ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತುಪ್ಪದ ಮಹತ್ವ – ಆರೋಗ್ಯ

ತುಪ್ಪದ ಮಹತ್ವ

ಖಾಲಿ ಹೊಟ್ಟೆಯಲ್ಲಿ ‘ತುಪ್ಪ’ ತಿಂದರೆ ಏನಾಗುತ್ತದೆ ಗೊತ್ತೇ? ತುಪ್ಪದ ಬಗ್ಗೆ ಇರುವ ಮಹತ್ವ ತಿಳಿಯಿರಿ..

ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳಿ.ಜೊತೆಗೆ ಮುಂಜಾನೆ ಎದ್ದ ತಕ್ಷಣ ಏನು ಮಾಡುತ್ತೀರಾ?ಎನ್ನುವುದನ್ನು ಮೆಲುಕುಹಾಕಿ.ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ ಆಗಿರಬಹುದು.ನೀರು ಕುಡಿಯುತ್ತೇವೆ,ಹಲ್ಲುಜ್ಜುತ್ತೇವೆ,ವ್ಯಾಯಾಮ ಮಾಡುತ್ತೇವೆ ಎನ್ನುವುದಾಗಿರಬಹುದು.

ಅದೇ ಯಾರಾದರೂ ತುಪ್ಪವನ್ನು ತಿನ್ನುತ್ತೇವೆ ಎಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು? ತುಪ್ಪ ಎಂದರೆ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಬರುವುದು.ಜಿಡ್ಡಿನ ಪದಾರ್ಥ, ಅತಿಯಾದ ಕೊಬ್ಬನ್ನು ಹೊಂದಿರುತ್ತದೆ,ಅದನ್ನು ಮಿತವಾಗಿ ಸೇವಿಸಬೇಕು,ಅತಿಯಾಗಿ ತಿಂದರೆ ಆರೋಗ್ಯ ಹಾಳಾಗುವುದು,ತೂಕ ಹೆಚ್ಚುವುದು ಸೇರಿದಂತೆ ಇನ್ನಿತರ ವಿಚಾರ ಮನಸ್ಸಿಗೆ ಬರಬಹುದು ಅಲ್ಲವೇ?

ಬರೀ ಒಂದೆರಡು ಚಮಚ ತುಪ್ಪದಲ್ಲಿದೆ ಹತ್ತಾರು ಲಾಭ ಆದರೆ ಈ ಲೇಖನದಲ್ಲಿ ತುಪ್ಪ ತಿಂದರೆ ಯಾವೆಲ್ಲಾ ರೋಗವನ್ನು ನಿವಾರಿಸಬಹುದು ಎನ್ನುವ ವಿವರಣೆಯನ್ನು ನೀಡಲಾಗಿದೆ.ಹೌದು, ತುಪ್ಪ ಎಂದರೆ ಅದು ಕೇವಲ ಕೊಬ್ಬಿನ ಪದಾರ್ಥ ಎನ್ನುವುದಕ್ಕೆ ಸೀಮಿತವಾಗಿಲ್ಲ.ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ.

ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು.ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಆದರೆ ಇದು ಸತ್ಯ.ತುಪ್ಪದ ಸೇವನೆಯಿಂದ ಯಾವೆಲ್ಲಾ ಸಮಸ್ಯೆಗಳಿಂದ ದೂರ ಇರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ…

ಜೀವಕೋಶದ ಚಟುವಟಿಕೆ ಹೆಚ್ಚುವುದು ಆಯುರ್ವೇದದ ಪ್ರಕಾರ ಖಾಳಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು.ಜೀವಕೋಶವನ್ನು ಪುನಃ ಶ್ಚೇತನಗೊಳಿಸಬೇಕು ಎಂದಾದರೆ ತುಪ್ಪವನ್ನು ಸೇವಿಸಬೇಕು.

  ಕನ್ನಡ ಚಾಣಕ್ಯ ನೀತಿ - Kannada Chanakya Neeti

ಅಲ್ಲದೆ ದೇಹಕ್ಕೆ ಉತ್ತಮವಾದ ಆರೈಕೆಯನ್ನು ನೀಡುವುದು.ಚರ್ಮದ ಕಾಂತಿ ಹೆಚ್ಚುವುದು ತುಪ್ಪ ಜೀವಕೋಶಗಳ ಪೋಷಣೆ ಮತ್ತು ಪುನರುಜ್ಜೀವನ ಗೊಳಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುತ್ತದೆ.

ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ,ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಸೋರಿಯಾಸಿಸ್‍ನಂತಹ ಚರ್ಮ ರೋಗಗಳನ್ನು ಇದು ತಡೆಯುವುದು.ಸಂಧಿವಾತವನ್ನು ತಡೆಯುತ್ತದೆ ತುಪ್ಪ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ.

ಹಾಗಾಗಿ ಇದನ್ನು ಕೀಲುಗಳಿಗೆ ಉತ್ತಮ ಆರೈಕೆ ಮಾಡುವುದು.ಸಂಧುಗಳ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪನವನ್ನು ಮಾಡಬಹುದು. ತುಪ್ಪದ ಸೇವನೆಯಿಂದ ಆಸ್ಟಿಯೊಪೊರೋಸಿಸ್ ಸೇರಿದಂತೆ ಅನೇಕ ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮಿದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ನೆನಪಿನ ಶಕ್ತಿ,ಕಲಿಕೆ,ಜ್ಞಾನ ಗ್ರಹಣ,ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತದೆ.

ಅಲ್ಲದೆ ಬುದ್ಧಿಮಾಂಧ್ಯತೆ ಅಲ್ಝಮೈರ್ ನಂತಹ ಕಾಯಿಲೆ ಬರದಂತೆ ತಡೆಯುವುದು.ತೂಕ ಇಳಿಸುವುದು ಸಾಮಾನ್ಯವಾಗಿ ತೂಕ ಹೆಚ್ಚಿಸಲು ತುಪ್ಪ ಸೇವಿಸಬೇಕು ಎನ್ನುವುದನ್ನು ಕೇಳಿರುತ್ತೀರಿ.ಅದೇ ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ 5-10 ಮಿಲಿಯಷ್ಟು ತುಪ್ಪವನ್ನು ಸೇವಿಸಿದರೆ ನಿಮ್ಮ ಚಯಾಪಚಯ ಕ್ರಿಯೆ ಸುಧಾರಣೆ ಕಾಣುತ್ತದೆ.

ಅಲ್ಲದೆ ಗಣನೀಯವಾದ ತೂಕ ಇಳಿಕೆಯನ್ನು ನೀವು ನಿರೀಕ್ಷಿಸಬಹುದು.ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಅದು ಕೇಶರಾಶಿಯ ಸಂರಕ್ಷಣೆಗೆ ಸಹಾಯವಾಗುತ್ತದೆ.ಕೂದಲಿನ ಫೋಲಿಸೆಲ್ಸ್ ಗಳು ಆರೋಗ್ಯವಾಗಿರುವಂತೆ ಮಾಡುತ್ತದೆ.

  ಊಟ - ಸಾಂಬಾರ್, ರಸಂ, ಪಾಯಸ ಮತ್ತು ಮಜ್ಜಿಗೆ

ಇದರಿಂದ ಹೊಳಪಿನಿಂದ ಕೂಡಿರುವ ದಟ್ಟವಾದ ಕೂದಲನ್ನು ನೀವು ಹೊಂದಬಹುದು. ಲ್ಯಾಕ್ಟೋಸ್‍ಗಳನ್ನು ಸುಧಾರಿಸುತ್ತದೆ ಕೆಲವರಿಗೆ ಹಾಲು ಅಥವಾ ಹಾಲಿನಿಂದ ತಯಾರಿಸಿರುವ ಉತ್ಪನ್ನಗಳನ್ನು ಸೇವಿಸದಾಗ ಸೂಕ್ತ ರೀತಿಯ ಜೀರ್ಣಕ್ರಿಯೆ ಉಂಟಾಗುವುದಿಲ್ಲ.

ಅದೇ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸ್ವೀಕರಿಸಿದರೆ ಲ್ಯಾಕ್ಟೋಸ್ ಸಮಸ್ಯೆಯು ಸುಧಾರಣೆ ಕಾಣುತ್ತದೆ.ಜೀರ್ಣ ಕ್ರಿಯೆಯೂ ಉತ್ತಮವಾಗಿ ನೆರವೇರುವುದು.ಕ್ಯಾನ್ಸರ್ ನಿಂದ ದೂರ ಇಡುವುದು ನೈಸರ್ಗಿಕವಾದ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನೇಕ ಬಗೆಯ ಕ್ಯಾನ್ಸರ್ ಕಾಯಿಲೆಯಿಂದ ದೂರ ಇರಬಹುದು.

