‘ಹೇಳಿಕೊಳ್ಳದಿದ್ದರೆ ಅದೆಂತಹ ಪ್ರೀತಿ?”
———————————————-
ಅದೊಂದು ವಿಶಿಷ್ಟ ಸಂದರ್ಭ. ನ್ಯಾಯಾಧೀಶರೊಬ್ಬರ ಮುಂದೆ ವಿವಾಹ ವಿಚ್ಛೇದನದ ಪ್ರಕರಣವೊಂದು ಬಂದಿತ್ತು. ವಿಚ್ಛೇದನ ಬಯಸುತ್ತಿದ್ದವರು ವೃದ್ಧ ದಂಪತಿಗಳು. ಅಜ್ಜನಿಗೆ ಎಂಬತ್ತು ವರ್ಷ, ಅಜ್ಜಿಗೆ ಎಪ್ಪತ್ತೈದು! ನ್ಯಾಯಾಧೀಶರೇ ಆಶ್ಚರ್ಯದಿಂದ “ಈ ಇಳಿ ವಯಸ್ಸಿನಲ್ಲಿ ವಿಚ್ಛೇದನ ನಿಮಗೇಕೆ? ಇದಕ್ಕೆ ಕಾರಣವೇನು? ಎಂದು ಕೇಳಿದರು.
ಅಜ್ಜಿ “ನಮ್ಮ ಮದುವೆಯಾಗಿ ಅರವತ್ತು ವರ್ಷಗಳಾದವು. ಇಷ್ಟು ವರ್ಷಗಳಲ್ಲಿ ಅವರು ಒಮ್ಮೆಯೂ ನನ್ನನ್ನು ಸಂತೋಷವಾಗಿದ್ದೀಯಾ ಎಂದು ಕೇಳಿಲ್ಲ” 😒 ಎಂದರು.
ತಕ್ಷಣ ಅಜ್ಜ ನಾನೇಕೆ ಕೇಳಬೇಕು? ಆಕೆ ಸಂತೋಷವಾಗಿದ್ದಾಳೆಂದು ಭಾವಿಸಿದ್ದೆ” ಎಂದರು.
ಆಗ ಅಜ್ಜಿ ಅವರು “ಐ ಲವ್ ಯೂ ಅಂತ ಎಂದೂ ಹೇಳಲಿಲ್ಲ “😏ಎಂದರು.
ಅಜ್ಜ ” ನಾನು ಆಕೆಯನ್ನು ಎಷ್ಟು ಪ್ರೀತಿಸುತ್ತೇನೆಂಬುದು ಆಕೆಗೇ ಗೊತ್ತು. ಅದನ್ನು ಹೇಳಬೇಕೆ?”‘🤔 ಎಂದು ಮಾತು ತುಂಡರಿಸಿದರು.
ಕೂಡಲೇ ಅಜ್ಜಿ ‘ ಅವರು ನನ್ನನ್ನು ನೀನು ಸುಂದರವಾಗಿದ್ದೀಯಾ ಎಂದು ಯಾವತ್ತೂ ಹೇಳಿಲ್ಲ!’😒😏 ಎಂದರು.
‘ಅರವತ್ತು ವರ್ಷಗಳ ಹಿಂದೆ ನಮಗೆ ಮದುವೆಯಾದಾಗಿನಿಂದ ಇಂದಿನವರೆಗೂ ಆಕೆಯ ಸೌಂದರ್ಯವನ್ನು ಆರಾಧಿಸುತ್ತಲೇ ಬಂದಿದ್ದೇನೆ. ಅದನ್ನು ಬಾಯಿಬಿಟ್ಟು ಹೇಳಬೇಕೇ? ‘ 🤔ಎಂದರು ಅಜ್ಜ .
‘ಅವರು ನನ್ನೊಂದಿಗೆ ಮಾತಾನಾಡುವುದೇ ಇಲ್ಲ’ 😒 ಎಂಬುದು ಅಜ್ಜಿಯಿಂದ ಮತ್ತೊಂದು ದೂರು!
‘ಯಾವಾಗಲೂ ಟೀವಿಯ ಮುಂದೆ ಕುಳಿತಿರುವ ಆಕೆಯೊಂದಿಗೆ ನಾನು ಮಾತಾನಾಡುವುದು ಯಾವಾಗ?’ ಅಜ್ಜನ ಪ್ರತಿ ದೂರು 😃.
ಅದಕ್ಕೆ ಅಜ್ಜಿ ‘ಅವರು ನನ್ನನ್ನು ಎಲ್ಲೂ ಹೊರಕ್ಕೆ ಕರೆದುಕೊಂಡು ಹೋಗುವುದಿಲ್ಲ 😒’ ಎಂದರು.
‘ಎಲ್ಲಿಗಾದರೂ ಹೋಗಬೇಕೆಂದು ಆಕೆ ಎಂದೂ ಕೇಳಿಲ್ಲ ! ಆಕೆಗೆ ಮನೆಯಲ್ಲಿರುವುದೇ ಇಷ್ಟವೆಂದುಕೊಃಡಿದ್ದೆ ‘😎😁. ಎಂದು ತುಸು ಕೋಪದಿಂದಲೇ ಅಂದರು ಅಜ್ಜ.
ಕೊನೆಯಲ್ಲಿ ಅಜ್ಜಿ ‘ ಅವರು ತುಂಬಾ ಸ್ವಾರ್ಥಿ ! ಅರವತ್ತು ವರ್ಷಗಳಿಂದ ನಾನು ಅಡುಗೆ ಮಾಡುತ್ತೇನೆ . ಒಟ್ಟಿಗೆ ಊಟಕ್ಕೆ ಕೂರುತ್ತೇವೆ. ತಿಂಡಿ-ತಿನಿಸು ಗಳನ್ನು ತೆಗೆದು ನನಗೆ ತಿನ್ನು ಎಂದು ಕೊಟ್ಟಿರುವುದು ಒಂದು ಹತ್ತಿಪ್ಪತ್ತು ಸಾರಿ ಇರಬಹುದು ಅಷ್ಟೇ’ 😒😏 ಎಂದರು.
ಆಗ ಅಜ್ಜ ನ್ಯಾಯಧೀಶರತ್ತ ತಿರುಗಿ ಅಂದರು ‘ಇಂದು ನಿಜ ಹೇಳಬಿಡುತ್ತೇನೆ ಸ್ವಾಮಿ. ಆಕೆ ಅಷ್ಟೇನು ಚೆನ್ನಾಗಿ ಅಡುಗೆ ಮಾಡುವುದಿಲ್ಲ. ಇಷ್ಟು ವರ್ಷಗಳಲ್ಲಿ ಆಕೆಯ ಅಡುಗೆ ರುಚಿಯಾಗಿದ್ದದ್ದು ಹತ್ತಿಪ್ಪತ್ತು ಸಾರಿ ಇರಬಹುದು! ಹಾಗೆ ರುಚಿಯಾಗಿದ್ದಾಗಲೆಲ್ಲಾ ನಾನು ಆಕೆಗೆ ತಿನಿಸಿದ್ದೇನೆ. ತಿಂಡಿ ರುಚಿಯಾಗಿಲ್ಲ ದಿದ್ದಾಗ ಆ ತಿಂಡಿಯನ್ನು ನಾನೇ ಮೌನವಾಗಿ ತಿಂದಿದ್ದೇನೆ . ಆದರೆ ಆಕೆಯ ಅಡುಗೆ ಚೆನ್ನಾಗಿಲ್ಲವೆಂದು ಒಮ್ಮೆಯೂ ಹೇಳಿಲ್ಲ’ ಎನ್ನುತ್ತಿದ್ದಂತೆ ಅಜ್ಜಿ
‘ಇಷ್ಟೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳುವ ಬದಲು ನನಗೆ ಒಮ್ಮೆಯಾದರೂ ಬಾಯಿಬಿಟ್ಟು ಏಕೆ ಹೇಳಲಿಲ್ಲ? ಪ್ರೀತಿಯನ್ನು ಗುಪ್ತವಾಗಿಟ್ಟುಕೊಳ್ಳುವ ಬದಲು ಏಕೆ ತೋರಿಸಿಕೊಳ್ಳಲಿಲ್ಲ ?’ 😥 ಎಂದು ಬಿಕ್ಕಿಬಿಕ್ಕಿ ಅಳಲಾರಂಭಿಸಿದರು.
ನ್ಯಾಯಾಧೀಶರು ಮೃದು ದನಿಯಲ್ಲಿ ‘ಅಮ್ಮ, ಅಳಬೇಡಿ ಸುಮ್ಮನಿರಿ. ನಿಮಗೆ ವಿಚ್ಛೇದನ ಕೊಡಲು ನಿರಾಕರಿಸುತ್ತೇನೆ. ಇನ್ನೂ ಮುಂದಾದರು ಭಾವನೆಗಳನ್ನು ಬಾಯಿಬಿಟ್ಟು ಹೇಳಿಕೊಳ್ಳುವುದರ ಮೂಲಕ ಬಾಳುವೆಯನ್ನು ಸಾಗಿಸಿ’ ಎಂದು ಹೇಳಿ ಪ್ರಕರಣವನ್ನು ಮುಗಿಸಿದರು.
ಅಜ್ಜಿ ನಗುತ್ತಾ ‘ನೀವು ವಿಚ್ಛೇದನ ಕೊಟ್ಟರು ತಗೋಳೋರು ಯಾರು ?ಅವರ ಪ್ರೀತಿಯನ್ನು ಅವರ ಬಾಯಿಯಿಂದಲೇ ಕೇಳಿದೆನಲ್ಲಾ ನನಗಷ್ಟೇ ಸಾಕು’ ಎನ್ನುವಾಗ
ಅಜ್ಜನ ಕಣ್ಣಾಲಿಗಳು ತುಂಬಿ ಬಂದಿದ್ದವು.
ಅಂದುಕೊಳ್ಳೋರು ಏನಾದ್ರು ಅಂದುಕೊಳ್ಳಲಿ ಬಿಡಿ. ಪ್ರೀತಿಯನ್ನು ತೋರ್ಪಡಿಸಿ, ಭಾವನೆಗಳನ್ನು ಬಿಚ್ಚಿಡಿ.
ಆದ್ರೆ ನಮ್ಮ ದ್ವೇಷವನ್ನು ತಿಳಿಸುವುದು ಬೇಡ ತೋರಿಸಿಕೊಳ್ಳುವುದು ಬೇಡ.