ದೇವರ (ತಿರುಪತಿ, ಧರ್ಮಸ್ಥಳ, ಕಾವೇರಿ, ಸುಬ್ರಮಣ್ಯ) ದುಡ್ಡು ಗಂಟನ್ನು ತುಳಸಿ ಕಟ್ಟೆ ಎದುರು ಇಡುವುದು.
ಅದಕ್ಕೆ ಹೂವಿನ ಹುಸಿ ಮತ್ತು ತುಳಸಿ ದಳ ಎಲ್ಲಾ ದೇವರ ಗಂಟಿಗೂ ಹಾಕಬೇಕು.
ಕೊಡಿ ಬಾಳೆಎಲೆ ಮೇಲೆ ಒಂದ್ ಸಿದ್ದಿ ಬೆಳ್ತಿಗೆ ಅಕ್ಕಿ (ಬೆಂತಕ್ಕಿ) ಹಾಕಿ ಅದರ ಮೇಲೆ ಸಿಯಾಳ ಚೋಳಿ ಹೊಡೆದು(ಕ್ಯಾಪ್ ಥರ ಒಪೆನ್ ಮಾಡಿ) ಅಕ್ಕಿ ಮೇಲೆ ಇಡುವುದು.
ನಂತರ ಸಿಂಗಾರ ಹೂವಿನ ಕೊನೆ ಒಡೆದು ತುಳಸಿಕಟ್ಟೆ ಮತ್ತು ಸಿಯಾಳ ದ ಮೇಲೆ ಶೃಂಗಾರ ಮಾಡುವುದು. ಬೇರೆ ಹೂವುಗಳನ್ನು ಹಾಕಿ ಶೃಂಗಾರ ಮಾಡುವುದು.
ತುಳಸಿ ಕಟ್ಟೆ ಮತ್ತು ಸಿಯಾಳ ದೇವರ ರೂಪ..ಅವೆರಡಕ್ಕೂ ಅರಿಶಿನ ಕುಂಕುಮ ಹಾಕುವುದು.
ಒಂದು ಲೋಟದಲ್ಲಿ ಕಾಳುಮೆಣಸಿನ ಪುಡಿ ಮತ್ತು ಒಣ ಶುಂಠಿ ಪುಡಿ ಹಾಕಿ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ನೀರು ಹಾಕಿ ಕರಡುವುದು. ಅದೇ ತೀರ್ಥ.
ಆಮೇಲೆ ಹೆಸರುಬೇಳೆ, ಕಾಯಿ ಬೆಲ್ಲ ಹಾಕಿ ಕಲಸಿ ದೇವರಿಗೆ ನೈವೇದ್ಯ ಮಾಡುವುದು.
ಇಡೀಕಡ್ಲೆ , ಕಾಯಿಸುಲಿ ಹಾಕಿ ಕಲಸಿ ಇಡುವುದು.
ಮಾವಿನಹಣ್ಣು, ಹಲಸಿನ ಹಣ್ಣ, ಅನಾನಾಸ್ , ಎಲ್ಲ ಹಣ್ಣನ್ನು ಕೊಚ್ಚಿ ದೇವರಿಗೆ ನೈವೇದ್ಯ ಮಾಡುವುದು.
ದೇವರಿಗೆ ಸಾಂಬ್ರಾಣಿ ಧೂಪ ಹಾಕಿ…ಪೂಜೆ ಮಾಡುವುದು.
ಪೂಜೆಮಾಡುವವರು ತಿರುಪತಿಗೆ ಹೋಗಿ ಬಂದಿರಬೇಕು.
ನಂತರ ವಸಂತದ ಕಾಣಿಕೆ ತೆಗೆದು ಇಡಬೇಕು.
ದೇವರಿಗೆ ಸಾಂಬ್ರಾಣಿ ಧೂಪ ಹಾಕಿ…ತೆಂಗಿನಕಾಯಿ ಒಡೆಯುವುದು.
ಹಿರಿಯವರ ಹೆಸರಲ್ಲಿ, ನಾವು ನಂಬಿರುವ ದೈವದ ಹೆಸರಲ್ಲಿ ಒಂದೊಂದು ಕಾಯಿ ಕೊನೆಯಲ್ಲಿ ಒಡೆಯಬೇಕು.
ಮಂಗಳರ್ತಿ ಮಾಡುವುದು, ಈ ಸಮಯದಲ್ಲಿ ಗೋವಿಂದನನ್ನ ಕರೆಯುವುದು.
ರಾಮ ರಾಮ ಗೋವಿಂದ ಅನ್ನಿ ಗೋವಿಂದು.
ಎಡಕ್ಕೆ ಹೋಗಿ ಬಲಕ್ಕೆ ಬರುವ ತುಳಸಿ ಮಹಾಲಕ್ಷ್ಮಿ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಗೋವಿಂದ ಎನ್ನುವವರಿಗೆ ಘನ ಭಾಗ್ಯ ಕೊಡುವಂತ ಘನ ಚಿನ್ಮಯ ರೂಪದ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ತಿರುಪತಿ ತಿಮ್ಮಪ್ಪ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ವೆಂಕಟರಮಣ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಶೇಷಗಿರಿ ವಾಸನ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಮಂದಾರ ಗಿರಿ ವಾಸನ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಪದ್ಮಾವತಿ ಅಮ್ಮನವರ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಶ್ರೀನಿವಾಸ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ತಿಮ್ಮಪ್ಪ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಸುಬ್ರಹ್ಮಣ್ಯ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಶ್ರೀಕೃಷ್ಣ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಶ್ರೀ ರಾಮಚಂದ್ರ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ಮಂಜುನಾಥ ಸ್ವಾಮಿಯ ಪಾದಕ್ಕೆ ಗೋವಿಂದ ಅನ್ನಿ ಗೋವಿಂದು.
ನಾಣ್ಯ/ತುಳಸಿ ಕದರು ಹಿಡಿದುಕೊಂಡು ನೀರು ಬಿಡುವುದು.
ಆ ನೀರು ಬಿಟ್ಟಹಣ ಮತ್ತು ವಸಂತ ಕಾಣಿಕೆ ಎರಡನ್ನು ತಿರುಪತಿ ಗಂಟಿಗೆ ಹಾಕಿಡುವುದು.
ಉಳಿದ ಗಂಟಿಗೆ ಯಥಾಶಕ್ತಿ ಹಣವನ್ನು ಹಾಕುವುದು.
ನಂತರ ದೇವರನ್ನ ವಿಸರ್ಜಿಸಿ..ತೀರ್ಥ ಪ್ರಸಾದ ಹಂಚುವುದು.