- ಕಾಡು- ಮೇಡು ಭಗವಂತನ ಲೀಲಾ ನಾಟಕಗಳನ್ನು ಪ್ರತ್ಯಕ್ಷವಾಗಿ ನೋಡುತ್ತಾ ಇದ್ದಂತೆ ಬಾಸವಾಗಿದ್ದರು. ಭಗವಂತನ ಗೋಪುರದ ಮೇಲೆ ವಿಮಾನದಲ್ಲಿ ಪ್ರತ್ಯಕ್ಷನಾಗಿ ದರ್ಶನ ಕೊಟ್ಟು ದೇವತೆಗಳನ್ನು ಸಂತೋಷಪಡಿಸಿದ ‘ವಿಮಾನ ಗೋಪುರ’ ನಂತರ ಪ್ರಸಿದ್ಧಿಗೆ ಬಂದಿತು. ಸಾಕ್ಷಾತ್ ವಿಷ್ಣು ಹೇಳಿದಂತೆ ಮುಕ್ತಿ ಯನ್ನು ಕರುಣಿಸುವ ಈ ವಿಮಾನವು ನಿಗೂಢವಾಗಿರುತ್ತದೆ. ಕಲಿಗಾಲ ದಲ್ಲಿ ಭಕ್ತರು ಕೃತಕ ವಿಮಾನವನ್ನು ನಿರ್ಮಿಸುತ್ತಾರೆ. ಅದರ ದರ್ಶನ ಭಾಗ್ಯ ಪಡೆದಾಗ ಅದರ ಪ್ರಭಾವವು ಇದರಷ್ಟೇ ಇರುತ್ತದೆ ಎಂದನು.
ಈ ರೀತಿಯಾಗಿ ಪೂರ್ವದಲ್ಲಿ ಭಗವಂತನ ನೆಲೆಸುವ ತಾಣವಾಗಿದ್ದ ನಾರಾಯಣಿ ಗಿರಿ ಪರ್ವತದ ದೇವಾಲಯದ ಮೇಲೆ ವಿಮಾನ ಗೋಪುರ ವನ್ನು ನಿರ್ಮಾಣ ಮಾಡಿದರು. ಅದನ್ನು ದರ್ಶನ ಮಾಡಿ ಪರ್ವತದ ದರ್ಶನ ದಿಂದ ಕೃತಾರ್ಥರಾಗುತ್ತಾರೆ. ವೆಂಕಟೇಶ್ವರನ ಸನ್ನಿಧಿಯಲ್ಲಿರುವ ವಿಮಾನ ದರ್ಶನ ವನ್ನು ದರ್ಶನ ಮಾಡಿದರೆ ಸಕಲ ಪಾಪಗಳು ನಿವಾರಣೆಯಾಗುತ್ತದೆ. ಇದನ್ನು ‘ಆನಂದದ ನಿಲಯ’ ಎಂದು ಕರೆಯುತ್ತಾರೆ. ಗೋಪುರಕ್ಕೆ ಚಿನ್ನದ ಲೇಪನ ಮಾಡಿದ್ದಾರೆ. ಬೆಳ್ಳಿಯ ಪ್ರಭಾವಳಿಯ ಮಧ್ಯೆ ರಾರಾಜಿಸುತ್ತಿರುವ ವೆಂಕಟೇಶ ನು ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ.

