⛳ ಒಮ್ಮೆ ಕೃಷ್ಣನ ಹೆತ್ತ ತಾಯಿಯಾದ ದೇವಕಿಯು ಕೃಷ್ಣನಿಗೆ ಒಮ್ಮೆ ಹೇಳುತ್ತಾಳೆ. ಕೃಷ್ಣ ನೀನು ಚಿಕ್ಕವನಿದ್ದಾಗ ನಿನ್ನ ಬಾಲ್ಯವನ್ನು ನನಗೆ ನೋಡಲು ಆಗಲಿಲ್ಲ ಆ ಬಾಲ್ಯ ಲೀಲೆಯನ್ನು ಯಶೋಧೆ ನೋಡಿದ್ದಾಳೆ ಆದರೆ ನೀನು ನನ್ನ ಬಳಿಗೆ ಹಿಂದಿರುಗಿ ಬರುವಾಗಲೇ ನೀನು ದೊಡ್ಡವನಾಗಿದ್ದೆ ಹಾಗಾಗಿ ನನಗೆ ನಿನ್ನನ್ನು ಚಿಕ್ಕ ಮಗುವಿನಂತೆ ನೋಡ ಬೇಕೆಂದು ಆಸೆ ಆಗುತ್ತಿದೆ ಕಂದ. ಎಂದು ದೇವಕಿ ಹೇಳುತ್ತಾಳೆ…
ಕೃಷ್ಣನು ದೇವಕಿಯ ಆಸೆಗಳನ್ನು ಪೂರೈಸಿದನು.
ಕೃಷ್ಣನು ಕೂಡಲೇ ಚಿಕ್ಕ ಮಗುವಾಗಿ ಕುಣಿಯುತ್ತ ಕುಣಿಯುತ್ತ ಹೋಗಿ ದೇವಕಿಯ ತೊಡೆಯ ಮೇಲೆ ಕುಳಿತುಕೊಳ್ಳುತ್ತಾನೆ. ದೇವಕಿಯು ಹಾಗೆ ಮೈಮರೆತು ಬಿಡುತ್ತಾಳೆ. “ಶ್ರೀ ಕೃಷ್ಣ”ನ ಎಲ್ಲ ಹೆಂಡತಿಯರಿಗಿಂತ ಅತ್ಯಂತ ಪ್ರೀತಿಯ ಹೆಂಡತಿಯಾದ ರುಕ್ಮಿಣಿ ದೇವಿಯು ಕೂಡ ಇದನ್ನೆಲ್ಲ ನೋಡುತ್ತಾ ತುಂಬಾ ಸಂತೋಷ ಪಡುತ್ತಿದ್ದಳು…
ನಂತರ ದೇವಕಿಯು ಬೆಣ್ಣೆ ಕಡೆಯಲು ಹೋಗುತ್ತಾಳೆ
ತುಂಟ ಕೃಷ್ಣನು ಆ ಬೆಣ್ಣೆಯ ಮಡಕೆಯನ್ನು ಒಡೆದು ಹಾಕಿ
ದೇವಕಿಯ ಕೈ ಅಲ್ಲಿ ಇದ್ದ ಕಡಗೋಲು ಹಾಗೂ ಹಗ್ಗವನ್ನು ಕಿತ್ತುಕೊಂಡು ಓಡಿ ಹೋಗುತ್ತಾನೆ. ಆಗ ದೇವಕಿ ಹಾಗೂ ರುಕ್ಮಿಣಿ ದೇವಿಯು ಸಂತೋಷದಿಂದ ನಗುತ್ತಾರೆ…
ಕೃಷ್ಣ ನನಗೆ ನಿನ್ನ ಈ ಬಾಲರೂಪವನ್ನು ಪೂಜೆ ಮಾಡಬೇಕೆಂಬ ಆಸೆ ಆಗುತ್ತಿದೆ ನೀನು ಕಡಗೋಲು ಹಿಡಿದಿರುವ ಈ ಬಾಲ ರೂಪದ ದೃಶ್ಯ ಸದಾ ನಾನು ನೋಡುತ್ತಿರಬೇಕು ಹಾಗಾಗಿ ನಿನ್ನ ಈ ರೂಪದ ಒಂದು ವಿಗ್ರಹವನ್ನು ನನಗೆ ಮಾಡಿಸಿ ಕೊಡು ಎಂದು ಶ್ರೀ ಕೃಷ್ಣನ ಅತ್ಯಂತ ಪ್ರೀತಿಯ ಹೆಂಡತಿಯಾದ ರುಕ್ಮಿಣಿ ದೇವಿಯು ಕೇಳಿಕೊಳ್ಳುತ್ತಾಳೆ…
