- ನಮ್ಮ ಹಣೆಯ ಮೇಲೆ ಕುಂಕುಮ ಇದೆ ಅಲ್ಲಿ ಲಕ್ಷ್ಮೀ ನಾರಾಯಣರ ಸನ್ನಿಧಾನ ಬಂತು.
- ಕೆನ್ನೆಗೆ ಅರಿಷಿಣ ದ ಲೇಪನ ಇದೆ ಅಲ್ಲಿ ಹಳದಿ ಹರಿದ್ರಾ ದೇವಿ ಮುಖಕಾಮಿನಿ ಸೌಭಾಗ್ಯದ ಪ್ರತೀಕ ಅಲ್ಲಿ ಪಾರ್ವತಿಯ ಸನ್ನಿಧಾನ ಬಂತು.
- ಕಣ್ಣಿಗೆ ಕಾಡಿಗೆ ಇದೆ ಅಲ್ಲಿ ಭಾರತಿ ದೇವಿಯ ಸನ್ನಿಧಾನ
- ಮುಡಿದಿರುವ ಹೂವಿನಲ್ಲಿ ಉಮಾಮಹೇಶ್ವರ ಸನ್ನಿಧಾನ ,
- ಭಾರತೀಯರ ಪ್ರತೀಕವಾದ ಸೀರೆ ಇದೆ ಸೆರಗಿನಲ್ಲಿ ಸೀತಾ ದೇವಿ ಸನ್ನಿಧಾನ ,
- ನೆರಗೆಯಲ್ಲಿ ತಾರೆಯ ಸನ್ನಿಧಾನ
- ಸೀರೆಯ ಅಂಚಿನಲ್ಲಿ ದ್ರೌಪದಿಯ ಸನ್ನಿಧಾನ
- ಕುಪ್ಪಸದಲ್ಲಿ ಅಹಲ್ಯೆಯ ಸನ್ನಿಧಾನ
- ಕುಪ್ಪಸದ ಅಂಚಿನಲ್ಲಿ ಮಂಡೋದರಿ ವಾಸ ,
- ಕೊರಳಲ್ಲಿ ಮುತ್ತೈದೆ ಪ್ರತೀಕ ಮಾಂಗಲ್ಯ , ಮೂಗಿನಲ್ಲಿ ಮುಗುತಿ ಕಿವಿಯಲ್ಲಿ ಓಲೆ ಇವು ಐದು ಮುತ್ತುಗಳು ,
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಹೆಣ್ಣು ಸುಂದರಿನೆ ಆದರೆ ಆ ಸೌಂದರ್ಯವನ್ನು ಕೆಡಿಸಿಕೊಂಡು ಓಡಾಡುತ್ತಿದ್ದಾರೆ , ಬಹುಶಃ ಬಹಳ ಜನರಿಗೆ ಹರಿದ ಪ್ಯಾಂಟ್ ನಲ್ಲಿ ಕೆದರಿದ ಕುದಲಿನಲಿ ಸುಂದರ ಕಾಣುತ್ತೇವೆ ಅನ್ನುವ ಭ್ರಮೆ , ಒಂದು ಸಲ ನೀವು ಹಣೆತುಂಬ ಕುಂಕುಮ ತಲೆಯಲ್ಲಿ ಮಾಲೆ ಮುಡಿದು ನೋಡಿ ಸೌಂದರ್ಯ ಎಲ್ಲಿದೆ ಅಂತ ಹೇಳುತ್ತೆ …..
ಸೌಂದರ್ಯ ಇರುವುದು ನಮ್ಮ ಮುಖದಲ್ಲಿ ಅಲ್ಲ ಅಚ್ಚುಕಟ್ಟಾಗಿ ಪಾಲಿಸಿದ ನಮ್ಮ ಸಂಪ್ರದಾಯದಲ್ಲಿ , ನಾವು ಪಾಲಿಸಿದ ಸಂಸ್ಕಾರ ನಾಲ್ಕು ಜನ ನಮಗೆ ಕೈಯೆತ್ತಿ ನಮಸ್ಕರಿಸುವಂತೆ ಮಾಡುತ್ತೆ , ಇದು ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ…
(ಸಂಗ್ರಹ)