  "ಶ್ರೀಮದ್ಭಾಗವತ" - ಸಾವನ್ನೇ ಸಾಯಿಸುವ ಶಕ್ತಿಯುಳ್ಳ, ನೇರವಾಗಿ ಮನಸ್ಸಿಗೆ ಕೊಡುವ ಮದ್ದು…

ಮಹಾವಿಷ್ಣು, ಋಷಿಮುನಿಗಳಿಗೆ- ದೇವತೆಗಳಿಗೆ ದರ್ಶನ ಭಾಗ್ಯ ಕೊಟ್ಟು ಅವರೆಲ್ಲರ ಪ್ರಾರ್ಥನೆಗೆ ಒಲಿದು ಏನಾದರೂ ವರ ಕೇಳಿರಿ ಕೊಡುತ್ತೇನೆ ಎಂದಾಗ ಋಷಿಮುನಿಗಳು ದೇವತೆಗಳು, ಹೇಳಿದರು ಭಗವಂತ ನಿನ್ನ ದರ್ಶನ ಮಾತ್ರದಿಂದಲೇದ ನಾವು ಪುನೀತರಾದೆವು ನಮಗಿನ್ನಾವ ವರಗಳು ಬೇಡ ಎಂದರು. ಈ ಸಂತೋಷದ ಶುಭ ಸಂದರ್ಭದಲ್ಲಿ ಎಲ್ಲರೂ ವರಗಳನ್ನು ಕೇಳಲೇಬೇಕು ಎಂದಾಗ ತಮಗೆ ಬೇಕಾದ ವರಗಳನ್ನು ಕೇಳಿಕೊಂಡರು. ಅಗಸ್ತ್ಯ ಮಹರ್ಷಿಗಳು ಭೂತ-ವರ್ತಮಾನ- ಭವಿಷ್ಯ ಗಳನ್ನು ತಿಳಿಯುವ ವರ ಬೇಡಿದರು. ಈ ವರದಿಂದ ಭೂಲೋಕದ ಮುಂದಿನ ಭವಿಷ್ಯ ವನ್ನು ವೀಕ್ಷಿಸಿದರು. ನೋಡಿ ನಡುಗಿದರು. ಕಲಿಯುಗದ ಪ್ರಭಾವದಿಂದ ಜನರು ಎಂತೆಂಥ ಸಂಕಷ್ಟಗಳನ್ನು ಎದುರಿಸ ಬೇಕೆಂದು ಚಿಂತಿಸಿದರು. ಹಾಗೆ ಭಗವಂತನಲ್ಲಿ ಈ ರೀತಿ ಪ್ರಾರ್ಥಿಸಿದರು. ಭಗವಂತ ಕಲಿಗಾಲದಲ್ಲಿ ಜನರು ಕಲಿಯಿಂದ ಬಾಧೆ ಪಡುತ್ತಾರೆ. ಅವರ ಭಾದೆ ನೋವುಗಳನ್ನು ಪರಿಹರಿಸುವ ಸಲುವಾಗಿ ಈ ಬೆಟ್ಟದಲ್ಲಿ ಶ್ರೀ ವೆಂಕಟೇಶನಾಗಿ ಇಲ್ಲಿಯೇ ನೆಲೆಸಿ ಬೇಡಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸುವ ಮಾರ್ಗ ವನ್ನು ತೋರಿಸು ದೇವಾ ಎಂಬ ಅಗಸ್ತ್ಯ ಮಹರ್ಷಿಗಳ ಪ್ರಾರ್ಥನೆಯನ್ನು ಮನ್ನಿಸಿ ಭಗವಂತನು ಏಳುಬೆಟ್ಟ ಗಳ ಒಡೆಯನಾಗಿ ತಿರುಪತಿಯಲ್ಲಿ ನೆಲೆಸಿ ಭಕ್ತರನ್ನು ಕೈಬೀಸಿ ಕರೆಯುತ್ತಾ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾನೆ. ಬಂದ ಭಕ್ತರಿಗೆ ಜ್ಞಾನ, ಭಕ್ತಿ, ವೈರಾಗ್ಯ, ಆರೋಗ್ಯ, ಸಂಪತ್ತು ಅನುಗ್ರಹಿಸಿ ಭವ ಸಾಗರದಿಂದ ಮುಕ್ತಿಯನ್ನು ಕರುಣಿಸುತ್ತಿದ್ದಾನೆ.

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ!
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವ ಮಾಹ್ನಿಕಂ!
ಉತ್ತಿಷ್ಠೋತ್ತಿಷ್ಟ ಗೋವಿಂದ ಉತ್ತಿಷ್ಠ ಗರುಡಧ್ವಜ !
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು!!

Leave a Reply

Your email address will not be published. Required fields are marked *

Translate »