ತನ್ನ ಮುದ್ದಿನ ರಾಣಿ ರುಕ್ಮಿಣಿ ಕೇಳಿದಾಗ ಕೃಷ್ಣ ಇಲ್ಲ ಅನ್ನುವುದಕ್ಕೆ ಆಗುತ್ತದೆಯೇ ಹಾಗಾಗಿ ಕೃಷ್ಣನು ವಿಶ್ವಕರ್ಮ ದೇವನನ್ನು ಕರೆಸಿ “ಶುದ್ಧ ಸಾಲಿಗ್ರಾಮ ಶಿಲೆಯಿಂದ ಕಡಗೋಲು ಹಿಡಿದ ಬಾಲಕೃಷ್ಣನ ವಿಗ್ರಹವನ್ನು ಮಾಡಿಸಿ” ರುಕ್ಮಿಣಿ ದೇವಿಗೆ ಕೊಡುತ್ತಾನೆ. ರುಕ್ಮಿಣಿ ದೇವಿಯು ಹಾಗೆ ದ್ವಾರಕೆಯಲ್ಲಿ ಇರುವ ಎಲ್ಲರೂ ಆ ವಿಗ್ರಹವನ್ನು ಆರಾಧಿಸುತ್ತಾರೆ…
ಈ ಬಾಲಕೃಷ್ಣನ ಮುದ್ದಾದ ಮೂರ್ತಿಯನ್ನು ದ್ವಾರಕಾದಲ್ಲಿ ನೂರಾರು ಭಕ್ತರು ಗೋಪಿಚಂದನವನ್ನು ಹಚ್ಚಿ ಪೂಜಿಸುತ್ತಿರುವಾಗ ಮೂರ್ತಿಯು ಸಂಪೂರ್ಣವಾಗಿ ಗೋಪಿಚಂದನದಿಂದ ಮುಚ್ಚಲ್ಪಟ್ಟಿತು. ಅದು ಗೋಪಿ ಚಂದನದಿಂದ ಮುಚ್ಚಿ ಹೋಗಿದ್ದ ಕಾರಣ ಕಲ್ಲು ಬಂಡೆಯ ಹಾಗೆ ಆಗಿತ್ತು. ಶ್ರೀಕೃಷ್ಣನ ಯುಗದ ಅಂತ್ಯದಲ್ಲಿ ಸಂಭವಿಸಿದ ಮಹಾ ಪ್ರವಾಹದ ಪರಿಣಾಮವಾಗಿ ದ್ವಾರಕೆಯು ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಿತು. ಮತ್ತು ಶ್ರೀಕೃಷ್ಣನ ಗೋಪಿಚಂದನದಿಂದ ಮುಚ್ಚಿಹೋಗಿದ್ದ ವಿಗ್ರಹವೂ ನೀರಿನಲ್ಲಿ ಕೊಚ್ಚಿಹೋಯಿತು…
( ಸಂತ ಮಧ್ವಾಚಾರ್ಯರು ಮತ್ತು ವಿಗ್ರಹ )
ಶತಮಾನಗಳು ಉರುಳಿದವು. ಒಮ್ಮೆ ವಾಪಾರಿಗಳ ಹಡಗು ದ್ವಾರಕದ ಹತ್ತಿರದಿಂದ ಹೋಗುತಿರುವಾಗ ಆ ಹಡಗಿನ ನಾವಿಕನು ದ್ವೀಪದಲ್ಲಿ ಗಟ್ಟಿಯಾದ ಬಂಡೆಯನ್ನು ನೋಡುತ್ತಾನೆ ಅದು ದೇವರ ಮೂರ್ತಿ ಅಂತ ಯಾರಿಗೂ ಗೊತ್ತಿರಲಿಲ್ಲ ಆ ಬಂಡೆಯ ಹಾಗೆ ಇರುವುದು ಬೇರೇ ಯಾವುದು ಅಲ್ಲ ಅದು ಶ್ರೀ ಕೃಷ್ಣನ ವಿಗ್ರಹವಾಗಿತ್ತು. ಅದು ಗೋಪಿಚಂದನದಿಂದ ಪೂರ್ತಿ ಮುಚ್ಚಿ ಹೋಗಿದ್ದ ಕಾರಣ ಮಣ್ಣಿನ ಮುದ್ದೆ ಹಾಗೂ ಕಲ್ಲಿನ ಬಂಡೆಯ ಹಾಗೆ ಕಾಣಿಸುತ್ತ ಇತ್ತು. ಆ ನಾವಿಕನು ಅವನು ತನ್ನ ಹಡಗನ್ನು ಸಮತೋಲನ ಗೊಳಿಸಲು ಆ ಬಂಡೆಯನ್ನು ತನ್ನ ಹಡಗಿಗೆ ನಿಲುಭಾರವಾಗಿ ಇರಿಸಿಕೊಂಡನು…
ಒಮ್ಮೆ ಅವನ ಹಡಗು ದಕ್ಷಿಣ ಭಾರತದ ಪರ್ಯಾಯ ಪಶ್ಚಿಮ ಕರಾವಳಿ ಕಡೆ ಹೋಗುತ್ತಿರುವಾಗ ಉಡುಪಿ ಹಾಗೂ ಕುಂದಾಪುರದ ಮಧ್ಯ ಇರುವ ಮಲ್ಪೆ ಬೀಚ್ ಸಮೀಪ ಬರುವಾಗ ಚಂಡಮಾರುತವನ್ನು ಎದುರಿಸಿದಾಗ ಆ ಹಡಗು ಮುಳುಗುವ ಸ್ಥಿತಿಗೆ ಬರುತ್ತದೆ…
ಆಗ ಮಧ್ವಾಚಾರ್ಯರು ಈಗಿನ ಮಲ್ಪೆ ಸಮುದ್ರದ ಬಳಿ ಒಂದು ಸ್ತೋತ್ರವನ್ನು ರಚಿಸಬೇಕು ಅಂತ ಅಂದುಕೊಂಡು ಅದೇ ದಡದಲ್ಲಿ ಧ್ಯಾನ ಮಾಡುತ್ತಿದ್ದರು. ಅವರು ಆ ಹಡಗಿನ ಅಪಾಯವನ್ನು ಅರಿತುಕೊಂಡರು…
ಹವಾಮಾನವನ್ನು ಶಾಂತಗೊಳಿಸಲು ಮಧ್ವಾಚಾರ್ಯರು ತನ್ನ ಮೈಮೇಲೆ ಇರುವ ಅಂಗವಸ್ತ್ರವನ್ನು ಕೈ ಅಲ್ಲಿ ಹಿಡಿದು ವಾಯು ದೇವರ ಸ್ತೋತ್ರವನ್ನು ಜೋರಾಗಿ ಹೇಳುತ್ತಾ ಆ ವಸ್ತ್ರವನ್ನು ಗಾಳಿಯಲ್ಲಿ ಬೀಸುತ್ತಾರೆ. ಕೂಡಲೆ ಹವಾಮಾನ ಶಾಂತವಾಗಿ ಆ ಹಡಗು ಸುರಕ್ಷತೆಯಿಂದ ದಡ ಸೇರುತ್ತದೆ ಹಡಗಿನಲ್ಲಿ ಇದ್ದವರೆಲ್ಲ ಅಪಾಯದಿಂದ ಪಾರಾದರೂ. ಆ ಹಡಗಿನ ಕ್ಯಾಪ್ಟನ್ ಅವರು ಕೂಡಲೇ ಮಧ್ವಾಚಾರ್ಯರ ಪಾದಗಳ ಮೇಲೆ ಬಿದ್ದು ಕೃತಜ್ಞತೆಯನ್ನು ಹೇಳಿದರು ಹಾಗೆ ತನ್ನ ಹಡಗಿನಲ್ಲಿ ಅಪಾರವಾದ ಸಂಪತ್ತು ಇದೆ ನಿಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋಗಿ ಎಂದು ಆ ಹಡಗಿನ ಕ್ಯಾಪ್ಟನ್ ಹೇಳುತ್ತಾನೆ. ಮಧ್ವಾಚಾರ್ಯರು ಹಡಗಿನಲ್ಲಿದ್ದ ಗೋಪಿಚಂದನದಿಂದ ಮುಚ್ಚಿ ಹೋಗಿದ್ದ ಮಣ್ಣಿನ ಮುದ್ದೆಯನ್ನು ಉಡುಗೊರೆಯಾಗಿ ಸ್ವೀಕರಿಸಲು ನಿರ್ಧರಿಸಿದರು. ನಂತರ ಅವರು ಬಂಡೆಯನ್ನು ಒಡೆಯಲು ಮುಂದಾದಾಗ, ಬಾಲಕೃಷ್ಣನ ವಿಗ್ರಹವು ಅದರಿಂದ ಸ್ವಲ್ಪಮಟ್ಟಿಗೆ ಹೊರಹೊಮ್ಮಿತು…
ಕೃಷ್ಣನ ಪ್ರೀತಿಯ ಹೆಂಡತಿ ರುಕ್ಮಿಣಿ ದೇವಿ ಪೂಜಿಸಿದ ಅದೇ ಬಾಲಕೃಷ್ಣನ ವಿಗ್ರಹ ಇದು ಎಂದು ತನ್ನ ದೇವತಾ ದರ್ಶನದ ಮೂಲಕ ಅರಿತ ಮಧ್ವಾಚಾರ್ಯರು ಅಪಾರ ಆನಂದ ಅನುಭವಿಸಿದರು. ಹಾಗೆ ಅವರು ಆ ವಿಗ್ರಹವನ್ನು ಮಲ್ಪೆ ಬೀಚ್ ಯಿಂದ ಸ್ವಲ್ಪ ಹತ್ತಿರವಿರುವ ಉಡುಪಿಗೆ ತೆಗೆದುಕೊಂಡು ಹೋದರು. ಇವತ್ತು ಉಡುಪಿ ಅಂತ ನಾವು ಏನು ಕರೆಯುತ್ತೀವಿ ಆ ಸ್ಥಳದಲ್ಲಿ ಸಾಕ್ಷಾತ್ ಚಂದ್ರದೇವನೇ ತಪ್ಪಸ್ಸು ಮಾಡಿದ ಸ್ಥಳ ಅದು ಹಾಗಾಗಿಯೇ ಆ ಕ್ಷೇತ್ರಕ್ಕೆ ಉಡುಪಿ ಎಂದು ಹೆಸರು ಬಂತು…
ಮಧ್ವಾಚಾರ್ಯರು ಗೋಪಿಚಂದನದಿಂದ ಮುಚ್ಚಿಕೊಂಡು ಇರುವ ವಿಗ್ರಹವನ್ನು ತೆಗೆದುಕೊಂಡು ಹೋಗಿ ಅಲ್ಲಿ ಕೊಳದಲ್ಲಿ ತೊಳೆಯುತ್ತಾರೆ. ಆ ಕೊಳವನ್ನು ಮಧ್ವಾ ಸರೋವರ ಅಂತ ಕರೆಯುತ್ತಾರೆ. ನಂತರ ಅದೇ ಉಡುಪಿ ಅಲ್ಲಿ ಕಡಗೋಲು ಬಾಲಕೃಷ್ಣನ ವಿಗ್ರಹವನ್ನು ಉಡುಪಿ ಅಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ…
⛳ಹೀಗೆ ಗುಜರಾತಿನ ದ್ವಾರಕೆಯಲ್ಲಿ ಇದ್ದ ಕಡಗೋಲು ಬಾಲ ಕೃಷ್ಣನು ಕರ್ನಾಟಕದ ಕರಾವಳಿ ಉಡುಪಿಗೆ ಬಂದ…
🙏🙏🙏🙏🙏