ವರ್ಷದ ಕೊನೆಯ ಸೂರ್ಯಗ್ರಹಣ – ಕಂಕಣ ಸೂರ್ಯಗ್ರಹಣ
ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ?
ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯ ಗ್ರಹಣ ಸಂಭವಿಸುತ್ತಾನೆ ಮತ್ತು ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ಬಂಧಿಸುತ್ತಾನೆ. ಗ್ರಹಣವನ್ನು ಅಹಿತಕರ ಘಟನೆ ಎಂದು ಪರಿಗಣಿಸಲಾಗುತ್ತದೆ.
ಸುತಕ ಕಾಲದ ಸಮಯಗಳು :
ಸುತಕ ಕಾಲ ಪ್ರಾರಂಭವಾಯಿತು – 2019 ರ ಡಿಸೆಂಬರ್ 25 ರಂದು ಸಂಜೆ 5.33
ಸುತಕ ಕಾಲ ಕೊನೆಗೊಳ್ಳುತ್ತದೆ – 2019 ರ ಡಿಸೆಂಬರ್ 26 ರಂದು ಬೆಳಿಗ್ಗೆ 10.57
ಸೂರ್ಯ ಗ್ರಹಣದ ಸಮಯ :
ಡಿಸೆಂಬರ್ 26 ರಂದು ಸಂಭವಿಸುವ ಈ ಸೂರ್ಯ ಗ್ರಹಣವು ಗುರುವಾರ ಮೂಲಾ ನಕ್ಷತ್ರ, ಧನುರಾಶಿಯಲ್ಲಿ ಸೂರ್ಯನಿಗೆ ಕಂಕಣಾಕೃತಿಯಲ್ಲಿ ಕೇತು ಗ್ರಹಣವು ಸಂಭವಿಸುವುದು.
ಸೂರ್ಯ ಗ್ರಹಣವು ಇದೇ ಡಿಸೆಂಬರ್ 26ರಂದು ಮುಂಜಾನೆ 8.5ಕ್ಕೆ ಗ್ರಹಣ ಸಮಯ ಆರಂಭವಾಗುವುದು. ನಂತರ 11.4ಕ್ಕೆ ಗ್ರಹಣ ಬಿಡಲಿದೆ. ಸುಮಾರು 2 ಗಂಟೆ 59 ನಿಮಿಷಗಳ ಕಾಲ ಗ್ರಹಣ ಕಾಲವಿರುತ್ತದೆ.
ಯಾವ್ಯಾವ ರಾಶಿಗಳಿಗೆ ಹಿತ ಮತ್ತು ಮಾರಕ ?
ಹಿಂದೂ ಪಂಚಾಂಗದ ಪ್ರಕಾರ ಡಿಸೆಂಬರ್ 26ರಂದು ಕಾಣಿಸುವ ಗ್ರಹಣವು ಮೂಲಾ, ಮಘಾ, ಅಶ್ವಿನಿ, ಜೇಷ್ಠಾ ಮತ್ತು ಪೂರ್ವಾಷಾಢಾ ನಕ್ಷತ್ರಗಳ ಮೇಲೆ ಧನಾತ್ಮಕ ಹಾಗೂ ಧನುಸ್ಸು, ಮಕರ, ವೃಶ್ಚಿಕ, ವೃಷಭ ಮತ್ತು ಕರ್ಕಾಟಕ ರಾಶಿಗಳ ಮೇಲೆ ಗಮನಾರ್ಹ ಋಣಾತ್ಮಕ ಪ್ರಭಾವ ಬೀರುವುದು. ಈ ರಾಶಿಗಳವರು ಯಾವುದೇ ಕಾರ್ಯಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.
ಗ್ರಹಣದ ಸಮಯದಲ್ಲಿ ದೇವರ ಪ್ರಾರ್ಥನೆ, ದೇವರ ನಾಮ ಸ್ಮರಣೆ, ಜಪ, ತಾಪ, ಧ್ಯಾನ, ಸ್ತುತಿಗಳನ್ನೂ ಮಾಡುವುದರಿಂದ ಸೂರ್ಯ ಗ್ರಹಣದಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಪ್ರಭಾವವನ್ನು ಕಡಿಮೆ ಮಾಡಬಹುದು. ಯಾವುದೇ ಆಹಾರ ಪದಾರ್ಥಗಳನ್ನೂ ಗ್ರಹಣದ ನಂತರವೂ ಉಳಿಸಿ ಬಳಸುವುದಿದ್ದರೆ ಅವುಗಳಿಗೆ ತುಳಸಿ ಎಲೆಯನ್ನು ಹಾಕಿ ಇಟ್ಟು ಅದರ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕಾಗುವುದು.