ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಯರ ಮೇಲೆ ದೂರು ನೀಡಿದ ಭಕ್ತನ ಕಥೆ

ಬೇಡಿಕೆಯ ಸೇವೆಗೆ ತಕ್ಕಂತೆ ಫಲ:-

ಅವರವರ ಭಕ್ತಿ ಭಾವಕ್ಕೆ ತಕ್ಕಂತೆ ಗುರುಗಳು ವರವನ್ನು ಕರುಣಿಸುತ್ತಾರೆ ಎಂಬುದರ ಕುರಿತು ಈ ಸತ್ಯ ಘಟನೆ. ರಾಯರ ಪರಮಭಕ್ತ ಬ್ರಾಹ್ಮಣ ರಾದ ರಾಮಚಂದ್ರಾ ಚಾರ್ಯರಿಗೆ ಬಹು ದೊಡ್ಡ ಆಸೆ ಹುಟ್ಟಿತು. ಅಂತಿಂಥ ಆಸೆ ಅಲ್ಲ. ಸಾಕಷ್ಟು ಅನುಕೂಲವಿದ್ದ ಆ ಬ್ರಾಹ್ಮಣಗೆ ತಕ್ಕ ಆಸೆ. ಹೇಗಾದರೂ ಮಾಡಿ ಆ ಆಸೆಯನ್ನು ಪೂರೈಸಿಕೊಳ್ಳ ಬೇಕು. ಏನು ಮಾಡುವುದು ಎಂದು ಯೋಚಿಸಿ ಕೊನೆಗೆ ತನ್ನ ದೈವ ಭಕ್ತರಾದ ಗುರು ರಾಯರಲ್ಲಿ ನಂಬಿಕೆ ಇಟ್ಟು ಮನಸ್ಸಿನಲ್ಲಿ ಸಂಕಲ್ಪ ಮಾಡಿ ಕೊಂಡರು. ತಕ್ಷಣ ಮಂತ್ರಾಲಯಕ್ಕೆ ಬಂದು ರಾಯರ ಮುಂದೆ ಭಕ್ತಿಯಿಂದ ಪ್ರಾರ್ಥಿಸಿ ತಮ್ಮ ಆಸೆಯ ಸಂಕಲ್ಪ ಮಾಡಿ ಸೇವೆ ಆರಂಭಿಸಿದರು. ಸಂಕಲ್ಪದಷ್ಟೇ ಶುದ್ಧ ಬ್ರಹ್ಮಚರ್ಯದಲ್ಲಿ ಸೇವೆ ಮಾಡುತ್ತಾ ಬಂದರು. ದಿನಗಳು, ತಿಂಗಳುಗಳು ಕಳೆಯಿತು. ವರ್ಷದ ಹತ್ತಿರ ಬಂದಿತು. ತಮ್ಮ ಸಂಕಲ್ಪದ ಆಸೆಯ ಈಡೇರಿಕೆಗಾಗಿ ಆಹಾರ- ನಿದ್ರೆ- ಆರೈಕೆ- ಅನುಪಾನ ಇವುಗಳನ್ನೆಲ್ಲ ಕಡಿತಗೊಳಿಸಿ ಅನೇಕ ಕಠಿಣ ವ್ರತ ನಿಯಮವನು ಕೈಗೊಂಡು ಲೋಪದೋಷವಿಲ್ಲದಂತೆ ಸೇವೆ ಮಾಡುತ್ತಿದ್ದರು. ವರ್ಷಗಳೇ ಉರುಳಿದವು. ಅವರು ಸೇವೆ ಮಾಡುತ್ತಿದ್ದ ಸಮಯದಲ್ಲಿ ಅನೇಕ ಭಕ್ತರುಗಳು ಬಂದು ಸೇವೆ ಮಾಡಿ ತಮ್ಮ ಕೆಲಸ ನೆರವೇರಿತೆಂದು ಸಂತೋಷ ದಿಂದ ಹೋಗುತ್ತಿದ್ದರು. ಮತ್ತಷ್ಟು ಜನ ಬರುತ್ತಿದ್ದರು ಕೆಲವೇ ದಿನಗಳಲ್ಲಿ ಅವರ ಆಸೆ ಪೂರೈಸಿ ಹೊರಡುವುದನ್ನು ಕಂಡ ಅವರು ಕೆಲವು ಭಕ್ತರನ್ನು ಕುರಿತು, ನಿಮ್ಮ ಅಪೇಕ್ಷೆಗಳನ್ನು ರಾಯರು ನೆರವೇರಿಸಿದರೆ ಎಂದು ಕೇಳಿದರು. ಅದಕ್ಕೆ, ಭಕ್ತರೆಲ್ಲರೂ ರಾಯರು ಕನಸಿನಲ್ಲಿ ಹಾಗೂ ಸೂಚನೆ ಮೂಲಕ, ಮನೆ ಕಟ್ಟುವುದು, ಮಕ್ಕಳ ಫಲ, ವಿದ್ಯಾಭ್ಯಾಸ, ನೌಕರಿ, ಕಾಲೇಜು ಸೀಟು, ವರ್ಗಾವಣೆ ಹೀಗೆ ಎಲ್ಲಾ ಅವರ ಅಪೇಕ್ಷೆಗಳನ್ನು ನೆರವೇರಿಸಿರುವುದಾಗಿ ತಿಳಿಸಿದರು.