ಆಯುರ್ವೇದದ ಪ್ರಕಾರ ತುಪ್ಪ ಕ್ಯಾನ್ಸರ್ ವಿರೋಧಿ ಲಕ್ಷಣವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.ತುಪ್ಪದ ಇನ್ನಷ್ಟು ಪ್ರಯೋಜನಗಳನ್ನು ತಿಳಿಯಿರಿ.ದೇಹದ ತೇವಕಾರಕ ಎಣ್ಣೆಯಾಗಿ ಒಂದು ವೇಳೆ ನಿಮ್ಮ ಚರ್ಮ ವಿಪರೀತ ಒಣದಾಗಿದ್ದರೆ ಈ ವಿಧಾನವನ್ನು ಅನುಸರಿಸಿ

ಎರಡು ದೊಡ್ಡ ಚಮಚ ಅಪ್ಪಟ ತುಪ್ಪವನ್ನು ಕರಗುವಷ್ಟು ಬಿಸಿಮಾಡಿ. ಬಳಿಕ ಉಗುರುಬೆಚ್ಚನೆಯ ತಾಪಮಾನಕ್ಕೆ ಬರುವಷ್ಟು ತಣಿಸಿ. ಬಳಿಕ ಈ ತುಪ್ಪವನ್ನು ತೆಳುವಾಗಿ ಒಣಚರ್ಮದ ಮೇಲೆಲ್ಲಾ ನಯವಾಗಿ ಮಸಾಜ್ ಮಾಡುತ್ತಾ ಸವರಿಕೊಳ್ಳಿ.

ಸುಮಾರು ಒಂದು ಘಂಟೆ ಬಿಟ್ಟು ಸ್ನಾನ ಮಾಡಿ.ಮುಖದ ಕಾಂತಿಗೆ ಒಂದು ದೊಡ್ಡ ಚಮಚ ಕಡ್ಲೆಹಿಟ್ಟು, ಒಂದು ದೊಡ್ಡ ಚಮಚ ಅಪ್ಪಟ ತುಪ್ಪ ಹಾಗೂ ಅಗತ್ಯವಿರುವಷ್ಟು ನೀರು ಬೆರೆಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ.

  ಸ್ತ್ರೀಯರ ಕೂದಲಿನ ಬೈತಲೆ ಹೇಗಿರಬೇಕು?

ಇದನ್ನು ಪೂರ್ಣವಾಗಿ ಒಣಗಲು ಬಿಡಿ.ಒಣಗಿದ ಬಳಿಕ ಈ ಲೇಪನ ಬಿರಿಬಿಡಲು ಪ್ರಾರಂಭಿಸುತ್ತದೆ. ಈಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಸೋಪು ಬಳಸಬೇಡಿ. ಬಾಡಿ ಲೋಷನ್ ರೂಪದಲ್ಲಿ ದೇಹದ ತ್ವಚೆಯನ್ನು ಇಡಿಯ ದಿನ ಕೋಮಲ ಮತ್ತು ಮೃದುವಾಗಿಸಲು ತುಪ್ಪವೂ ಸಮರ್ಥವಾಗಿದೆ.

ಇದಕ್ಕಾಗಿ ಸಮಪ್ರಮಾಣದಲ್ಲಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕೊಂಚ ಲ್ಯಾವೆಂಡರ್ ಎಣ್ಣೆಯ ಹನಿಗಳನ್ನು ಸೇರಿಸಿ ನಯವಾದ ಲೇಪನ ತಯಾರಿಸಿ.ಸ್ನಾನದ ಬಳಿಕ ಈ ಲೇಪನವನ್ನು ತೆಳುವಾಗಿ ಕೊಂಚ ಮಸಾಜ್ ಮೂಲಕ ಸೂಕ್ಷ್ಮಭಾಗಗಳನ್ನು ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಿ.ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ

ಉತ್ತರ ಭಾರತದಲ್ಲಿ ಹೃದಯಸಂಬಂಧಿ ಕಾಯಿಲೆಗಳು ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ.ಇದರ ಮೂಲ ಕಾರಣವೇನೆಂದರೆ ಉತ್ತರ ಭಾರತದ ಜನರು ಎಣ್ಣೆಗೆ ಬದಲಾಗಿ ಹೆಚ್ಚಾಗಿ ತುಪ್ಪವನ್ನೇ ಸೇವಿಸುತ್ತಾರೆ.

ಈ ಅಭ್ಯಾಸದಿಂದ ದೇಹದ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಕೆಟ್ಟಕೊಲೆಸ್ಟ್ರಾಲ್ ( LDL (low-density lipoprotein)) ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಇದು ಹೃದಯದ ಮೇಲಿನ ಹೊರೆಯನ್ನು ತಗ್ಗಿಸಿ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

Leave a Reply

Your email address will not be published. Required fields are marked *

Translate »