ಕಾಟೇರಮ್ಮ ದೇವಿಯ ಅವತಾರದ ಅತ್ಯಂತ ರೋಚಕ ಮತ್ತು ಭಯಾನಕ ಹಿನ್ನೆಲೆ…👇(ದೇವಿ ಪುರಾಣ ಆಧಾರಿತ )
ನಮ್ಮ ದಕ್ಷಿಣ ಭಾರತದಲ್ಲಿ ಕಾಟೇರಮ್ಮ ದೇವಿಗೆ…ಹಳ್ಳಿ ಹಳ್ಳಿಗಳಲ್ಲೂ ವಿಶೇಷವಾದ..ಆರಾಧನೆ ಮಾಡಲಾಗತ್ತೆ…
ಈ ದೇವಿಯು ಕರ್ನಾಟಕದಲ್ಲಿ ಕಾಟೇರಮ್ಮ..
ತಮಿಳುನಾಡಲ್ಲಿ ಕಾಟೇರಿ ಅಮ್ಮನ್ ಎಂದು ಪ್ರಸಿದ್ಧಿಗೊಂಡಿದ್ದಾಳೆ… ಇವಳು ರೋಗಗಳನ್ನು ನಾಶ ಮಾಡುವ ದೇವಿಯೆಂದು ಭಕ್ತರು ಆರಾಧಿಸುತ್ತಾರೆ ಇವಳು ಎಷ್ಟೋ ಜನರ ಕುಲದೇವಿ..ಹಾಗೂ ಗ್ರಾಮದೇವತೆ ಆಗಿ ಭಕ್ತರನ್ನು ಹರಸುತ್ತಾಳೆ..ಅಷ್ಟೊಂದು ಸುಪ್ರಸಿದ್ದ..ಬೇಗನೆ ಭಕ್ತರ..ಕಷ್ಟಗಳನ್ನ ನಿವಾರಿಸುವ..ದೈವ ಎನ್ನುವ ನಂಬಿಕೆ ಸಹ ಇದೆ…ಇನ್ನೂ ಈ ಕಾಟೇರಮ್ಮ ದೇವಿ ಶಕ್ತಿ ದೇವತೆಯಾದ ಪಾರ್ವತಿ.. ದುರ್ಗಾ ಕಾಳಿಯ ಅಂಶವೆಂದೇ..ದೇವಿ ಪುರಾಣದಲ್ಲಿ ಹೇಳಲಾಗತ್ತೆ…ಇನ್ನೂ ಈ ಕಾಟೇರಮ್ಮ ದೇವಿಯ ಅವತಾರದ ಹಿನ್ನೆಲೆ..ಅತ್ಯಂತ..ಭಯಾನಕ ಮತ್ತು ರೂಚಕತೆಯಿಂದ ಕೂಡಿದೆ…👇
ಸುಂದರ..ಕೈಲಾಸ ಪರ್ವತದಲ್ಲಿ… ವಾಸವಾಗಿರುವ..ಆದಿ ದಂಪತಿಗಳಾದ ಶಿವ ಮತ್ತು ಪಾರ್ವತಿ…ದೇವಿ…ತುಂಬಾ ಅನ್ಯೋನ್ಯವಾಗಿರ್ತಾರೆ…..ಒಂದು ದಿನ ಶಿವ ಧ್ಯಾನಕ್ಕೆ ಕುಳಿತಿರುವಾಗ..ಸಂಜೆ ಸೂರ್ಯ ಮುಳುಗಿದ ನಂತರ ಪಾರ್ವತಿ ದೇವಿ… ಕೈಲಾಸದಿಂದ… ತೊರೆದು…ಮಾರನೇ ದಿನ..ಬೆಳಗಿನ ಜಾವಕ್ಕೆ ಹಿಂತಿರುಗುವುದನ್ನು ಗಮನಿಸುತ್ತಾನೆ…ಮಾರನೇ ದಿನವೂ ಹೀಗೆ…ಹಿಂಗೇ ಮುಂದುವರೆಯುತ್ತಲೇ ಇರತ್ತೆ…ಪ್ರತಿ ನಿತ್ಯ ಪಾರ್ವತಿ…ತನಗೆನೇ ಎಚ್ಚರವಿಲ್ಲದಂತೆ…ರಾತ್ರಿ ವೇಳೆ…ಹೋಗಿ…ಬೆಳಗ್ಗೆ ಬರುತಿತ್ತಾಳೆ…ಅಸಲಿಗೆ…ಇಡೀ ರಾತ್ರಿ ಅವಳು ಹೋಗುವದಾದರೂ ಎಲ್ಲಿಗೆ.. ಎಂಬ ಕುತೂಹಲದಿಂದ…ಒಂದು ದಿನ ರಹಸ್ಯವಾಗಿ… ಮೆಲ್ಲನೆ…ಅವಳನ್ನ ಹಿಂಬಾಲಿಸುತ್ತಾನೆ…. ಹಿಂಬಾಲಿಸಿದ…ಶಿವನಿಗೆ.. ಕಂಡಿದ್ದು…ವಿಚಿತ್ರ ಮತ್ತು.. ಭಯಂಕರವಾದ ದೃಶ್ಯ…ಅಸಲಿಗೆ…ಪಾರ್ವತಿ… ಸ್ಮಶಾನಕ್ಕೆ ಹೋಗಿ…ಒಂದು ದೊಡ್ಡದಾದ ಗುಂಡಿಯನ್ನ ತೋಡಿ…ಅದ್ರಲ್ಲಿ..ಕೂತು… ತನ್ನ…ನಾಲಿಗೆಯನ್ನ ಉದ್ದವಾಗಿ ಚಾಚಿ…ಕೂರೆ ಹಲ್ಲುಗಳು ಮೂಡಿ…ಕಣ್ಣು ಕೆಂಡವಾಗಿಸಿಕೊಂಡು..ಕೂದಲು ಕೆದರಿ…ಅರೆ ನಗ್ನವಾಗಿ…ರುಂಡಮಾಲೀನಿಯಾಗಿ….. ಜೋರಾಗಿ…ಅಳುತ್ತಾ.. ಘರ್ಜಿಸುತ್ತಾ….ತನ್ನ ಷೋಡಷಬಾಹು (18 ಕೈ )ಚೂಪಾದ ಉಗುರುಗಳಿಂದ ಸತ್ತ ಹೆಣಗಳ ದೇಹವನ್ನ ಸೀಳಿ ಮಾಂಸವನ್ನು ಕಿತ್ತು..ಭಕ್ಷಣೆ ಮಾಡುತ್ತಾ…ಮದಿರೆ ಸೇವಿಸುತ್ತಾ…ಕೂತಿರ್ತಾಳೆ… ತನ್ನ…ಹೆಂಡತಿಯ…ಈ ವಿಚಿತ್ರ…ಮತ್ತು…ಘೋರವಾದ ಅವಸ್ಥೆ…ರೂಪ ಕಂಡ ಶಿವನೇ…ಒಂದು ಕ್ಷಣ ಧಿಬ್ರಾಂತನಾಗ್ತಾನೆ..ಹೇಗಾದರೂ ಮಾಡಿ ತನ್ನ ಪತ್ನಿಯನ್ನ… ಇದರಿಂದ ಆಚೆ ಬರುವಂತೆ… ಮಾಡಲು…ಗುಂಡಿಯ ಬಳಿ ಹೋಗಿ…ಪಾರ್ವತಿಯ ಕೈಯನ್ನ ಹಿಡಿದು..ಎಳೆಯಲು ಮುಂದಾಗುತ್ತಾನೆ…ಇತ್ತ ಅವಳು…ಶಿವನ ಕಾಲನ್ನೇ ಹಿಡಿದು…ಗುಂಡಿಯೊಳಗೆ ಎಳೆದುಕೊಳ್ಳಲು ಮುಂದಾಗ್ತಾಳೆ…ಕಾರಣ ಅಷ್ಟು ಶಕ್ತಿಶಾಲಿಯಾದ ರೂಪವದಾಗಿರತ್ತೆ…ಆ ಮಹಾಕಾಲನ..ಕಾಲನ್ನೇ ಹಿಡಿದು ಗುಂಡಿಯೊಳಗೆ..ಎಳೆದು ಕೊಳ್ಳುವಷ್ಟು….🔱🙏🙏ದೇವಿಯ ಹಿಂದಿನ ಉಗ್ರ ಅವತಾರದಲ್ಲಿ…ಚಂಡ ಮುಂಡ..ರಕ್ತ ಬೀಜಾಸುರ.. ಮಹಿಷನನ್ನ ಸಂಹರಿಸಿದ ದೇವಿ…ಶಾಂತಳಾಗದೇ… ಸೃಷ್ಠಿಯನ್ನೇ ನಾಶ ಮಾಡಲು ಹೊರಟಾಗ…ಅವಳ ವೇಗವನ್ನ…ತಡೆಯಲು…ಸಾಕ್ಷಾತ್..ಆ ಮಹಾಕಾಲನೇ… ಬಂದು ಇವಳ…ಕಾಲಡಿ ಬೀಳಬೇಕಾಯಿತು…🙏🙏ಇದನ್ನೆಲ್ಲಾ..ಸ್ಮರಿಸಿಕೊಂಡ ಶಿವ…ಉಪಾಯದಿಂದ… ಅವಳ ಕೈಮೇಲೆ…ತನ್ನ ತ್ರಿಶೂಲವನ್ನು ಇಟ್ಟು… ಜೋರಾಗಿ ಅವಳ ಕೈಯನ್ನು ಹಿಡಿದು ಎಳೆದಾಗ…ಪಾರ್ವತಿ ಗುಂಡಿಯಿಂದ ಆಚೆ ಬಂದು…. ಆ ವಿಚಿತ್ರ ಉಗ್ರ ರೂಪ…ಆ ಗುಂಡಿಯೊಳಗೆ ಉಳಿದುಬಿಡತ್ತೆ….ಆ ಗುಂಡಿಯಲ್ಲಿ ಉಳಿದ ಉಗ್ರ ರೂಪವೇ…” ಕಾಟೇರಮ್ಮ ” ದೇವಿಯ…ಅವತಾರ ರೂಪ 🙏🙏🔱 ನಂತರ ಶಿವ ಎಚ್ಚರವಿಲ್ಲದ ಪಾರ್ವತಿಯನ್ನ ಕೈಲಾಸಕ್ಕೆ ಕರೆದೋಯ್ತಾನೆ…🙏🙏ಇಲ್ಲಿ..ಎಲ್ಲಾ ರೂಪಗಳು…ಸಹ ಆ ಜಗನ್ಮಾತೆಯಾದ…ಆದಿಶಕ್ತಿ ಅಂಶವೇ…ಅವತಾರಗಳೇ… ಲೀಲೆಗಳೇ….ಆಗಿರ್ತಾವೆ..ಆದರೆ…ನಾಮಗಳು ಬೇರೆ… ಪಾರ್ವತಿ…ದುರ್ಗಾ…ಕಾಳಿ…ಭವಾನಿ..ಮಹಾಲಕ್ಷ್ಮಿ ಸರಸ್ವತಿ….ಹೀಗೆ 🙏🙏
ಬರಹ..✍️ :
Sameer Vasista.