- ಮಹಾಭಾರತದಲ್ಲಿರುವ ನೀತಿಸೂತ್ರ
ನಿಮಗೆ ಮಹಾಭಾರತವನ್ನು ಓದಲು ಸಮಯವಿಲ್ಲದಿದ್ದರೆ, ಅದರಲ್ಲಿ ಕಾಣುವ ಒಂಬತ್ತು ಸಾರಗಳು ನಮ್ಮ ಜೀವನದಲ್ಲಿ ಉಪಯುಕ್ತವೆಂದು ಸಾಬೀತುಪಡಿಸಬಹುದು, ಖಂಡಿತವಾಗಿ ಓದಿ…
- ಮಕ್ಕಳ ಒಡ್ಡುವ ತಪ್ಪು ಬೇಡಿಕೆಗಳು ಮತ್ತು ಹಠಮಾರಿತನವನ್ನು ಸರಿಯಾದ ಸಮಯದಲ್ಲಿ ನಿಯಂತ್ರಿಸದಿದ್ದರೆ, ಅಂತಿಮವಾಗಿ ನೀವು ಅಸಹಾಯಕರಾಗುತ್ತೀರಿ = ಕೌರವರು.
- ನೀನು ಎಷ್ಟೇ ಬಲಶಾಲಿಯಾಗಿದ್ದರೂ ಅಧರ್ಮದಿಂದ ಇದ್ದರೆ – ನಿನ್ನ ಜ್ಞಾನ, ಅಸ್ತ್ರಬಲ, ಲಭಿಸಿರುವ ವರಗಳು ಎಲ್ಲವೂ ನಿಷ್ಫಲವಾಗುತ್ತದೆ = ಕರ್ಣ.
- ನಿಮ್ಮ ಮಕ್ಕಳು ತಾವು ಕಲಿತ ಶಿಕ್ಷಣವನ್ನು ದುರುಪಯೋಗಪಡಿಸಿಕೊಂಡು ತಮ್ಮನ್ನು ತಾವೇ ಸ್ವಯಂ ನಾಶಪಡಿಸಿಕೊಳ್ಳುವಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಲು ಬಿಡಬೇಡಿ = ಅಶ್ವತ್ಥಾಮ
- ಎಷ್ಟೇ ಜ್ಞಾನಿ, ಶೂರ, ದಯಾಳುವಾಗಿದ್ದರೂ, ಅನೀತಿವಂತರ ಮುಂದೆ ಮಾಡುವ ಪ್ರತಿಜ್ಞೆಗೆ ಬದ್ಧನಾಗಿ, ಸಂಪೂರ್ಣ ಅಸಹಾಯಕ ಸ್ಥಿತಿಗೆ ಶರಣಾಗಿ ಇಡೀ ಬದುಕನ್ನೇ ವ್ಯರ್ಥಮಾಡಿಕೊಳ್ಳಬೇಡಿ = ಭೀಷ್ಮ ಪಿತಾಮಹ.
- ಸಂಪತ್ತು, ಶಕ್ತಿ, ಅಧಿಕಾರ ಮತ್ತು ಅಧಿಕಾರದ ದುರುಪಯೋಗ, ದುಷ್ಟರೊಂದಿಗಿನ ಸಹವಾಸವು ಅಂತಿಮವಾಗಿ ಸ್ವಯಂ ನಾಶಕ್ಕೆ ಕಾರಣವಾಗುತ್ತದೆ = ದುರ್ಯೋಧನ.
- ಅಂಧ ವ್ಯಕ್ತಿಯ ಕೈಯಲ್ಲಿ – ಸಂಪತ್ತು, ಅಧಿಕಾರ, ಅಜ್ಞಾನ, ಮದ್ಯ, ಮೋಹ ಮತ್ತು ಕಾಮ ಸಿಕ್ಕಿಕೊಂಡರೆ ಸರ್ವನಾಶಕ್ಕೆ ಕಾರಣವಾಗುತ್ತದೆ = ಧೃತರಾಷ್ಟ್ರ
- ಒಬ್ಬ ವ್ಯಕ್ತಿಗೆ ಜ್ಞಾನ ಮತ್ತು ಬುದ್ಧಿವಂತಿಕೆ, ಸಂಯಮ ಇದ್ದರೆ, ಅವನು ಖಂಡಿತವಾಗಿಯೂ ಗೆಲ್ಲುತ್ತಾನೆ = ಅರ್ಜುನ
- ಮಾಡುವ ಮತ್ತು ಯೋಚಿಸುವ ಪ್ರತಿ ಕೆಲಸದಲ್ಲೂ ಕೆಟ್ಟಛಲ, ಕಪಟ ಮತ್ತು ಮೋಸವನ್ನು ಸೃಷ್ಟಿಸಿ ನೀವು ಯಾವಾಗಲೂ ಯಶಸ್ವಿಯಾಗಲು ಸಾಧ್ಯವಿಲ್ಲ = ಶಕುನಿ
- ನೀವು ನೀತಿ, ಧರ್ಮ ಮತ್ತು ಕರ್ಮವನ್ನು ಯಶಸ್ವಿಯಾಗಿ ಅನುಸರಿಸಿದರೆ, ಪ್ರಪಂಚದ ಯಾವುದೇ ಶಕ್ತಿಯು ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ = ಯುಧಿಷ್ಠಿರ.
ಈ ಒಂಬತ್ತು ನೀತಿ ಸೂತ್ರಗಳಿಂದ ಪಾಠ ಕಲಿಯಲು ಸಾಧ್ಯವಾಗದಿದ್ದರೆ ಜೀವನದಲ್ಲಿ ಮಹಾಭಾರತ ನಡೆಯುತ್ತದೆ.
🙏🙏🙏