ಶ್ರೀ ಕೊತ್ತಲೇಶ ದೇವಸ್ಥಾನ..!
ಬಾಗಲಕೋಟೆಗೆ ಕಿಲ್ಲಾ ಮುಕುಟ ಇದ್ದಂತೆ ಕಿಲ್ಲೆಯ ಪ್ರವೇಶ ಭಾಗದಲ್ಲಿರುವ ಶ್ರೀ ಕೊತ್ತಲೇಶ ದೇವಸ್ಥಾನ ಜೀವನಾಡಿ ಅತ್ಯಂತ ಜಾಗ್ರತ ದೇವಸ್ಥಾನ ಕೊತ್ತಲು ಎಂದರೆ ಕೋಟೆ ಆ ಅರ್ಥದಲ್ಲಿ ಇದು ಹೆಸರು ವಾಸಿಯಾಗಿದೆ ಪುರಾತನ ದೇವಸ್ಥಾನಕ್ಕೆ ನಡೆದುಕೊಳ್ಳುವರಿ ಸಾವಿರಾರು ಜನ ಈಗಲೂ ನವನಗರ,ವಿದ್ಯಾಗಿರಿಗೆ ಬಹಳಷ್ಟು ಜನ ಸ್ಥಳಾಂತರಗೊಂಡಿದ್ದರೂ ಈಗಲೂ ಶನಿವಾರ,ವಿಶೇಷ ಸಂದರ್ಭದಲ್ಲಿ ಭಕ್ತರು ಇಲ್ಲಿ ಆಗಮಿಸುತ್ತಾರೆ ಶನಿವಾರವಂತೂ ರಾತ್ರಿ ಎಷ್ಟೊತ್ತಾಗಲಿ ಭಟ್ಟಡ ಹಾಗು ಡಾ ಸಿ.ಡಿ.ಕಲಬುರಗಿ ಅವರು ಬರುವವರೆಗೂ ಈ ದೇವಸ್ಥಾನ ತೆರೆದಿರುತ್ತಿತ್ತು ಈ ದೇವರಿಗೆ ನಡೆದುಕೊಳ್ಳುವದೆ ಒಂದು ವಿಶೇಷ.
ಎಷ್ಟೇ ತೊಂದರೆಯಲ್ಲಿದ್ದವರನ್ನು ಕಾಪಾಡಿದ ಅನಾಥ ರಕ್ಷಕ ,ನನಗೆ ಏಕೆ ಅನೇಕರಿಗೆ ಒಂದು ವಿಷಯ ಗೊತ್ತಿರಲಿಲ್ಲ ಬಾದಾಮಿಯ ಖ್ಯಾತ ನ್ಯಾಯವಾದಿ ವ್ಜಿ.ಕೆ ಧಾರವಾಡಕರ ಅವರ ತಂದೆ ಹೆಸರು ಕೊತ್ತಲೇಶಾಚಾರ್ಯ ಎಂಬುದು ಏಕೆ ಬಂತೆಂಬುದುಗೊತ್ತಿರಲಿಲ್ಲ ಅವರ ಮೊಮ್ಮಗ ಅಂದರೆ ವಕೀಲರ ಮಗ ಮನೋಜ ಇತ್ತೀಚೆಗೆ ದುಬ್ಯೆದಿಂದ ಬಂದಾಗ ಹೇಳಿದ್ದು ಕೊತ್ತಲೇಶಾಚಾರ್ಯ ಅವರ ತಾಯಿಗೆ ಮಕ್ಕಳಾಗುವದು ತಡವಾಯಿತು, ಗರ್ಭಧಾರಣೆಯ ಕೆಲವೆ ಅವಧಿಗೆ ಗರ್ಭಸ್ರಾವ ಆಗುವದು ಹೀಗೆ ನಾಲ್ಕ್ಯೆದು ಬಾರಿ ಆದಾಗ ಅವರ ಒಮ್ಮ ಗರ್ಭಧರಿಸಿದಾಗ ಇದಾದರೂ ಸರಿಯಾಗಲಿ ಎಂದು ಪ್ರಾರ್ಥಿಸಿ ಕೊತ್ತಲೇಶ ದೇವಸ್ಥಾನದ ಮುಂದೆ ಮಲಗಿದರಂತೆ.
ಆಗ ಸುರಕ್ಷಿತ ಹೆರಿಗೆ ಹುಟ್ಟಿದ ಮಗುವಿಗೆ ಕೊತ್ತಲೇಶ ಎಂದು ಹೆಸರಿಟ್ಟರಂತೆ ಎಂತಹ ಅದ್ಬುತ ನೋಡಿ ಮನೋಜ ಈಗಲೂ ದುಬ್ಯೆದಿಂದ ಬಂದಾಗ ಒಮ್ಮೆಯಾದರೂ ದೇವಸ್ಥಾನ ದರ್ಶನ ತಪ್ಪುವದಿಲ್ಲ ಹೀಗೆ ನೂರಾರು ಪವಾಡದ ಉದಾಹರಣೆಗಳಿವೆ.
ಶ್ರೀ ಕ್ರಷ್ಟಾಚಾರ ತಾಳಿಕೋಟೆ,ಸಹೋದರ ಶ್ರೀ ಗುರುರಾಜ ಅವರು ಸೇವೆ ಮಾಡುತ್ತ ಬಂದರು ಅವರ ನಂತರ ರಾಜಾಚಾರ್ಯರು ಅವರ ನಂತರ ವಿನಾಯಕ ಹಾಗು ಅವರ ಸಹೋದರ ರಾಜಾಚಾರ್ಯರ ಮಗ ಪವನ ಸೇವೆ ಮಾಡುತ್ತಿದ್ದಾರೆ ಚ್ಯೆತ್ರ ಮಾಸದಲ್ಲಿ ಯುಗಾದಿಯಿಂದ ಹನುಮ ಜಯಂತಿ ವರೆಗೆ ವಿಶೇಷ ಕಾರ್ಯಕ್ರಮ ಗಳು ನಡೆಯುತ್ತವೆ ಬನ್ನಿ ದರ್ಶನ ಮಾಡಿ ಆರಾಧಿಸಿ.