ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ! ಎನ್ನುವುದು ಪ್ರಸಿದ್ಧವಾದ ಗಾದೆ…
‘ಕರಡಿಗೆ’ ಎಂಬುದು ಸಂಸ್ಕೃತದ ‘ಕರಂಡಕ’ದಿಂದ ಕನ್ನಡಕ್ಕೆ ಬಂದ ಶಬ್ದ. ಕರಡಿಗೆ (ಕರಡಗೆ ಅಂತಲೂ ಹೇಳುತ್ತಾರೆ) ಕನ್ನಡದ ಶಬ್ದ ಎಂಬುದು ಅರಿಯದವರಿಗೆ ಆ ಶಬ್ದದಲ್ಲಿ ಎಲ್ಲರಿಗೂ ಚಿರಪರಿಚಿತವಾದ ‘ಕರಡಿ’ ಯೇ ಮುಖ್ಯವಾಗಿ ಕಂಡು ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಎಂಬುದು ರೂಢಿಗೆ ಬಂತು.
ಶಿವನ ಪೂಜೆಗೂ ಕರಡಿಗೂ ಏನು ಸಂಬಂಧ… ?
ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ
ಇದು ತಪ್ಪು ವಾಕ್ಯ….
ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ
ಇದು ಸರಿ ವಾಕ್ಯ…
ಕರಡಿ – ಇದೊಂದು ಕಾಡು ಪ್ರಾಣಿ..
‘ಕರಡಿಗೆ’ ಶಿವನ ಸ್ವರೂಪವೆನಿಸಿದ ಲಿಂಗವನ್ನು ಇಡಲು ಬಳಸುವ ಬೆಳ್ಳಿಯ ಅಥವಾ ಬಂಗಾರದ ಡಬ್ಬಿ.
ಸಾಮಾನ್ಯವಾಗಿ ವೀರಶೈವ ಲಿಂಗಾಯತರು ಲಿಂಗವನ್ನು ಕರಡಿಗೆಯಲ್ಲಿ ಇಟ್ಟು ಶಿವ ದಾರದಿಂದ ಕಟ್ಟಿ ಕೊರಳಿಗೆ ಧರಿಸಿರುತ್ತಾರೆ.
ಶಿವ ಪೂಜೆಯ ಸಂದರ್ಭದಲ್ಲಿ ಕರಡಿಗೆ ಅಂದರೆ ಡಬ್ಬಿಯಲ್ಲಿರುವ ಇಷ್ಟ ಲಿಂಗವನ್ನು ಹೊರ ತೆಗೆದು ಪೂಜಿಸುತ್ತಾರೆ.
ಶಿವಪೂಜೆಯಲ್ಲಿ ಕರಡಿಗೆಯಲ್ಲಿರುವ ಲಿಂಗವೇ ಪ್ರಮುಖವಾಗಿರುವುದರಿಂದ ಲಿಂಗವಿರುವ ಕರಡಿಗೆಯಿಲ್ಲದೆ ಶಿವಪೂಜೆ ಅಂದರೆ ಇಷ್ಟಲಿಂಗ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ಎಂಬ ಮಾತು ಈ ಅರ್ಥದಲ್ಲಿ ಬಂದದ್ದು…
ಯಾವುದಾದರೂ ಸ್ತುತ್ಯಕಾರ್ಯವನ್ನು ಮಾಡುವಾಗ ಆ ಕಾರ್ಯದ ಬಹು ಮುಖ್ಯ ಅಂಗವಾದ ಯಾವುದಾದರೊಂದು ಅಂಶವನ್ನು ಮರೆಯುವುದು ಒಟ್ಟು ಕಾರ್ಯಕ್ಕೆ ವಿಫಲತೆಯನ್ನು ಉಂಟು ಮಾಡುತ್ತದೆ ಎಂಬುದು ಇದರ ಅರ್ಥ.
ಇದೇ ಅರ್ಥವನ್ನು ಹೋಲುವ ಇನ್ನೊಂದು ಗಾದೆ;
ಮದುವೆಗೆ ಮದುಮಗಳನ್ನೇ ಬಿಟ್ಟು ಬಂದ ಹಾಗೆ.
ವಂದನೆಗಳು. 🙏