  ಕೇಶವನ 24 ರೂಪಗಳು ಮತ್ತು ಗಾಯತ್ರಿ ಮಂತ್ರ

ಈ ವ್ಯಕ್ತಿ ಯೋಚಿಸಿದ ನನಗಿನ್ನೂ ಫಲ ಸಿಕ್ಕಿಲ್ಲ, ಫಲ ಕೊಡುತ್ತೇನೆ ಎಂಬ ಸೂಚನೆ
ಸಹ ಕೊಟ್ಟಿಲ್ಲ, ರಾಘವೇಂದ್ರರು ನನ್ನ ಸೇವೆಗೆ ಫಲ ಕೊಡುತ್ತಾರೆಯೇ? ಎಂಬ ಅನುಮಾನ ಬ್ರಾಹ್ಮಣಗೆ ಬಂದಿತು. ಮತ್ತು ಕೆಲವು ದಿನ ಕಳೆದ ಮೇಲೆ ರಾಯರ ಮೇಲೆ ಕೋಪ ಬಂದಿತು. ಗುರುಗಳೇ ನಾನು ಇಷ್ಟು ವರ್ಷಗಳಿಂದ ಅಖಂಡ ಸೇವೆ ಮಾಡುತ್ತಾ ಬಂದಿದ್ದರೂ, ನೀವು ನನ್ನ ಆಸೆ ಈಡೇರಿಸುವ ಸೂಚನೆಯೂ ಕೊಡಲಿ ಲ್ಲ, ಎಂದುಕೊಂಡು ರಾಯರ ಆರಾಧ್ಯ ದೈವ ತಿರುಪತಿ ಶ್ರೀನಿವಾಸನ ಸನ್ನಿಧಿಗೆ ಬಂದರು. ತಿರುಪತಿ ಶ್ರೀನಿವಾಸನನ್ನು ಭಕ್ತಿಯಿಂದ ಪ್ರಾರ್ಥಿಸಿ ಒಂದು ಚೀಟಿಯಲ್ಲಿ ‘ “ಸ್ವಾಮಿ ಶ್ರೀನಿವಾಸ, ನಿನ್ನ ಹಾಗೂ ರಾಯರ ಭಕ್ತನಾದ ನಾನು ಬಹಳ ಕಾಲದಿಂದ ರಾಯರ ಸೇವೆ ಮಾಡುತ್ತಾ ಬಂದಿದ್ದೇನೆ, ಆದರೂ ರಾಯರು ನನ್ನ ಆಸೆ ಕುರಿತು ಯಾವ ಸೂಚನೆಯನ್ನು ಕೊಟ್ಟಿಲ್ಲ. ಈಗಾಗಲೇ ಎಷ್ಟೋ ಭಕ್ತರು ಬಂದು ತಮ್ಮ ಕಾರ್ಯ ಪೂರೈಸಿಕೊಂಡು ಹೋಗಿದ್ದಾರೆ. ಈಗ ನೀನೇ ನನಗೆ ದಾರಿ ತೋರಬೇಕು, ರಾಯರನ್ನು ವಿಚಾರಿಸು ಎಂದು ರಾಘವೇಂದ್ರರ ಮೇಲೆ ದೂರು ಸಲ್ಲಿಸಿ,ಬರೆದ ಚೀಟಿಯನ್ನು ಹುಂಡಿಯಲ್ಲಿ ಹಾಕಿ ಮತ್ತೆ ಮತ್ತೆ ಪ್ರಾರ್ಥಿಸಿ ಚಿಂತೆಯಲ್ಲಿಯೇ ಊಟ ಮುಗಿಸಿ ರಾತ್ರಿ ಮಲಗಿದರು.

ಆ ಭಕ್ತನಿಗೆ ಬೆಳಗಿನ ಜಾವ ಒಂದು ಕನಸು ಕಂಡಿತು. ಅದು ಕೋರ್ಟ್ ಹಾಲ್, ನ್ಯಾಯಾಧೀಶರಾಗಿ ಶ್ರೀನಿವಾಸನೆ ಕರಿ ಕೋಟು ಹಾಕಿಕೊಂಡು ಕುಳಿತಿದ್ದಾನೆ. ದೂರು ಕೊಟ್ಟ ಭಕ್ತರು ಒಂದು ಕಡೆ ನಿಂತಿದ್ದರೆ, ಆಪಾದನೆ ಮಾಡಿಸಿ ಕೊಂಡ ರಾಯರು ಇನ್ನೊಂದು ಕಡೆ ನಿಂತಿದ್ದಾರೆ. ವಿಚಾರಣೆ ಆರಂಭವಾಯಿತು. ಭಕ್ತನು, ತನ್ನ ಒಂದು ಆಸೆಯನ್ನು ಇಟ್ಟುಕೊಂಡು ರಾಯರಲ್ಲಿ ನೆರವೇರಿಸಿ ಕೊಡುವಂತೆ ಸಂಕಲ್ಪ ಮಾಡಿ, ಅದಕ್ಕಾಗಿ ರಾಯರ ಪುಣ್ಯಕ್ಷೇತ್ರಕ್ಕೆ ಬಂದು ಕಠಿಣ ಸೇವೆ ಮಾಡುತ್ತಿದ್ದು,. ಎಷ್ಟು ದಿನಗಳು ಕಳೆದರೂ ತನ್ನನ್ನು ಗಮನಿಸದೆ, ಬೇರೆ ಭಕ್ತರ ಬೇಡಿಕೆಗಳನ್ನು ಪೂರೈಸಿದ್ದಾರೆ. ವರ್ಷಗಳೇ ಕಳೆದರೂ ನನ್ನ ಸೇವೆಯನ್ನು ರಾಯರು ಸ್ವೀಕಾರ ಮಾಡಿಲ್ಲ ಎಂದು ಒಂದಕ್ಷರವು ತಪ್ಪಿಲ್ಲದಂತೆ ನ್ಯಾಯಾಧೀಶರಲ್ಲಿ ಹೇಳಿ ದನು, ಆಪಾದಿತ ಸ್ಥಾನದಲ್ಲಿ ನಿಂತ ರಾಯರ ವಿಚಾರಣೆ ನಡೆಯಿತು. ರಾಯರು ಹೇಳಿದರು. ಸ್ವಾಮಿ, ನನ್ನನ್ನೇ ನಂಬಿದ ಈ ಭಕ್ತ, ಯಾವ ದಿನ ಬಂದ, ಅವನ ಬೇಡಿಕೆ, ಸಂಕಲ್ಪ, ಶ್ರದ್ಧೆಯಿಂದ ಮಾಡಿದ ಕಠಿಣ ಸೇವೆ, ನಿವೇದಿಸಿಕೊಂಡ ದಿನಾಂಕ, ಎಲ್ಲವನ್ನು ಸಾಕ್ಷಿ ಸಮೇತ ನ್ಯಾಯಾಧೀಶ ಶ್ರೀನಿವಾಸನ ಮುಂದೆ ಇಟ್ಟರು. ಎರಡೂ ಕಡೆಯ ವಾದ ವಿವಾದಗಳನ್ನು ಪರಿಶೀಲಿಸಿದಾಗ, ನ್ಯಾಯಾಧೀಶ ಸ್ಥಾನದಲ್ಲಿದ್ದ ಶ್ರೀನಿವಾಸ ದೇವರಿಗೆ, ತಪ್ಪು ಯಾರದ್ದು ಎಂದು ಸ್ಪಷ್ಟವಾಯಿತು. ಆ ತಪ್ಪು ಭಕ್ತನದೇ ಆಗಿತ್ತು. ಏಕೆಂದರೆ ಸಾಧಾರಣವಾಗಿ ಭಕ್ತರ ಅಪೇಕ್ಷೆಗಳು ಎಂದರೆ, ಮದುವೆ- ಮನೆ -ಸಂಪತ್ತು- ಉದ್ಯೋಗ -ಮಕ್ಕಳು- ರೋಗರುಜಿನಗಳ- ನಿವಾರಣೆ, ತೀರ್ಥಕ್ಷೇತ್ರಗಳ ದರ್ಶನ, ಶುಭ ಕಾರ್ಯಗಳು, ಇವೆಲ್ಲ ಸಣ್ಣ ಪುಟ್ಟ ಅಪೇಕ್ಷೆಗಳು, ಅವರವರು ಮಾಡಿದ ಸೇವೆಗೆ ತಕ್ಕಂತೆ ಬೇಡಿಕೆಗಳನ್ನು ಪೂರೈಸಿರುವೆ
ಅದಕ್ಕೆ ಅವರ ಸೇವೆ ಸಾಕಾಗಿತ್ತು. ಆದರೆ ಈ ಭಕ್ತನದು ಬರೋಬ್ಬರಿ ಬೇಡಿಕೆ ಅದು ರಾಜ್ಯಕ್ಕೆ ರಾಜನಾಗುವುದು. ಅದಕ್ಕೆ ತಕ್ಕ ಸೇವೆ ಮಾಡುತ್ತಲೇ ಈತ ಬಂದಿದ್ದ ಸ್ವಾಮಿ, ಇನ್ನು ಅವನ ಸೇವೆಗೆ ಮೂರು ದಿನಗಳು ಮಾತ್ರ ಬಾಕಿ ಇತ್ತು. ಅಷ್ಟರಲ್ಲಿ ಅವಸರ ಮಾಡಿ ನಿನ್ನ ಸಾನಿಧ್ಯಕ್ಕೆ ಬಂದು ದೂರು ದಾಖಲೆ ಮಾಡಿದ್ದಾನೆ ಎಂದರು.

  ರಾಮನಾಮದ ಶಕ್ತಿ ಎಷ್ಟು ?

ನ್ಯಾಯಾಧೀಶನಾಗಿದ್ದ ಶ್ರೀನಿವಾಸ ಎರಡು ಕಡೆಯ ವಾದಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಇದರಲ್ಲಿ ರಾಯರ ನಿಲುವು ಸ್ಪಷ್ಟವಾಗಿದೆ. ಆದರೆ ಗಡಿಬಿಡಿ ಮಾಡಿ
ರಾಯರ ಮೇಲೆ ದೂರು ನೀಡಿದ ಭಕ್ತನಿಗೆ ನೂರು ಛಡಿ ಏಟಿನ ಶಿಕ್ಷೆ ಆದೇಶಿಸಿದ. ಅದರಂತೆ ದೂತರು ಭಕ್ತನಿಗೆ ನೂರು ಛಡಿ ಏಟು ಹೊಡೆಯಲು ಆರಂಭಿಸಿದರು. ಏಟಿನ ನೋವು ತಡೆಯಲಾರದೆ ಒದ್ದಾಡಿ, ಹೊರಳಾಡಿ, ಭಯದಿಂದ ಕಿರುಚಿದ ಎಚ್ಚರವಾಯಿತು. ಮೈಯೆಲ್ಲ ಬೆವತು ನೀರಾಗಿತ್ತು. ಬ್ರಾಹ್ಮಣಗೆ ತನ್ನ ತಪ್ಪಿನ ಅರಿವಾಗಿತ್ತು. ಆತ ಮರುದಿನವೇ ರಾಯರ ವಿರುದ್ಧ ದೂರಿದ್ದಕ್ಕಾಗಿ ಪಶ್ಚಾತಾಪ ಪಟ್ಟನು ಮತ್ತು ಮಂತ್ರಾಲಯಕ್ಕೆ ಬಂದು, ಗುರುರಾಯರಲ್ಲಿ ಕ್ಷಮೆ ಯಾಚಿಸಿ, ನಿಶ್ಚಲ ಮನಸ್ಸಿನಿಂದ ಸೇವೆಯನ್ನು ಮಾಡಿದರು.

  ಪರಶುರಾಮ ಇತಿಹಾಸದ ಕಥೆ

ಮರು ಜನ್ಮದಲ್ಲಿ ಅದೇ ಬ್ರಾಹ್ಮಣನು ‘ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್’ ಆಗಿ ಜನಿಸಿದರು. ಈ ನಿಗೂಢ ಪ್ರಸಂಗ ವನ್ನು ಶ್ರೀ ಇಬ್ರಹಾಂಪುರ ಅಪ್ಪ ಅವರು ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಅವರಿಗೆ ಬಹಿರಂಗಪಡಿಸಿದರು ಮತ್ತು ನಿರೂಪಿಸಿದರು. ಇಬ್ರಾಹಾಂಪುರ ಅಪ್ಪ ಅವರು ಶ್ರೀ ಗುರುರಾಯರ ಕಟ್ಟಾ ಭಕ್ತರಾಗಿದ್ದು, ರಾಯರ ಮೂಲ ರೂಪಗಳನ್ನು ಪ್ರವೇಶಿಸುವ ಕಲೆಯನ್ನು ಹೊಂದಿದ್ದರು. ಹೀಗಾಗಿ ಅವರಿಗೆ ನಿಜ ಸಂಗತಿ ತಿಳಿದಿತ್ತು.

ಗುರು ರಾಘವೇಂದ್ರರು ನಂಬಿ ಬಂದ ಭಕ್ತರ ಕೈಯನ್ನು ಎಂದಿಗೂ ಬಿಡುವುದಿಲ್ಲ.
ಎಂಬುವುದಕ್ಕೆ ಇದು ಜ್ವಲಂತ ಸಾಕ್ಷಿ.

ಭವ್ಯ ಸ್ವರೂಪೋ ಭವದುಃಖತೂಲ
ಸಂಘಾಗ್ನಿಚರ್ಯ: ಸುಖ-ಧೈರ್ಯಶಾಲಿ !
ಸಮಸ್ತ ದುಷ್ಟ ಗ್ರಹ ನಿಗ್ರ ಹೇಶೋ
ದುರತ್ಯ ಯೋಪಪ್ಲವ ಸಿಂಧು ಸೇತು: !!

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »